AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Naim Qassem Killed: ಇಸ್ರೇಲಿ ದಾಳಿಯಲ್ಲಿ ಹಿಜ್ಬುಲ್ಲಾ ಮುಖ್ಯಸ್ಥ ನಯೀಮ್ ಖಾಸಿಮ್ ಹತ್ಯೆ

ಇರಾನ್ ಮತ್ತು ಅಮೆರಿಕ ನಡುವೆ 14 ದಿನಗಳ ಕದನ ವಿರಾಮ ಘೋಷಣೆಯಾಗಿರುವ ನಡುವೆ, ಇಸ್ರೇಲ್ ಹಿಜ್ಬುಲ್ಲಾ ಮುಖ್ಯಸ್ಥ ನಯೀಮ್ ಖಾಸಿಮ್‌ನನ್ನು ಕೊಂದಿರುವುದಾಗಿ ಹೇಳಿಕೊಂಡಿದೆ. ಯುದ್ಧದ ಹೊರತಾಗಿ, ಇಸ್ರೇಲ್ ಲೆಬನಾನ್‌ನಲ್ಲಿ ಹಿಜ್ಬೊಲ್ಲಾ ಮೇಲೆ ಭಾರೀ ದಾಳಿ ನಡೆಸುತ್ತಿದೆ. ಈ ದಾಳಿಗಳಲ್ಲಿ ಖಾಸಿಮ್ ಸಾವನ್ನಪ್ಪಿದ್ದಾನೆ ಎಂದು ಶಂಕಿಸಲಾಗಿದೆ.ಬೈರುತ್‌ನಲ್ಲಿ ನಡೆದ ಗುರಿ ದಾಳಿಯಲ್ಲಿ ಖಾಸಿಮ್ ಸಾವನ್ನಪ್ಪಿದ್ದಾನೆ. ಈ ದಾಳಿಗಳಲ್ಲಿ 250 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

Naim Qassem Killed: ಇಸ್ರೇಲಿ ದಾಳಿಯಲ್ಲಿ ಹಿಜ್ಬುಲ್ಲಾ ಮುಖ್ಯಸ್ಥ ನಯೀಮ್ ಖಾಸಿಮ್ ಹತ್ಯೆ
ನಯೀಮ್ Image Credit source: Reuters
ನಯನಾ ರಾಜೀವ್
|

Updated on:Apr 10, 2026 | 7:17 AM

Share

ಇಸ್ರೇಲ್, ಏಪ್ರಿಲ್ 09: ಇರಾನ್ ಮತ್ತು ಅಮೆರಿಕ ನಡುವೆ 14 ದಿನಗಳ ಕದನ ವಿರಾಮ ಘೋಷಣೆಯಾಗಿರುವ ನಡುವೆ, ಇಸ್ರೇಲ್ ಹಿಜ್ಬುಲ್ಲಾ ಮುಖ್ಯಸ್ಥ ನಯೀಮ್ ಖಾಸಿಮ್‌ನನ್ನು ಕೊಂದಿರುವುದಾಗಿ ಹೇಳಿಕೊಂಡಿದೆ. ಯುದ್ಧದ ಹೊರತಾಗಿ, ಇಸ್ರೇಲ್ ಲೆಬನಾನ್‌ನಲ್ಲಿ ಹಿಜ್ಬೊಲ್ಲಾ ಮೇಲೆ ಭಾರೀ ದಾಳಿ ನಡೆಸುತ್ತಿದೆ. ಈ ದಾಳಿಗಳಲ್ಲಿ ಖಾಸಿಮ್ ಸಾವನ್ನಪ್ಪಿದ್ದಾನೆ ಎಂದು ಶಂಕಿಸಲಾಗಿದೆ.ಬೈರುತ್‌ನಲ್ಲಿ ನಡೆದ ಗುರಿ ದಾಳಿಯಲ್ಲಿ ಖಾಸಿಮ್ ಸಾವನ್ನಪ್ಪಿದ್ದಾನೆ.

ಈ ದಾಳಿಗಳಲ್ಲಿ 250 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಫೆಬ್ರವರಿ 28 ರಂದು ಭುಗಿಲೆದ್ದ ಈ ಸಂಘರ್ಷವು ಅದೇ ದಿನ ನಡೆದ ಬೃಹತ್ ವಾಯುದಾಳಿಯಲ್ಲಿ ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲಾ ಖಮೇನಿ ಸಾವನ್ನಪ್ಪಿದ್ದರು. ಅವರ ಮಗ ಮೊಜ್ತಬಾ ಖಮೇನಿಯನ್ನು ಮಾರ್ಚ್ 8 ರಂದು ಸುಪ್ರೀಂ ಲೀಡರ್ ಎಂದು ಘೋಷಿಸಲಾಯಿತು. ಇದರ ನಂತರ ಇರಾನ್‌ನ ರಾಷ್ಟ್ರೀಯ ಭದ್ರತಾ ಮಂಡಳಿಯ ಮುಖ್ಯಸ್ಥ ಅಲಿ ಲಾರಿಜಾನಿ ನಿಧನರಾದರು. ಐಆರ್‌ಜಿಸಿ ಕಮಾಂಡರ್-ಇನ್-ಚೀಫ್ ಮೊಹಮ್ಮದ್ ಪಕ್‌ಪೂರ್ ಕೂಡ ಹತ್ಯೆಗೀಡಾದರು.

ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಕಡಿಮೆಯಾಗುವ ಮುನ್ಸೂಚನೆ ಸಿಗುತ್ತಿರುವಂತೆಯೇ, ಮತ್ತೊಂದು ಆಘಾತಕಾರಿ ಸುದ್ದಿ ಜಗತ್ತನ್ನು ತಲ್ಲಣಗೊಳಿಸಿದೆ. ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಸ್ಥಾಪನೆಯ ಪ್ರಯತ್ನಗಳು ನಡೆಯುತ್ತಿದ್ದರೂ, ಇಸ್ರೇಲ್ ಮತ್ತು ಹಿಜ್ಬೊಲ್ಲಾ ನಡುವಿನ ಸಂಘರ್ಷ ಈಗ ಉತ್ತುಂಗಕ್ಕೆ ತಲುಪಿದೆ. ಅಮೆರಿಕ ಮತ್ತು ಇರಾನ್ ನಡುವೆ 14 ದಿನಗಳ ಕದನ ವಿರಾಮ ಘೋಷಣೆಯಾಗಿ ಇಡೀ ಜಗತ್ತು ನಿಟ್ಟುಸಿರು ಬಿಡುತ್ತಿದ್ದ ಬೆನ್ನಲ್ಲೇ, ಇಸ್ರೇಲ್ ಮಿಲಿಟರಿ ಲೆಬನಾನ್ ಮೇಲೆ ಹಿಂದೆಂದೂ ಕಾಣದಂತಹ ದಾಳಿ ಸಂಘಟಿಸಿದೆ. ಈ ದಾಳಿಯಲ್ಲಿ ಹಿಜ್ಬೊಲ್ಲಾ ಸಂಘಟನೆಯ ಹೊಸ ಮುಖ್ಯಸ್ಥ ನಯೀಮ್ ಖಾಸಿಮ್ ಹತ್ಯೆಯಾಗಿದ್ದಾನೆ ಎಂದು ಇಸ್ರೇಲ್ ಅಧಿಕೃತವಾಗಿ ಘೋಷಿಸಿದೆ.

ಮತ್ತಷ್ಟು ಓದಿ: ಇಸ್ರೇಲ್ ಹಿಜ್ಬೊಲ್ಲಾ ಮೇಲೆ ದಾಳಿ ಮುಂದುವರಿಸುತ್ತದೆ; ನೆತನ್ಯಾಹು ಎಚ್ಚರಿಕೆ

ನಮ್ಮ ಕದನ ವಿರಾಮ ಒಪ್ಪಂದವು ಕೇವಲ ಇರಾನ್‌ಗೆ ಮಾತ್ರ ಸೀಮಿತವಾಗಿದೆ. ಲೆಬನಾನ್‌ನಲ್ಲಿರುವ ಹಿಜ್ಬೊಲ್ಲಾ ಉಗ್ರರ ನೆಲೆಗಳ ಮೇಲಿನ ನಮ್ಮ ಕಾರ್ಯಾಚರಣೆ ಮುಂದುವರಿಯಲಿದೆ, ಎಂದು ಇಸ್ರೇಲ್ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. 1953ರಲ್ಲಿ ದಕ್ಷಿಣ ಲೆಬನಾನ್‌ನ ಕಾಫ್ರ್ ಕಿಲಾದಲ್ಲಿ ಜನಿಸಿದ ಖಾಸಿಮ್, ಲೆಬನಾನಿನ ವಿಶ್ವವಿದ್ಯಾಲಯದಿಂದ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ರಾಜಕೀಯಕ್ಕೆ ಬರುವ ಮೊದಲು ಅವರು ಹಲವಾರು ವರ್ಷಗಳ ಕಾಲ ಕೆಮಿಸ್ಟ್ರಿ ಶಿಕ್ಷಕರಾಗಿ ಕೆಲಸ ಮಾಡಿದ್ದ.

1982ರಲ್ಲಿ ಹಿಜ್ಬೊಲ್ಲಾ ಸಂಘಟನೆಯನ್ನು ಸ್ಥಾಪಿಸಿದ ಪ್ರಮುಖರಲ್ಲಿ ಇವರೂ ಒಬ್ಬರು. ಅಂದಿನಿಂದ ಇಂದಿನವರೆಗೆ ಅವರು ಸಂಘಟನೆಯ ಸಿದ್ಧಾಂತ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ. 1991ರಲ್ಲಿ ಹಿಜ್ಬೊಲ್ಲಾದ ಉಪ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಆತ, ಹಸನ್ ನಸ್ರಲ್ಲಾ ಅವರೊಂದಿಗೆ ಸತತ 30 ವರ್ಷಗಳ ಕಾಲ ಅದೇ ಹುದ್ದೆಯಲ್ಲಿದ್ದ.

ಸೆಪ್ಟೆಂಬರ್ 2024ರಲ್ಲಿ ಹಸನ್ ನಸ್ರಲ್ಲಾ ಹತ್ಯೆಯಾದ ನಂತರ ಮತ್ತು ಆತನ ಉತ್ತರಾಧಿಕಾರಿಯಾಗಬೇಕಿದ್ದ ಹಶೀಮ್ ಸಫೀದ್ದೀನ್ ಕೂಡ ಹತರಾದ ನಂತರ, ಅಕ್ಟೋಬರ್ 29, 2024ರಂದು ಖಾಸಿಮ್​ನನ್ನು ಸಂಘಟನೆಯ ಹೊಸ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಲಾಯಿತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:43 pm, Thu, 9 April 26

Follow Us
ಡೆಹ್ರಾಡೂನ್‌ನ ಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ಡೆಹ್ರಾಡೂನ್‌ನ ಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ರೀಲ್ಸ್ ಕ್ರೇಜ್; ಅತಿವೇಗಕ್ಕೆ ಡಿವೈಡರ್‌ಗೆ ಡಿಕ್ಕಿ ಹೊಡೆದ ಬೈಕ್,ಯುವತಿ ಸಾವು
ರೀಲ್ಸ್ ಕ್ರೇಜ್; ಅತಿವೇಗಕ್ಕೆ ಡಿವೈಡರ್‌ಗೆ ಡಿಕ್ಕಿ ಹೊಡೆದ ಬೈಕ್,ಯುವತಿ ಸಾವು
ಎರಡೂ ಪಂಚಮಸಾಲಿ ಟ್ರಸ್ಟ್‌ಗಳ ವಿರುದ್ಧ ಯತ್ನಾಳ್ ಗಂಭೀರ ಆರೋಪ
ಎರಡೂ ಪಂಚಮಸಾಲಿ ಟ್ರಸ್ಟ್‌ಗಳ ವಿರುದ್ಧ ಯತ್ನಾಳ್ ಗಂಭೀರ ಆರೋಪ
ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಹಲವು ಪ್ರಯಾಣಿಕರಿಗೆ ಗಾಯ
ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಹಲವು ಪ್ರಯಾಣಿಕರಿಗೆ ಗಾಯ
ಜಬ್ಬಾರ್, ನಸೀರ್ ರಾಜೀನಾಮೆಗೆ ಸೂಚಿಸಿದ್ದೇಕೆ? ಕಾರಣ ತಿಳಿಸಿದ ಜಮೀರ್!
ಜಬ್ಬಾರ್, ನಸೀರ್ ರಾಜೀನಾಮೆಗೆ ಸೂಚಿಸಿದ್ದೇಕೆ? ಕಾರಣ ತಿಳಿಸಿದ ಜಮೀರ್!
ದಾವಣಗೆರೆ ದಂಗಲ್: ಸಿಎಂ ಆಪ್ತ ನಸೀರ್ ತಲೆದಂಡ, ಸಚಿವ ಜಮೀರ್​ಗೂ ತೂಗುತ್ತಿ
ದಾವಣಗೆರೆ ದಂಗಲ್: ಸಿಎಂ ಆಪ್ತ ನಸೀರ್ ತಲೆದಂಡ, ಸಚಿವ ಜಮೀರ್​ಗೂ ತೂಗುತ್ತಿ
ಸಂಸತ್ತಿನ ಅಂಗಳದಲ್ಲಿ ಮೋದಿ-ಖರ್ಗೆ ಹಸ್ತಲಾಘವ
ಸಂಸತ್ತಿನ ಅಂಗಳದಲ್ಲಿ ಮೋದಿ-ಖರ್ಗೆ ಹಸ್ತಲಾಘವ
ಪ್ರಧಾನಿ ಮೋದಿ ಉದ್ಘಾಟಿಸಲಿರುವ ಭೈರವೈಕ್ಯ ಮಂದಿರ ಹೇಗಿದೆ? ಇಲ್ಲಿದೆ ವಿಡಿಯೋ
ಪ್ರಧಾನಿ ಮೋದಿ ಉದ್ಘಾಟಿಸಲಿರುವ ಭೈರವೈಕ್ಯ ಮಂದಿರ ಹೇಗಿದೆ? ಇಲ್ಲಿದೆ ವಿಡಿಯೋ
ಸಚಿವ ಜಮೀರ್​​ಗೆ ಸಿಎಂ ಸಿದ್ದರಾಮಯ್ಯ ಬುಲಾವ್
ಸಚಿವ ಜಮೀರ್​​ಗೆ ಸಿಎಂ ಸಿದ್ದರಾಮಯ್ಯ ಬುಲಾವ್
ರಸ್ತೆ ಬದಿಯ ಹಳ್ಳಕ್ಕೆ ನುಗ್ಗಿದ ಸ್ಲೀಪರ್ ಬಸ್, ಪ್ರಯಾಣಿಕರು ಜಸ್ಟ್ ಮಿಸ್
ರಸ್ತೆ ಬದಿಯ ಹಳ್ಳಕ್ಕೆ ನುಗ್ಗಿದ ಸ್ಲೀಪರ್ ಬಸ್, ಪ್ರಯಾಣಿಕರು ಜಸ್ಟ್ ಮಿಸ್