FPI Investments In To Indian Equity Market | ಒಂದು ವರ್ಷದಲ್ಲಿ ಷೇರು ಮಾರ್ಕೆಟ್​ನಲ್ಲಿ 2.74 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಿದ ಎಫ್​ಪಿಐ

2020- 21ರ ಹಣಕಾಸು ವರ್ಷದಲ್ಲಿ, ಅಂದರೆ 2020ರ ಏಪ್ರಿಲ್​ನಿಂದ 2021ರ ಮಾರ್ಚ್ ಮಧ್ಯೆ ಫಾರಿನ್ ಪೋರ್ಟ್​ಫೋಲಿಯೋ ಇನ್ವೆಸ್ಟರ್ಸ್ (ಎಫ್​ಪಿಐ) 2.74 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ.

FPI Investments In To Indian Equity Market | ಒಂದು ವರ್ಷದಲ್ಲಿ ಷೇರು ಮಾರ್ಕೆಟ್​ನಲ್ಲಿ 2.74 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಿದ ಎಫ್​ಪಿಐ
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on: Apr 06, 2021 | 2:56 PM

ಕಳೆದ ಹಣಕಾಸು ವರ್ಷದಲ್ಲಿ (2020ರ ಏಪ್ರಿಲ್​ನಿಂದ 2021ರ ಮಾರ್ಚ್ ತನಕ) ಫಾರಿನ್ ಪೋರ್ಟ್​​ಫೋಲಿಯೋ ಇನ್ವೆಸ್ಟ್​ಮೆಂಟ್ ನಿವ್ವಳವಾಗಿ ಭಾರತದ ಈಕ್ವಿಟಿ ಮಾರುಕಟ್ಟೆಗೆ ಹರಿದುಬಂದಿರುವುದು 2,74,034 ಕೋಟಿ ರೂಪಾಯಿ. ಅಂದರೆ 2.74 ಲಕ್ಷ ಕೋಟಿ ರೂಪಾಯಿ. ಈ ಮೂಲಕ ಭಾರತದ ಆರ್ಥಿಕತೆ ಹಾಗೂ ಮೂಲಭೂತ ಅಂಶಗಳ ಮೇಲೆ ವಿದೇಶೀ ಹೂಡಿಕೆದಾರರಿಗೆ ಇರುವ ಗಟ್ಟಿಯಾದ ವಿಶ್ವಾಸವನ್ನು ಈ ಅಂಕಿ- ಅಂಶಗಳು ತೋರಿಸುತ್ತವೆ. ಹಣಕಾಸು ವರ್ಷ 2020- 21ರಲ್ಲಿ ಯಾವ ತಿಂಗಳಲ್ಲಿ, ಎಷ್ಟು ಮೊತ್ತವು ನಿವ್ವಳವಾಗಿ ಹರಿದುಬಂದಿದೆ ಅಥವಾ ವಾಪಸ್ ತೆಗೆದುಕೊಳ್ಳಲಾಗಿದೆ ಎಂಬ ವಿವರ ಹೀಗಿದೆ.

ಏಪ್ರಿಲ್ (-) 6,884 ಕೋಟಿ ರೂ. ಮೇ 14,569 ಕೋಟಿ ರೂ. ಜೂನ್ 21,832 ಕೋಟಿ ರೂ. ಜುಲೈ 7,563 ಕೋಟಿ ರೂ. ಆಗಸ್ಟ್ 47,080 ಕೋಟಿ ರೂ. ಸೆಪ್ಟೆಂಬರ್ (-) 7,783 ಕೋಟಿ ರೂ. ಅಕ್ಟೋಬರ್ 19,541 ಕೋಟಿ ರೂ. ನವೆಂಬರ್ 60,358 ಕೋಟಿ ರೂ. ಡಿಸೆಂಬರ್ 62,016 ಕೋಟಿ ರೂ. ಜನವರಿ 19,473 ಕೋಟಿ ರೂ. ಫೆಬ್ರವರಿ 25,787 ಕೋಟಿ ರೂ. ಮಾರ್ಚ್ 10,952 ಕೋಟಿ ರೂ. (ಏಪ್ರಿಲ್ 1, 2021ಕ್ಕೆ ಅನ್ವಯ ಆಗುವಂತೆ: ಮಾಹಿತಿ ಮೂಲ ಎನ್​ಎಸ್​ಡಿಎಲ್) (- ಅಂದರೆ ನಿವ್ವಳವಾಗಿ ಹಣ ಹಿಂತೆಗೆದುಕೊಳ್ಳಲಾಗಿದೆ)

ಕಳೆದ ಹಣಕಾಸು ವರ್ಷದಲ್ಲಿ ಮಾರ್ಚ್ ಅಂತ್ಯದ ಹೊತ್ತಿಗೆ ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಭಾರತದ ಷೇರು ಮಾರುಕಟ್ಟೆ ಭಾರೀ ಪ್ರಮಾಣದಲ್ಲಿ ನೆಲ ಕಚ್ಚಿತ್ತು. ಆದರೆ ನಂತರದಲ್ಲಿ ನವೆಂಬರ್ ಹಾಗೂ ಡಿಸೆಂಬರ್​​ನಲ್ಲಿ 60 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ವಿದೇಶೀ ಹೂಡಿಕೆದಾರರು ಭಾರತದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದಾರೆ. ಅಂದಹಾಗೆ ಇದು ನಿವ್ವಳ ಮೊತ್ತ. ಹಾಗೆಂದರೆ, ಹೂಡಿಕೆ ಮಾಡಿದ ಒಟ್ಟಾರೆ ಮೊತ್ತದಿಂದ ವಾಪಸ್ ಪಡೆದುಕೊಂಡ ಮೊತ್ತವನ್ನು ಕಳೆದ ನಂತರ ಉಳಿದಿರುವುದು.

ಅಂದಹಾಗೆ, ಇದೇ ಅವಧಿಯಲ್ಲಿ ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಹೊಸ ಎತ್ತರವನ್ನು ತಲುಪಿ, ದಾಖಲೆ ಬರೆದಿವೆ. ಬಿಎಸ್​ಇ ಸೆನ್ಸೆಕ್ಸ್ ಸೂಚ್ಯಂಕವು 52 ಸಾವಿರ ಪಾಯಿಂಟ್​​ಗಳ ಮೇಲೆ ಹಾಗೂ ಎನ್​ಎಸ್​ಇ ನಿಫ್ಟಿ 15,750 ಪಾಯಿಂಟ್​ಗೂ ಮೇಲೆ ತಲುಪಿ ಐತಿಹಾಸಿಕ ದಾಖಲೆ ಬರೆದು, ಹೂಡಿಕೆದಾರರ ಸಂಪತ್ತು ಹೆಚ್ಚಳಕ್ಕೆ ಕಾರಣವಾಗಿದೆ.

ಕೇಂದ್ರ ಸರ್ಕಾರದಿಂದ ಘೋಷಣೆ ಮಾಡಿದ ಕೊರೊನಾ ಪ್ಯಾಕೇಜ್​ಗಳಿಂದ ಆರ್ಥಿಕ ಚೇತರಿಕೆ ಶೀಘ್ರವಾಗಿ ಆಗಲು ಸಹಾಯ ಆಗಿದೆ. ಜತೆಗೆ ಇತ್ತೀಚಿನ ವರ್ಷಗಳಲ್ಲಿ ಎಫ್​ಪಿಐ ಹೂಡಿಕೆಗೆ ಪೂರಕವಾಗುವಂತೆ ದೇಶದಲ್ಲಿ ವಾತಾವರಣ ರೂಪಿಸಲಾಗುತ್ತಿದೆ. ಹಲವು ನೀತಿಗಳನ್ನು ರೂಪಿಸಲಾಗುತ್ತಿದೆ. ಪ್ಯಾನ್ ಕಾರ್ಡ್ ವಿತರಣೆ, ಬ್ಯಾಂಕ್ ಖಾತೆ ಮತ್ತು ಡಿಮ್ಯಾಟ್ ಖಾತೆ ತೆರೆಯುವುದು ಸೇರಿದಂತೆ ಇತರ ಪ್ರಕ್ರಿಯೆಗಳು ಸರಳಗೊಳಿಸಿರುವುದರಿಂದ ವಿದೇಶೀ ಬಂಡವಾಳ ಹರಿದುಬರುವುದಕ್ಕೆ ಹೆಚ್ಚಿನ ಸಹಾಯ ಆಗಿದೆ.

2021- 22ರ ಹಣಕಾಸು ವರ್ಷಕ್ಕೆ ಭಾರತದ ಬೆಳವಣಿಗೆ ದರವು ಶೇಕಡಾ 10ರಷ್ಟು ಆಗುವ ಬಗ್ಗೆ ವಿಶ್ವಬ್ಯಾಂಕ್, ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಮತ್ತು ಇತರ ಜಾಗತಿಕ ಸಂಶೋಧನಾ ಸಂಸ್ಥೆಗಳು ಅಮದಾಜು ಮಾಡಿವೆ. ಭವಿಷ್ಯದಲ್ಲಿ ಹೂಡಿಕೆಗೆ ಆಕರ್ಷಕ ತಾಣವಾಗಿ ಭಾರತವು ಮುಂದುವರಿಯಲಿದೆ ಎಂದು ಅಭಿಪ್ರಾಯ ಪಡಲಾಗಿದೆ.

ಇದನ್ನೂ ಓದಿ: Penny Stocks: ಕೊರೊನಾ ಆತಂಕವಿದ್ದರೂ ಬಂಗಾರದ ಫಸಲು ನೀಡಿದ ಚಿಲ್ಲರೆ ಬೆಲೆಯ ಷೇರುಗಳು ಇವು..

(According to NSDL data, Foreign Portfolio Investors (FPI) invested Rs 2.74 lakh crore in to Indian equity market between April 2020 to March 2021.)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ