ಬಾಯ್ತೆರೆದ ಜ್ವಾಲಾಮುಖಿ! ಫಿಲಿಪೈನ್ಸ್​ನಲ್ಲಿ ಪರಿಸ್ಥಿತಿ ಗಂಭೀರ

ಬಾಯ್ತೆರೆದ ಜ್ವಾಲಾಮುಖಿ! ಫಿಲಿಪೈನ್ಸ್​ನಲ್ಲಿ ಪರಿಸ್ಥಿತಿ ಗಂಭೀರ

ಫಿಲಿಪೈನ್ಸ್​ನಲ್ಲಿ ಜ್ವಾಲಾಮುಖಿ ಬಾಯ್ದೆರೆದಿದ್ದು, ಭಾರಿ ಪ್ರಮಾಣದ ಹೊಗೆಯನ್ನ ಹೊರ ಸೂಸುತ್ತಿದೆ. ಪರಿಸ್ಥಿತಿ ತೀರಾ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯರನ್ನ ಸ್ಥಳಾಂತರ ಮಾಡಲಾಗಿದೆ. ಇನ್ನು ಜ್ವಾಲಾಮುಖಿ ಬಾಯ್ತೆರೆಯುವ ಸಂದರ್ಭದಲ್ಲಿ ಸಿಡಿಲು ಬಡಿಯುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಬೈಕ್ ಸವಾರನ ಮೇಲೆ ಹಾಯ್ದ ಕಾರು! ಸ್ಕಿಡ್ ಆಗಿ ಬಿದ್ದ ಬೈಕ್ ಮತ್ತು ಸವಾರನ ಮೇಲೆ ಕಾರು ಹತ್ತಿ ಹೋದ ಘಟನೆ ಚೀನಾದಲ್ಲಿ ನಡೆದಿದೆ. ಇನ್ನು, ರೋಡಲ್ಲಿ ಹೂಗುವಾಗ ಡಿವೈಡರ್​ಗೆ ತಾಕಿ ಬೈಕ್ ಸಮೇತ ಸವಾರ ಕೆಳಗೆ ಬೀಳ್ತಾನೆ.. ಈ ವೇಳೆ […]

sadhu srinath

|

Jan 14, 2020 | 8:34 AM

ಫಿಲಿಪೈನ್ಸ್​ನಲ್ಲಿ ಜ್ವಾಲಾಮುಖಿ ಬಾಯ್ದೆರೆದಿದ್ದು, ಭಾರಿ ಪ್ರಮಾಣದ ಹೊಗೆಯನ್ನ ಹೊರ ಸೂಸುತ್ತಿದೆ. ಪರಿಸ್ಥಿತಿ ತೀರಾ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯರನ್ನ ಸ್ಥಳಾಂತರ ಮಾಡಲಾಗಿದೆ. ಇನ್ನು ಜ್ವಾಲಾಮುಖಿ ಬಾಯ್ತೆರೆಯುವ ಸಂದರ್ಭದಲ್ಲಿ ಸಿಡಿಲು ಬಡಿಯುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಬೈಕ್ ಸವಾರನ ಮೇಲೆ ಹಾಯ್ದ ಕಾರು! ಸ್ಕಿಡ್ ಆಗಿ ಬಿದ್ದ ಬೈಕ್ ಮತ್ತು ಸವಾರನ ಮೇಲೆ ಕಾರು ಹತ್ತಿ ಹೋದ ಘಟನೆ ಚೀನಾದಲ್ಲಿ ನಡೆದಿದೆ. ಇನ್ನು, ರೋಡಲ್ಲಿ ಹೂಗುವಾಗ ಡಿವೈಡರ್​ಗೆ ತಾಕಿ ಬೈಕ್ ಸಮೇತ ಸವಾರ ಕೆಳಗೆ ಬೀಳ್ತಾನೆ.. ಈ ವೇಳೆ ಹಿಂದೆಯೇ ಬರ್ತಿದ್ದ ಕಾರು ಹತ್ತಿ ಇಳಿದಿದ್ದು, ತಕ್ಷಣ ಜನ ಸವಾರನ ರಕ್ಷಣೆಗೆ ಧಾವಿಸಿದ್ದಾರೆ.. ಸದ್ಯ ವಿಡಿಯೋ ವೈರಲ್ ಆಗಿದೆ.

ಮಾನವೀಯತೆ ಮೆರೆದ ಜನ! ಭೀಕರ ಕಾಡ್ಗಿಚ್ಚಿನಿಂದ ನಲುಗಿಹೋಗಿರುವ ಆಸ್ಟ್ರೇಲಿಯಾದಲ್ಲಿ 50 ಕೋಟಿಗೂ ಹೆಚ್ಚು ಜೀವ ಸಂಕುಲ ಬೆಂಕಿಗಾಹುತಿ ಅಗಿದೆ. ಇದೀಗ ಪ್ರಾಣಿಗಳಿಗೆ ತಿನ್ನಲು ಕೂಡ ಆಹಾರ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮೂಲಕ ಆಹಾರ ಹಾಗೂ ನೀರಿನ ವ್ಯವಸ್ಥೆಯನ್ನ ವನ್ಯಮೃಗಗಳಿಗಾಗಿ ಮಾಡಲಾಗ್ತಿದೆ.

ದಾಖಲೆ ಜಿಗಿತ ಕಂಡ ಹಣದುಬ್ಬರ: ಡಿಸೆಂಬರ್ ತಿಂಗಳಲ್ಲಿ ದೇಶದಲ್ಲಿ ಹಣದುಬ್ಬರ ದಾಖಲೆಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಹಣದುಬ್ಬರ ಪ್ರಮಾಣ ಶೇಕಡ 7.35ಕ್ಕೆ ತಲುಪಿದ್ದು, ದಿನಬಳಕೆ ವಸ್ತುಗಳಲ್ಲಿ ಭಾರಿ ಪ್ರಮಾಣದ ಏರಿಕೆ ಕಂಡುಬಂದಿದೆ. ಅದರಲ್ಲೂ ತರಕಾರಿ ಬೆಲೆಯಲ್ಲಿ ಶೇಕಡ 60ರಷ್ಟು ಏರಿಕೆ ಕಂಡುಬಂದಿದೆ.

Follow us on

Most Read Stories

Click on your DTH Provider to Add TV9 Kannada