AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

China economy: 2021ರಲ್ಲಿ ಚೀನಾ ಆರ್ಥಿಕತೆ ಶೇ 8ರಷ್ಟು ಬೆಳವಣಿಗೆ ಆಗಿದೆ ಎನ್ನುತ್ತಿದೆ ಎಎಫ್​ಪಿ ಅಭಿಮತ​

2021ನೇ ಇಸವಿಯಲ್ಲಿ ಚೀನಾದ ಆರ್ಥಿಕತೆ ಶೇ 8ರ ದರದಲ್ಲಿ ಬೆಳವಣಿಗೆ ಆಗುವ ಬಗ್ಗೆ ಎಎಫ್​ಪಿ ಅರ್ಥಶಾಸ್ತ್ರಜ್ಞರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

China economy: 2021ರಲ್ಲಿ ಚೀನಾ ಆರ್ಥಿಕತೆ ಶೇ 8ರಷ್ಟು ಬೆಳವಣಿಗೆ ಆಗಿದೆ ಎನ್ನುತ್ತಿದೆ ಎಎಫ್​ಪಿ ಅಭಿಮತ​
ಚೀನಾ ಬಾವುಟ
TV9 Web
| Updated By: Srinivas Mata|

Updated on: Jan 15, 2022 | 11:45 AM

Share

ಚೀನಾದ ಆರ್ಥಿಕತೆಯು (China economy) ಕಳೆದ ಹತ್ತು ವರ್ಷಗಳಲ್ಲೇ ಅತ್ಯಂತ ವೇಗವಾಗಿ, 2021ನೇ ಇಸವಿಯಲ್ಲಿ ವಿಸ್ತರಣೆ ಆಗಲಿದೆ, ಎಂದು ಎಎಫ್​ಪಿ ಅಭಿಮತದಲ್ಲಿ ವಿಶ್ಲೇಷಕರು ತಿಳಿಸಿದ್ದಾರೆ. ಆದರೆ ಚೀನಾ ದೇಶವು ಕೊವಿಡ್-19ನಿಂದ ಬೇಗ ಚೇತರಿಸಿಕೊಂಡಿದ್ದೇನೋ ಹೌದು. ಈಗ ಒಮಿಕ್ರಾನ್ ಮತ್ತು ಅಲ್ಲಿ ಆಸ್ತಿ ವಲಯದ ನಿಧಾನ ಗತಿಯ ಅತಂಕ ಎದುರಿಸುತ್ತಿದೆ. ಸರ್ಕಾರವು ಶೇಕಡಾ 6ಕ್ಕಿಂತ ಹೆಚ್ಚಿನ ಬೆಳವಣಿಗೆ ದಾಖಲಿಸುವ ಗುರಿ ಇರಿಸಿಕೊಂಡಿತ್ತು. ಆದರೆ ಆ ಗುರಿಯನ್ನೂ ಮೀರಿ ಶೇ 8ರಷ್ಟು ಬೆಳವಣಿಗೆ ಕಾಣಲಿದೆ. ದೇಶದಲ್ಲಿ ಈಗ “ಝೀರೋ ಕೊವಿಡ್” ನೀತಿಯನ್ನು ತಂದಿದ್ದು, ಜಾಗತಿಕ ಆರ್ಥಿಕ ಚೇತರಿಕೆಗೆ ಚೀನಾ ಮುಂಚೂಣಿಯಲ್ಲಿ ನಿಲ್ಲುವಂತೆ ಮಾಡಿದೆ. ಕಳೆದ ವರ್ಷದಲ್ಲಿ ಚೀನಾದ ರಫ್ತು ಪ್ರಮಾಣ ಶೇಕಡಾ 30ರ ತನಕ ಹೆಚ್ಚಾಗಿದೆ. ಕೊವಿಡ್​ ಲಾಕ್​ಡೌನ್​ ನಂತರ ದೇಶದಲ್ಲಿ ಚಟುವಟಿಕೆಗಳು ಶುರುವಾಗಿ, ಅಲುಗಾಡುತ್ತಿದ್ದ ಆರ್ಥಿಕತೆಗೆ ಉತ್ತೇಜನ ನೀಡಿತು. ಜತೆಗೆ ಜಾಗತಿಕವಾಗಿ ಪ್ರಬಲವಾದ ಬೇಡಿಕೆ ಸಹ ಕಂಡುಬಂತು.

2021ರ ದ್ವಿತೀಯಾರ್ಧದಲ್ಲಿ ಚೀನಾದ ಚೇತರಿಕೆಗೆ ನಾನಾ ಅಡೆತಡೆಗಳು ಎದುರಾದವು. ಅಧಿಕಾರಿಗಳು ಮತ್ತೆ ಕಠಿಣವಾದ ಕೊರೊನಾ ನಿರ್ಬಂಧ ಕ್ರಮಗಳನ್ನು ಹೇರಿದರು. ವಾಯು ಮಾಲಿನ್ಯ ತಗ್ಗಿಸಲು ಮಾಡಿದ ಪ್ರಯತ್ನವಾಗಿ ವಿದ್ಯುತ್ ಸಮಸ್ಯೆ ಎದುರಾಯಿತು. ಪೂರೈಕೆ ಜಾಲದ ತೊಂದರೆಗಳು ಹಾಗೂ ಎನರ್ಜಿ ವೆಚ್ಚದ ಹೆಚ್ಚಳ ಹೀಗೆ ನಾನಾ ಸಮಸ್ಯೆಗಳನ್ನು ಎದುರಿಸುವಂತಾಯಿತು. ಮುಂಚೆಯೇ ಅಂದಾಜು ಮಾಡಿದ್ದಂತೆ ಆರೋಗ್ಯಕರ ವಾರ್ಷಿಕ ಏರಿಕೆ ದಾಖಲಾಗಿದೆ. 2020ರಲ್ಲಿ ಇದ್ದ ಶೇ 2.3ರಿಂದ ಮೇಲೇರಿದೆ. ಕೆಲವು ಸಮಸ್ಯೆಗಳು ಕಾರ್ಖಾನೆ ಚಟುವಟಿಕೆಗಳ ಮೇಲೆ ಪ್ರಭಾವ ಬೀರಿದವು. ಅಷ್ಟೇ ಅಲ್ಲ, ಉದ್ಯಮಗಳ ಬಾಗಿಲು ಹಾಕುವುದಕ್ಕೂ ಕಾರಣವಾದವು.

ಇಷ್ಟು ಸಾಲದು ಅನ್ನೋ ರೀತಿ ಆಸ್ತಿ ವಲಯದ ಸಾಲಗಳ ಮೇಲೆ ಮುರಿದುಕೊಂಡು ಬೀಳಲಾಯಿತು. ಅವುಗಳು ಆರ್ಥಿಕತೆಯ ದೊಡ್ಡ ಭಾಗವಾಗಿದ್ದವು. “ಪರಿಣಾಮ ಬೀರಿದ ಮುಖ್ಯ ಸಂಗತಿಗಳೆಂದರೆ ವಿದ್ಯುತ್ ಕೊರತೆ, ವಸತಿ ನಿರ್ಮಾಣ ವಲಯದ ನಿಧಾನಗತಿ ಮತ್ತು ಸಾಧಾರಣವಾದ ರೀಟೇಲ್ ಮಾರಾಟ,” ಎಂದು ಐಎಚ್​ಎಸ್​ ಮಾರ್ಕಿಟ್ ಏಷ್ಯಾ ಪೆಸಿಫಿಕ್​​ನ ಮುಖ್ಯ ಅರ್ಥಶಾಸ್ತ್ರಜ್ಞ ರಾಜೀವ್ ಬಿಶ್ವಾಸ್ ಹೇಳಿರುವುದಾಗಿ ಎಕಾನಮಿಕ್ ಟೈಮ್ಸ್ ವರದಿ ಮಾಡಿದೆ. ವಿಶ್ಲೇಷಕರು ಹೇಳಿದ್ದ ಪ್ರಕಾರ, ನಾಲ್ಕನೇ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ ಕೇವಲ ಶೇ 3.5ರಷ್ಟು ಬೆಳವಣಿಗೆ ಆಗಬಹುದು ಎಂದಿದ್ದರು. ಅದರ ಮೂರು ತಿಂಗಳ ಹಿಂದಿನ ಶೇ 4.9ರಷ್ಟು ಇಳಿಕೆ ಮತ್ತು ಏಪ್ರಿಲ್​ನಿಂದ ಜೂನ್​ಗೆ ಶೇ 7.9ರಷ್ಟು ಎಂದಿದ್ದರು. ನಿರ್ಮಾಣ ವಲಯದಲ್ಲಿನ ನಿಧಾನಗತಿ, ಗ್ರಾಹಕರ ವೆಚ್ಚದ ಮೇಲೆ ಕೊವಿಡ್​ ಕ್ರಮಗಳ ಪರಿಣಾಮವು ಮುಖ್ಯವಾದ “ಮಹತ್ತರ ಹಿನ್ನಡೆ”ಯಾಗಿ ಈ ವರ್ಷದ ಬೆಳವಣಿಗೆಗೆ ಎದುರಾಗಬಹುದು ಎಂದು ಬಿಶ್ವಾಸ್ ಹೇಳಿದ್ದಾರೆ.

ಚಳಿಗಾಲದ ಒಲಿಂಪಿಕ್ ಮುಂದಿನ ತಿಂಗಳು ಆಯೋಜಿಸಲು ಸಿದ್ಧತೆ ನಡೆಸುತ್ತಿರುವ ಚೀನಾ ಹೈ ಅಲರ್ಟ್​ನಲ್ಲಿದೆ. ಝೀರೋ ಕೊವಿಡ್​ ನೀತಿಯ ಲಾಕ್​ಡೌನ್​ಗಳು, ಗಡಿಗಳಲ್ಲಿನ ನಿರ್ಬಂಧ ಮತ್ತು ದೀರ್ಘಾವಧಿಯ ಕ್ವಾರಂಟೈನ್​ಗಳನ್ನು ತಂದಿದೆ. ಇನ್ನು ವಿಶ್ವದ ಮೂರನೇ ಅತ್ಯಂತ ಜನನಿಬಿಡ ಬಂದರು ನಿಂಗ್​ಬೊದಲ್ಲಿ ಅಡೆತಡೆಗಳು ಎದುರಾಗಿವೆ. ಕೊರೊನಾ ಕಾರಣದಿಂದ ಪ್ರವೇಶಕ್ಕೆ ನಿರ್ಬಂಧ ಹಾಕುತ್ತಿರುವುದು, ಕಂಟೇನರ್ ಸಾಗಾಟ ಕಾರ್ಯಾಚರಣೆಗಳ ಅಮಾನತು ಮತ್ತು ರಸ್ತೆ ತಡೆಗಳಿಂದ ಆಗುತ್ತಿರುವ ಪರಿಣಾಮ ಇದು. ಮತ್ತೊಂದು ಪ್ರಮುಖ ಬಂದು ನಗರಿ ಟಿಯಾನ್​ಜಿನ್​ನಲ್ಲೂ ಜನವರಿಯಲ್ಲಿ ಒಮಿಕ್ರಾನ್ ಕಾಣಿಸಿಕೊಂಡಿದ್ದು, ಮೊದಲ ಬಾರಿಗೆ ಚೀನಾದ ಸಮುದಾಯದಲ್ಲಿ ವೈರಾಣು ಕಂಡಿದೆ. ಒಲಿಂಪಿಕ್ ಕೊನೆಗೊಳ್ಳುವ ತನಕ ಕೊರೊನಾ ನೀತಿಯಲ್ಲಿ ಚೀನಾ ಯಾವುದೇ ಬದಲಾವಣೆ ಮಾಡುವಂತೆ ಕಾಣುವುದಿಲ್ಲ ಎನ್ನುತ್ತಾರೆ ವಿಶ್ಲೇಷಕರು.

ಕೈಗಾರಿಕೆ ಹಬ್​ ಆದ ಕ್ಸಿಯಾನ್​ನಲ್ಲಿ ಮನೆಯಿಂದ ಹೊರಗೆ ಬಾರದಂತೆ ಆದೇಶ ಹೊರಡಿಸಲಾಗಿದೆ. ಇದರಿಂದಲೂ ಉತ್ಪಾದನಾ ಚಟುವಟಿಕೆಗೆ ತೊಂದರೆ ಆಗುವ ಸಾಧ್ಯತೆ ಇದೆ. 1.3 ಕೋಟಿ ಜನಸಂಖ್ಯೆಯ ಈ ನಗರದಲ್ಲಿ ಡಿಸೆಂಬರ್​ನಲ್ಲಿ ಕಠಿಣ ನಿರ್ಬಂಧವನ್ನು ಹಾಕಲಾಗಿದೆ. ​

ಇದನ್ನೂ ಓದಿ: Video: ಚೀನಾದಲ್ಲಿ ಝೀರೋ ಕೊವಿಡ್ ನಿಯಮ; ಲೋಹದ ಪೆಟ್ಟಿಗೆಯೊಳಗಿರಬೇಕು ಕೊವಿಡ್ ರೋಗಿಗಳು