AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್ಸಿಡ್; ಭಾರತದ ಅತ್ಯಂತ ದುಬಾರಿ ಷೇರು ಈಗ ಮತ್ತಷ್ಟು ದುಬಾರಿ; ಬೆಲೆ 3 ಲಕ್ಷ ರೂಗೂ ಹೆಚ್ಚು; ಏನು ಕಾರಣ?

Elcid Investments share price: ಪೆನ್ನಿ ಸ್ಟಾಕ್ ಎನಿಸಿದ್ದ ಎಲ್ಸಿಡ್ ಇನ್ವೆಸ್ಟ್​ಮೆಂಟ್ ಈಗ ಭಾರತದ ಅತ್ಯಂತ ದುಬಾರಿ ಸ್ಟಾಕ್ ಎನಿನಿಸಿದೆ. 3 ಲಕ್ಷ ರೂ ಬೆಲೆ ದಾಟಿದ ಭಾರತದ ಮೊದಲ ಷೇರು ಎನಿಸಿದೆ. ಅಕ್ಟೋಬರ್ 29ರಂದು 2.36 ಲಕ್ಷ ರೂ ಬೆಲೆ ಪಡೆದುಕೊಂಡಿದ್ದ ಇದು ಅಂದಿನಿಂದ ಸತತವಾಗಿ ಹೆಚ್ಚುತ್ತಿದೆ. ಇದಕ್ಕೆ ಏನು ಕಾರಣ ಎನ್ನುವ ವಿವರ ಇಲ್ಲಿದೆ....

ಎಲ್ಸಿಡ್; ಭಾರತದ ಅತ್ಯಂತ ದುಬಾರಿ ಷೇರು ಈಗ ಮತ್ತಷ್ಟು ದುಬಾರಿ; ಬೆಲೆ 3 ಲಕ್ಷ ರೂಗೂ ಹೆಚ್ಚು; ಏನು ಕಾರಣ?
ಷೇರುಪೇಟೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 07, 2024 | 5:22 PM

Share

ನವದೆಹಲಿ, ನವೆಂಬರ್ 7: ಎಲ್ಸಿಡ್ ಇನ್ವೆಸ್ಟ್​​ಮೆಂಟ್ಸ್ ಸಂಸ್ಥೆ ಕಳೆದ ವಾರ ಇಡೀ ಷೇರುಪೇಟೆಗೆ ಅಚ್ಚರಿ ಹುಬ್ಬೇರುವಂತೆ ಮಾಡಿತ್ತು. ಸುಮಾರು ಮೂರು ರೂ ಇದ್ದ ಅದರ ಷೇರುಬೆಲೆ ಅಕ್ಟೋಬರ್ 29ರಂದು 2.36 ಲಕ್ಷ ರೂಗೂ ಅಧಿಕ ಮಟ್ಟಕ್ಕೆ ಏರಿತ್ತು. ಒಂದೇ ದಿನದಲ್ಲಿ 66,85,452 ಪ್ರತಿಶತದಷ್ಟು ಬೆಲೆ ಏರಿಕೆ ಆಗಿದ್ದು ಷೇರು ಪೇಟೆ ಇತಿಹಾಸದಲ್ಲಿ ಅದೇ ಮೊದಲು. ಸತತ ದಶಕಗಳ ಕಾಲದಿಂದ ಉಬ್ಬುತ್ತಾ ಬಂದಿದ್ದ ಎಂಆರ್​ಎಫ್​ನ ಷೇರುಬೆಲೆಯನ್ನೂ ಮೀರಿಸಿ ನಿಂತಿತು ಎಲ್ಸಿಡ್. ಅಷ್ಟಕ್ಕೆ ನಿಂತಿಲ್ಲ. ಅಂದಿನಿಂದ ಪ್ರತೀ ದಿನವೂ ಎಲ್ಸಿಡ್ ಇನ್ವೆಸ್ಟ್​ಮೆಂಟ್​ನ ಷೇರುಬೆಲೆ ಗರಿಷ್ಠ ಏರಿಕೆಯ ಮಟ್ಟ ಮುಟ್ಟುತ್ತಲೇ ಇದೆ. ಇವತ್ತು ನವೆಂಬರ್ 7ರಂದು ಅದು ಮೂರು ಲಕ್ಷ ರೂ ಮೈಲಿಗಲ್ಲನ್ನೂ ಮುಟ್ಟಿದೆ. ಎಲ್ಸಿಡ್ ಇನ್ವೆಸ್ಟ್​ಮೆಂಟ್​ನ ಒಂದು ಷೇರುಬೆಲೆ 3,16,597 ರೂ ಆಗಿದೆ.

ಎಲ್ಸಿಡ್ ಇನ್ವೆಸ್ಟ್​ಮೆಂಟ್ಸ್ ಷೇರಿಗೆ ಶೇ 5ರಷ್ಟು ಅಪ್ಪರ್ ಸರ್ಕ್ಯುಟ್ ಮತ್ತು ಲೋಯರ್ ಸರ್ಕ್ಯುಟ್ ನಿಗದಿ ಆಗಿದೆ. ಅಂದರೆ, ಒಂದು ದಿನದಲ್ಲಿ ಅದು ಏರುವ ಮತ್ತು ಇಳಿಯುವ ಗರಿಷ್ಠ ಮಿತಿ ಆಗಿದೆ. ಎಲ್ಸಿಡ್ ಇನ್ವೆಸ್ಟ್​ಮೆಂಟ್ಸ್ ಸತತ ಆರು ಮಾರುಕಟ್ಟೆ ದಿನಗಳಲ್ಲಿ ಸತತವಾಗಿ ಅಪ್ಪರ್ ಸರ್ಕ್ಯುಟ್ ಮುಟ್ಟಿದೆ.

ಇದನ್ನೂ ಓದಿ: ಒಂದೇ ದಿನದಲ್ಲಿ 3.53 ರೂನಿಂದ 2,36,250 ರೂ; ಎಲ್ಸಿಡ್ ಷೇರುಬೆಲೆ ಧಮಾಕ ಕಾಣಲು ಏನು ಕಾರಣ?

ಎಲ್ಸಿಡ್ ಇನ್ವೆಸ್ಟ್​ಮೆಂಟ್​ನ ಬುಕ್ ವ್ಯಾಲ್ಯೂ ಬರೋಬ್ಬರಿ 4 ಲಕ್ಷ ರೂ ಇದೆ. ಆದರೆ ಷೇರು ಮೌಲ್ಯ 3 ರೂ ಆಸುಪಾಸಿನಲ್ಲಿತ್ತು. ಕಳೆದ ಕೆಲ ವರ್ಷಗಳಿಂದ ಅದರ ಬೆಲೆ 14 ರೂ ಒಳಗೆಯೇ ಹೊಯ್ದಾಡುತ್ತಿತ್ತು. ಈ ಕಾರಣಕ್ಕೆ ಸೆಬಿಯ ಹೊಸ ಕಾಲ್ ಆಕ್ಷನ್ ಸೌಲಭ್ಯ ಬಳಸಿ ಎಲ್ಸಿಡ್ ಇನ್ವೆಸ್ಟ್​ಮೆಂಟ್ಸ್ ಸಂಸ್ಥೆ ತನ್ನ ಷೇರಿನ ಪ್ರೈಸ್ ಡಿಸ್ಕವರಿ ಕಾರ್ಯ ಕೈಗೊಂಡಿತು. ಅದರಂತೆ, ಅಕ್ಟೋಬರ್ 29ರಂದು ಷೇರು 2,36,250 ರೂ ಬೆಲೆ ಪಡೆಯಿತು. ಈಗ ಅದರ ಬೆಲೆ ಮೂರು ಲಕ್ಷ ರೂ ದಾಟಿದೆ. ಆದರೂ ಕೂಡ ಇದು ಅದರ ಬುಕ್ ವ್ಯಾಲ್ಯೂಗಿಂತಲೂ ಇದು ಕಡಿಮೆ ಬೆಲೆಯಲ್ಲೇ ಇದೆ.

ಎಲ್ಸಿಡ್ ಇನ್ವೆಸ್ಟ್​ಮೆಂಟ್ಸ್ ಷೇರುಬೆಲೆ ಯಾಕಿಷ್ಟು ಹೆಚ್ಚುತ್ತಿದೆ?

ಎಲ್ಸಿಡ್ ಇನ್ವೆಸ್ಟ್​ಮೆಂಟ್ ಒಂದು ಎನ್​ಬಿಎಫ್​ಸಿ ಸಂಸ್ಥೆಯಾಗಿದೆ. ಇದು ಹೂಡಿಕೆ ಸಂಸ್ಥೆ. ಬೇರೆ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿ ಪಾಲುದಾರಿಕೆ ಪಡೆದಿರುತ್ತದೆ. ಏಷ್ಯನ್ ಪೇಂಟ್ಸ್​ನಲ್ಲಿ ಇದು ಶೇ 4ಕ್ಕಿಂತಲೂ ಹೆಚ್ಚು ಪಾಲು ಹೊಂದಿದೆ.

ಈ ರೀತಿಯ ಹೋಲ್ಡಿಂಗ್ ಕಂಪನಿಗಳು ನಿತ್ಯದ ಬಿಸಿನೆಸ್​ಗಳಲ್ಲಿ ತೊಡಗಿರುವುದಿಲ್ಲ. ಅಂತೆಯೇ, ಬುಕ್ ವ್ಯಾಲ್ಯೂಗಿಂತಲೂ ಬಹಳ ಕಡಿಮೆ ಮಟ್ಟದಲ್ಲಿ ಇವುಗಳ ಷೇರುಮೌಲ್ಯ ಇರುತ್ತದೆ.

ಇದನ್ನೂ ಓದಿ: ಬೇಡದ ಡೀಮ್ಯಾಟ್ ಖಾತೆ ಮುಕ್ತಾಯಗೊಳಿಸುವುದು ರಗಳೆಯಲ್ಲ, ಸುಲಭ; ಇಲ್ಲಿದೆ ಮಾಹಿತಿ

ಎಲ್ಸಿಡ್ ಇನ್ವೆಸ್ಟ್​ಮೆಂಟ್ಸ್ ಇವತ್ತು ಗುರುವಾರ ಎನ್​ಎಸ್​ಇ ಮತ್ತು ಬಿಎಸ್​ಇ ಈ ಎರಡೂ ಎಕ್ಸ್​ಚೇಂಜ್ ಪ್ಲಾಟ್​ಫಾರ್ಮ್​ಗಳಲ್ಲಿ ವಹಿವಾಟು ಆಗಿದ್ದು 1,300 ಷೇರು ಮಾತ್ರವೇ. ಇಷ್ಟು ಕಡಿಮೆ ಟ್ರೇಡ್ ವಾಲ್ಯೂಮ್ ಇದ್ದಾಗ ಅದು ಲಿಕ್ವಿಡಿಟಿ ಸಮಸ್ಯೆ ಎದುರಿಸುತ್ತದೆ. ಪರಿಣಾಮವಾಗಿ ಷೇರುಬೆಲೆ ಅಸ್ವಾಭಾವಿಕವಾಗಿ ಏರುಪೇರಾಗುತ್ತದೆ. ಷೇರುಬೆಲೆಯ ಗತಿಗೂ ಕಂಪನಿಯ ಮೂಲಭೂತ ಅಂಶಗಳಿಗೂ ಸಂಬಂಧ ಇರುವುದಿಲ್ಲ. ಎಲ್ಸಿಡ್ ಇನ್ವೆಸ್ಟ್​ಮೆಂಟ್ಸ್​ನ ವಿಚಾರದಲ್ಲೂ ಇದೇ ಆಗುತ್ತಿರುವುದು ಎನ್ನುತ್ತಾರೆ ತಜ್ಞರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ