ಇನ್ಸ್ಟಂಟ್ ಇಮ್ಯೂನಿಟಿ.. ಕೊರೊನಾದಿಂದ ಗಂಭೀರ ಸ್ಥಿತಿಗೆ ಹೋದವರನ್ನೂ ಗುಣಪಡಿಸಬಲ್ಲ ಹೊಸ ಔಷಧಿ !
ಸೋಂಕಿತರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಸೋಂಕಿನಿಂದ ಬಚಾವಾಗುವಂತೆ ಮಾಡಲು ಹೊಸ ಬಗೆಯ ಔಷಧಿ ಅಭಿವೃದ್ಧಿಪಡಿಸುವುದಕ್ಕೆ ಬ್ರಿಟನ್ ವಿಜ್ಞಾನಿಗಳು ಸಿದ್ಧರಾಗಿದ್ದಾರೆ. ಈ ಪ್ರಯೋಗ ಯಶಸ್ವಿಯಾದರೆ ಕೊರೊನಾ ಸೋಂಕಿಗೆ ತುತ್ತಾಗಿ ಸಾವಿಗೀಡಾಗುವವರ ಸಂಖ್ಯೆ ಕಡಿಮೆಯಾಗಲಿದೆ
ಕೊರೊನಾ ವೈರಾಣುವನ್ನು ಮಣಿಸಲು ಬೇರೆ ಬೇರೆ ಸಂಸ್ಥೆಗಳು ಲಸಿಕೆ ತಯಾರಿಸುವುದರಲ್ಲಿ ನಿರತವಾಗಿದ್ದರೆ ಬ್ರಿಟನ್ ವಿಜ್ಞಾನಿಗಳು ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಸೋಂಕಿತರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಸೋಂಕಿನಿಂದ ಬಚಾವಾಗುವಂತೆ ಮಾಡಲು ಹೊಸ ಬಗೆಯ ಔಷಧಿ ಅಭಿವೃದ್ಧಿಪಡಿಸುವುದಕ್ಕೆ ಸಿದ್ಧರಾಗಿದ್ದಾರೆ.
ಈ ಮೂಲಕ ಆಸ್ಪತ್ರೆಯಲ್ಲಿರುವ ಕೊವಿಡ್ ಸೋಂಕಿತರು, ಗಂಭೀರ ಸ್ಥಿತಿಗೆ ತಲುಪಿದವರನ್ನೂ ಕಡಿಮೆ ಅವಧಿಯಲ್ಲಿ ಗುಣಪಡಿಸುವಂತೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದನ್ನು ಕೊವಿಡ್ ಇನ್ಸ್ಟಂಟ್ ಇಮ್ಯೂನಿಟಿ ಎಂದು ಕರೆಯಲಾಗುತ್ತಿದ್ದು ಈ ಪ್ರಯೋಗ ಯಶಸ್ವಿಯಾದರೆ ಕೊರೊನಾ ಸೋಂಕಿಗೆ ತುತ್ತಾಗಿ ಸಾವಿಗೀಡಾಗುವವರ ಸಂಖ್ಯೆ ಕಡಿಮೆಯಾಗಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಲಸಿಕೆ ಇರುವಾಗ ಇದೇತಕೆ? ಕೊವಿಡ್ ಲಸಿಕೆಯು ಕೊರೊನಾ ವೈರಾಣು ದೇಹದೊಳಗೆ ಪ್ರವೇಶಿಸಿ ತೊಂದರೆ ನೀಡುವುದರಿಂದ ತಡೆಗಟ್ಟುತ್ತದೆ. ಅಂದರೆ ಇದೊಂದು ಬಗೆಯ ಮುನ್ನೆಚ್ಚರಿಕಾ ಕ್ರಮ. ಆದರೆ, ಸೋಂಕಿಗೆ ತುತ್ತಾದ ನಂತರ ಲಸಿಕೆಯನ್ನು ನೀಡಿ ಗುಣಪಡಿಸುವುದು ಕಷ್ಟ.
ಹೀಗಾಗಿ ಸೋಂಕಿಗೆ ತುತ್ತಾದವರಿಗೆ ಪರಿಣಾಮಕಾರಿ ಚಿಕಿತ್ಸೆ ನೀಡಲು ಇನ್ಸ್ಟಂಟ್ ಇಮ್ಯೂನಿಟಿ ಸಹಕಾರಿ ಆಗಲಿದೆ ಎಂಬುದು ತಜ್ಞರ ಅಭಿಮತ. ಈ ಔಷಧಿಯನ್ನು ನೀಡುವ ಮೂಲಕ ಕೊರೊನಾ ಸೋಂಕಿನಿಂದ ಅಪಾಯ ಮಟ್ಟಕ್ಕೆ ತಲುಪುವುದನ್ನು ತಪ್ಪಿಸಬಹುದು. ಲಸಿಕೆ ನೀಡಲು ಸಮಯ ಮೀರಿದ್ದರೂ ಅಂಥವರ ಮೇಲೆ ಇದನ್ನು ಪ್ರಯೋಗಿಸಿ ಗುಣಪಡಿಸಬಹುದು. ಆದ್ದರಿಂದ ಬ್ರಿಟನ್ ವಿಜ್ಞಾನಿಗಳ ಈ ಪ್ರಯೋಗ ಯಶಸ್ವಿಯಾದರೆ ವಿಶ್ವದಲ್ಲಿ ಕೊರೊನಾದಿಂದಾಗುವ ಸಾವನ್ನು ತಪ್ಪಿಸುವುದು ಸಾಧ್ಯ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.
ಲಂಡನ್ನಲ್ಲಿ ಸ್ವಾಸರಿ-ಕೊರೊನಿಲ್ ಕಿಟ್ ಅನಧಿಕೃತ ಮಾರಾಟ; ಪ್ರಯೋಜನವಿಲ್ಲದ ಮಾತ್ರೆಗಳು ಎಂದ ಲ್ಯಾಬ್ ವರದಿ