ಇರಾನ್-ಅಮೆರಿಕ ತಿಕ್ಕಾಟ ಬೆನ್ನಲ್ಲೇ ಸೇನಾ ಕಸರತ್ತು ವೀಕ್ಷಿಸಿದ ಪುಟಿನ್

ಇರಾನ್-ಅಮೆರಿಕ ತಿಕ್ಕಾಟ ಬೆನ್ನಲ್ಲೇ ಸೇನಾ ಕಸರತ್ತು ವೀಕ್ಷಿಸಿದ ಪುಟಿನ್

ಕಪ್ಪು ಸಮುದ್ರದಲ್ಲಿ ನಡೆದ ರಷ್ಯಾ ಸೇನಾ ಕಸರತ್ತನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ವೀಕ್ಷಿಸಿದರು. ಇರಾನ್​ನ ಜೊತೆ ಅಮೆರಿಕ ತಿಕ್ಕಾಟ ಮುಂದುವರಿದಿರುವ ನಡೆವೆಯೇ ರಷ್ಯಾ ಸೇನಾ ಕಸರತ್ತು ಕೈಗೊಂಡಿರುವುದು ಕುತೂಹಲಕ್ಕೆ ಕಾರಣವಾಗಿದ್ದು, ತನ್ನ ಸೇನಾ ಬಲವನ್ನು ವಿಶ್ವಕ್ಕೆ ತೋರಿಸಲು ರಷ್ಯಾ ಕವಾಯತನ್ನು ವೇದಿಕೆಯನ್ನಾಗಿಸಿಕೊಂಡಿದೆ.

ಮತ್ತಷ್ಟು ಪ್ರದೇಶಕ್ಕೆ ಹಬ್ಬಿದ ಕಾಡ್ಗಿಚ್ಚು:
ಆಸ್ಟ್ರೇಲಿಯಾದಲ್ಲಿ ಹಬ್ಬಿರುವ ಕಾಡ್ಗಿಚ್ಚು ತಣ್ಣಗಾಗುವ ಹೊತ್ತಲ್ಲೇ, ಮತ್ತಷ್ಟು ಭಾಗಗಳಿಗೆ ಹಬ್ಬಿದೆ. ಸ್ವಲ್ಪ ದಿನಗಳ ಕಾಲ ಮಳೆ ಹಾಗೂ ಒಂದಷ್ಟು ತಂಪಾದ ವಾತಾವರಣ ಜನರಲ್ಲಿ ನೆಮ್ಮದಿ ಮೂಡಿಸಿತ್ತು. ಆದರೆ ಮತ್ತೆ ಬಿಸಿ ಗಾಳಿ ಹೆಚ್ಚಾಗಿ, ಜನರು ಪರದಾಡುವಂತಾಗಿದೆ. ಲಕ್ಷಾಂತರ ಕೋಟಿ ರೂಪಾಯಿ ನಷ್ಟವಾಗಿದೆ.

ಅಬ್ಬರಿಸಿ ಬೊಬ್ಬಿರಿದ ‘ಜ್ವಾಲಾಮುಖಿ’:
ಮೆಕ್ಸಿಕೋದಲ್ಲಿ ಮತ್ತೊಮ್ಮೆ ಜ್ವಾಲಾಮುಖಿ ಬಾಯಿಬಿಟ್ಟಿದ್ದು, ಬರೋಬ್ಬರಿ 20 ಸಾವಿರ ಅಡಿ ಎತ್ತರದವರೆಗೂ ಧೂಳು ಮಿಶ್ರಿತ ಮೋಡಗಳು ಆವರಿಸಿವೆ. ಸ್ಫೋಟದ ತೀವ್ರತೆ ಹೇಗಿತ್ತು ಅಂದ್ರೆ, ಘಟನೆಯಿಂದ ಬೆಚ್ಚಿಬಿದ್ದಿರುವ ಸ್ಥಳೀಯರು ತಕ್ಷಣ ಮನೆ ತೊರೆದು ಹೋಗಿದ್ದಾರೆ. ವಿಮಾನ ಹಾರಾಟವೂ ರದ್ದಗೊಂಡಿದೆ.