AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮಾನವೀಯತೆಯ ಸೇವೆಯಿಂದಲೇ ಭಾರತ ವಿಶ್ವಗುರುವಾಗಿದೆ’; ಕೆನಡಾದಲ್ಲಿ ಮೋಹನ್ ಭಾಗವತ್ ಹೇಳಿಕೆ

ಯಾವುದೇ ಭೇದಭಾವವಿಲ್ಲದೆ ಇತರರಿಗೆ ಸಹಾಯ ಮಾಡುವ ತತ್ವದಿಂದ ಭಾರತದ ನಾಗರಿಕತೆಯ ಪರಂಪರೆಯು ಮಾರ್ಗದರ್ಶಿಸಲ್ಪಟ್ಟಿದೆ. ಭಾರತವು ಜಗತ್ತಿಗೆ 'ವಿಶ್ವಗುರು'ವಾಗಿ ಸೇವೆ ಸಲ್ಲಿಸಿದೆಯೇ ಹೊರತು 'ಸೂಪರ್ ಪವರ್' ಆಗಿ ಅಲ್ಲ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಕೆನಡಿಯನ್ ಹಿಂದೂಸ್ ಫಾರ್ ಔಟ್‌ರೀಚ್, ರಿಲೇಶನ್ಸ್ ಆ್ಯಂಡ್ ಡೈಲಾಗ್ ಸಂಸ್ಥೆಯು ಕೆನಡಾದ ಟೊರೊಂಟೋದಲ್ಲಿ ಆಯೋಜಿಸಿದ್ದ 'ಹಿಂದೂ ವಿಶ್ವ ಬಂಧು - ಪ್ರಪಂಚವನ್ನು ಸ್ನೇಹದಿಂದ ಆಲಂಗಿಸಿ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೂ ಜೀವನದೃಷ್ಟಿಯು 'ವಸುಧೈವ ಕುಟುಂಬಕಂ' ಅಂದರೆ ಇಡೀ ಜಗತ್ತೇ ಒಂದು ಕುಟುಂಬ ಎಂಬ ಸಾರ್ವತ್ರಿಕ ತತ್ವವನ್ನು ಆಧರಿಸಿದೆ ಎಂದರು.

'ಮಾನವೀಯತೆಯ ಸೇವೆಯಿಂದಲೇ ಭಾರತ ವಿಶ್ವಗುರುವಾಗಿದೆ'; ಕೆನಡಾದಲ್ಲಿ ಮೋಹನ್ ಭಾಗವತ್ ಹೇಳಿಕೆ
Mohan Bhagwat In CanadaImage Credit source: TV9
ಸುಷ್ಮಾ ಚಕ್ರೆ
|

Updated on: Aug 31, 2026 | 11:00 PM

Share

ನವದೆಹಲಿ, ಆಗಸ್ಟ್ 31: ಭಾರತದ ನಾಗರಿಕ ಸಂಸ್ಕೃತಿಯು ಯಾವುದೇ ಭೇದಭಾವವಿಲ್ಲದೆ ಇತರರಿಗೆ ಸಹಾಯ ಮಾಡುವ ತತ್ವದಿಂದ ಸದಾ ಮಾರ್ಗದರ್ಶಿಸಲ್ಪಟ್ಟಿದೆ. ಭಾರತವು ಜಗತ್ತಿಗೆ ‘ವಿಶ್ವಗುರು’ವಾಗಿ ಸೇವೆ ಸಲ್ಲಿಸಿದೆಯೇ ಹೊರತು ‘ಮಹಾಶಕ್ತಿ’ಯಾಗಿ ಅಲ್ಲ ಎಂದು ಆರ್‌ಎಸ್‌ಎಸ್ (RSS) ಸರಸಂಘಚಾಲಕ ಮೋಹನ್ ಭಾಗವತ್ (Mohan Bhagwat) ಹೇಳಿದ್ದಾರೆ. ಕೆನಡಿಯನ್ ಹಿಂದೂಸ್ ಫಾರ್ ಔಟ್‌ರೀಚ್, ರಿಲೇಶನ್ಸ್ ಆ್ಯಂಡ್ ಡೈಲಾಗ್ ಸಂಸ್ಥೆಯು ಕೆನಡಾದ ಟೊರೊಂಟೋದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೇವೆಯು ಭಾರತೀಯ ನಾಗರಿಕತೆಯ ಮೂಲ ಲಕ್ಷಣವಾಗಿದೆ ಎಂದು ಹೇಳಿದ್ದಾರೆ.

“ಪ್ರಪಂಚದ ಯಾವುದೇ ಭಾಗದಲ್ಲಿ ಭಾರತಕ್ಕೆ ಸಹಾಯಕ್ಕಾಗಿ ವಿನಂತಿ ಬಂದಾಗಲೆಲ್ಲಾ ಅದು ಎಂದಿಗೂ ನಿರಾಕರಿಸಿಲ್ಲ. ಭಾರತ ಕೇಳದಿದ್ದರೂ ತನ್ನ ಕೈಲಾದಷ್ಟು ಸಹಾಯದ ಹಸ್ತವನ್ನು ಚಾಚುತ್ತದೆ. ಇದು ನಮ್ಮ ಪರಂಪರೆ, ಭಾರತದ ಡಿಎನ್‌ಎ. ಅದಕ್ಕಾಗಿಯೇ ‘ಹಿಂದೂಗಳು ಜಾಗೃತರಾದರೆ, ಜಗತ್ತೇ ಜಾಗೃತಗೊಳ್ಳುತ್ತದೆ’ ಎಂಬ ಮಾತನ್ನು ನೀವು ಕೇಳಿರಬಹುದು” ಎಂದು ಮೋಹನ್ ಭಾಗವತ್ ಹೇಳಿದ್ದಾರೆ.

ಇದನ್ನೂ ಓದಿ: ‘ಭಾರತದಲ್ಲಿ ಮುಸ್ಲಿಮರು ಇರಬಾರದು ಎಂದು ಭಾವಿಸುವವರು ಹಿಂದೂಗಳೇ ಅಲ್ಲ’; ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಇದೇ ವೇಳೆ ಸಂತ ಕಬೀರರ ದೋಹೆಗಳನ್ನು ಉಲ್ಲೇಖಿಸಿದ ಮೋಹನ್ ಭಾಗವತ್, ಒಬ್ಬ ವ್ಯಕ್ತಿಯು ಪ್ರೀತಿಯ ಸಂದೇಶವನ್ನು ಅರ್ಥಮಾಡಿಕೊಳ್ಳಲು ವಿಫಲವಾದರೆ ಅವನು ಗಳಿಸಿದ ಎಲ್ಲಾ ಜ್ಞಾನವೂ ನಿರರ್ಥಕ ಎಂದು ಹೇಳಿದರು.

“ನಾವು ಈ ವೈವಿಧ್ಯತೆಯನ್ನು ಸ್ವೀಕರಿಸಬೇಕು, ಗೌರವಿಸಬೇಕು ಮತ್ತು ಸೇವೆ ಮಾಡಬೇಕು. ಏಕೆಂದರೆ ಇದು ಏಕತೆಯ ಅಭಿವ್ಯಕ್ತಿಯಾಗಿದೆ. ಪ್ರಕೃತಿಯಲ್ಲಿ ಸತ್ಯದ ಅಭಿವ್ಯಕ್ತಿ ವೈವಿಧ್ಯಮಯ. ವೈವಿಧ್ಯತೆಯು ನೈಸರ್ಗಿಕವಾದುದು. ಆದರೆ, ಏಕತೆಯೇ ಅಂತಿಮ ಸತ್ಯ. ಅದುವೇ ಭಾರತದ ಪ್ರಾಚೀನ ಸಂಸ್ಕೃತಿ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ನ್ಯೂಯಾರ್ಕ್​ನಲ್ಲಿ ಆಗಸ್ಟ್ 29ರಂದು ಏಕತಾ ಆಚರಣೆಯಲ್ಲಿ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ ಭಾಗಿ

“ಉದಾರ ಮನಸ್ಸಿನ ಮತ್ತು ಜ್ಞಾನವುಳ್ಳವರು ‘ವಸುಧೈವ ಕುಟುಂಬಕಂ’ ಭಾವನೆಯನ್ನು ಸ್ವೀಕರಿಸುತ್ತಾರೆ. ಭೌತಿಕ ಜಗತ್ತಿನಲ್ಲಿ ಜನರು ದೇಹ, ಆಕಾರ ಮತ್ತು ಬಣ್ಣದಲ್ಲಿ ಭಿನ್ನವಾಗಿದ್ದರೂ, ಮೂಲತಃ ನಾವೆಲ್ಲರೂ ಒಂದೇ. ಆದ್ದರಿಂದ ಇತರರಿಗೆ ಸೇವೆ ಮಾಡುವುದು ನಮ್ಮ ಕರ್ತವ್ಯ” ಎಂದಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
ಮುಖ್ಯರಸ್ತೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್‌ಗೆ 15 ಸಾವಿರ ರೂ.ದಂಡ
ಮುಖ್ಯರಸ್ತೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್‌ಗೆ 15 ಸಾವಿರ ರೂ.ದಂಡ
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ
ಚಿತ್ರದುರ್ಗಕ್ಕೆ ಸುದೀಪ್ ಭೇಟಿ: ಚಪ್ಪಲಿ ಧರಿಸದೇ ನಡೆದುಬಂದ ನಟ
ಚಿತ್ರದುರ್ಗಕ್ಕೆ ಸುದೀಪ್ ಭೇಟಿ: ಚಪ್ಪಲಿ ಧರಿಸದೇ ನಡೆದುಬಂದ ನಟ
ಸೌಜನ್ಯ ಪ್ರಕರಣ ಮರು ತನಿಖೆ ಬಗ್ಗೆ ಎಸ್​​ಐಟಿಯಿಂದ ಹೈವೋಲ್ಟೇಜ್ ಸಭೆ
ಸೌಜನ್ಯ ಪ್ರಕರಣ ಮರು ತನಿಖೆ ಬಗ್ಗೆ ಎಸ್​​ಐಟಿಯಿಂದ ಹೈವೋಲ್ಟೇಜ್ ಸಭೆ
ಗಗನ್ ಬಳಿ ಕ್ಷಮೆ ಕೇಳಿದ ಗಾನವಿ, ಇಬ್ಬರ ನಡುವೆ ಭಾವುಕ ಚರ್ಚೆ: ವಿಡಿಯೋ
ಗಗನ್ ಬಳಿ ಕ್ಷಮೆ ಕೇಳಿದ ಗಾನವಿ, ಇಬ್ಬರ ನಡುವೆ ಭಾವುಕ ಚರ್ಚೆ: ವಿಡಿಯೋ
ಸುದೀಪ್ ಅನ್ನೇ ಎಳೆದಾಡಲು ಅಭಿಮಾನಿಗಳು: ವಿಡಿಯೋ ನೋಡಿ
ಸುದೀಪ್ ಅನ್ನೇ ಎಳೆದಾಡಲು ಅಭಿಮಾನಿಗಳು: ವಿಡಿಯೋ ನೋಡಿ
ಗಮನಸೆಳೆದ ಮೈ ಹೋಮ್ ವ್ಯೋಮ: ಅಪಾರ್ಟ್​​​ಮೆಂಟ್​​ ಖರೀದಿಗೆ ಮುಗಿಬಿದ್ದ ಜನ
ಗಮನಸೆಳೆದ ಮೈ ಹೋಮ್ ವ್ಯೋಮ: ಅಪಾರ್ಟ್​​​ಮೆಂಟ್​​ ಖರೀದಿಗೆ ಮುಗಿಬಿದ್ದ ಜನ
ತುಮಕೂರು ಯುವ ದಸರಾ: ಮಕ್ಕಳ ಪ್ರತಿಭೆಗೆ ಅದ್ದೂರಿ ವೇದಿಕೆ
ತುಮಕೂರು ಯುವ ದಸರಾ: ಮಕ್ಕಳ ಪ್ರತಿಭೆಗೆ ಅದ್ದೂರಿ ವೇದಿಕೆ
ಹಾಸನಾಂಬೆ ಉತ್ಸವದಲ್ಲಿ ಕೋಟಿ ಕೋಟಿ ಅವ್ಯವಹಾರ ಆರೋಪ
ಹಾಸನಾಂಬೆ ಉತ್ಸವದಲ್ಲಿ ಕೋಟಿ ಕೋಟಿ ಅವ್ಯವಹಾರ ಆರೋಪ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ