Gold Rates 11 October: ಚಿನ್ನದ ಬೆಲೆ 175 ರೂ, ಬೆಳ್ಳಿ ಬೆಲೆ 5 ರೂ ಏರಿಕೆ
Gold Price 11 October 2026: ಈ ವಾರಾಂತ್ಯದಲ್ಲಿ ಚಿನ್ನ, ಬೆಳ್ಳಿ ಬೆಲೆಗಳು ಹೆಚ್ಚಳಗೊಂಡಿವೆ. ಚಿನ್ನದ ಬೆಲೆ 175 ರೂ, ಬೆಳ್ಳಿ ಬೆಲೆ 5 ರೂ ಹೆಚ್ಚಿದೆ. 22 ಕ್ಯಾರಟ್ ಚಿನ್ನದ ಬೆಲೆ 13,710 ರೂನಿಂದ 13,880 ರೂಗೆ ಏರಿದೆ. 24 ಕ್ಯಾರಟ್ ಚಿನ್ನದ ಬೆಲೆ 15,142 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್ಗೆ 240 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 245 ರೂ ಇದೆ.

ನವದೆಹಲಿ, ಅಕ್ಟೋಬರ್ 11: ಚಿನ್ನದ ಬೆಲೆ ವಾರಾಂತ್ಯದಲ್ಲಿ ಒಳ್ಳೆಯ ಏರಿಕೆ ಪಡೆದಿದೆ. ಒಂದು ಗ್ರಾಮ್ ಚಿನ್ನದ ಬೆಲೆಯಲ್ಲಿ 175 ರೂ ಹೆಚ್ಚಳವಾಗಿದೆ. ಈ ವಾರದ ಏಳು ದಿನದಲ್ಲಿ ಇದರ ಬೆಲೆಯಲ್ಲಿ 205 ರೂಗಳಷ್ಟು ಹೆಚ್ಚಳವಾಗಿದೆ. ವಾರಾಂತ್ಯದಲ್ಲಿ ವಿದೇಶಗಳಲ್ಲೂ ಹೆಚ್ಚಿನ ಕಡೆ ಬೆಲೆ ಭರ್ಜರಿಯಾಗಿ ಹೆಚ್ಚಿದೆ. ಬೆಳ್ಳಿ ಬೆಲೆಯೂ ಕೂಡ ಹೆಚ್ಚಳವಾಗಿದೆ. ಅಂತರರಾಷ್ಟ್ರೀಯ ಸ್ಪಾಟ್ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲೂ ಏರಿಕೆಯಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,38,800 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,51,420 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 24,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,38,800 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 24,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 24,500 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಅಕ್ಟೋಬರ್ 11ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,142
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,880
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,357
- ಬೆಳ್ಳಿ ಬೆಲೆ 1 ಗ್ರಾಂಗೆ: 240 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 13,880 ರೂ
- ಚೆನ್ನೈ: 13,880 ರೂ
- ಮುಂಬೈ: 13,880 ರೂ
- ದೆಹಲಿ: 13,895
- ಕೋಲ್ಕತಾ: 13,880 ರೂ
- ಕೇರಳ: 13,880 ರೂ
- ಅಹ್ಮದಾಬಾದ್: 13,885 ರೂ
- ಜೈಪುರ್: 13,895
- ಲಕ್ನೋ: 13,895
- ಭುವನೇಶ್ವರ್: 13,880 ರೂ
ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ದರ
- ಸ್ಪಾಟ್ ಗೋಲ್ಡ್ 1 ಗ್ರಾಮ್ಗೆ 134.85 ಡಾಲರ್ (13,050 ರುಪಾಯಿ)
- ಸ್ಪಾಟ್ ಸಿಲ್ವರ್ 1 ಗ್ರಾಮ್ಗೆ 1.955 ಡಾಲರ್ (189 ರುಪಾಯಿ)
ಇದನ್ನೂ ಓದಿ: ಜಾಗತಿಕ ಆರ್ಥಿಕ ಪ್ರಗತಿಯಲ್ಲಿ ಕುಂಠಿತ ಸಾಧ್ಯತೆ; ಶೇ. 2.6 ಬೆಳವಣಿಗೆ ಎಂದು ವಿಶ್ವಸಂಸ್ಥೆ ಏಜೆನ್ಸಿಯ ಅಂದಾಜು
ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಭಾರತ: 15,142 ರುಪಾಯಿ
- ಮಲೇಷ್ಯಾ: 562 ರಿಂಗಿಟ್ (13,248 ರುಪಾಯಿ)
- ದುಬೈ: 505 ಡಿರಾಮ್ (13,241 ರುಪಾಯಿ)
- ಅಮೆರಿಕ: 138 ಡಾಲರ್ (13,290 ರುಪಾಯಿ)
- ಸಿಂಗಾಪುರ: 183.20 ಸಿಂಗಾಪುರ್ ಡಾಲರ್ (13,775 ರುಪಾಯಿ)
- ಕತಾರ್: 504.50 ಕತಾರಿ ರಿಯಾಲ್ (13,328 ರೂ)
- ಸೌದಿ ಅರೇಬಿಯಾ: 520 ಸೌದಿ ರಿಯಾಲ್ (13,333 ರುಪಾಯಿ)
- ಓಮನ್: 53.50 ಒಮಾನಿ ರಿಯಾಲ್ (13,380 ರುಪಾಯಿ)
- ಕುವೇತ್: 42.28 ಕುವೇತಿ ದಿನಾರ್ (13,213 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 240 ರೂ
- ಚೆನ್ನೈ: 245 ರೂ
- ಮುಂಬೈ: 240 ರೂ
- ದೆಹಲಿ: 240 ರೂ
- ಕೋಲ್ಕತಾ: 240 ರೂ
- ಕೇರಳ: 245 ರೂ
- ಅಹ್ಮದಾಬಾದ್: 240 ರೂ
- ಜೈಪುರ್: 240 ರೂ
- ಲಕ್ನೋ: 240 ರೂ
- ಭುವನೇಶ್ವರ್: 245 ರೂ
- ಪುಣೆ: 240
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




