AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದೇಶಗಳಲ್ಲಿ 7 ಲಕ್ಷಕ್ಕೂ ಹೆಚ್ಚು ಕ್ರೆಡಿಟ್ ಕಾರ್ಡ್ ವೆಚ್ಚಕ್ಕೆ ಶೇ. 20 ಟಿಸಿಎಸ್; ಬಜೆಟ್​ನಲ್ಲಿ ಘೋಷಣೆ ಸಾಧ್ಯತೆ

Union Budget 2024: ಮುಂಬರುವ ಬಜೆಟ್​ನಲ್ಲಿ ವಿದೇಶಗಳಲ್ಲಿ ಭಾರತೀಯರ ಕ್ರೆಡಿಟ್ ಕಾರ್ಡ್ ವೆಚ್ಚವನ್ನು ಎಲ್​ಆರ್​ಎಸ್ ವ್ಯಾಪ್ತಿಗೆ ತರಬಹುದು. ಸದ್ಯ ಎಲ್​ಆರ್​ಎಸ್ ಸ್ಕೀಮ್​ನಲ್ಲಿ ಭಾರತೀಯರು ವಿದೇಶಗಳಿಗೆ ಒಂದು ವರ್ಷದಲ್ಲಿ ಎರಡು ಕೋಟಿ ರೂ ಹಣ ಕಳುಹಿಸಬಹುದು. ಏಳು ಲಕ್ಷ ರೂಗಿಂತ ಹೆಚ್ಚು ಹಣ ವ್ಯಯಿಸಿದರೆ ಶೇ. 20ರಷ್ಟು ಟಿಸಿಎಸ್ ಕಡಿತ ಆಗುತ್ತದೆ. ಈ ಸ್ಕೀಮ್​ಗೆ ಕ್ರೆಡಿಟ್ ಕಾರ್ಡ್ ವಹಿವಾಟನ್ನೂ ತರಲಾಗುತ್ತಿದೆ.

ವಿದೇಶಗಳಲ್ಲಿ 7 ಲಕ್ಷಕ್ಕೂ ಹೆಚ್ಚು ಕ್ರೆಡಿಟ್ ಕಾರ್ಡ್ ವೆಚ್ಚಕ್ಕೆ ಶೇ. 20 ಟಿಸಿಎಸ್; ಬಜೆಟ್​ನಲ್ಲಿ ಘೋಷಣೆ ಸಾಧ್ಯತೆ
ಕ್ರೆಡಿಟ್ ಕಾರ್ಡ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 15, 2024 | 4:21 PM

Share

ನವದೆಹಲಿ, ಜುಲೈ 15: ವಿದೇಶಗಳಲ್ಲಿ ಭಾರತೀಯರು ಕ್ರೆಡಿಟ್ ಕಾರ್ಡ್ ಬಳಸಿ ಮಾಡುವ ವೆಚ್ಚಕ್ಕೆ ತೆರಿಗೆ ಏರಿಸುವ ಇರಾದೆಯಲ್ಲಿ ಸರ್ಕಾರ ಇದೆ. ವಿದೇಶಗಳಲ್ಲಿ ಭಾರತೀಯರು ಮಾಡುತ್ತಿರುವ ಖರ್ಚು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ಕಡಿವಾಣ ಹಾಕಲು ಸರ್ಕಾರ ಆಲೋಚಿಸುತ್ತಿದೆ. ವರ್ಷಕ್ಕೆ ಏಳು ಲಕ್ಷ ರೂಗೂ ಹೆಚ್ಚು ವೆಚ್ಚವನ್ನು ಎಲ್ಆರ್​ಎಸ್ ಸ್ಕೀಮ್ ವ್ಯಾಪ್ತಿಗೆ ತರಬಹುದು. ಮುಂಬರುವ ಬಜೆಟ್​ನಲ್ಲಿ ಈ ಬಗ್ಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷೆ ಮಾಡಬಹುದು ಎನ್ನಲಾಗಿದೆ. ವರದಿ ಪ್ರಕಾರ ಭಾರತೀಯರು ವಿದೇಶಕ್ಕೆ ಹೋದಾಗ ಕ್ರೆಡಿಟ್ ಕಾರ್ಡ್ ಬಳಸಿ ಒಂದು ವರ್ಷದಲ್ಲಿ ಏಳು ಲಕ್ಷ ರೂಗಿಂತ ಹೆಚ್ಚಿನ ಹಣ ವೆಚ್ಚ ಮಾಡಿದಾಗ ಅದಕ್ಕೆ ಶೇ. 20ರಷ್ಟು ಟಿಸಿಎಸ್ ವಿಧಿಸಬಹುದು. ಟಿಸಿಎಸ್ ಎಂದರೆ ಮೂಲದಲ್ಲೇ ಸಂಗ್ರಹಿಸಲಾಗುವ ತೆರಿಗೆ.

ಆರ್​ಬಿಐನ ಎಲ್​ಆರ್​ಎಸ್ ಸ್ಕೀಮ್ ಪ್ರಕಾರ ಭಾರತದ ನಿವಾಸಿಯೊಬ್ಬರು ಒಂದು ಹಣಕಾಸು ವರ್ಷದಲ್ಲಿ ವಿದೇಶಗಳಿಗೆ 2,50,000 ಡಾಲರ್​ವರೆಗೂ ಹಣ ವರ್ಗಾವಣೆ ಮಾಡಬಹುದು. ಅಂದರೆ ಒಂದು ವರ್ಷದಲ್ಲಿ ಗರಿಷ್ಠ ಎರಡು ಕೋಟಿ ರೂವರೆಗೆ ಹಣವನ್ನು ವಿದೇಶಗಳಿಗೆ ಕಳುಹಿಸಲು ಅವಕಾಶ ಇದೆ. ಆದರೆ, ವರ್ಷದಲ್ಲಿ ಏಳು ಲಕ್ಷ ರೂಗಿಂತ ಹೆಚ್ಚು ಹಣ ವಹಿವಾಟು ನಡೆದರೆ ಅದಕ್ಕೆ 20 ಪ್ರತಿಶತದಷ್ಟು ಟಿಸಿಎಸ್ ತೆರಿಗೆ ಮುರಿದುಕೊಳ್ಳಲಾಗುತ್ತದೆ. ಈ ಎಲ್​ಆರ್​ಎಸ್ ಅಥವಾ ಲಿಬಲರಲೈಸ್ಡ್ ರೆಮಿಟೆನ್ಸ್ ಸ್ಕೀಮ್​ನ ವ್ಯಾಪ್ತಿಗೆ ಕ್ರೆಡಿಟ್ ಕಾರ್ಡ್ ಅನ್ನೂ ಒಳಗೊಳ್ಳಲು ಸರ್ಕಾರ ಮುಂದಾಗಿದೆ.

ಇದನ್ನೂ ಓದಿ: ಬಜೆಟ್​ನಲ್ಲಿ ಪಿಎಂ ಕಿಸಾನ್ ಯೋಜನೆಯ 6,000 ರೂ ಮೊತ್ತ ಹೆಚ್ಚಳ ಆಗುತ್ತಾ?

ಸದ್ಯ ಎಲ್​ಆರ್​ಎಸ್ ಮಿತಿಯಲ್ಲಿ ಕ್ರೆಡಿಟ್ ಕಾರ್ಡ್ ವೆಚ್ಚ ಸೇರಿಸಲಾಗಿಲ್ಲ. ಆದರೆ, ಡೆಬಿಟ್ ಕಾರ್ಡ್, ಫೋರೆಕ್ಸ್ ಕಾರ್ಡ್ ಮತ್ತಿತರ ಪೇಮೆಂಟ್ ವಿಧಾನಗಳ ಮೂಲಕ ಭಾರತದಿಂದ ವಿದೇಶಗಳಿಗೆ ವರ್ಗಾವಣೆ ಆಗುವ ಹಣ ವರ್ಷಕ್ಕೆ ಏಳು ಲಕ್ಷ ರೂಗಿಂತ ಹೆಚ್ಚಿದ್ದರೆ ಶೇ. 20ರಷ್ಟು ಟಿಸಿಎಸ್ ಕಡಿತ ಆಗುತ್ತದೆ. ಕ್ರೆಡಿಟ್ ಕಾರ್ಡ್ ವಹಿವಾಟುಗಳಿಗೆ ವಿನಾಯಿತಿ ಕೊಡಲಾಗಿತ್ತು. ಈಗ ಅದೂ ಕೂಡ ಎಲ್​ಆರ್​ಎಸ್ ವ್ಯಾಪ್ತಿಗೆ ಬರಬಹುದು.

ಭಾರತೀಯರ ವಿದೇಶೀ ಖರ್ಚು ಎಷ್ಟಿದೆ?

ಭಾರತೀಯ ರಿಸರ್ವ್ ಬ್ಯಾಂಕ್​ನ ದತ್ತಾಂಶದ ಪ್ರಕಾರ ಎಲ್​ಆರ್​ಎಸ್ ಅಡಿಯಲ್ಲಿ 2023-24ರ ಹಣಕಾಸು ವರ್ಷದಲ್ಲಿ ಭಾರತದಿಂದ ಹೊರಹೋದ ಹಣ 31.73 ಬಿಲಿಯನ್ ಡಾಲರ್ ಇದೆ. ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ದು ಶೇ. 16.91ರಷ್ಟು ಹೆಚ್ಚಳವಾಗಿದೆ.

ಇದನ್ನೂ ಓದಿ: ಈ ಬಜೆಟ್ ಅಧಿವೇಶನದಲ್ಲಿ ಇನ್ಷೂರೆನ್ಸ್ ತಿದ್ದುಪಡಿ ಮಸೂದೆ ಮಂಡನೆ ಸಾಧ್ಯತೆ; ಕಾಯ್ದೆಯಲ್ಲಿ ಏನೇನು ಬದಲಾವಣೆ?

ಶಿಕ್ಷಣ ವೆಚ್ಚವೂ ಮಿತಿ ಮೀರುವಂತಿಲ್ಲವಾ?

ವಿದೇಶಗಳಲ್ಲಿ ಆಸ್ಪತ್ರೆ ಚಿಕಿತ್ಸೆಗೆ ಅಥವಾ ಶಿಕ್ಷಣಕ್ಕೆ ಹಣ ಕಳುಹಿಸುತ್ತಿದ್ದರೆ ಅದಕ್ಕೆ ತೆರಿಗೆ ರಿಯಾಯಿತಿ ಸಿಗುತ್ತದೆ. ಇವುಗಳಿಗೆ ಮಾಡುವ ವೆಚ್ಚ ವರ್ಷಕ್ಕೆ ಏಳು ಲಕ್ಷ ಮೀರಿದರೆ 20 ಪ್ರತಿಶತ ಬದಲು 5 ಪ್ರತಿಶತದಷ್ಟು ಟಿಸಿಎಸ್ ಮಾತ್ರವೇ ಮುರಿದುಕೊಳ್ಳಲಾಗುತ್ತದೆ. ಇದೇ ನೀತಿಯನ್ನು ಬಜೆಟ್​ನಲ್ಲಿ ಮುಂದುವರಿಸಬಹುದು ಎನ್ನಲಾಗಿದೆ.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು