AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೆಪ್ಟೆಂಬರ್ 11, ಶುಕ್ರವಾರಕ್ಕೆ ಬ್ಯಾಂಕ್ ಉದ್ಯೋಗಿಗಳ ಮುಷ್ಕರ ಫಿಕ್ಸ್; ಸರ್ಕಾರ ಬಗ್ಗದಿದ್ದರೆ 3 ದಿನಗಳ ಬಂದ್

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬ್ಯಾಂಕ್ ನೌಕರರ ಸಂಘಟನೆಗಳು ಬಹು ಹಂತಗಳಲ್ಲಿ ಮುಷ್ಕರಗಳನ್ನು ನಡೆಸುತ್ತಿವೆ. ಮೊದಲ ಹಂತದಲ್ಲಿ ಸೆಪ್ಟೆಂಬರ್ 11ರಂದು ಏಕದಿನದ ಮುಷ್ಕರವನ್ನು ರಾಷ್ಟ್ರವ್ಯಾಪಿ ನಡೆಸುತ್ತಿವೆ. ವಾರದಲ್ಲಿ ಐದು ಕೆಲಸದ ದಿನಗಳೆಂದು ಘೋಷಿಸುವುದು ಸೇರಿದಂತೆ ಕೆಲ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿವೆ. ಈ ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ 3 ದಿನಗಳ ಮುಷ್ಕರ ಹಾಗೂ ಅನಿರ್ದಿಷ್ಟಾವಧಿ ಮುಷ್ಕರವನ್ನೂ ನಡೆಸಲು ನಿರ್ಧರಿಸಿವೆ.

ಸೆಪ್ಟೆಂಬರ್ 11, ಶುಕ್ರವಾರಕ್ಕೆ ಬ್ಯಾಂಕ್ ಉದ್ಯೋಗಿಗಳ ಮುಷ್ಕರ ಫಿಕ್ಸ್; ಸರ್ಕಾರ ಬಗ್ಗದಿದ್ದರೆ 3 ದಿನಗಳ ಬಂದ್
ಎಸ್​ಬಿಐ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 08, 2026 | 6:16 PM

Share

ನವದೆಹಲಿ, ಸೆಪ್ಟೆಂಬರ್ 8: ವಾರದಲ್ಲಿ 5 ದಿನಗಳ ಕೆಲಸದ ಅವಧಿ (5-Day Work Week) ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟಗಳು ಸೆಪ್ಟೆಂಬರ್ 11 ರಂದು ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿವೆ. ಬೇಡಿಕೆ ಈಡೇರದಿದ್ದಲ್ಲಿ ಮುಂಬರುವ ಅಕ್ಟೋಬರ್ ತಿಂಗಳಲ್ಲಿ 2 ದಿನಗಳ ಸುದೀರ್ಘ ಮುಷ್ಕರ ನಡೆಸುವುದಾಗಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಎಚ್ಚರಿಕೆ ನೀಡಿದೆ. ಈ ಮುಷ್ಕರದಿಂದಾಗಿ ದೇಶಾದ್ಯಂತ ಸಾರ್ವಜನಿಕ ಹಾಗೂ ಖಾಸಗಿ ವಲಯದ ಬ್ಯಾಂಕಿಂಗ್ ಸೇವೆಗಳಲ್ಲಿ ಭಾರಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.

ಬ್ಯಾಂಕ್ ಯೂನಿಯನ್‌ಗಳ ಪ್ರಮುಖ ಬೇಡಿಕೆಗಳಿವು

  • 5 ದಿನಗಳ ಕೆಲಸದ ವಾರ ಜಾರಿ: ಎಲ್ಲಾ ಶನಿವಾರಗಳನ್ನು ಅಧಿಕೃತ ರಜಾದಿನಗಳೆಂದು ಘೋಷಿಸಿ, ವಾರಕ್ಕೆ 5 ದಿನಗಳ ಕೆಲಸದ ನಿಯಮವನ್ನು ತಕ್ಷಣವೇ ಜಾರಿಗೆ ತರಬೇಕು ಎಂಬುದು ಬ್ಯಾಂಕ್ ನೌಕರರ ಪ್ರಮುಖ ಬೇಡಿಕೆಯಾಗಿದೆ. ಪ್ರಸ್ತುತ ತಿಂಗಳ 2ನೇ ಮತ್ತು 4ನೇ ಶನಿವಾರ ಮಾತ್ರ ರಜೆ ಇರುತ್ತದೆ. ಭಾನುವಾರದಂತೆ ಎಲ್ಲಾ ಶನಿವಾರವೂ ರಜೆ ಇರಲಿ ಎನ್ನುವುದು ಉದ್ಯೋಗಿಗಳ ಬಹುದಿನ ಬೇಡಿಕೆಯೂ ಆಗಿದೆ.
  • ಸಿಬ್ಬಂದಿ ಕೊರತೆ ಮತ್ತು ಕೆಲಸದ ಒತ್ತಡ: ಬ್ಯಾಂಕುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಬೇಕು ಹಾಗೂ ಉದ್ಯೋಗಿಗಳ ಮೇಲಿರುವ ವಿಪರೀತ ಕೆಲಸದ ಒತ್ತಡವನ್ನು ತಗ್ಗಿಸಬೇಕು ಎಂದು ಯೂನಿಯನ್‌ಗಳು ಒತ್ತಾಯಿಸಿವೆ. ಉದ್ಯೋಗಿಗಳಿಗೆ ಅವರ ಸಾಧನೆ ಆಧಾರಿತವಾಗಿ ಇನ್ಸೆಂಟಿವ್ ಕೊಡುವ ಪಿಎಲ್​ಐ ನೀತಿಯನ್ನು ಜಾರಿಗೆ ತರಕೂಡದು ಎನ್ನುವ ಬೇಡಿಕೆಯೂ ಇದೆ.

ಇದನ್ನೂ ಓದಿ: ಬೆಂಗಳೂರು ಐಐಎಂನ ಪಿಜಿಪಿ ಎಂಬಿಎ ಪ್ರೋಗ್ರಾಮ್ ಭಾರತದ ನಂಬರ್ ಒನ್ ಮ್ಯಾನೇಜ್ಮೆಂಟ್ ಕೋರ್ಸ್; ವಿಶ್ವದ ಟಾಪ್-25ಯಲ್ಲಿ ಐಐಎಂಬಿ

3 ದಿನಗಳ ಸುದೀರ್ಘ ಮುಷ್ಕರದ ಎಚ್ಚರಿಕೆ

ಸೆಪ್ಟೆಂಬರ್ 11ರ ಏಕದಿನದ ಸಾಂಕೇತಿಕ ಮುಷ್ಕರದ ನಂತರವೂ ಸರ್ಕಾರ ಹಾಗೂ ಭಾರತೀಯ ಬ್ಯಾಂಕುಗಳ ಒಕ್ಕೂಟ (IBA) ಸ್ಪಂದಿಸದಿದ್ದರೆ, ಮುಂದಿನ ಹಂತದಲ್ಲಿ 3 ದಿನಗಳ ಕಾಲ ದೇಶಾದ್ಯಂತ ಸಂಪೂರ್ಣ ಬ್ಯಾಂಕ್ ಬಂದ್ ನಡೆಸಲಾಗುವುದು ಎಂದು ಒಕ್ಕೂಟ ತಿಳಿಸಿದೆ. ವರದಿಗಳ ಪ್ರಕಾರ, ಈ ಮೂರು ದಿನಗಳ ಮುಷ್ಕರ ಸೆಪ್ಟೆಂಬರ್ 28ರಿಂದ ನಡೆಯುತ್ತದೆ. ಅದಕ್ಕೂ ಫಲ ಸಿಕ್ಕದಿದ್ದರೆ ಅಕ್ಟೋಬರ್ 26ರಂದು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸುವುದಾಗಿ ಈ ಸಂಘಟನೆಗಳು ಬೆದರಿಸಿವೆ.

ಸೆಪ್ಟೆಂಬರ್ 11ರಂದು ಚೆಕ್ ಕ್ಲಿಯರೆನ್ಸ್, ಶಾಖೆಗಳ ನಗದು ವಹಿವಾಟು ಮತ್ತು ಇತರ ಬ್ಯಾಂಕಿಂಗ್ ಸೇವೆಗಳಿಗೆ ಅಡಚಣೆಯಾಗುವ ಸಾಧ್ಯತೆಯಿರುವುದರಿಂದ, ಗ್ರಾಹಕರು ತಮ್ಮ ಪ್ರಮುಖ ಹಣಕಾಸಿನ ವ್ಯವಹಾರಗಳನ್ನು ಮುಂಚಿತವಾಗಿಯೇ ಯೋಜಿಸಿಕೊಳ್ಳಲು ಸಲಹೆ ನೀಡಲಾಗಿದೆ. ಇದೇ ವೇಳೆ, ಆನ್‌ಲೈನ್ ನೆಟ್‌ಬ್ಯಾಂಕಿಂಗ್ ಮತ್ತು ಯುಪಿಐ ಸೇವೆಗಳು ಯಥಾ ರೀತಿಯಲ್ಲಿ ಕಾರ್ಯನಿರ್ವಹಿಸಲಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us