AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿಂದ ರಸ್ತೆ ಮೂಲಕ ಮುಂಬೈಗೆ ಕೇವಲ 5.5 ಗಂಟೆ ಪ್ರಯಾಣ; ಇದು ಎಕ್ಸ್​ಪ್ರೆಸ್​ವೇ ಮ್ಯಾಜಿಕ್

Bengaluru Pune Expressway to cut road travel time by 7 hrs: ಉತ್ತಮ ಹೆದ್ದಾರಿ ನಿರ್ಮಿಸಲಾಗಿರುವ ಮಾರ್ಗಗಳಲ್ಲಿ ವಿಮಾನಗಳ ಹಾರಾಟ ನಿಲ್ಲುತ್ತಿವೆಯಾ? ನಿತಿನ್ ಗಡ್ಕರಿ ಪ್ರಕಾರ ಹೌದು. ಮುಂಬೈ ಮತ್ತು ಪುಣೆ ನಡುವೆ 8 ಫ್ಲೈಟ್​ಗಳಿದ್ದವು. ಎಕ್ಸ್​ಪ್ರೆಸ್​ವೇ ನಿರ್ಮಾಣವಾದ ಬಳಿಕ ಎಲ್ಲವೂ ಬಂದ್ ಆಗಿವೆ. ದಿಲ್ಲಿಯಿಂದ ಡೆಹ್ರಾಡೂನ್, ದಿಲ್ಲಿಯಿಂದ ಜೈಪುರ್​ಗೂ ಫ್ಲೈಟ್​ಗಳು ಬಂದ್ ಅಗಬಹುದು ಎಂದು ಗಡ್ಕರಿ ತಮಾಷೆ ಮಾಡಿದ್ದಾರೆ.

ಬೆಂಗಳೂರಿಂದ ರಸ್ತೆ ಮೂಲಕ ಮುಂಬೈಗೆ ಕೇವಲ 5.5 ಗಂಟೆ ಪ್ರಯಾಣ; ಇದು ಎಕ್ಸ್​ಪ್ರೆಸ್​ವೇ ಮ್ಯಾಜಿಕ್
ನಿತಿನ್ ಗಡ್ಕರಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 06, 2026 | 3:28 PM

Share

ನವದೆಹಲಿ, ಏಪ್ರಿಲ್ 6: ದೇಶದ ಬೆಳವಣಿಗೆಗೆ ಬೇಕಾದ ಇನ್​ಫ್ರಾಸ್ಟ್ರಕ್ಚರ್​ನಲ್ಲಿ ರಸ್ತೆ ಸೌಕರ್ಯವೂ ಪ್ರಮುಖವಾದುದು. ಅದರಲ್ಲೂ ದೂರದೂರುಗಳನ್ನು ನಗರಗಳನ್ನು ಸಂಪರ್ಕಿಸುವ ಹೆದ್ದಾರಿ ಉತ್ತಮವಾಗಿರುವುದು ಮುಖ್ಯ. ಇತ್ತೀಚೆಗೆ ಸರ್ಕಾರ ನಿರ್ಮಿಸುತ್ತಿರುವ ಎಕ್ಸ್​ಪ್ರೆಸ್​ವೇಗಳು ಪ್ರಯಾಣದ ಅವಧಿಯನ್ನು ಗಣನೀಯವಾಗಿ ಕಡಿಮೆ ಮಾಡಲು ಶಕ್ಯಗೊಂಡಿವೆ. ಬೆಂಗಳೂರಿನ ಮೈಸೂರಿಗೆ ಒಂದೆರಡು ಗಂಟೆಯಲ್ಲೇ ಕಾರಿನಲ್ಲಿ ಹೋಗಬಹುದು. ಇದೀಗ ಪುಣೆ ಮತ್ತು ಬೆಂಗಳೂರು ನಡುವೆ ಎಕ್ಸ್​ಪ್ರೆಸ್​ವೇ (Pune-Bengaluru Expressway) ನಿರ್ಮಿಸುವ ಯೋಜನೆ ಹಾಕಲಾಗಿದೆ.

700ರಿಂದ 745 ಕಿಮೀ ಉದ್ದದ ಪುಣೆ-ಬೆಂಗಳೂರು ಗ್ರೀನ್​ಫೀಲ್ಡ್ ಎಕ್ಸ್​ಪ್ರೆಸ್​ವೇ ಅನ್ನು 40,000 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸುವ ಯೋಜನೆಯ ಪ್ರಸ್ತಾಪ ಸರ್ಕಾರದ ಬಳಿ ಇದೆ. ಸದ್ಯ ಬೆಂಗಳೂರಿನಿಂದ ಮುಂಬೈಗೆ ರಸ್ತೆ ಮೂಲಕ ಹೋಗಲು ಕನಿಷ್ಠ 12 ಗಂಟೆಯಾದರೂ ಬೇಕಾಗುತ್ತದೆ. ಎಕ್ಸ್​ಪ್ರೆಸ್​ವೇ ನಿರ್ಮಾಣವಾದ ಬಳಿಕ ಪ್ರಯಾಣದ ಅವಧಿ 5.5 ಗಂಟೆಗೆ ಇಳಿಯುತ್ತದೆ. ಕರ್ನಾಟಕ ಮತ್ತು ಮಹಾರಾಷ್ಟ್ರದ 12 ಜಿಲ್ಲೆಗಳಾದ್ಯಂತ ಹೋಗುವ ಈ ಎಕ್ಸ್​ಪ್ರೆಸ್​ವೇ ಮೂಲಕ ಕೇವಲ ಐದೂವರೆ ಗಂಟೆಗೆ ಬೆಂಗಳೂರಿಂದ ಮುಂಬೈ ತಲುಪಬಹುದು.

ಇದನ್ನೂ ಓದಿ: ಜಿಡಿಪಿಯಲ್ಲಿ 4ನೇ ಸ್ಥಾನ, ತಲಾದಾಯದಲ್ಲಿ 126ನೇ ಸ್ಥಾನ; ಭಾರತದ ಆರ್ಥಿಕ ಅಂತರ ಎತ್ತಿತೋರಿಸಿದ ಸ್ಟೀವ್ ಹ್ಯಾಂಕ್

ಅಷ್ಟಪಥ ಹೆದ್ದಾರಿ ಇದಾಗಿದ್ದು, ಎಲ್ಲಿಯೂ ಟ್ರಾಫಿಕ್ ನಿಲ್ಲದಂತೆ ಬೈಪಾಸ್​ಗಳನ್ನು ನಿರ್ಮಿಸಲಾಗುತ್ತದೆ. ಈ ರಸ್ತೆಯಲ್ಲಿ ಗಂಟೆಗೆ 120 ಕಿಮೀ ವೇಗದಲ್ಲಿ ಹೋಗಲು ಅವಕಾಶ ಇರುತ್ತದೆ. ಪುಣೆಯಿಂದ ಆರಂಭವಾಗಿ ಮಹಾರಾಷ್ಟ್ರದ ಸತಾರಾ, ಸಾಂಗ್ಲಿ ಜಿಲ್ಲೆಗಳನ್ನು ದಾಟಿ, ಬೆಳಗಾವಿ, ಬಾಗಲಕೋಟೆ, ಗದಗ, ಕೊಪ್ಪಳ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ ಹೀಗೆ ಮಾರ್ಗದ ಪ್ರಸ್ತಾಪ ಇದೆ.

ಈ ಎಕ್ಸ್​ಪ್ರೆಸ್​ವೇ ನಿರ್ಮಾಣ ಕಾರ್ಯ ಶೀಘ್ರದಲ್ಲೇ ಆರಂಭವಾಗುವ ಸಾಧ್ಯತೆ ಇದ್ದು, 2028ಕ್ಕೆ ಮುಗಿಯುವ ನಿರೀಕ್ಷೆ ಇದೆ.

ವಿಮಾನ ಸಂಚಾರವೇ ಬಂದ್ ಆಗ್ತಿದೆ: ನಿತಿನ್ ಗಡ್ಕರಿ ತಮಾಷೆ

ಎಕ್ಸ್​ಪ್ರೆಸ್ವೇ ನಿರ್ಮಾಣ ಮಾಡಿದ ಮಾರ್ಗದಲ್ಲಿ ವಿಮಾನ ಸಂಚಾರವೇ ನಿಲ್ಲಿಸಲಾಗಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಬ್ಯುಸಿನೆಸ್ ಟುಡೇ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಅವರು ಬೆಂಗಳೂರು ಪುಣೆ ಎಕ್ಸ್​ಪ್ರೆಸ್​ವೇ ವಿಚಾರ ಮಾತನಾಡುತ್ತಾ ಆ ಮಾತುಗಳನ್ನಾಡಿದರು.

ನಿತಿನ್ ಗಡ್ಕರಿ ಮಾತನಾಡಿರುವ ವಿಡಿಯೋ

ಇದನ್ನೂ ಓದಿ: ಟಾಟಾ ಟ್ರಸ್ಟ್ಸ್​ನ ಬಾಯ್ ಹಿರಾಬಾಯ್ ಟ್ರಸ್ಟ್​ನಿಂದ ಹೊರಬಿದ್ದ ವೇಣು ಶ್ರೀನಿವಾಸನ್

ಮುಂಬೈ ಮತ್ತು ಪುಣೆ ಮಧ್ಯೆ ಜೆಟ್ ಏರ್ವೇಸ್​ನ ಎಂಟು ಫ್ಲೈಟ್​ಗಳಿದ್ದವು. ಹೆದ್ದಾರಿ ಆದ ಬಳಿಕ ಎಲ್ಲಾ ಬಂದ್ ಆದವು. ಮುಂಬೈ ಪುಣೆ ಮಧ್ಯೆ ಜನರು ಫ್ಲೈಟ್​ನಲ್ಲಿ ಹೋಗೋದಿಲ್ಲ. ಡಿಸಂಬರ್​ನಲ್ಲಿ ದಿಲ್ಲಿಯಿಂದ ಡೆಹ್ರಾಡೂನ್​ಗೆ ಫ್ಲೈಟ್ ಬಂದ್ ಆಗಿ ಹೋಗುತ್ತೆ. ದಿಲ್ಲಿಯಿಂದ ಜೈಪುರ್ ಫ್ಲೈಟ್ ಬಂದ್ ಆಗುತ್ತೆ ಎಂದು ಗಡ್ಕರಿ ತಮಾಷೆ ಮಾಡಿದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಏಕಾಏಕಿ ಕಳಚಿ ಬಿತ್ತು ವೇಗವಾಗಿ ಚಲಿಸುತ್ತಿದ್ದ ಬಸ್ಸಿನ ಟೈರ್
ಏಕಾಏಕಿ ಕಳಚಿ ಬಿತ್ತು ವೇಗವಾಗಿ ಚಲಿಸುತ್ತಿದ್ದ ಬಸ್ಸಿನ ಟೈರ್
ಇಡೀ ವಿಶ್ವಕ್ಕೆ ಇಂಟರ್ನೆಟ್ ಆಘಾತ ನೀಡುತ್ತಾ ಇರಾನ್?
ಇಡೀ ವಿಶ್ವಕ್ಕೆ ಇಂಟರ್ನೆಟ್ ಆಘಾತ ನೀಡುತ್ತಾ ಇರಾನ್?
ಗಿನ್ನಿಸ್​​ ದಾಖಲೆ ಬರೆದ ತುಮಕೂರು: ಪ್ರಮಾಣಪತ್ರ ಸ್ವೀಕರಿಸಿದ ಸಿದ್ದರಾಮಯ್ಯ
ಗಿನ್ನಿಸ್​​ ದಾಖಲೆ ಬರೆದ ತುಮಕೂರು: ಪ್ರಮಾಣಪತ್ರ ಸ್ವೀಕರಿಸಿದ ಸಿದ್ದರಾಮಯ್ಯ