Yoga: ವಿಶ್ವದಲ್ಲಿ ಯೋಗಕ್ಕೆ ದೊರೆಯುತ್ತಿರುವ ಮಾನ್ಯತೆಯೇ ನಿಶ್ಚಲ್​ಗೆ ಪ್ರೇರಣೆ

ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ 5 ಬಾರಿ ಪ್ರಥಮ ಸ್ಥಾನ ಹಾಗೂ 3 ಬಾರಿ ದ್ವಿತೀಯ ಸ್ಥಾನ, ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ 2 ಬಾರಿ ಪ್ರಥಮ ಸ್ಥಾನ, 2 ಬಾರಿ ದ್ವಿತೀಯ ಸ್ಥಾನ ಮತ್ತು 1 ಬಾರಿ ತೃತೀಯ ಸ್ಥಾನ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ 1ಬಾರಿ ಪ್ರಥಮ ಸ್ಥಾನ, 2 ಬಾರಿ ತೃತೀಯ ಸ್ಥಾನ ಪಡೆದುಕೊಂಡು.

Yoga: ವಿಶ್ವದಲ್ಲಿ ಯೋಗಕ್ಕೆ ದೊರೆಯುತ್ತಿರುವ ಮಾನ್ಯತೆಯೇ ನಿಶ್ಚಲ್​ಗೆ ಪ್ರೇರಣೆ
Nischal K.J.
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 20, 2022 | 8:00 AM

ಯಾವುದೇ ಒಂದು ಸಾಧನೆ ಮಾಡಬೇಕಾದರೆ ಗುರುಗಳ ಉಪದೇಶ, ತಂದೆ ತಾಯಿಯರ ಪ್ರೋತ್ಸಾಹ ಮುಖ್ಯವಾಗಿರುತ್ತದೆ. ಕಲಿಯುವ ಮನಸ್ಸು ಮತ್ತು ಸತತ ಪರಿಶ್ರಮವು ಒಬ್ಬ ವ್ಯಕ್ತಿಯು ತಮ್ಮ ಗುರಿಯನ್ನು ಯಶಸ್ಸಿನತ್ತ ಕೊಂಡೊಯ್ಯಲು ಸಾಧ್ಯವಾಗುತ್ತದೆ. ಇವೆರಡನ್ನು ಮೈಗೂಡಿಸಿಕೊಂಡಿರುವ ಯುವ ಪ್ರತಿಭೆ ನಿಶ್ಚಲ್ ಕೆ.ಜೆ. ಮೂಲತಃ ಮಡಿಕೇರಿ ತಾಲೂಕಿನ ಪೆರಾಜೆ ಗ್ರಾಮದ ಪೆರಂಬಿ ಮನೆಯವರಾದ ಜನಾರ್ಧನ ಹಾಗೂ ಜ್ಯೋತಿ ದಂಪತಿಯ ಸುಪುತ್ರನಾದ ನಿಶ್ಚಲ್ ಕೆ.ಜೆ ಪ್ರಸ್ತುತ ಪುತ್ತೂರಿನ ನೆಹರೂ ನಗರದಲ್ಲಿ ವಾಸಿಸುತ್ತಿದ್ದಾರೆ.

ನಿಶ್ಚಲ್. ಕೆ.ಜೆ ಇವರು ತಮ್ಮ ಎಲ್.ಕೆ.ಜಿ, ಯು.ಕೆ.ಜಿಯನ್ನು ಸರಸ್ವತಿ ಕಿಂಡರ್ರ್ಗಾಡನ್ ದರ್ಬೆಯಲ್ಲಿ ಮುಗಿಸಿ 1ನೇ ತರಗತಿಯಿಂದ 10ನೇ ತರಗತಿಯವರೆಗೆ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದಲ್ಲಿ ಪೂರೈಸಿ. ಪ್ರಸ್ತುತವಾಗಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ವರ್ಷದ ವಿಜ್ಞಾನ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಬಾಲ್ಯದಲ್ಲೇ ಯೋಗದ ಮೇಲೆ ಆಸಕ್ತಿ ತೋರಿದ ಇವರು 6ನೇ ತರಗತಿಯಿಂದ 8ನೇ ತರಗತಿಯವರೆಗೆ ಯೋಗ ಗುರುಗಳಾದ ಜಯರಾಮ ಇವರಲ್ಲಿ ಯೋಗ ತರಬೇತಿ ಪಡೆದುಕೊಂಡು, 9ನೇ ತರಗತಿಯಿಂದ 10ನೇ ತರಗತಿಯವರೆಗೆ ಯೋಗ ತರಬೇತಿದಾರರಾದ ನಮಿತ ಇವರಲ್ಲಿ ಮತ್ತು ಪ್ರಸ್ತುತ ಗೋಪಾಲಕೃಷ್ಣ ಇವರೊಂದಿಗೆ ಯೋಗ ತರಬೇತಿಯನ್ನು ಪಡೆಯುತ್ತಿದ್ದಾರೆ.

ಇದನ್ನೂ ಓದಿ
Image
Hanumagiri: ರಾಮಾಯಣದಲ್ಲಿ ಸಂಜೀವಿನಿ ಪರ್ವತ ಹೊತ್ತ ಆಂಜನೇಯನಿಗೆ ಸಾಕ್ಷಿ ಈ ಹನುಮಗಿರಿ
Image
Travel Story: ಸ್ನೇಹಿತರೊಂದಿಗೆ ಪ್ರವಾಸ ಹೋಗುವುದೆಂದರೆ ಏನೋ ಖುಷಿ
Image
ನೃತ್ಯ ಕ್ಷೇತ್ರದಲ್ಲಿ ಬೆಳೆಯುವ ಮಕ್ಕಳಿಗೆ ಸ್ಪೂರ್ತಿ ಕಿರಣ್ ಮುರಳಿ
Image
Indian book of Record: ಚಂದ್ರಹಾಸ ಅವರ ಕೃತಿಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಗೌರವ

ನಿಶ್ಚಲ್. ಕೆ.ಜೆ ಅವರು ಬೆಂಗಳೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿ, ಚೆನ್ನೈ ನಲ್ಲಿ ನಡೆದ ರಾಷ್ಟ್ರೀಯ ಮಟ್ಟದಲ್ಲಿ ನಡೆದ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು, ನಂತರ ಶ್ರೀಲಂಕಾದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದ ಯೋಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡರು. ದೆಹಲಿಯಲ್ಲಿ ನಡೆದ ಯೋಗಾಸನ ಚಾಂಪಿಯನ್ ಶಿಪ್​ನಲ್ಲಿ ಭಾಗವಹಿಸಿದರು. ಹೀಗೆ ಮೂರು ಬಾರಿ ಥೈಲ್ಯಾಂಡ್​ಗೆ ಮತ್ತು ಎರಡು ಬಾರಿ ಇಂಡೋನೇಷಿಯನ್​ಗೆ ಆಯ್ಕೆಯಾಗಿದ್ದರು. ಆದರೆ ಅನಿವಾರ್ಯ ಕಾರಣದಿಂದ ಹೋಗಲಾಗಿರಲಿಲ್ಲ.

ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ 5 ಬಾರಿ ಪ್ರಥಮ ಸ್ಥಾನ ಹಾಗೂ 3 ಬಾರಿ ದ್ವಿತೀಯ ಸ್ಥಾನ, ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ 2 ಬಾರಿ ಪ್ರಥಮ ಸ್ಥಾನ, 2 ಬಾರಿ ದ್ವಿತೀಯ ಸ್ಥಾನ ಮತ್ತು 1 ಬಾರಿ ತೃತೀಯ ಸ್ಥಾನ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ 1ಬಾರಿ ಪ್ರಥಮ ಸ್ಥಾನ, 2 ಬಾರಿ ತೃತೀಯ ಸ್ಥಾನ ಪಡೆದುಕೊಂಡು. ಇತ್ತೀಚೆಗೆ ನಡೆದ ಬೆಂಗಳೂರಿನ ಯೋಗಗಂಗೋತ್ರಿ ಸಂಸ್ಥೆ ಅಂತರಾಷ್ಟ್ರೀಯ ಮಟ್ಟದ ಯೋಗಾಸನ ಚಾಂಪಿಯನ್ ಶಿಪ್ ಕಾರ್ಯಕ್ರಮವನ್ನು ನಡೆಸಿದ್ದರು ಅದರಲ್ಲಿ 20ಕ್ಕೂ ಹೆಚ್ಚು ದೇಶಗಳು ಭಾಗವಹಿಸಿದ್ದರು. ಇದರಲ್ಲಿ ನಿಶ್ಚಲ್ ಅವರು ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ.

ಹೀಗೆ 2 ಬಾರಿ ಗ್ಲೋಬಲ್ ವರ್ಲ್ಡ್ ರೆಕಾರ್ಡ್, 2 ಬಾರಿ ಅಬ್ದುಲ್ ಕಲಾಂ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ. ಯೋಗ ಕಲಾ ನಿಧಿ ಅವಾರ್ಡ್, ಕರ್ನಾಟಕ ಕಲಾಶ್ರೀ ಅವಾರ್ಡ್, ಯೋಗ ಕಲಾ ಪ್ರತಿಭಾ ಅವಾರ್ಡ್, ಯೋಗ ನಿಧಿ ಅವಾರ್ಡ್, ಕ್ರೀಡಾರತ್ನ ರಾಜ್ಯ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನಿಸಿಕೊಂಡಿರುತ್ತಾರೆ. ಹಲವಾರು ತಾಲೂಕು ಮತ್ತು ಜಿಲ್ಲಾ ಮಟ್ಟಗಳಲ್ಲಿ ನಡೆದ ಯೋಗಾಸನ ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನು ಗಳಿಸಿ, ಅಬಕಾಸ್ ನಲ್ಲಿ 8 ಲೆವೆಲ್ ಕಂಪ್ಲೀಟ್ ಮಾಡಿ ಪದವಿ ಪಡೆದುಕೊಂಡು. ಅಬಕಾಸ್​ನಲ್ಲಿ 1 ಬಾರಿ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಹಾಗೂ 1 ಬಾರಿ ತೃತೀಯ ಸ್ಥಾನ ಪಡೆದಿರುತ್ತಾರೆ. ಭಾರತದ ಸ್ಕೌಟ್ ಮತ್ತು ಗೌಡ್ಸ್ ಸಂಸ್ಥೆಯು ಯುವಾನ ಎಂಬ ಯುವಪಿಟ್ ಪೀಟ್ ಎಂಬ ಕಾರ್ಯಕ್ರಮವನ್ನು ನಡೆಸಿದ್ದರು. ಇದರಲ್ಲಿ 1631 ವಿದ್ಯಾರ್ಥಿಗಳು ಭಾಗವಹಿಸಿದ್ದು. ನಿಶ್ಚಲ್ .ಕೆ.ಜೆ ಇವರು ಆಯ್ಕೆಯಾಗಿ ಯುವಪಿಟ್ ಪೀಟ್ ಎಂಬ ಬಿರುದನ್ನು ನೀಡಿರುತ್ತಾರೆ. ಇವರು ಸ್ಕೌಟ್ ರಾಜ್ಯ ಪುರಸ್ಕಾರ ವಿದ್ಯಾರ್ಥಿಯಾಗಿರುತ್ತಾರೆ. ಹೀಗೆ ಹತ್ತು ಹಲವಾರು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಪ್ರತಿನಿತ್ಯ ಯೋಗವನ್ನು ಮಾಡುವುದರಿಂದ ದೇಹದ ಮತ್ತು ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬಹುದು ಎಂಬುದು ನಿಶ್ಚಲ್ ರವರು ಮನದಾಳದ ಮಾತು. ಹಾಗೂ ಉನ್ನತ ಶಿಕ್ಷಣದೊಂದಿಗೆ ಯೋಗಾಭ್ಯಾಸದಲ್ಲಿ ಉನ್ನತ ಸಾಧನೆ ಮಾಡಿ ಉತ್ತಮ ಸಮಾಜಕ್ಕೆ ಮಾದರಿ ವ್ಯಕ್ತಿಯಾಬೇಕೆಂಬುವುದು ನಿಶ್ಚಲ್​ರವರ ಕನಸಾಗಿದೆ.

ಇವರ ತಂದೆ-ತಾಯಿ , ಗುರುಗಳು ಹಾಗೂ ಕಾಲೇಜಿನ ಶಿಕ್ಷಕ, ಶಿಕ್ಷಕಿಯರ ಪ್ರೋತ್ಸಾಹ ಹಾಗೂ ಪ್ರಧಾನಿ ಮೋದಿಯಿಂದ ವಿಶ್ವದಲ್ಲಿ ಯೋಗಕ್ಕೆ ದೊರೆಯುತ್ತಿರುವ ಮಾನ್ಯತೆ ನಿಶ್ಚಲ್​ರಿಗೆ ಯೋಗದಲ್ಲಿ ಮುಂದುವರೆಯಲು ಪ್ರೇರಣೆಯಾಗಿದೆ. ಈ ಸಾಧನೆಯು ಇನ್ನಷ್ಟು ಎತ್ತರಕ್ಕೆ ಹೆಮ್ಮರವಾಗಿ ಬೆಳೆದು, ನಿಮ್ಮ ಕನಸು ನನಸಾಗಲಿ.

ಯಶ್ವಿತ ಪೂಜಾರಿಗದ್ದೆ