Auto Tips: ನಿಮ್ಮ ಹೊಸ ಕಾರು ಹಳೆಯದಾದಾಗ ಯಾವುದೇ ಸಮಸ್ಯೆ ಬರದಿರಲು ಈ ವಿಷಯ ನೆನಪಿನಲ್ಲಿಡಿ

ಸಾಮಾನ್ಯವಾಗಿ ಕಾರ್ ಬ್ಯಾಟರಿಯ ಜೀವಿತಾವಧಿ ಮೂರರಿಂದ ನಾಲ್ಕು ವರ್ಷಗಳವರೆಗೆ ಇರುತ್ತದೆ. ಆದರೆ ಬ್ಯಾಟರಿಯನ್ನು ನಿಯಮಿತವಾಗಿ ಕಾಳಜಿ ವಹಿಸಿದರೆ, ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಅದರ ಜೀವಿತಾವಧಿಯನ್ನು ಹೆಚ್ಚಿಸಬಹುದು. ಕಾರು ಚಾಲನೆ ಮಾಡುವಾಗ, ಕೆಲವೊಮ್ಮೆ ಬ್ಯಾಟರಿಗೆ ಜೋಡಿಸಲಾದ ತಂತಿಗಳು ಸಡಿಲಗೊಳ್ಳುತ್ತವೆ. ಇದಲ್ಲದೆ, ಬ್ಯಾಟರಿಯ ಟರ್ಮಿನಲ್‌ಗಳಲ್ಲಿ ಇಂಗಾಲದ ಪದರವು ಸಂಗ್ರಹಗೊಳ್ಳುತ್ತದೆ.

Auto Tips: ನಿಮ್ಮ ಹೊಸ ಕಾರು ಹಳೆಯದಾದಾಗ ಯಾವುದೇ ಸಮಸ್ಯೆ ಬರದಿರಲು ಈ ವಿಷಯ ನೆನಪಿನಲ್ಲಿಡಿ
Car Problems
Follow us
ಪ್ರೀತಿ ಭಟ್​, ಗುಣವಂತೆ
| Updated By: Vinay Bhat

Updated on: Jan 23, 2025 | 9:26 AM

ಕಾರು ಹಳೆಯದಾಗುತ್ತಿದ್ದಂತೆ, ಜನರು ತಮ್ಮ ಕಾರಿನ ಬಗ್ಗೆ ಅಸಡ್ಡೆ ತೋರಲು ಪ್ರಾರಂಭಿಸುತ್ತಾರೆ. ಇದರಿಂದಾಗಿ ಸ್ವಲ್ಪ ಸಮಯದ ನಂತರ ಕಾರು ಮಾಲೀಕರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಸುದ್ದಿಯಲ್ಲಿ ನಾವು ನಿಮಗೆ ಅಂತಹ ನಾಲ್ಕು ಕಾರ್ ಕೇರ್ ಸಲಹೆಗಳನ್ನು ನೀಡುತ್ತಿದ್ದೇವೆ. ಇವುಗಳನ್ನು ಗಮನದಲ್ಲಿಟ್ಟುಕೊಂಡು ಕಾರನ್ನು ನಿಯಮಿತವಾಗಿ ನೋಡಿಕೊಳ್ಳಬಹುದು ಮತ್ತು ಸಮಸ್ಯೆಗಳನ್ನು ತಪ್ಪಿಸಬಹುದು. ಮುಖ್ಯವಾಗಿ ನಿಮ್ಮ ಹೊಸ ಕಾರು ಹಳೆಯದಾದಾಗ ಯಾವುದೇ ಸಮಸ್ಯೆ ಬರದಿರಲು ಈ ವಿಷಯ ತುಂಬಾ ಸಹಕಾರಿ ಆಗುತ್ತದೆ.

ಬ್ಯಾಟರಿಯನ್ನು ನೋಡಿಕೊಳ್ಳಿ:

ಸಾಮಾನ್ಯವಾಗಿ ಕಾರ್ ಬ್ಯಾಟರಿಯ ಜೀವಿತಾವಧಿ ಮೂರರಿಂದ ನಾಲ್ಕು ವರ್ಷಗಳವರೆಗೆ ಇರುತ್ತದೆ. ಆದರೆ ಬ್ಯಾಟರಿಯನ್ನು ನಿಯಮಿತವಾಗಿ ಕಾಳಜಿ ವಹಿಸಿದರೆ, ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಅದರ ಜೀವಿತಾವಧಿಯನ್ನು ಹೆಚ್ಚಿಸಬಹುದು. ಕಾರು ಚಾಲನೆ ಮಾಡುವಾಗ, ಕೆಲವೊಮ್ಮೆ ಬ್ಯಾಟರಿಗೆ ಜೋಡಿಸಲಾದ ತಂತಿಗಳು ಸಡಿಲಗೊಳ್ಳುತ್ತವೆ. ಇದಲ್ಲದೆ, ಬ್ಯಾಟರಿಯ ಟರ್ಮಿನಲ್‌ಗಳಲ್ಲಿ ಇಂಗಾಲದ ಪದರವು ಸಂಗ್ರಹಗೊಳ್ಳುತ್ತದೆ. ಕಾಲಕಾಲಕ್ಕೆ ಕಾರ್ಬನ್ ತೆಗೆದು ಬ್ಯಾಟರಿಗೆ ಜೋಡಿಸಿರುವ ತಂತಿಯನ್ನು ಪರೀಕ್ಷಿಸಿದರೆ ಬ್ಯಾಟರಿ ಬೇಗ ಹಾಳಾಗದಂತೆ ಉಳಿಸಬಹುದು.

ಟೈಯರ್​ಗಳನ್ನು ನೋಡಿಕೊಳ್ಳಿ:

ಕಾರಿನಲ್ಲಿರುವ ಟೈರ್‌ಗಳ ಬಗ್ಗೆ ಕಾಳಜಿ ವಹಿಸುವುದು ಸಹ ಮುಖ್ಯವಾಗಿದೆ. ಕಾರಿನ ಟೈರ್‌ಗಳಲ್ಲಿ ಗಾಳಿಯ ಒತ್ತಡ ಕಡಿಮೆಯಿದ್ದು ಆಗ ಕಾರನ್ನು ಓಡಿಸಿದರೆ, ಇದು ಟೈರ್ ಹಾನಿಯ ಅಪಾಯವನ್ನು ಹೆಚ್ಚಿಸುವುದಲ್ಲದೆ, ಎಂಜಿನ್‌ನ ಮೇಲೆ ಹೆಚ್ಚುವರಿ ಹೊರೆ ಹಾಕುತ್ತದೆ, ಇದು ಇಂಧನ ಬಳಕೆಯನ್ನು ಹೆಚ್ಚಿಸುತ್ತದೆ. ಪ್ರತಿ ಮೂರ್ನಾಲ್ಕು ದಿನಗಳಿಗೊಮ್ಮೆ ಟೈರ್‌ನಲ್ಲಿನ ಗಾಳಿಯ ಒತ್ತಡವನ್ನು ಪರಿಶೀಲಿಸಬೇಕು. ಕಡಿಮೆ ಗಾಳಿಯಿದ್ದರೆ ಅದನ್ನು ಸರಿಯಾದ ಒತ್ತಡಕ್ಕೆ ತುಂಬಿಸಬೇಕು.

Vayve Eva: ಬೆಲೆ ಕೇವಲ 3.25 ಲಕ್ಷ: ಭಾರತದ ಮೊದಲ ಸೋಲಾರ್ ಎಲೆಕ್ಟ್ರಿಕ್ ಕಾರ್ ಬಿಡುಗಡೆ: ಬುಕಿಂಗ್ ಪ್ರಾರಂಭ

ಎಂಜಿನ್ ತೈಲವನ್ನು ನೋಡಿಕೊಳ್ಳಿ:

ನೀವು ಕಾರನ್ನು ಓಡಿಸುವಾಗ, ಚಾಲನೆ ಮಾಡುವ ಮೊದಲು ಎಂಜಿನ್ ಆಯಿಲ್ ಅನ್ನು ಪರೀಕ್ಷಿಸಬೇಕು. ಹೀಗೆ ಮಾಡುವುದರಿಂದ ಕಾರನ್ನು ದೀರ್ಘಕಾಲದವರೆಗೆ ಸಮಸ್ಯೆಗಳಿಂದ ದೂರವಿಡುವುದು ಮಾತ್ರವಲ್ಲದೆ, ಈ ರೀತಿ ಮಾಡುವುದರಿಂದ ಎಂಜಿನ್‌ನ ಜೀವಿತಾವಧಿಯನ್ನು ಸಹ ಹೆಚ್ಚಿಸಬಹುದು. ತೈಲ ಮಟ್ಟವನ್ನು ಡಿಪ್ಸ್ಟಿಕ್ ಮೂಲಕ ಪರಿಶೀಲಿಸಬೇಕು. ಇಂಜಿನ್ ಆಯಿಲ್ ಕಡಿಮೆಯಾದರೆ ಅಥವಾ ಏನಾದರೂ ಸಮಸ್ಯೆಯಿದ್ದರೆ, ಅದರ ಬಗ್ಗೆ ಮಾಹಿತಿಯು ಸಮಯಕ್ಕೆ ಲಭ್ಯವಿರುತ್ತದೆ.

ಲೈಟ್​ಗಳನ್ನು ಸಹ ಪರಿಶೀಲಿಸಿ:

ಹಗಲು ಮಾತ್ರವಲ್ಲ ರಾತ್ರಿಯೂ ಕಾರು ಓಡಿಸುವುದು ಕಾಮನ್. ಆದ್ದರಿಂದ, ಕಾರ್ ಲೈಟ್​ಗಳು ಸರಿಯಾಗಿ ಕೆಲಸ ಮಾಡುವುದು ಬಹಳ ಮುಖ್ಯ. ಹಲವು ಬಾರಿ ಅಜಾಗರೂಕತೆಯಿಂದ ಕಾರಿನ ಕೆಲವು ಲೈಟ್ ಗಳು ಹಾಳಾಗಿ ಹೋಗುತ್ತವೆ ಆದರೆ ಅದನ್ನು ಬದಲಾಯಿಸುವ ಬದಲು ಈ ರೀತಿ ಕಾರು ಚಲಾಯಿಸುತ್ತಾರೆ. ಹೀಗೆ ಮಾಡುವುದರಿಂದ ಪೊಲೀಸರು ಚಲನ್ ನೀಡಬಹುದು. ಅಪಘಾತದ ಅಪಾಯವೂ ಹೆಚ್ಚಾಗುತ್ತದೆ.

ತೈಲ ಸೋರಿಕೆ ಪರಿಶೀಲಿಸಿ:

ತೈಲ ಸೋರಿಕೆಯನ್ನ ಪರಿಶೀಲಿಸಿ ಕಾರು ಚಾಲನೆ ಆರಂಭಕ್ಕೂ ಮುನ್ನ ಕಾರಿನ ಅಡಿಯಲ್ಲಿ ಯಾವುದೇ ರೀತಿಯ ತೈಲ ಸೋರಿಕೆಯಾಗುತ್ತಿದೆಯಾ ಎಂಬುವುದನ್ನ ಖಚಿತಪಡಿಸಿಕೊಳ್ಳಿ. ಒಂದು ವೇಳೆ ಎಂಜಿನ್ ತೈಲ ಸೋರಿಕೆಯಾಗುತ್ತಿದ್ದರೆ ತಕ್ಷಣವೇ ಸರಿಪಡಿಸಿಕೊಳ್ಳಿ. ಯಾಕೆಂದರೆ ಅದು ನೇರವಾಗಿ ಎಂಜಿನ್ ದಕ್ಷತೆಯನ್ನು ಕುಗ್ಗಿಸುವುದರ ಜೊತೆಗೆ ಕಾರಿಗೆ ಗಮನಾರ್ಹ ಹಾನಿಯುಂಟು ಮಾಡಬಹುದು.

ಅಟೋಮೊಬೈಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಗ್ ಬಾಸ್ ಮನೆಗೆ ನುಗ್ಗಿದ ಅಭಿಮಾನಿಗಳು; ಭಯಬಿದ್ದ ಸ್ಪರ್ಧಿಗಳು
ಬಿಗ್ ಬಾಸ್ ಮನೆಗೆ ನುಗ್ಗಿದ ಅಭಿಮಾನಿಗಳು; ಭಯಬಿದ್ದ ಸ್ಪರ್ಧಿಗಳು
Hanuman Chalisa: ಹನುಮಾನ್ ಚಾಲಿಸಾದ ವಿಶೇಷ ಹಾಗೂ ಮಹತ್ವ
Hanuman Chalisa: ಹನುಮಾನ್ ಚಾಲಿಸಾದ ವಿಶೇಷ ಹಾಗೂ ಮಹತ್ವ
ರವಿ ಮಕರ ರಾಶಿಯಲ್ಲಿ, ಚಂದ್ರ ತುಲಾ ರಾಶಿಯಲ್ಲಿ ಸಂಚಾರ: ದಿನ ಭವಿಷ್ಯ ಇಲ್ಲಿದೆ
ರವಿ ಮಕರ ರಾಶಿಯಲ್ಲಿ, ಚಂದ್ರ ತುಲಾ ರಾಶಿಯಲ್ಲಿ ಸಂಚಾರ: ದಿನ ಭವಿಷ್ಯ ಇಲ್ಲಿದೆ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ಸಂಜು; ವಿಡಿಯೋ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ಸಂಜು; ವಿಡಿಯೋ
ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?
ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?
ಯಾರು ಬಿಗ್ ಬಾಸ್ ಗೆಲ್ತಾರೆ ಅಂತ ನಾನು ಹೇಳಲ್ಲ: ಪ್ರಥಮ್ ಖಡಕ್ ಮಾತು
ಯಾರು ಬಿಗ್ ಬಾಸ್ ಗೆಲ್ತಾರೆ ಅಂತ ನಾನು ಹೇಳಲ್ಲ: ಪ್ರಥಮ್ ಖಡಕ್ ಮಾತು
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು