AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Flipkart Shop From Home Days Sale: 80 ಸಾವಿರ ರೂ. ಬೆಲೆಯ ಎಲ್​ಜಿ ಸ್ಮಾರ್ಟ್​ಫೋನ್​ ಕೇವಲ 29,999ರೂ.ಗೆ! ಇನ್ನೂ ಹಲವು ಬಂಪರ್ ಆಫರ್ ಲಭ್ಯ

ಫ್ಲಿಪ್​ಕಾರ್ಟ್​ ಶಾಪ್ ಫ್ರಂ ಹೋಮ್​ ಡೇಸ್ ಸೇಲ್​ ಅಡಿಯಲ್ಲಿ ಎಲ್​ಜಿ ಸ್ಮಾರ್ಟ್​ಫೋನ್ ಮೇಲೆ ವಿಶೇಷ ರಿಯಾಯಿತಿ ಸಿಗಲಿದ್ದು, ಎಲ್​ ಜಿ ವಿಂಗ್, ಎಲ್​ಜಿ ಕ್ಯೂ60, ಎಲ್​ಜಿ ಡಬ್ಲ್ಯೂ41 ಪ್ರೋ, ಎಲ್​ಜಿ ಡಬ್ಲ್ಯೂ41 ಪ್ಲಸ್ ಮೇಲೆ ಭಾರೀ ದರ ಕಡಿತ ಇದೆ. ಈ ವಿಶೇಷ ಮಾರಾಟ ಮೇಳದಲ್ಲಿ ಯಾವ ಯಾವ ಫೋನ್​ಗಳ ಮೇಲೆ ಎಷ್ಟೆಷ್ಟು ಆಫರ್ ಇದೆ ಎಂಬ ವಿವರ ಇಲ್ಲಿದೆ.

Flipkart Shop From Home Days Sale: 80 ಸಾವಿರ ರೂ. ಬೆಲೆಯ ಎಲ್​ಜಿ ಸ್ಮಾರ್ಟ್​ಫೋನ್​ ಕೇವಲ 29,999ರೂ.ಗೆ! ಇನ್ನೂ ಹಲವು ಬಂಪರ್ ಆಫರ್ ಲಭ್ಯ
ಫ್ಲಿಪ್​ಕಾರ್ಟ್​ ವಿಶೇಷ ಆಫರ್
Skanda
|

Updated on:May 27, 2021 | 12:00 PM

Share

ಕೊರೊನಾ ಎರಡನೇ ಅಲೆಯ ಕಾರಣ ವ್ಯಾವಹಾರಿಕ ಜಗತ್ತು ಮತ್ತೆ ಸ್ತಬ್ಧವಾಗಿದೆ. ನಿತ್ಯದ ಅವಶ್ಯಕ ಸಾಮಗ್ರಿಗಳನ್ನು ಹೊರತುಪಡಿಸಿ ಬೇರೇನೇ ಕೊಳ್ಳುವುದಿದ್ದರೂ ಆನ್​ಲೈನ್ ಒಂದೇ ಗತಿ ಎಂಬಂತಾಗಿದೆ. ಸದ್ಯ ಹೊಸ ಮೊಬೈಲ್, ಟಿವಿ ಏನೇ ಕೊಳ್ಳುವುದಿದ್ದರೂ ಆನ್​ಲೈನ್​ ಮಾರುಕಟ್ಟೆಗಳಲ್ಲಿ ಕಣ್ಣಾಯಿಸುವುದು ಜನರಿಗೆ ರೂಢಿಯೂ ಆಗಿದೆ. ಇಂತಹ ಸಂಧರ್ಭದಲ್ಲಿ ಫ್ಲಿಪ್​ಕಾರ್ಟ್​ ತನ್ನ ಗ್ರಾಹಕರಿಗಾಗಿ ಎಲ್​ಜಿ ಮೊಬೈಲ್ ಉತ್ಪನ್ನಗಳ ಮೇಲೆ ವಿಶೇಷ ರಿಯಾಯಿತಿ ಘೋಷಿಸಿದೆ. ಎಲ್​ಜಿ ಸಂಸ್ಥೆ ಹೊಸದಾಗಿ ಮೊಬೈಲ್​ ತಯಾರಿಸುವುದನ್ನು ನಿಲ್ಲಿಸಿದ್ದರೂ ಈಗಾಗಲೇ ಮಾರುಕಟ್ಟೆಯಲ್ಲಿರುವ ಮೊಬೈಲ್​ಗಳ ಮಾರಾಟ ನಡೆಯುತ್ತಿದೆ. ಈಗ ಫ್ಲಿಪ್​ಕಾರ್ಟ್​ನಲ್ಲಿ ರಿಯಾಯಿತಿ ಇರುವುದರಿಂದ ಹೊಸ ಸ್ಮಾರ್ಟ್​ಫೋನ್​ ಕೊಳ್ಳಲು ಯೋಚಿಸುತ್ತಿರುವವರು ಇತ್ತ ಗಮನ ಹರಿಸಬಹುದಾಗಿದೆ.

ಫ್ಲಿಪ್​ಕಾರ್ಟ್​ ಶಾಪ್ ಫ್ರಂ ಹೋಮ್​ ಡೇಸ್ ಸೇಲ್​ ಅಡಿಯಲ್ಲಿ ಎಲ್​ಜಿ ಸ್ಮಾರ್ಟ್​ಫೋನ್ ಮೇಲೆ ವಿಶೇಷ ರಿಯಾಯಿತಿ ಸಿಗಲಿದ್ದು, ಎಲ್​ ಜಿ ವಿಂಗ್, ಎಲ್​ಜಿ ಕ್ಯೂ60, ಎಲ್​ಜಿ ಡಬ್ಲ್ಯೂ41 ಪ್ರೋ, ಎಲ್​ಜಿ ಡಬ್ಲ್ಯೂ41 ಪ್ಲಸ್ ಮೇಲೆ ಭಾರೀ ದರ ಕಡಿತ ಇದೆ. ಈ ವಿಶೇಷ ಮಾರಾಟ ಮೇಳದಲ್ಲಿ ಯಾವ ಯಾವ ಫೋನ್​ಗಳ ಮೇಲೆ ಎಷ್ಟೆಷ್ಟು ಆಫರ್ ಇದೆ ಎಂಬ ವಿವರ ಇಲ್ಲಿದೆ.

ಎಲ್​ಜಿ ವಿಂಗ್ ಮೂಲ ದರ: ₹80,000 ರಿಯಾಯಿತಿ: ಶೇ.62 ವಿಶೇಷ ದರ: ₹29,999

LG WING

ಎಲ್​ಜಿ ವಿಂಗ್

ಎಲ್​ಜಿ ವಿಂಗ್​ ಫೋನ್​ ಮೂಲ ಬೆಲೆ 80 ಸಾವಿರ ರೂಪಾಯಿ ಆಗಿದ್ದು, ಆಫರ್​ ಮೂಲಕ ಸುಮಾರು 30 ಸಾವಿರಕ್ಕೆ ಕೊಳ್ಳಬಹುದಾಗಿದ್ದು ಅತ್ಯುತ್ತಮ ಫೀಚರ್ ಹೊಂದಿರುವ ಈ ಫೋನನ್ನು ನಿಮ್ಮ ಜೇಬಿಗಿಳಿಸಿಕೊಳ್ಳಲು ಇದೇ ಸೂಕ್ತ ಸಮಯ.

ಎಲ್​ಜಿ ಡಬ್ಲ್ಯೂ41 ಪ್ಲಸ್ ಮೂಲ ದರ: ₹18,000 ರಿಯಾಯಿತಿ: ಶೇ.47 ವಿಶೇಷ ದರ: ₹9,499

LG W41 PLUS

ಎಲ್​ಜಿ ಡಬ್ಲ್ಯೂ41 ಪ್ಲಸ್

ಹತ್ತು ಸಾವಿರಕ್ಕಿಂತ ಕಡಿಮೆ ಬೆಲೆಯ ಫೋನ್ ಕೊಳ್ಳುವ ಯೋಚನೆಯಿದ್ದರೆ 18 ಸಾವಿರ ರೂಪಾಯಿಯ ಫೋನ್ 10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗಲಿದೆ.

ಎಲ್​ಜಿ ಡಬ್ಲ್ಯೂ41 ಪ್ರೋ ಮೂಲ ದರ: ₹20,000 ರಿಯಾಯಿತಿ: ಶೇ.47 ವಿಶೇಷ ದರ: ₹10,499

LG W41 PRO

ಎಲ್​ಜಿ ಡಬ್ಲ್ಯೂ41 ಪ್ರೋ

ಎಲ್​ಜಿ ಡಬ್ಲ್ಯೂ31 ಮೂಲ ದರ: ₹13,000 ರಿಯಾಯಿತಿ: ಶೇ.38 ವಿಶೇಷ ದರ: ₹7,999

LG W31

ಎಲ್​ಜಿ ಡಬ್ಲ್ಯೂ31

ಎಲ್​ಜಿ ಡಬ್ಲ್ಯೂ31 ಪ್ಲಸ್ ಮೂಲ ದರ: ₹15,000 ರಿಯಾಯಿತಿ: ಶೇ.44 ವಿಶೇಷ ದರ: ₹8,299

LG W31 PLUS

ಎಲ್​ಜಿ ಡಬ್ಲ್ಯೂ31 ಪ್ಲಸ್

ಎಲ್​ಜಿ ಕೆ42 ಮೂಲ ದರ: ₹14,000 ರಿಯಾಯಿತಿ: ಶೇ.42 ವಿಶೇಷ ದರ: ₹7,999

LG K42

ಎಲ್​ಜಿ ಕೆ42

ಎಲ್​ಜಿ ಡಬ್ಲ್ಯೂ11 ಮೂಲ ದರ: ₹9,790 ರಿಯಾಯಿತಿ: ಶೇ.21 ವಿಶೇಷ ದರ: ₹7,690

LG W11

ಎಲ್​ಜಿ ಡಬ್ಲ್ಯೂ11

ಇದನ್ನೂ ಓದಿ: Best Data Plan: ಏರ್​ಟೆಲ್ Vs ಜಿಯೋ Vs ಬಿಎಸ್​ಎನ್​ಎಲ್ Vs ವೊಡಾಫೋನ್ ಐಡಿಯಾ ರೂ. 399 ಪ್ರೀಪೇಯ್ಡ್ ಪ್ಲಾನ್​ನಲ್ಲಿ ಏನೇನು ಆಫರ್?​ 

IRCTCಯಿಂದ ಕೋವಿಡ್ 19 ಸನ್ನಿವೇಶಕ್ಕೆ ವರ್ಕ್ ಫ್ರಮ್ ಹೋಟೆಲ್ ಆಫರ್; ಇದೇನು, ಎತ್ತ, ದರ ಎಷ್ಟು ಗೊತ್ತಾ?

Published On - 11:54 am, Thu, 27 May 21