AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ತಂತ್ರ: ಟ್ರಂಪ್ ನಡವಳಿಕೆ ಅಧ್ಯಯನ ಮಾಡಲು ಮನಃಶಾಸ್ತ್ರಜ್ಞರ ನೇಮಿಸಿದ ಇರಾನ್

ಇರಾನ್ ಅಮೆರಿಕದೊಂದಿಗಿನ ಸಂಘರ್ಷ ಕೊನೆಗೊಳಿಸಲು ಡೊನಾಲ್ಡ್ ಟ್ರಂಪ್ ನಡವಳಿಕೆ ಅಧ್ಯಯನಕ್ಕೆ ಮನಶ್ಶಾಸ್ತ್ರಜ್ಞರನ್ನು ನೇಮಿಸಿತು. ಈ ವಿನೂತನ ರಾಜತಾಂತ್ರಿಕ ತಂತ್ರದಿಂದ ಟ್ರಂಪ್‌ಗೆ ಕಳುಹಿಸಿದ ಸಂದೇಶಗಳು ಸಕಾರಾತ್ಮಕ ಪ್ರತಿಕ್ರಿಯೆ ಪಡೆದವು. ಪರಿಣಾಮವಾಗಿ, ಉಭಯ ದೇಶಗಳ ನಡುವೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲು ಸಿದ್ಧತೆ ನಡೆದಿದೆ, ಇದು ಇರಾನ್‌ನ ರಾಜತಾಂತ್ರಿಕ ಜಾಣ್ಮೆಯನ್ನು ಎತ್ತಿ ತೋರಿಸುತ್ತದೆ.

ಹೊಸ ತಂತ್ರ: ಟ್ರಂಪ್ ನಡವಳಿಕೆ ಅಧ್ಯಯನ ಮಾಡಲು ಮನಃಶಾಸ್ತ್ರಜ್ಞರ ನೇಮಿಸಿದ ಇರಾನ್
ಡೊನಾಲ್ಡ್​ ಟ್ರಂಪ್ Image Credit source: PTI
ನಯನಾ ರಾಜೀವ್
|

Updated on: Jun 16, 2026 | 2:46 PM

Share

ಟೆಹ್ರಾನ್, ಜೂನ್ 16: ಅಮೆರಿಕ ಮತ್ತು ಇರಾನ್ ನಡುವಿನ ಸುದೀರ್ಘ ಸಂಘರ್ಷವನ್ನು ಕೊನೆಗೊಳಿಸಲು ಇರಾನ್ ಸರ್ಕಾರವು ಅತ್ಯಂತ ವಿಭಿನ್ನ ಹಾಗೂ ರಹಸ್ಯ ರಾಜತಾಂತ್ರಿಕ ತಂತ್ರವೊಂದನ್ನು ಬಳಸಿರುವುದು ಬೆಳಕಿಗೆ ಬಂದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರ ವಿಶಿಷ್ಟ ನಿರ್ಧಾರಗಳು ಮತ್ತು ವರ್ತನೆಗಳನ್ನು ಸೂಕ್ಷ್ಮವಾಗಿ ಗಮನಿಸಿ, ಅದಕ್ಕೆ ತಕ್ಕಂತೆ ಮಾತುಕತೆಯ ಕಾರ್ಯತಂತ್ರವನ್ನು ರೂಪಿಸಲು ಇರಾನ್ ತನ್ನ ರಾಜತಾಂತ್ರಿಕ ತಂಡಕ್ಕೆ ಇಬ್ಬರು ಹಿರಿಯ ಮನಶ್ಶಾಸ್ತ್ರಜ್ಞರನ್ನು (Psychologists) ಸೇರಿಸಿಕೊಂಡಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಮನಃಶಾಸ್ತ್ರಜ್ಞರ ಸಲಹೆಯಂತೆ ಬದಲಾದ ಸಂದೇಶ ಇರಾನಿನ ಅಧಿಕಾರಿಯೊಬ್ಬರ ಪ್ರಕಾರ, ಏಪ್ರಿಲ್‌ನಲ್ಲಿ ಇಸ್ಲಾಮಾಬಾದ್‌ನಲ್ಲಿ ನಡೆದ ಮೊದಲ ಸುತ್ತಿನ ಪರೋಕ್ಷ ಮಾತುಕತೆಯ ನಂತರ ಈ ಇಬ್ಬರು ಹಿರಿಯ ಮನಃಶಾಸ್ತ್ರಜ್ಞರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಡೊನಾಲ್ಡ್ ಟ್ರಂಪ್ ಅವರ ವರ್ತನೆಯ ಮಾದರಿಯನ್ನು ಅಧ್ಯಯನ ಮಾಡಿ, ಅಮೆರಿಕಕ್ಕೆ ಕಳುಹಿಸುವ ಲಿಖಿತ ಪತ್ರಗಳು ಹಾಗೂ ಸಂದೇಶಗಳನ್ನು ಯಾವ ಶೈಲಿಯಲ್ಲಿ ರೂಪಿಸಬೇಕು ಎಂದು ಈ ತಜ್ಞರು ಇರಾನ್ ತಂಡಕ್ಕೆ ಮಾರ್ಗದರ್ಶನ ನೀಡಿದರು. ವಿಶೇಷವೆಂದರೆ, ಈ ಬದಲಾವಣೆಗಳನ್ನು ಜಾರಿಗೆ ತಂದ ನಂತರ ಟ್ರಂಪ್ ಅವರಿಂದ ಬಂದ ಪ್ರತಿಕ್ರಿಯೆಗಳು ಹೆಚ್ಚು ಸಕಾರಾತ್ಮಕ ಮತ್ತು ರಚನಾತ್ಮಕವಾಗಿದ್ದವು ಎಂದು ಮೂಲಗಳು ತಿಳಿಸಿವೆ.

ಮಾತುಕತೆಯ ವೇಳೆ ಉಭಯ ದೇಶಗಳ ನಡುವೆ ವಿನಿಮಯವಾಗುವ ಪ್ರತಿಯೊಂದು ಪಠ್ಯ ಮತ್ತು ಪತ್ರಗಳು ಭವಿಷ್ಯದಲ್ಲಿ ಐತಿಹಾಸಿಕ ದಾಖಲೆಗಳಾಗಲಿವೆ ಎಂಬುದನ್ನು ಇರಾನ್ ಗಮನದಲ್ಲಿಟ್ಟುಕೊಂಡಿದೆ. ಮುಂದಿನ ದಿನಗಳಲ್ಲಿ ಇವು ಸಾರ್ವಜನಿಕವಾಗಿ ಬಿಡುಗಡೆಯಾದಾಗ, ಇರಾನ್ ಎಷ್ಟು ಜಾಣ್ಮೆ ಮತ್ತು ಅತ್ಯಾಧುನಿಕ ರಾಜತಾಂತ್ರಿಕ ತಂತ್ರದಿಂದ ಮಾತುಕತೆ ನಡೆಸಿತ್ತು ಎಂಬುದು ಜಗತ್ತಿಗೆ ತಿಳಿಯಲಿ ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿ ವಿವರಿಸಿದ್ದಾರೆ.

ಮತ್ತಷ್ಟು ಓದಿ: ನಾಳೆಯೇ ಅಮೆರಿಕ-ಇರಾನ್ ಶಾಂತಿ ಒಪ್ಪಂದಕ್ಕೆ ಸಹಿ; ತಕ್ಷಣವೇ ಹಾರ್ಮುಜ್ ತೆರೆಯಲಾಗುವುದು ಎಂದ ಟ್ರಂಪ್

ಜೂನ್ 19 ರಂದು ಶಾಂತಿ ಒಪ್ಪಂದಕ್ಕೆ ಸಹಿ ಈ ರಾಜತಾಂತ್ರಿಕ ಪ್ರಯತ್ನಗಳು ಈಗ ಯಶಸ್ಸಿನ ಹಾದಿಗೆ ಬಂದಿವೆ. ಉಭಯ ದೇಶಗಳ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಸಂಘರ್ಷವನ್ನು ಕೊನೆಗೊಳಿಸಲು ಡೊನಾಲ್ಡ್ ಟ್ರಂಪ್ ಹಾಗೂ ಇರಾನ್ ಅಧಿಕಾರಿಗಳು ಪ್ರಾಥಮಿಕ ತಿಳುವಳಿಕೆ ಒಪ್ಪಂದಕ್ಕೆ (MoU) ಒಪ್ಪಿಗೆ ಸೂಚಿಸಿದ್ದಾರೆ. ಜೂನ್ 19 ರಂದು ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿ ಈ ಐತಿಹಾಸಿಕ ಒಪ್ಪಂದಕ್ಕೆ ಉಭಯ ದೇಶಗಳು ಅಧಿಕೃತವಾಗಿ ಸಹಿ ಹಾಕುವ ನಿರೀಕ್ಷೆಯಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ವೈದ್ಯಕೀಯ ತಪಾಸಣೆಯಲ್ಲಿ ಬರೋಬ್ಬರಿ 22 ವೈದ್ಯಕೀಯ ತಜ್ಞರು ಭಾಗವಹಿಸಿದ್ದರು ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಇದು ಹಿಂದಿನ ತಪಾಸಣೆಗಳಿಗಿಂತ ದುಪ್ಪಟ್ಟು ಸಂಖ್ಯೆಯಾಗಿದ್ದು, ಅಮೆರಿಕ ಅಧ್ಯಕ್ಷರ ಆರೋಗ್ಯ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಮೇಲಿರುವ ಜಾಗತಿಕ ನಿಗಾವನ್ನು ತೋರಿಸುತ್ತದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಹಾನೂರು ಶೂಟೌಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹೇಳಿದ್ದಿಷ್ಟು
ಹಾನೂರು ಶೂಟೌಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹೇಳಿದ್ದಿಷ್ಟು
ತಿಪಟೂರು​ ಶಾಸಕನಿಂದ ಪ್ರತ್ಯೇಕ ಜಿಲ್ಲೆಯ ಕೂಗು!
ತಿಪಟೂರು​ ಶಾಸಕನಿಂದ ಪ್ರತ್ಯೇಕ ಜಿಲ್ಲೆಯ ಕೂಗು!
ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಕ್ಕೆ ಸೇರಿಸಿ: ಎನ್​.ವೈ. ಗೋಪಾಲಕೃಷ್ಣ
ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಕ್ಕೆ ಸೇರಿಸಿ: ಎನ್​.ವೈ. ಗೋಪಾಲಕೃಷ್ಣ
ಮಹಿಳೆ ಜೊತೆ ಅಸಭ್ಯ ವರ್ತನೆ; ತಮ್ಮೇನಹಳ್ಳಿ ಸ್ವಾಮೀಜಿಗೆ ಜನರಿಂದ ಗೂಸಾ!
ಮಹಿಳೆ ಜೊತೆ ಅಸಭ್ಯ ವರ್ತನೆ; ತಮ್ಮೇನಹಳ್ಳಿ ಸ್ವಾಮೀಜಿಗೆ ಜನರಿಂದ ಗೂಸಾ!
ಬೆಳೆ ವಿಮೆ ವಿಚಾರಕ್ಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿವಲಿಂಗೇಗೌಡ ಗರಂ
ಬೆಳೆ ವಿಮೆ ವಿಚಾರಕ್ಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿವಲಿಂಗೇಗೌಡ ಗರಂ
ಆಗಸ್ಟ್ 17ರಿಂದ 23ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿ ತಿಳಿದುಕೊಳ್ಳಿ
ಆಗಸ್ಟ್ 17ರಿಂದ 23ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿ ತಿಳಿದುಕೊಳ್ಳಿ
ರವಿಚಂದ್ರನ್ ಮನೆ ಮಾರಿದ್ದು ನಿಜವೇ? ಅಸಲಿ ವಿಷಯ ತೆರೆದಿಟ್ಟ ದಿಲ್ ಸೇ ದಿಲೀಪ್
ರವಿಚಂದ್ರನ್ ಮನೆ ಮಾರಿದ್ದು ನಿಜವೇ? ಅಸಲಿ ವಿಷಯ ತೆರೆದಿಟ್ಟ ದಿಲ್ ಸೇ ದಿಲೀಪ್
ಅರಣ್ಯ ಸಿಬ್ಬಂದಿ ವಿರುದ್ಧ ಕೊಲೆ ಪ್ರಕರಣ; ಯಾರ ಹೆಸರೂ ಉಲ್ಲೇಖವಿಲ್ಲ!
ಅರಣ್ಯ ಸಿಬ್ಬಂದಿ ವಿರುದ್ಧ ಕೊಲೆ ಪ್ರಕರಣ; ಯಾರ ಹೆಸರೂ ಉಲ್ಲೇಖವಿಲ್ಲ!
ಇಂದು ವಿನಾಯಕಿ ಚತುರ್ಥಿ; ಆಸೆ ಆಕಾಂಕ್ಷೆಗಳ ಸಿದ್ಧಿಗಾಗಿ ವಿಶೇಷ ವ್ರತದ ದಿನ
ಇಂದು ವಿನಾಯಕಿ ಚತುರ್ಥಿ; ಆಸೆ ಆಕಾಂಕ್ಷೆಗಳ ಸಿದ್ಧಿಗಾಗಿ ವಿಶೇಷ ವ್ರತದ ದಿನ
ಸ್ವಾತಂತ್ರ್ಯೋತ್ಸವ; HMT ನೂತನ ವಾಚ್ ಬಿಡುಗಡೆ: ಖರೀದಿಗೆ ಮುಗಿಬಿದ್ದ ಜನ
ಸ್ವಾತಂತ್ರ್ಯೋತ್ಸವ; HMT ನೂತನ ವಾಚ್ ಬಿಡುಗಡೆ: ಖರೀದಿಗೆ ಮುಗಿಬಿದ್ದ ಜನ