AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಪ್ಪಂದ, ಶರಣಾಗತಿ ಅಥವಾ ಅತ್ಯಂತ ಮಾರಕ ದಾಳಿ? ಇರಾನ್​ಗೆ ಟ್ರಂಪ್ ಗಡುವು, ವಿನಾಶಕ್ಕೆ ಕ್ಷಣಗಣನೆ

ಅಮೆರಿಕ ಅಧ್ಯಕ್ಷ ಟ್ರಂಪ್ ಇರಾನ್‌ಗೆ ಕಠಿಣ ಗಡುವು ನೀಡಿದ್ದಾರೆ, ಒಪ್ಪಂದಕ್ಕೆ ಬಾರದಿದ್ದರೆ ಮಾರಕ ದಾಳಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಇಂಧನ ಸೌಲಭ್ಯಗಳು, ವಿದ್ಯುತ್ ಸ್ಥಾವರಗಳು ಮತ್ತು ಪ್ರಮುಖ ಸೇತುವೆಗಳನ್ನು ಗುರಿಯಾಗಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇರಾನ್ ಸಹ ಮಧ್ಯಪ್ರಾಚ್ಯದಲ್ಲಿ ಅಮೆರಿಕದ ನೆಲೆಗಳ ಮೇಲೆ ದಾಳಿ ನಡೆಸಿದ್ದು, ಪರಿಸ್ಥಿತಿ ಉಲ್ಬಣಗೊಂಡಿದೆ. ಯುದ್ಧದ ಭೀತಿ ಎದುರಾಗಿದೆ.

ಒಪ್ಪಂದ, ಶರಣಾಗತಿ ಅಥವಾ ಅತ್ಯಂತ ಮಾರಕ ದಾಳಿ? ಇರಾನ್​ಗೆ ಟ್ರಂಪ್ ಗಡುವು, ವಿನಾಶಕ್ಕೆ ಕ್ಷಣಗಣನೆ
ಡೊನಾಲ್ಡ್​ ಟ್ರಂಪ್ Image Credit source: India TV
ನಯನಾ ರಾಜೀವ್
|

Updated on: Apr 06, 2026 | 7:45 AM

Share

ವಾಷಿಂಗ್ಟನ್, ಏಪ್ರಿಲ್ 6: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್(Donald Trump) ಇರಾನ್​ಗೆ ಹೊಸ ಬೆದರಿಕೆ ಹಾಕಿದ್ದಾರೆ. ಒಪ್ಪಂದಕ್ಕೆ ಬನ್ನಿ ಅಥವಾ ಶರಣಾಗಿ ಇಲ್ಲವಾದಲ್ಲಿ ಮಂಗಳವಾರ ರಾತ್ರಿ 8 ಗಂಟೆಗೆ ಮಾರಕ ದಾಳಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಅಮೆರಿಕವು ಇರಾನ್‌ನ ಇಂಧನ ಸೌಲಭ್ಯಗಳ ಮೇಲೆ ಪ್ರಮುಖ ದಾಳಿಯನ್ನು ನಡೆಸಬಹುದು, ಇದರಿಂದಾಗಿ ಇಡೀ ದೇಶದ ವಿದ್ಯುತ್ ಸರಬರಾಜಿನಲ್ಲಿ ಅಡ್ಡಿ ಉಂಟಾಗಬಹುದು ಎನ್ನುವ ಭಯ ಉಂಟಾಗಿದೆ. ಇರಾನ್ ಹಿಂದೆ ಸರಿಯಲು ಸಿದ್ಧವಿಲ್ಲ.

ಮಾರ್ಚ್ 26 ರಂದು ಟ್ರಂಪ್ 10 ದಿನಗಳ ಅಂತಿಮ ಎಚ್ಚರಿಕೆ ನೀಡಿದ್ದರು. ನಂತರ, ಭಾನುವಾರ ಏಪ್ರಿಲ್ 4 ರಂದು, ಅವರು ಅಂತಿಮ 48 ಗಂಟೆಗಳ ಎಚ್ಚರಿಕೆಯನ್ನು ನೀಡಿದ್ದಾರೆ.

ಹಾರ್ಮುಜ್ ಚೋಕ್ ಪಾಯಿಂಟ್, ಬುಶೆಹರ್ ಪರಮಾಣು ಸ್ಥಾವರ, ದಕ್ಷಿಣ ಪಾರ್ಸ್ ಅನಿಲ ಕ್ಷೇತ್ರ, ಖಾರ್ಕ್ ದ್ವೀಪದ ತೈಲ ಕೇಂದ್ರ, ಅಬದಾನ್ ಸಂಸ್ಕರಣಾಗಾರ, ಬಂದರ್ ಅಬ್ಬಾಸ್ ಸಂಸ್ಕರಣಾಗಾರ, ಇರಾನ್‌ನ ಬ್ಯಾಲಿಸ್ಟಿಕ್ ಕ್ಷಿಪಣಿ ನೆಲೆಗಳ ಮೇಲೆ ದಾಳಿ ಮಾಡುವುದಾಗಿ ಅಮೆರಿಕ ಹೇಳಿದೆ.

ರಿಯಾದ್ ನಲ್ಲಿರುವ ಸಿಐಎ ಸ್ಟೇಷನ್ ಮೇಲೆ ಇರಾನ್ ದಾಳಿ ನಡೆಸಿದೆ. ಪ್ರಪಂಚದಾದ್ಯಂತದ ಹೆಚ್ಚಿನ ಅಮೇರಿಕನ್ ರಾಜತಾಂತ್ರಿಕ ಪೋಸ್ಟ್ ಗಳಂತೆ ರಿಯಾದ್‌ನಲ್ಲಿರುವ ಅಮೇರಿಕನ್ ರಾಯಭಾರ ಕಚೇರಿಯು ತನ್ನದೇ ಆದ ವಾಯು ರಕ್ಷಣಾ ವ್ಯವಸ್ಥೆಯನ್ನು ನಿರ್ವಹಿಸುವುದಿಲ್ಲ.

ಮತ್ತಷ್ಟು ಓದಿ:

ಡೊನಾಲ್ಡ್ ಟ್ರಂಪ್ ಸತ್ತರಾ? ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ ಸುದ್ದಿ; ನಿಜವಾ, ವದಂತಿಯಾ?

ಒಂದೇ ನಿಮಿಷದ ಅಂತರದಲ್ಲಿ 2 ಡ್ರೋನ್ ದಾಳಿ ನಡೆಸಲಾಗಿದೆ. ಎರಡನೇ ಡ್ರೋನ್ ಮೊದಲ ದಾಳಿಯಿಂದ ಉಂಟಾದ ರಂಧ್ರದೊಳಗೆ ನೇರವಾಗಿ ನುಗ್ಗಿ ಸ್ಫೋಟಿಸಿತು. ದಾಳಿ ಮುಗಿಯುವಷ್ಟರಲ್ಲಿ ರಿಯಾದ್‌ನಲ್ಲಿರುವ ಅಮೆರಿಕದ ರಾಯಭಾರ ಕಚೇರಿಯ ಮೂರು ಮಹಡಿಗಳು ಗಂಭೀರವಾಗಿ ಹಾನಿಗೊಳಗಾಗಿದ್ದವು ಮತ್ತು ಅದರೊಳಗಿನ ಸಿಐಎ ಕಚೇರಿಗೂ ಹೊಡೆತ ಬಿದ್ದಿತ್ತು.

ಫೆಬ್ರವರಿ 28ರಂದು ಯುದ್ಧ ಆರಂಭವಾದ ನಂತರ, ಇರಾನ್ ಮಧ್ಯಪ್ರಾಚ್ಯದಲ್ಲಿನ ಅಮೆರಿಕದ ನೆಲೆಗಳು ಮತ್ತು ರಾಯಭಾರ ಕಚೇರಿಗಳ ಮೇಲೆ ತನ್ನ ಅತಿ ವ್ಯಾಪಕ ದಾಳಿಗಳನ್ನು ನಡೆಸಿದೆ. ರಿಯಾದ್ ಮಾತ್ರವಲ್ಲ, ಬಾಗ್ದಾದ್, ದುಬೈ, ಕುವೈತ್ ಮತ್ತು ಇರಾಕ್ ಕುರ್ಡಿಸ್ತಾನದ ಎರ್ಬಿಲ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಗಳನ್ನೂ ಇರಾನಿಯನ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳು ಗುರಿಯಾಗಿಸಿವೆ.

ಆ ದಾಳಿಗಳಲ್ಲಿ ಯಾವುದೂ ಅಮೆರಿಕನ್ ಸಾವುಗಳಿಗೆ ಕಾರಣವಾಗದಿದ್ದರೂ, ಈ ಪ್ರದೇಶದ ಅಮೆರಿಕ ನೆಲೆಗಳ ಮೇಲೆ ತೆಹ್ರಾನ್ ನಡೆಸಿದ ದಾಳಿಗಳು ಏಳು ಅಮೆರಿಕ ಸೈನಿಕರ ಸಾವಿಗೆ, ನೂರಾರು ಮಂದಿಯ ಗಾಯಗಳಿಗೆ ಕಾರಣವಾಗಿದ್ದು, ವಿಮಾನಗಳು ಮತ್ತು ರಕ್ಷಣಾ ಸಾಧನಗಳಿಗೆ ಕೋಟ್ಯಂತರ ಡಾಲರ್ ಮೌಲ್ಯದ ಹಾನಿಯನ್ನುಂಟುಮಾಡಿವೆ.

ಇನ್ನೊಂದೆಡೆ ಹಾರ್ಮುಜ್ ಜಲಸಂಧಿಯನ್ನು ಓಪನ್​ ಮಾಡಲು ಇರಾನ್​ಗೆ ನೀಡಿರುವ 48 ಗಂಟೆಗಳ ಗಡುವು ಸೋಮವಾರ ಅಂತ್ಯವಾಗುತ್ತಿದೆ. ಇದರ ಬೆನ್ನಲ್ಲೇ, ಇರಾನ್​ಗೆ ಕಠಿಣ ಪದಗಳಲ್ಲಿ ಎಚ್ಚರಿಕೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪುನಃ ಇರಾನ್‌ಗೆ ಹೊಸ ಬೆದರಿಕೆ ಹಾಕಿ, ವಿದ್ಯುತ್​ ಘಟಕಗಳು, ಪವರ್ ಪ್ಲಾಂಟ್‌ಗಳು ಮತ್ತು ದೇಶದ ಪ್ರಮುಖ ಸೇತುವೆಗಳನ್ನು ಏಕಕಾಲದಲ್ಲಿ ಧ್ವಂಸಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಎಬಿಸಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, ಒಪ್ಪಂದ ಮಾಡಿಕೊಳ್ಳದಿದ್ದರೆ, ಅಮೆರಿಕ ಇಡೀ ದೇಶವನ್ನೇ ನಾಶಮಾಡಬಹುದು ಎಂದು ಟ್ರಂಪ್ ಹೇಳಿದ್ದಾರೆ. ವಿದ್ಯುತ್ ಸ್ಥಾವರಗಳು ಮತ್ತು ಸೇತುವೆಗಳಂತಹ ಪ್ರಮುಖ ಮೂಲಸೌಕರ್ಯಗಳನ್ನು ಗುರಿಯಾಗಿಸಬಹುದು ಎಂದು ಅವರು ಸುಳಿವು ನೀಡಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us