‘ಮೋದಿ ವಿರುದ್ಧ CJPಯ ಪ್ರತಿಭಟನೆಗೆ ಅಮೆರಿಕಾದ ದಾನಿಗಳಿಂದ ಹಣಕಾಸಿನ ನೆರವು’: ಗಾಯಕಿ ಮೇರಿ ಮಿಲ್ಬೆನ್ ಗಂಭೀರ ಆರೋಪ
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರತಿಭಟನೆ ನಡೆಸುತ್ತಿರುವಕಾಕ್ರೋಚ್ ಜನತಾ ಪಾರ್ಟಿಗೆ ಅಮೆರಿಕದ ದಾನಿಗಳಿಂದ ಹಣಕಾಸಿನ ನೆರವು ಸಿಗುತ್ತಿದೆ ಎಂದು ಅಮೆರಿಕದ ಗಾಯಕಿ ಮೇರಿ ಮಿಲ್ಬೆನ್ ಗಂಭೀರ ಆರೋಪ ಮಾಡಿದ್ದಾರೆ. ಅಮೆರಿಕದಲ್ಲಿ ಶಿಕ್ಷಣ ಪಡೆದವರನ್ನು ಗುರುತಿಸಿ, ಅವರನ್ನು ತೀವ್ರಗಾಮಿ ಚಿಂತನೆಗಳತ್ತ ಸೆಳೆದು, ತಮ್ಮ ದೇಶಗಳಿಗೆ ಮರಳಿದ ಬಳಿಕ ರಾಜಕೀಯ ಚಳವಳಿಗಳನ್ನು ಆರಂಭಿಸಲು ಹಣಕಾಸು ಒದಗಿಸಲಾಗುತ್ತದೆ. ಹೀಗಾಗಿ CJP ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸಬೇಕೆಂದು ಯುವ ಭಾರತೀಯರಿಗೆ ಆಕೆ ಕರೆ ನೀಡಿದ್ದಾರೆ.

ವಾಷಿಂಗ್ಟನ್, ಅಕ್ಟೋಬರ್ 14: ಭಾರತದ ಚುನಾವಣಾ ಆಯೋಗ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ (CJP) ವಿರುದ್ಧ ಅಮೆರಿಕದ ಗಾಯಕಿ ಮೇರಿ ಮಿಲ್ಬೆನ್ ಗಂಭೀರ ಆರೋಪ ಮಾಡಿದ್ದು, ಮೋದಿ ಅವರನ್ನು ವಿರೋಧಿಸುವ ಅಮೆರಿಕ ಮೂಲದ ದಾನಿಗಳಿಂದ ಈ ಸಂಘಟನೆಗೆ ಹಣಕಾಸಿನ ನೆರವು ದೊರೆಯುತ್ತಿದೆ ಎಂದಿದ್ದಾರೆ. ಅಲ್ಲದೆ CJP ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸುವಂತೆ ಯುವ ಭಾರತೀಯರಿಗೆ ಕರೆ ನೀಡಿದ್ದಾರೆ. ಇದು ಮೌನವಾಗಿರುವ ಸಮಯವಲ್ಲ ಎಂದಿರುವ ಮೇರಿ ಮಿಲ್ಬೆನ್, ಯುವ ಭಾರತೀಯರು ಧ್ವನಿ ಎತ್ತಬೇಕು ಎಂದಿದ್ದಾರೆ.
ಗಾಯಕಿ ಮೇರಿ ಮಿಲ್ಬೆನ್ ಹೇಳಿದ್ದೇನು?
To all the beautiful young patriots in India:
This is not the time to be silent. @abhijeet_dipke and the @Cockroachisback are being funded by donors in the U.S. who are against Prime Minister @NarendraModi and your future under his leadership. Do not fear, my young patriots. Your Prime Minister, who has served India for 25 years, 12 years as Prime Minister, elected three consecutive terms, is not going to bow to disruptive forces from my country.
And these select donors have a pattern globally – target conservative global leaders, find an U.S. educated person from the country, radicalize them, send them back to the country, and fund them to start chaos and destruction. None of them have been successful but have impacted the development and governance of the country.
It is time for a new voice in #India, born, raised, educated on the soil of India, to RISE UP, organize, and peacefully protest the disruptive spirit of the Cockroach Party. There should always be a counter movement to uphold democracy and freedom.
Rise up, young patriots! Rise up!
— Mary Millben (@MaryMillben) October 14, 2026
CJP ನಾಯಕ ಅಭಿಜೀತ್ ದೀಪ್ಕೆ ಮತ್ತು ಅವರ ಪಕ್ಷಕ್ಕೆ ಮೋದಿ ಹಾಗೂ ಅವರ ನಾಯಕತ್ವವನ್ನು ವಿರೋಧಿಸುವ ಅಮೆರಿಕದ ದಾನಿಗಳಿಂದ ಹಣಕಾಸಿನ ನೆರವು ದೊರೆಯುತ್ತಿದೆ ಎಂದಿರುವ 41 ವರ್ಷದ ಗಾಯಕಿ ಮಿಲ್ಬೆನ್, ಎಕ್ಸ್ ಪೋಸ್ಟ್ನಲ್ಲಿಪ್ರಧಾನಿ ಮೋದಿ ಮತ್ತು ಅವರ ರಾಜಕೀಯ ನಾಯಕತ್ವವನ್ನು ಸಮರ್ಥಿಸಿಕೊಂಡಿದ್ದಾರೆ. ಯುವ ದೇಶಪ್ರೇಮಿಗಳೇ, ಭಯಪಡಬೇಡಿ. 25 ವರ್ಷಗಳಿಂದ ಸೇವೆ ಸಲ್ಲಿಸಿರುವ, ಅದರಲ್ಲಿ 12 ವರ್ಷ ಪ್ರಧಾನಿಯಾಗಿ ಕಾರ್ಯನಿರ್ವಹಿಸಿರುವ ಮತ್ತು ಸತತ ಮೂರು ಅವಧಿಗೆ ಆಯ್ಕೆಯಾಗಿರುವ ನಿಮ್ಮ ಪ್ರಧಾನಿ ನನ್ನ ದೇಶದಿಂದ ಬರುವ ಶಕ್ತಿಗಳಿಗೆ ಮಣಿಯುವುದಿಲ್ಲ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಬ್ಯಾನರ್ಗಳು ಬೇರೆ, ಕಾರಣ ಒಂದೇ: ಜೈಲುಪಾಲಾದ ಸಿಜೆಪಿ ನಾಯಕರ ಬೆಂಬಲಕ್ಕೆ ನಿಂತ ರಾಹುಲ್ ಗಾಂಧಿ, ಪ್ರತಿಭಟನಾ ಐಕ್ಯತೆಗೆ ಕರೆ
ವಿಶ್ವದಾದ್ಯಂತ ಸಂಪ್ರದಾಯವಾದಿ ನಾಯಕರನ್ನು ಗುರಿಯಾಗಿಸಿ ಅಮೆರಿಕದ ದಾನಿಗಳ ಗುಂಪೊಂದು ಕಾರ್ಯನಿರ್ವಹಿಸುತ್ತದೆ ಎಂದೂ ಮಿಲ್ಬೆನ್ ಆರೋಪಿಸಿದ್ದಾರೆ. ಅಮೆರಿಕದಲ್ಲಿ ಶಿಕ್ಷಣ ಪಡೆದವರನ್ನು ಗುರುತಿಸಿ, ಅವರನ್ನು ತೀವ್ರಗಾಮಿ ಚಿಂತನೆಗಳತ್ತ ಸೆಳೆದು, ತಮ್ಮ ದೇಶಗಳಿಗೆ ಮರಳಿದ ಬಳಿಕ ರಾಜಕೀಯ ಚಳವಳಿಗಳನ್ನು ಆರಂಭಿಸಲು ಹಣಕಾಸು ಒದಗಿಸಲಾಗುತ್ತದೆ. ಇಂತಹ ಪ್ರಯತ್ನಗಳು ಯಶಸ್ವಿಯಾಗದಿದ್ದರೂ, ಆಯಾ ದೇಶಗಳ ಅಭಿವೃದ್ಧಿ ಮತ್ತು ಆಡಳಿತದ ಮೇಲೆ ಪರಿಣಾಮ ಬೀರಿವೆ ಎಂದು ಅವರು ತಿಳಿಸಿದ್ದಾರೆ.
ಯಾರು ಈ ಮೇರಿ ಮಿಲ್ಬೆನ್ ?
ಮೇರಿ ಮಿಲ್ಬೆನ್ ಅಮೆರಿಕದ ಗಾಯಕಿ ಮತ್ತು ನಟಿಯಾಗಿದ್ದು, ಭಾರತದ ರಾಷ್ಟ್ರಗೀತೆ ಜನ ಗಣ ಮನ ಹಾಗೂ ಭಕ್ತಿಗೀತೆ ಓಂ ಜೈ ಜಗದೀಶ್ ಹರೇ ಹಾಡುವ ಮೂಲಕ ಭಾರತದಲ್ಲಿ ಜನಪ್ರಿಯತೆ ಗಳಿಸಿದ್ದಾರೆ. 2023ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿಯ ಸಂದರ್ಭದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಭಾರತದ ರಾಷ್ಟ್ರಗೀತೆಯನ್ನೂ ಹಾಡಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:00 pm, Wed, 14 October 26




