ಇರಾನ್ ಮೇಲೆ ಪ್ರಬಲ ದಾಳಿ ನಡೆಸುವುದಾಗಿ ದೊಡ್ಡಣ್ಣ ಎಚ್ಚರಿಕೆ

ಇರಾನ್ ಮೇಲೆ ಪ್ರಬಲ ದಾಳಿ ನಡೆಸುವುದಾಗಿ ದೊಡ್ಡಣ್ಣ ಎಚ್ಚರಿಕೆ

ವಾಷಿಂಗ್ ಟನ್: ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಇರಾನ್ ದೇಶದ 52 ಸ್ಥಳಗಳ ಮೇಲೆ ಪ್ರಬಲ ದಾಳಿ ನಡೆಸುವ ಬೆದರಿಕೆ ಹಾಕಿದ್ದಾರೆ. ಇರಾನ್ ದೇಶ ಅಮೆರಿಕದ ಸೇನಾ ನೆಲೆ ಅಥವಾ ಆಮೆರಿಕನ್ನರ ಮೇಲೆ ದಾಳಿ‌ ನಡೆಸಿದರೆ 52 ಸ್ಥಳಗಳ ಮೇಲೆ ದಾಳಿ ನಡೆಸುತ್ತೇವೆ ಎಂದ ಟ್ರಂಪ್ ಹೇಳಿದ್ದಾರೆ.

ಅಮೆರಿಕ ಈಗಷ್ಟೇ ಮಿಲಿಟರಿ ಶಸ್ತ್ರಾಸ್ತ್ರಗಳಿಗಾಗಿ ಎರಡು ಟ್ರಿಲಿಯನ್ ಡಾಲರ್ ಖರ್ಚು ಮಾಡಿದೆ. ಮಿಲಿಟರಿಯಲ್ಲಿ ನಾವೇ ಪ್ರಬಲರು‌, ವಿಶ್ವದಲ್ಲೇ ಆಮೆರಿಕಾ ಸೇನೆ ಅತ್ಯುತ್ತಮ ಸೇನೆ. ಒಂದು ವೇಳೆ ಇರಾನ್ ಅಮೆರಿಕದ ಸೇನಾ ನೆಲೆ ಮೇಲೆ ದಾಳಿ ಮಾಡಿದರೇ ಬ್ರಾಂಡ್ ಹೊಸ ಶಸ್ತ್ರಾಸ್ತ್ರ ಬಳಸಿ ಅವರ ಮೇಲೆ ದಾಳಿ ಮಾಡುತ್ತೇವೆ. ದಾಳಿ ಮಾಡಲು ಯಾವುದೇ ಹಿಂಜರಿಕೆ ‌ಇಲ್ಲ. ಈ ಹಿಂದೆ ಎಂದೂ ಇರಾನ್ ಮೇಲೆ ನಡೆಯದೇ ಇರುವಂಥ ದಾಳಿ ನಡೆಸುತ್ತೇವೆ ಎಂದು ಡೋನಾಲ್ಡ್ ಟ್ರಂಪ್ ಸರಣಿ ಟ್ವೀಟ್ ಮಾಡುವ ಮೂಲಕ ಇರಾನ್ ಗೆ ನೇರ ಎಚ್ಚರಿಕೆ ನೀಡಿದ್ದಾರೆ.

Click on your DTH Provider to Add TV9 Kannada