AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಹಿರ್ ಅನ್ವರ್ ಯಾರು? ಪಾಕಿಸ್ತಾನದಲ್ಲಿ ಮಸೂದ್ ಅಜರ್ ಸಹೋದರ ಅನುಮಾನಾಸ್ಪದವಾಗಿ ಸಾವು

ಪಾಕಿಸ್ತಾನದಲ್ಲಿ ಭಯೋತ್ಪಾದಕ ಸಂಘಟನೆ ಜೈಶ್ -ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಸಹೋದರ ಮೊಹಮ್ಮದ್ ತಾಹಿರ್ ಅನ್ವರ್ ಸಾವನ್ನಪ್ಪಿದ್ದಾರೆ. ಬಹಾವಲ್ಪುರದಲ್ಲಿ ಆತನ ಅಂತ್ಯಕ್ರಿಯೆ ನಡೆದಿದ್ದು, ಸಾವಿನ ಕಾರಣ ಸ್ಪಷ್ಟವಾಗಿಲ್ಲ. ಜೈಷ್ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ತಾಹಿರ್ ಸಾವು ಪಾಕಿಸ್ತಾನದಲ್ಲಿ ಇತ್ತೀಚಿನ ಭಯೋತ್ಪಾದಕರ ನಿಗೂಢ ಸಾವಿನ ಸರಣಿಯ ಭಾಗವಾಗಿದೆ ಎಂಬ ಊಹಾಪೋಹಗಳಿವೆ.

ತಾಹಿರ್ ಅನ್ವರ್ ಯಾರು? ಪಾಕಿಸ್ತಾನದಲ್ಲಿ ಮಸೂದ್ ಅಜರ್ ಸಹೋದರ ಅನುಮಾನಾಸ್ಪದವಾಗಿ ಸಾವು
ಮಸೂದ್ ಅಜರ್
ನಯನಾ ರಾಜೀವ್
|

Updated on:Mar 31, 2026 | 11:30 AM

Share

ಇಸ್ಲಾಮಾಬಾದ್, ಮಾರ್ಚ್​ 31: ಪಾಕಿಸ್ತಾನ(Pakistan) ಮೂಲದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ನಾಯಕ ಮಸೂದ್ ಅಜರ್​ನ ಸಹೋದರ ಮೊಹಮ್ಮದ್ ತಾಹಿರ್ ಅನ್ವರ್ ಮೃತಪಟ್ಟಿದ್ದಾನೆ. ಬಹಾವಲ್ಪುರದಲ್ಲಿ ಆತನ ಅಂತ್ಯಕ್ರಿಯೆ ನಡೆದಿದೆ ಎಂದು ವರದಿಯಾಗಿದೆ. ಅವನ ಸಾವು ಹೇಗೆ ಸಂಭವಿಸಿದೆ ಎಂಬುದರ ಬಗ್ಗೆ ಸಂಘಟನೆ ಬಹಿರಂಗಗೊಳಿಸಿಲ್ಲ. ತಾಹಿರ್ ಅನ್ವರ್ ತನ್ನ ಸಹೋದರನ ಭಯೋತ್ಪಾದಕ ಸಂಘಟನೆಯಾದ ಜೈಶ್-ಎ-ಮೊಹಮ್ಮದ್‌ನೊಂದಿಗೆ ಸಹ ಸಂಬಂಧ ಹೊಂದಿದ್ದ ಎನ್ನಲಾಗಿದೆ.

ಸೋಮವಾರ ತಡರಾತ್ರಿ ಬಹಾವಲ್ಪುರದ ಜಾಮಿಯಾ ಮಸೀದಿ ಉಸ್ಮಾನ್ ವಾಲಿ ಬಳಿ ತಾರಿಕ್​ನನ್ನು ಸಮಾಧಿ ಮಾಡಲಾಗಿದೆ ಎಂದು ಸಂಘಟನೆಯ ಅಧಿಕೃತ ಚಾನೆಲ್ ಮೂಲಕ ದೃಢಪಡಿಸಲಾಗಿದೆ. ವರ್ಷಗಳಿಂದ ಸಂಘಟನೆಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಎಂದು ಹೇಳಲಾಗಿದೆ.

ಕೆಲವು ತಿಂಗಳುಗಳಿಂದ, ಪಾಕಿಸ್ತಾನದಲ್ಲಿ ವಿವಿಧ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದ ಹಲವಾರು ಜನರನ್ನು ಕೊಲ್ಲಲಾಗಿದೆ. ಅನೇಕ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಪರಿಣಾಮವಾಗಿ, ತಾಹಿರ್ ಸಾವಿನ ಬಗ್ಗೆ ವಿವಿಧ ಊಹಾಪೋಹಗಳು ಹರಡುತ್ತಿವೆ. ಆದಾಗ್ಯೂ, ಆತನ ಮೇಲೆ ದಾಳಿ ನಡೆದಿದೆ ಎಂಬುದಕ್ಕೆ ಯಾವುದೇ ಮಾಹಿತಿ ಇನ್ನೂ ಹೊರಬಂದಿಲ್ಲ.

ತಾಹಿರ್ ಅನ್ವರ್ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ನ ಹಿರಿಯ ಸಹೋದರ. ಅನ್ವರ್ ಮಸೂದ್ ಅಜರ್ ನ ಐವರು ಸಹೋದರರಲ್ಲಿ ಒಬ್ಬ. ಅನ್ವರ್ ಜೈಶ್-ಎ-ಮೊಹಮ್ಮದ್ ನ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ.ಇತ್ತೀಚಿನ ದಿನಗಳಲ್ಲಿ ಮಸೂದ್ ಅಜರ್ ಕುಟುಂಬದಲ್ಲಿ ಸರಣಿ ಸಾವುಗಳು ಸಂಭವಿಸಿವೆ.

ಮತ್ತಷ್ಟು ಓದಿ: ಭಾರತದ ವಿರುದ್ಧದ ಭಯೋತ್ಪಾದನಾ ಸಂಘಟನೆಗೆ ಪಾಕಿಸ್ತಾನ ಆಶ್ರಯ ನೀಡುತ್ತಲೇ ಇದೆ; ಅಮೆರಿಕದ ಸಂಶೋಧನಾ ವರದಿ

ಭಾರತವು ಆಪರೇಷನ್ ಸಿಂಧೂರ್ ನಡೆಸಿದಾಗ ಬಹಾವಲ್ಪುರದಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಮಸೂದ್ ಕುಟುಂಬದ ಹತ್ತು ಸದಸ್ಯರು ಮತ್ತು ಕೆಲವು ಸಹಚರರು ಸಾವನ್ನಪ್ಪಿದ್ದಾರೆ. ಕೊಲ್ಲಲ್ಪಟ್ಟವರಲ್ಲಿ ಅವರ ಸಹೋದರಿ, ಸೋದರಳಿಯ ಮತ್ತು ಇತರ ಕುಟುಂಬ ಸದಸ್ಯರು ಸೇರಿದ್ದಾರೆ. ಮಸೂದ್ ಎಂದು ಹೇಳಲಾದ ಕೆಲವು ಆಡಿಯೊ ರೆಕಾರ್ಡಿಂಗ್‌ಗಳು ಸಹ ಸಾವನ್ನು ದೃಢಪಡಿಸಿವೆ.

ಜೈಶ್-ಎ-ಮೊಹಮ್ಮದ್ ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಭಯೋತ್ಪಾದಕ ಸಂಘಟನೆಯಾಗಿದೆ. ಭಾರತದಲ್ಲಿ ನಡೆದ ಬಹುತೇಕ ದಾಳಿಗಳಲ್ಲಿ ಜೈಶ್ ಸಂಘಟನೆ ಕೈವಾಡವಿದೆ. ಜೈಶ್ 2001 ರ ಸಂಸತ್ ದಾಳಿ, 2008 ರ ಮುಂಬೈ ದಾಳಿ, 2016 ರ ಪಠಾಣ್‌ಕೋಟ್ ದಾಳಿ ಮತ್ತು 2019 ರ ಪುಲ್ವಾಮಾ ದಾಳಿಯಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿದೆ.

ಮಸೂದ್ ಅಜರ್ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಪಟ್ಟಿಯಲ್ಲಿದ್ದ. ಮಸೂದ್ ಬಹಳ ದಿನಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲಅವನ ಇರುವಿಕೆ ಮತ್ತು ಆರೋಗ್ಯದ ಬಗ್ಗೆ ವದಂತಿಗಳು ಹರಡಿವೆ. ಆದಾಗ್ಯೂ, ಮಸೂದ್ ಪಾಕಿಸ್ತಾನದಿಂದ ಭಯೋತ್ಪಾದನೆಯನ್ನು ಹರಡುತ್ತಲೇ ಇದ್ದಾನೆ ಎಂಬ ವರದಿಗಳು ಕೂಡ ಇವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:30 am, Tue, 31 March 26

Follow Us