AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಭಾರತೀಯರನ್ನು ಕೊಲ್ಲಲು ಕಾಯುತ್ತಿದ್ದೇನೆ’; ಗೆಳೆಯರ ಬಳಿ ಅಮೆರಿಕದ ದಾಳಿಕೋರ ಯುವಕ ಹೇಳಿದ್ದೇನು?

ಅಮೆರಿಕದ ಚಿಕಾಗೋದ ಇಲಿನಾಯ್ಸ್‌ನಲ್ಲಿರುವ ಟ್ಯಾಕೋ ಬೆಲ್ ರೆಸ್ಟೋರೆಂಟ್‌ನ 19 ವರ್ಷದ ಕ್ಯಾಷಿಯರ್ ಹಿಂದೂ ದೇವಾಲಯದಲ್ಲಿ ಶೂಟ್ ಮಾಡಿ ಭಕ್ತರನ್ನು ಕೊಲ್ಲಲು ಯತ್ನಿಸಿದ್ದ. ಆತನನ್ನು ಅಮೆರಿಕದ ಪೊಲೀಸರು ಬಂಧಿಸಿದ್ದಾರೆ. ಇದೊಂದು ಮಹತ್ವದ ದಿನ ಎಂದು ತನ್ನ ಸಹೋದ್ಯೋಗಿಗಳಿಗೆ ಹೇಳಿದ್ದ ಅಲೆಕ್ಸಾಂಡ್ರೋಸ್ ಪಪೊರಾಕಿಸ್ ಎಂಬ ಈ ಯುವಕ ತಾನು ಕೆಲಸ ಮಾಡುವ ಸ್ಥಳದಲ್ಲಿ ಬಹಿರಂಗವಾಗಿ 'ಶ್ವೇತ ವರ್ಣಶ್ರೇಷ್ಠತಾವಾದಿ' (ವೈಟ್ ಸುಪ್ರೀಮಸಿಸ್ಟ್) ಎಂದು ಗುರುತಿಸಿಕೊಂಡಿದ್ದ. "ನಾನು ಭಾರತೀಯರನ್ನು ಕೊಲ್ಲಲು ಕಾಯುತ್ತಿದ್ದೇನೆ" ಎಂದು ಹೇಳಿಕೊಂಡಿದ್ದ ಎನ್ನಲಾಗಿದೆ.

'ಭಾರತೀಯರನ್ನು ಕೊಲ್ಲಲು ಕಾಯುತ್ತಿದ್ದೇನೆ'; ಗೆಳೆಯರ ಬಳಿ ಅಮೆರಿಕದ ದಾಳಿಕೋರ ಯುವಕ ಹೇಳಿದ್ದೇನು?
Us Hindu Temple Attack
ಸುಷ್ಮಾ ಚಕ್ರೆ
|

Updated on: Oct 15, 2026 | 5:31 PM

Share

ವಾಷಿಂಗ್ಟನ್, ಅಕ್ಟೋಬರ್ 15: ಅಮೆರಿಕದ ಇಲಿನಾಯ್ಸ್ ರಾಜ್ಯದ ಅರೋರಾ ಪ್ರದೇಶದಲ್ಲಿರುವ ಪ್ರಮುಖ ಹಿಂದೂ ದೇವಾಲಯದ ಮೇಲೆ ಸಾಮೂಹಿಕ ಗುಂಡಿನ ದಾಳಿ ನಡೆಸಲು ಸಿದ್ಧತೆ ನಡೆಸಿದ್ದ 19 ವರ್ಷದ ಯುವಕನ ಸಂಚು ಕೊನೆ ಕ್ಷಣದಲ್ಲಿ ವಿಫಲಗೊಂಡಿದೆ. ಆರೋಪಿ ಕೃತ್ಯ ಎಸಗಲು ತೆರಳಿದ್ದ ವೇಳೆ ಆತನ ಬಂದೂಕು ಜಾಮ್ ಆಗಿದ್ದರಿಂದ ದೊಡ್ಡ ದುರಂತ ತಪ್ಪಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಿನಾಯ್ಸ್‌ನ ಪಾಲಟೈನ್ ನಿವಾಸಿ ಅಲೆಕ್ಸಾಂಡ್ರೋಸ್ ಪಪೊರಾಕಿಸ್ ಎಂಬ 19 ವರ್ಷದ ಯುವಕನನ್ನು ಅಮೆರಿಕದ ಪೊಲೀಸರು ಮತ್ತು ಎಫ್‌ಬಿಐ ಅಧಿಕಾರಿಗಳು ಅಕ್ಟೋಬರ್ 11ರಂದು ಬಂಧಿಸಿದ್ದಾರೆ.

‘ಭಾರತೀಯರನ್ನು ಕೊಲ್ಲಲು ಕಾಯುತ್ತಿದ್ದೇನೆ’ ಎಂದಿದ್ದ ಯುವಕ:

ಆರೋಪಿ ಅಲೆಕ್ಸಾಂಡ್ರೋಸ್ ಪಪೊರಾಕಿಸ್ ತಾನು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಮುಕ್ತವಾಗಿ ತಾನೊಬ್ಬ ‘ಶ್ವೇತ ವರ್ಣಶ್ರೇಷ್ಠತಾವಾದಿ’ (ವೈಟ್ ಸುಪ್ರೀಮಸಿಸ್ಟ್) ಎಂದು ಹೇಳಿಕೊಂಡಿದ್ದ. ಭಾರತೀಯ ಮೂಲದವರ ವಿರುದ್ಧ ತೀವ್ರ ದ್ವೇಷ ಹೊಂದಿದ್ದ ಆತ, ಅರೋರಾದಲ್ಲಿರುವ ದೊಡ್ಡ ಹಿಂದೂ ದೇವಾಲಯದ ಮೇಲೆ ದಾಳಿ ನಡೆಸಿ ಆದಷ್ಟು ಹೆಚ್ಚಿನ ಜನರನ್ನು ಕೊಲ್ಲುವುದಾಗಿ ತನ್ನ ಸಹೋದ್ಯೋಗಿಗಳ ಬಳಿ ಹೇಳಿಕೊಂಡಿದ್ದನು. ಆರೋಪಿಯು “Why I Fought: A.K.A. (Aurora Shooter’s Manifesto)” ಹೆಸರಿನಲ್ಲಿ 8 ಪುಟಗಳ ದಾಖಲೆಯನ್ನು ಸಿದ್ಧಪಡಿಸಿದ್ದನು. ಅದರಲ್ಲಿ ಭಾರತೀಯರು, ಯೆಹೂದಿಗಳು ಮತ್ತು ಆಫ್ರಿಕನ್-ಅಮೆರಿಕನ್ನರನ್ನು “ಮನುಷ್ಯರಲ್ಲದವರು” ಎಂದು ಜನಾಂಗೀಯ ನಿಂದನೆ ಮಾಡಲಾಗಿತ್ತು.

ಇದನ್ನೂ ಓದಿ: ಅಮೆರಿಕದ ಹಿಂದೂ ದೇವಾಲಯದ ಮೇಲೆ ದಾಳಿ ನಡೆಸಲು ಸಂಚಿಗೆ ಭಾರತ ಕಳವಳ

ದಾಳಿಯ ಸಂಚು ವಿಫಲಗೊಂಡಿದ್ದು ಹೇಗೆ?:

ಆತ ಪಾಲಟೈನ್‌ನಿಂದ ನೈಋತ್ಯಕ್ಕೆ ಸುಮಾರು 65 ಕಿ.ಮೀ ದೂರದಲ್ಲಿರುವ ಅರೋರಾದಲ್ಲಿರುವ ಪ್ರಸಿದ್ಧ ಶ್ರೀ ವೆಂಕಟೇಶ್ವರ ಸ್ವಾಮಿ (ಬಾಲಾಜಿ) ದೇವಸ್ಥಾನದ ಮೇಲೆ ಈತ ಸಾಮೂಹಿಕ ದಾಳಿ ನಡೆಸಲು ಯೋಜಿಸಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಹಿಂದೂ ದೇವಾಲಯದ ಮೇಲಿನ ದಾಳಿಗಾಗಿ ನಿಗದಿಪಡಿಸಿದ್ದ ದಿನದಂದು (ಭಾನುವಾರ) ಆರೋಪಿ ಕಾರಿನಲ್ಲಿ ತೆರಳಿ ಗುಂಡು ಹಾರಿಸಲು ಯತ್ನಿಸಿದ್ದಾನೆ. ಆದರೆ ಆತನ ಎಆರ್-ಶೈಲಿಯ ರೈಫಲ್ ಬಂದೂಕು ಜಾಮ್ ಆಗಿ, ಟ್ರಿಗರ್ ಎಳೆದರೂ ಗುಂಡು ಹಾರಲಿಲ್ಲ. ತಕ್ಷಣವೇ ಹೆದರಿ ಕಾರಿನಲ್ಲೇ ಪರಾರಿಯಾದ ಆತ, ತನ್ನ ಸಹೋದ್ಯೋಗಿಗೆ ವೀಡಿಯೊ ಕಳುಹಿಸಿ “ಅದೃಷ್ಟವಶಾತ್ ನನ್ನ ಗನ್ ಜಾಮ್ ಆಯಿತು, ಇಲ್ಲದಿದ್ದರೆ ದೊಡ್ಡ ಘಟನೆಯೇ ನಡೆದಿರುತ್ತಿತ್ತು” ಎಂದು ಮೆಸೇಜ್ ಕಳುಹಿಸಿದ್ದನು.

ಇದನ್ನೂ ಓದಿ: ಭಾರತೀಯರ ಹತ್ಯೆಗೆ ರೈಫಲ್ ಹಿಡಿದು ಅಮೆರಿಕದ ದೇವಸ್ಥಾನಕ್ಕೆ ನುಗ್ಗಿದ್ದ ಶೂಟರ್: ಗನ್ ಜಾಮ್ ಆಗಿದ್ದರಿಂದ ತಪ್ಪಿದ ಭಾರೀ ದುರಂತ

ಆರೋಪಿಯ ಈ ಭಯಾನಕ ಸಂದೇಶಗಳು ಮತ್ತು ಆಡಿಯೋ ವೀಡಿಯೊಗಳನ್ನು ನೋಡಿ ಬೆಚ್ಚಿಬಿದ್ದ ಸಹೋದ್ಯೋಗಿಗಳು ತಕ್ಷಣವೇ ತುರ್ತು ಸೇವೆಗೆ (911) ಕರೆ ಮಾಡಿ ಮಾಹಿತಿ ನೀಡಿದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಮತ್ತು ಎಫ್‌ಬಿಐ ಅಧಿಕಾರಿಗಳು ಆತನ ಅಪಾರ್ಟ್‌ಮೆಂಟ್ ಬಳಿಯೇ ವಶಕ್ಕೆ ಪಡೆದರು. ಆರೋಪಿಯ ಮನೆಯಲ್ಲಿ ನಡೆಸಿದ ಶೋಧನೆಯಲ್ಲಿ ನಂಬರ್ ಇಲ್ಲದ ಅಕ್ರಮ ರೈಫಲ್, ಲೋಡೆಡ್ ಮ್ಯಾಗಜೀನ್‌ಗಳು, ಬುಲೆಟ್‌ಗಳು, ನಾಡಿಗೆ ಸಂಬಂಧಿಸಿದ ವಸ್ತುಗಳು ಹಾಗೂ ದ್ವೇಷಪೂರಿತ ಬರಹಗಳಿರುವ ಗ್ಯಾಸ್ ಕ್ಯಾನಿಸ್ಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬುಧವಾರ ನ್ಯಾಯಾಧೀಶರ ಮುಂದೆ ಆರೋಪಿಯನ್ನು ಹಾಜರುಪಡಿಸಲಾಗಿದ್ದು, ಆತನಿಗೆ ಜಾಮೀನು ರಹಿತ ಬಂಧನಕ್ಕೆ ಆದೇಶಿಸಲಾಗಿದೆ. ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 30ಕ್ಕೆ ನಿಗದಿಯಾಗಿದೆ.

ಈ ಘಟನೆಯು ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಸಮುದಾಯದಲ್ಲಿ ಹಾಗೂ ಹಿಂದೂ ದೇವಾಲಯಗಳ ಸುರಕ್ಷತೆಯ ಬಗ್ಗೆ ತೀವ್ರ ಕಳವಳ ಮೂಡಿಸಿದ್ದು, ಭಾರತ ಸರ್ಕಾರ ಕೂಡ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಅಮೆರಿಕ ಸರ್ಕಾರಕ್ಕೆ ಆಗ್ರಹಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
ಬರಪೀಡಿತ ಪಟ್ಟಿಗೆ 9 ತಾಲೂಕುಗಳ ಸೇರ್ಪಡೆ: ತಾಲೂಕುಗಳ ಸಂಖ್ಯೆ 226ಕ್ಕೆ ಏರಿಕೆ
ಬರಪೀಡಿತ ಪಟ್ಟಿಗೆ 9 ತಾಲೂಕುಗಳ ಸೇರ್ಪಡೆ: ತಾಲೂಕುಗಳ ಸಂಖ್ಯೆ 226ಕ್ಕೆ ಏರಿಕೆ
ಸಿಎಂ ಡಿಕೆ ಶಿವಕುಮಾರ್ ಮನೆಗೆ ಭೇಟಿ ನೀಡಿದ ಹಿರಿಯ ನಟ ದೇವರಾಜ್ ಕುಟುಂಬ
ಸಿಎಂ ಡಿಕೆ ಶಿವಕುಮಾರ್ ಮನೆಗೆ ಭೇಟಿ ನೀಡಿದ ಹಿರಿಯ ನಟ ದೇವರಾಜ್ ಕುಟುಂಬ
ಶ್ರೀರಂಗಪಟ್ಟಣ ದಸರಾ ವೈಭವಕ್ಕೆ ಚಾಲನೆ: ಚಾಮುಂಡೇಶ್ವರಿಗೆ ಪುಷ್ಪಾರ್ಚನೆ
ಶ್ರೀರಂಗಪಟ್ಟಣ ದಸರಾ ವೈಭವಕ್ಕೆ ಚಾಲನೆ: ಚಾಮುಂಡೇಶ್ವರಿಗೆ ಪುಷ್ಪಾರ್ಚನೆ
‘ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದು’: ಗಾನವಿ ಬಗ್ಗೆ ಗಗನ್ ಚಿನ್ನಪ್ಪ ಟೀಕೆ
‘ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದು’: ಗಾನವಿ ಬಗ್ಗೆ ಗಗನ್ ಚಿನ್ನಪ್ಪ ಟೀಕೆ
ರಾಹುಲ್ ಗಾಂಧಿ, ಪ್ರಿಯಾಂಕಾದೂ ಸ್ಟಿಂಗ್ ವಿಡಿಯೋ ಬರಬಹುದು: ಎಚ್​​ಡಿಕೆ
ರಾಹುಲ್ ಗಾಂಧಿ, ಪ್ರಿಯಾಂಕಾದೂ ಸ್ಟಿಂಗ್ ವಿಡಿಯೋ ಬರಬಹುದು: ಎಚ್​​ಡಿಕೆ
ಲಡಾಖ್‌ಗೆ 3,350 ಕೋಟಿ ರೂ. ಯೋಜನೆಗಳ ಕೊಡುಗೆ
ಲಡಾಖ್‌ಗೆ 3,350 ಕೋಟಿ ರೂ. ಯೋಜನೆಗಳ ಕೊಡುಗೆ
ದಸರಾ, ದೀಪಾವಳಿ: ರಾಜ್ಯಾದ್ಯಂತ ಸಿಹಿ ತಿಂಡಿ ಅಂಗಡಿಗಳ ಮೇಲೆ FSSAI ದಾಳಿ
ದಸರಾ, ದೀಪಾವಳಿ: ರಾಜ್ಯಾದ್ಯಂತ ಸಿಹಿ ತಿಂಡಿ ಅಂಗಡಿಗಳ ಮೇಲೆ FSSAI ದಾಳಿ
ಚಲಿಸುತ್ತಿದ್ದಾಗಲೇ ಕಳಚಿಬಿದ್ದ ಕೆಎಸ್‌ಆರ್‌ಟಿಸಿ ಬಸ್‌ ಟೈರ್
ಚಲಿಸುತ್ತಿದ್ದಾಗಲೇ ಕಳಚಿಬಿದ್ದ ಕೆಎಸ್‌ಆರ್‌ಟಿಸಿ ಬಸ್‌ ಟೈರ್
ಪ್ರಿಯಾಂಕ್ ಖರ್ಗೆ ವಿರುದ್ಧ ಏಕವಚನದಲ್ಲೇ ಕುಮಾರಸ್ವಾಮಿ ವಾಗ್ದಾಳಿ
ಪ್ರಿಯಾಂಕ್ ಖರ್ಗೆ ವಿರುದ್ಧ ಏಕವಚನದಲ್ಲೇ ಕುಮಾರಸ್ವಾಮಿ ವಾಗ್ದಾಳಿ
RSSಗೇ ಹೆದರಲಿಲ್ಲ, ನಿಮಗೆ ಹೆದರ್ತೀನಾ?: ಹೆಚ್​​ಡಿಕೆಗೆ ಪ್ರಿಯಾಂಕ್ ಕೌಂಟರ್​
RSSಗೇ ಹೆದರಲಿಲ್ಲ, ನಿಮಗೆ ಹೆದರ್ತೀನಾ?: ಹೆಚ್​​ಡಿಕೆಗೆ ಪ್ರಿಯಾಂಕ್ ಕೌಂಟರ್​