AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Rates 3 September: ಚಿನ್ನ, ಬೆಳ್ಳಿ ಬೆಲೆಗಳು ಮತ್ತೆ ಜಿಗಿತ; ಇಲ್ಲಿದೆ ದರಪಟ್ಟಿ

Gold Price 3 September 2026: ಇಂದು ಗುರುವಾರ ಚಿನ್ನದ ಬೆಲೆ 305 ರೂ, ಬೆಳ್ಳಿ ಬೆಲೆ 5 ರೂ ಜಿಗಿದಿದೆ. 22 ಕ್ಯಾರಟ್ ಚಿನ್ನದ ಬೆಲೆ 13,935 ರೂನಿಂದ 14,240 ರೂಗೆ ಏರಿದೆ. 24 ಕ್ಯಾರಟ್ ಚಿನ್ನದ ಬೆಲೆ 15,535 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್​ಗೆ 250 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 255 ರೂ ಇದೆ.

Gold Rates 3 September: ಚಿನ್ನ, ಬೆಳ್ಳಿ ಬೆಲೆಗಳು ಮತ್ತೆ ಜಿಗಿತ; ಇಲ್ಲಿದೆ ದರಪಟ್ಟಿ
ಚಿನ್ನImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Sep 03, 2026 | 11:15 AM

Share

ಮುಖ್ಯಾಂಶಗಳು

  • ಇಂದು ಗುರುವಾರ ಚಿನ್ನದ ಬೆಲೆ 305 ರೂ, ಬೆಳ್ಳಿ ಬೆಲೆ 5 ರೂ ಜಿಗಿದಿದೆ.
  • 22 ಕ್ಯಾರಟ್ ಚಿನ್ನದ ಬೆಲೆ 13,935 ರೂನಿಂದ 14,240 ರೂಗೆ ಏರಿದೆ.
  • ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್​ಗೆ 250 ರೂ ಇದೆ.

ನವದೆಹಲಿ, ಸೆಪ್ಟೆಂಬರ್ 3: ನಿನ್ನೆ ಗ್ರಾಮ್​ಗೆ 450 ರೂಗಳಷ್ಟು ಕುಸಿದಿದ್ದ ಬಂಗಾರದ ಬೆಲೆ ಇವತ್ತು ಗುರುವಾರ 305 ರೂ ಏರಿದೆ. ಆಭರಣ ಚಿನ್ನದ ಬೆಲೆ ಮತ್ತೆ 14,000 ರೂ ಮಟ್ಟದಿಂದ ಮೇಲೇರಿದೆ. ಬೆಳ್ಳಿ ಬೆಲೆಯೂ 5 ರೂ ಹೆಚ್ಚಿದೆ. ಸ್ಪಾಟ್ ಗೋಲ್ಡ್ ಮತ್ತು ಬೆಳ್ಳಿ ಬೆಲೆಗಳೂ ಏರಿವೆ. ಹೆಚ್ಚಿನ ದೇಶಗಳಲ್ಲೂ ಹಳದಿ ಲೋಹದ ಬೆಲೆಯಲ್ಲಿ ಹೆಚ್ಚಳವಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,42,400 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,55,350 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,42,400 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 25,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 25,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಸೆಪ್ಟೆಂಬರ್ 3ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,535
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,240
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,651
  • ಬೆಳ್ಳಿ ಬೆಲೆ 1 ಗ್ರಾಂಗೆ: 250 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,240 ರೂ
  • ಚೆನ್ನೈ: 14,240 ರೂ
  • ಮುಂಬೈ: 14,240 ರೂ
  • ದೆಹಲಿ: 14,255
  • ಕೋಲ್ಕತಾ: 14,240 ರೂ
  • ಕೇರಳ: 14,240 ರೂ
  • ಅಹ್ಮದಾಬಾದ್: 14,245 ರೂ
  • ಜೈಪುರ್: 14,255
  • ಲಕ್ನೋ: 14,255
  • ಭುವನೇಶ್ವರ್: 14,240 ರೂ

ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ದರ

  • ಸ್ಪಾಟ್ ಗೋಲ್ಡ್ 1 ಗ್ರಾಮ್​ಗೆ 142.64 ಡಾಲರ್ (13,466 ರುಪಾಯಿ)
  • ಸ್ಪಾಟ್ ಸಿಲ್ವರ್ 1 ಗ್ರಾಮ್​ಗೆ 2.128 ಡಾಲರ್ (200 ರುಪಾಯಿ)

ಇದನ್ನೂ ಓದಿ: ಎಸ್​ಬಿಐ ಗ್ರಾಹಕರ ಗಮನಕ್ಕೆ; ಉಚಿತ ಎಟಿಎಂ ಟ್ರಾನ್ಸಾಕ್ಷನ್ ಮಿತಿ ಅರ್ಧದಷ್ಟು ಇಳಿಕೆ; ಅಕ್ಟೋಬರ್​ನಿಂದ ಹೊಸ ನಿಯಮ ಜಾರಿ

ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಭಾರತ: 15,535 ರುಪಾಯಿ
  • ಮಲೇಷ್ಯಾ: 586 ರಿಂಗಿಟ್ (13,684 ರುಪಾಯಿ)
  • ದುಬೈ: 528.25 ಡಿರಾಮ್ (13,579 ರುಪಾಯಿ)
  • ಅಮೆರಿಕ: 144 ಡಾಲರ್ (13,595 ರುಪಾಯಿ)
  • ಸಿಂಗಾಪುರ: 191.50 ಸಿಂಗಾಪುರ್ ಡಾಲರ್ (14,237 ರುಪಾಯಿ)
  • ಕತಾರ್: 528 ಕತಾರಿ ರಿಯಾಲ್ (13,676 ರೂ)
  • ಸೌದಿ ಅರೇಬಿಯಾ: 543 ಸೌದಿ ರಿಯಾಲ್ (13,653 ರುಪಾಯಿ)
  • ಓಮನ್: 56.20 ಒಮಾನಿ ರಿಯಾಲ್ (13,782 ರುಪಾಯಿ)
  • ಕುವೇತ್: 43.86 ಕುವೇತಿ ದಿನಾರ್ (13,684 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 250 ರೂ
  • ಚೆನ್ನೈ: 255 ರೂ
  • ಮುಂಬೈ: 250 ರೂ
  • ದೆಹಲಿ: 250 ರೂ
  • ಕೋಲ್ಕತಾ: 250 ರೂ
  • ಕೇರಳ: 255 ರೂ
  • ಅಹ್ಮದಾಬಾದ್: 250 ರೂ
  • ಜೈಪುರ್: 250 ರೂ
  • ಲಕ್ನೋ: 250 ರೂ
  • ಭುವನೇಶ್ವರ್: 255 ರೂ
  • ಪುಣೆ: 250

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:41 am, Thu, 3 September 26

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More