Tata Altroz Racer: ಪರ್ಫಾಮೆನ್ಸ್ ಪ್ರಿಯರಿಗಾಗಿ ಟಾಟಾ ಆಲ್ಟ್ರೋಜ್ ರೇಸರ್ ಎಡಿಷನ್ ಬಿಡುಗಡೆ
ಟಾಟಾ ಮೋಟಾರ್ಸ್ ಕಂಪನಿಯು ತನ್ನ ಹೊಸ ಆಲ್ಟ್ರೋಜ್ ರೇಸರ್ ಎಡಿಷನ್ ಬಿಡುಗಡೆ ಮಾಡಿದ್ದು, ಹೊಸ ಆವೃತ್ತಿಯು ಹಲವಾರು ವಿಶೇಷತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.
ಹೊಸ ಕಾರು ಮಾದರಿಗಳ ಮೂಲಕ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿರುವ ಟಾಟಾ ಮೋಟಾರ್ಸ್ (Tata Motors) ಕಂಪನಿಯು ತನ್ನ ಬಹುನೀರಿಕ್ಷಿತ ಆಲ್ಟ್ರೋಜ್ ರೇಸರ್ (Altroz Racer) ಎಡಿಷನ್ ಬಿಡುಗಡೆ ಮಾಡಿದ್ದು, ಹೊಸ ಕಾರು ಆವೃತ್ತಿಯು ವಿಶೇಷವಾಗಿ ಪರ್ಫಾಮೆನ್ಸ್ ಪ್ರಿಯರಿಗಾಗಿಯೇ ಅಭಿವೃದ್ದಿಗೊಂಡಿದೆ. ಹೊಸ ಆವೃತ್ತಿಯು ಸಾಮಾನ್ಯ ಆಲ್ಟ್ರೋಜ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್ ಮತ್ತು ಪರ್ಫಾಮೆನ್ಸ್ ಹೊಂದಿದ್ದು, ಇದು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 9.49 ಲಕ್ಷದಿಂದ ರೂ. 10.99 ಲಕ್ಷ ಬೆಲೆ ಹೊಂದಿದೆ.
ಆಲ್ಟ್ರೋಜ್ ರೇಸರ್ ಎಡಿಷನ್ ಫೀಚರ್ಸ್ ಗಳಿಗೆ ಅನುಗುಣವಾಗಿ ಆರ್1, ಆರ್2 ಮತ್ತು ಆರ್3 ಎನ್ನುವ ಮೂರು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದು ಹ್ಯುಂಡೈ ಐ20 ಎನ್ ಲೈನ್ ಕಾರಿಗೆ ಪ್ರಬಲ ಪೈಪೋಟಿಯಾಗಿದೆ. ಹೊಸ ಆವೃತ್ತಿಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ನವೀಕರಿಸಿದ 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಿದ್ದು, ಇದರಲ್ಲಿ ಸದ್ಯಕ್ಕೆ 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆ ಮಾತ್ರ ನೀಡಲಾಗಿದೆ.
ಇದನ್ನೂ ಓದಿ: ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಕಾರುಗಳಿವು!
ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಹೊಸ ಕಾರು 120 ಹಾರ್ಸ್ ಪವರ್ ಮತ್ತು 170 ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಇದು ಈ ಹಿಂದಿನ ಐ-ಟರ್ಬೊ ಮಾದರಿಗಿಂತಲೂ ಹೆಚ್ಚುವರಿಯಾಗಿ 10 ಹಾರ್ಸ್ ಪವರ್ ಮತ್ತು 30 ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.
ಇದರೊಂದಿಗೆ ಹೊಸ ಆಲ್ಟ್ರೋಜ್ ರೇಸರ್ ಮಾದರಿಯು ಸಾಮಾನ್ಯ ಆವೃತ್ತಿಗಿಂತಲೂ ತುಸು ವಿಭಿನ್ನವಾಗಿ ಗುರುತಿಸಿಕೊಳ್ಳಲು ಕೆಲವು ವಿಶೇಷ ಫೀಚರ್ಸ್ ಹೊಂದಿದ್ದು, ಬಾನೆಟ್ ಮತ್ತು ರೂಫ್ ರೈಲ್ಸ್ ಮೇಲೆ ಕಾಂಟ್ರಾಸ್ಟಿಂಗ್ ಬ್ಲ್ಯಾಕ್ ಫಿನಿಶ್ ಜೊತೆಗೆ ವೈಟ್ ರೇಸಿಂಗ್ ಸ್ಟ್ರೀಪ್ ನೀಡಲಾಗಿದೆ. ಹಾಗೆಯೇ ಹೊಸ ಆವೃತ್ತಿಯಲ್ಲಿ ರೇಸಿಂಗ್ ಬ್ಯಾಡ್ಜ್, ಸ್ಪೋರ್ಟಿಯಾಗಿ ಫ್ರಂಟ್ ಗ್ರಿಲ್, 16 ಇಂಚಿನ ಅಲಾಯ್ ವ್ಹೀಲ್ ಗಳು ಮತ್ತು ಫ್ರಂಟ್ ಫೆಂಡರ್ ಗಳು ಆಕರ್ಷಕವಾಗಿವೆ.
ಇದನ್ನೂ ಓದಿ: ಆಕರ್ಷಕ ಬೆಲೆಯಲ್ಲಿರುವ ಪವರ್ ಫುಲ್ 7 ಸೀಟರ್ ಎಸ್‌ಯುವಿ ಕಾರುಗಳಿವು!
ಹೊಸ ಕಾರು ಆವೃತ್ತಿಯಲ್ಲಿ ಹೊರಭಾಗದಂತೆ ಒಳಭಾಗದ ವಿನ್ಯಾಸದಲ್ಲೂ ಹಲವು ಬದಲಾವಣೆಗಳನ್ನು ಪರಿಚಯಿಸಲಾಗಿದ್ದು, ಆಕರ್ಷಕ ಕ್ಯಾಬಿನ್ ಮತ್ತು ಡ್ಯಾಶ್ ಬೋರ್ಡ್ ನೊಂದಿಗೆ 10.25 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ, ಫ್ರಂಟ್ ವೆಂಟಿಲೆಟೆಡ್ ಸೀಟುಗಳು, ಉನ್ನತೀಕರಿಸಲಾದ 7 ಇಂಚಿನ ಡಿಜಿಟಲ್ ಇನ್ಟ್ರುಮೆಂಟ್ ಕ್ಲಸ್ಟರ್ ಮತ್ತು ರೆಡ್ ಹೈಲೆಟ್ಸ್ ನೊಂದಿಗೆ ಕಾಂಟ್ರಾಸ್ಟ್ ಸ್ಟಿಚಿಂಗ್ ಹೊಂದಿರುವ ಆಸನಗಳು, ಸೆಂಟರ್ ಕನ್ಸೊಲ್ ಮತ್ತು ಎಸಿ ವೆಂಟ್ಸ್ ಸೌಲಭ್ಯಗಳಿವೆ. ಹಾಗೆಯೇ ಹೊಸ ಕಾರಿನಲ್ಲಿ ಸುರಕ್ಷತೆಗಾಗಿ ಸೆಗ್ಮೆಂಟ್ ಫಸ್ಟ್ 360 ಡಿಗ್ರಿ ಕ್ಯಾಮೆರಾ ಜೊತೆಗೆ ಆರು ಏರ್ ಬ್ಯಾಗ್ ಗಳು, ಇಸಿಎಸ್ ಮತ್ತು ವಾಯ್ಸ್ ಅಸಿಸ್ಟೆಡ್ ಸನ್ ರೂಫ್ ಸೇರಿದಂತೆ ಹಲವಾರು ಪ್ರೀಮಿಯಂ ಫೀಚರ್ಸ್ ಸೌಲಭ್ಯಗಳಿವೆ.