AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aadhaar Address Update: ದಾಖಲೆ ಇಲ್ಲದೆ ಆಧಾರ್​ನಲ್ಲಿ ವಿಳಾಸ ಬದಲಾವಣೆಗೆ ಈ 8 ಹಂತ ಅನುಸರಿಸಿ

Aadhaar Address Update: ಆಧಾರ್​ನಲ್ಲಿ ನಿಮ್ಮ ವಿಳಾಸ ಬದಲಾವಣೆ ಮಾಡಬೇಕಿದ್ದಲ್ಲಿ ಈ 8 ಹಂತವನ್ನು ಅನುಸರಿಸಿ, ಸುಲಭವಾಗಿ ಮಾಡಬಹುದು. ಯಾವುದೇ ದಾಖಲೆಗಳನ್ನು ಸಹ ಸಲ್ಲಿಸುವ ಅಗತ್ಯ ಇಲ್ಲದೆ ವಿಳಾಸ ಬದಲಾವಣೆ ಮಾಡುವುದು ಹೇಗೆ ಎಂಬ ವಿವರ ಇಲ್ಲಿದೆ.

Aadhaar Address Update: ದಾಖಲೆ ಇಲ್ಲದೆ ಆಧಾರ್​ನಲ್ಲಿ ವಿಳಾಸ ಬದಲಾವಣೆಗೆ ಈ 8 ಹಂತ ಅನುಸರಿಸಿ
ಸಾಂದರ್ಭಿಕ ಚಿತ್ರ
Srinivas Mata
| Updated By: ಸಾಧು ಶ್ರೀನಾಥ್​|

Updated on: Mar 09, 2021 | 2:07 PM

Share

ಆಧಾರ್ ಕಾರ್ಡ್ ಇಲ್ಲದೆ ಯಾವುದೇ ವ್ಯವಹಾರ ಕಷ್ಟ ಎಂಬ ಪರಿಸ್ಥಿತಿ ಇದೆ. ಹಲವರಿಗೆ ಏನಾಗುತ್ತೆ ಅಂದರೆ, ತಾವು ಆಧಾರ್ ಕಾರ್ಡ್ ಮಾಡಿಸುವಾಗ ಒಂದು ವಿಳಾಸದಲ್ಲಿ ಇರುತ್ತಾರೆ. ಆ ನಂತರ ವಿಳಾಸ ಬದಲಾವಣೆಯನ್ನು ಮಾಡಿಸಬೇಕಾಗುತ್ತದೆ. ಹೊಸ ಅಡ್ರೆಸ್ ದೃಢೀಕರಣವನ್ನು ಮಾಡಿಸೋದು ಹೇಗೆ ಎಂಬುದೇ ಹಲವರ ಪಾಲಿಗೆ ತಲೆನೋವು. ನಿಮಗೆ ಗೊತ್ತಿರಲಿ, ಯಾವುದೇ ದಾಖಲೆ ಇಲ್ಲದಿದ್ದರೂ ಈಗಿನ ವಿಳಾಸಕ್ಕೆ ಬದಲಾವಣೆ ಮಾಡಿಕೊಳ್ಳುವ ಅವಕಾಶವನ್ನು ಯೂನಿಕ್ ಐಡೆಂಟಿಫಿಕೇಷನ್ ಅಥಾರಿಟಿ ಆಫ್ ಇಂಡಿಯಾ (UIDAI) ಮಾಡಿಕೊಟ್ಟಿದೆ.

ನೀವು ಹೊಸದಾಗಿ ಯಾವ ವಿಳಾಸಕ್ಕೆ ಬದಲಾಗಿದ್ದೀರೋ ಅದನ್ನು ಖಾತ್ರಿ ಮಾಡುವುದಕ್ಕೆ ಒಬ್ಬ ವ್ಯಕ್ತಿ ಬೇಕಾಗುತ್ತಾರೆ. UIDAIನಿಂದ ವ್ಯಾಲಿಡೇಷನ್ ಪತ್ರವನ್ನು ಆನ್​ಲೈನ್​ನಲ್ಲಿ ಕಳುಹಿಸಲಾಗುತ್ತದೆ. ನೀವು ಇದೇ ವಿಳಾಸದಲ್ಲಿ ಇದ್ದೀರಿ ಎಂದು ಖಾತ್ರಿ ಪಡಿಸಬೇಕಾದ ವ್ಯಕ್ತಿಗೆ ಆ ಪತ್ರವು ತಲುಪುತ್ತದೆ. ಅಂದ ಹಾಗೆ ಆ ದೃಢೀಕರಿಸಬೇಕಾದ ವ್ಯಕ್ತಿ ನಿಮ್ಮ ಕುಟುಂಬದ ಸದಸ್ಯರೋ, ಸ್ನೇಹಿತರೋ, ಮನೆ ಮಾಲೀಕರೋ.. ಹೀಗೆ ಯಾರು ತಮ್ಮ ವಿಳಾಸವನ್ನು ಬಳಸಿಕೊಳ್ಳಲು ನಿಮಗೆ ಒಪ್ಪಿಗೆ ನೀಡುತ್ತಾರೋ ಅವರೇ ಆಗಿರಬೇಕು. ಅದಾದ ಮೇಲೆ ಕೆಲವು ಷರತ್ತುಗಳನ್ನು ನೀವು ಪೂರೈಸಿದಲ್ಲಿ ಮಾತ್ರ ವಿಳಾಸ ಅಪ್​ಡೇಟ್ ಆಗುತ್ತದೆ.

ಇಷ್ಟಾದ ಮೇಲೆ 8 ಸುಲಭ ಹಂತಗಳಲ್ಲಿ ಆಧಾರ್​ನಲ್ಲಿ ವಿಳಾಸ ಬದಲಾವಣೆ ಮಾಡಿಕೊಳ್ಳಬಹುದು. ಅದು ಹೇಗೆ ಎಂಬ ವಿವರ ತಿಳಿಯಲು ಮುಂದೆ ಓದಿ.

1. UIDAI ವೆಬ್​​ಸೈಟ್ ಆದ https://uidai.gov.in/ ಭೇಟಿ ನೀಡಿ, My Aadhaar (ಮೈ ಆಧಾರ್) ಮೆನುವಿನಲ್ಲಿ Address Validation Letter (ಅಡ್ರೆಸ್ ವ್ಯಾಲಿಡೇಷನ್ ಲೆಟರ್) ಮೇಲೆ ಕ್ಲಿಕ್ ಮಾಡಿ. 2. ಅಲ್ಲಿಂದ ನೀವು ಅಡ್ರೆಸ್ ವ್ಯಾಲಿಡೇಷನ್ ಲೆಟರ್ ಪುಟಕ್ಕೆ ತೆರಳುತ್ತೀರಿ. ಅಲ್ಲಿ 12 ಅಂಕಿಯ ನಿಮ್ಮ ಆಧಾರ್ ಸಂಖ್ಯೆಯನ್ನು ಅಥವಾ 16 ಅಂಕಿಯ ವರ್ಚುವಲ್ ಐ.ಡಿ.ಯನ್ನು ನಮೂದಿಸಿ. 3. Captcha ಭರ್ತಿ ಮಾಡಿದ ಮೇಲೆ Send OTP ಮೇಲೆ ಕ್ಲಿಕ್ ಮಾಡಿ. 4. ನಿಮ್ಮ ನೋಂದಾಯಿತ ಮೊಬೈಲ್ ಫೋನ್ ಸಂಖ್ಯೆಗೆ ಒಟಿಪಿ ಬರುತ್ತದೆ. ಆ ಅಂಕಿಯನ್ನು ನಮೂದಿಸಿ, ಲಾಗ್​ ಇನ್ ಆಗಬೇಕು. ಆ ನಂತರ ನಿಮ್ಮ ವಿಳಾಸ ದೃಢೀಕರಣ ಮಾಡುವಂಥ ವ್ಯಕ್ತಿಗಳ ಆಧಾರ್ ಸಂಖ್ಯೆಯನ್ನು ಭರ್ತಿ ಮಾಡಬೇಕು. 5. ವಿಳಾಸ ದೃಢೀಕರಿಸಬೇಕಾದ ವ್ಯಕ್ತಿಗೆ ಎಸ್ಸೆಮ್ಮೆಸ್ ಬರಲಿದ್ದು, ಅದರಲ್ಲಿ ಲಿಂಕ್ ಇರುತ್ತದೆ. ಆದ್ದರಿಂದ ಅದಕ್ಕೆ ಒಪ್ಪಿಗೆ ಬೇಕಾಗುತ್ತದೆ. 6. ಆ ನಂತರ ಎರಡನೇ ಎಸ್ಸೆಮ್ಮೆಸ್ ಬರುತ್ತದೆ. ಅದರಲ್ಲಿ ಒಟಿಪಿ ಕೂಡ ಇರುತ್ತದೆ. ಅದನ್ನು ನಮೂದಿಸಿ, Captcha ಭರ್ತಿ ಮಾಡಿದ ನಂತರ ಖಾತ್ರಿಪಡಿಸಬೇಕು. 7. ದೃಢೀಕರಣ ಆದ ನಂತರ ನಿಮಗೆ ಎಸ್ಸೆಮ್ಮೆಸ್ ಮೂಲಕವಾಗಿ ಸರ್ವೀಸ್ ರಿಕ್ವೆಸ್ಟ್ ನಂಬರ್ (SRN) ಬರುತ್ತದೆ. 8. SRN ಮೂಲಕ ಲಾಗಿನ್ ಆಗಿ ವಿಳಾಸವನ್ನು ಒಮ್ಮೆ ಪರಿಶೀಲಿಸಿ. ಎಡಿಟ್ (ಪರಿಷ್ಕರಣೆ) ಆದ ನಂತರ ಸಬ್​ಮಿಟ್ (ಸಲ್ಲಿಕೆ) ಮಾಡಿ. ನಿಮ್ಮ Update Request Number (URN) ರದ್ದು ಮಾಡಿ.

ಇದನ್ನೂ ಓದಿ: ಮೋಟಾರು ವಾಹನ ಪ್ರಮಾಣಪತ್ರಗಳ ಸಂಬಂಧ ಈ 18 ಸೇವೆಗೆ ಇನ್ನು ಆಧಾರ್ ದೃಢೀಕರಣವಷ್ಟೇ ಸಾಕು

ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..