AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IDFC First Bank Vaidyanathan: ಮನೆ ಖರೀದಿಸಲೆಂದು 2.43 ಕೋಟಿ ರೂ. ಮೌಲ್ಯದ ಷೇರು ಉಡುಗೊರೆ ನೀಡಿದ ವೈದ್ಯನಾಥನ್

ಐಡಿಎಫ್​ಸಿ ಫಸ್ಟ್ ಬ್ಯಾಂಕ್​ನ ಸಿಇಒ ವಿ.ವೈದ್ಯನಾಥನ್ ಮತ್ತೆ ಸುದ್ದಿಯಲ್ಲಿದ್ದಾರೆ. ಮೂವರಿಗೆ ತಲಾ 1.5 ಲಕ್ಷ ಷೇರುಗಳು, ಅಂದರೆ 2.43 ಕೋಟಿ ಮೌಲ್ಯದ ಷೇರುಗಳನ್ನು ಮನೆ ಖರೀದಿಸಲು ಉಡುಗೊರೆಯಾಗಿ ನೀಡಿದ್ದಾರೆ.

IDFC First Bank Vaidyanathan: ಮನೆ ಖರೀದಿಸಲೆಂದು 2.43 ಕೋಟಿ ರೂ. ಮೌಲ್ಯದ ಷೇರು ಉಡುಗೊರೆ ನೀಡಿದ ವೈದ್ಯನಾಥನ್
ವಿ. ವೈದ್ಯನಾಥನ್ (ಚಿತ್ರಕೃಪೆ: ಅಂಕುರ್ ರವಿ ಟ್ವಿಟ್ಟರ್)
Srinivas Mata
|

Updated on: May 15, 2021 | 11:12 PM

Share

ಮುಂಬೈ: ಐಡಿಎಫ್​ಸಿ ಬ್ಯಾಂಕ್​ನ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಿಇಒ ಆದ ವಿ.ವೈದ್ಯನಾಥನ್ ಮತ್ತೆ ಸುದ್ದಿಯಲ್ಲಿದ್ದಾರೆ. ಅಂದಹಾಗೆ ಇವರು ಈ ಹಿಂದೆ ಯಾವಾಗ ಸುದ್ದಿಯಲ್ಲಿದ್ದರು ಅಂತ ಕೇಳ್ತೀರಾ? ತಮ್ಮ ಗಣಿತದ ಮೇಷ್ಟ್ರಿಗೆ 1 ಲಕ್ಷ ಷೇರುಗಳನ್ನು ಕೊಟ್ಟು ಭಾರೀ ಮೆಚ್ಚುಗೆಗೆ ಪಡೆದಿದ್ದ ವ್ಯಕ್ತಿ ಇವರೇ. ಈಗ ಕೂಡ ಮೂರು ಜನರಿಗೆ ತಲಾ 1.5 ಲಕ್ಷ ಐಡಿಎಫ್​ಸಿ ಫಸ್ಟ್​ ಬ್ಯಾಂಕ್​ ಷೇರುಗಳನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಅಲ್ಲಿಗೆ ಒಟ್ಟು 4.5 ಲಕ್ಷ ಷೇರುಗಳಾದವು. ವೈದ್ಯನಾಥನ್ ಅವರಿಗೆ ಸೇರಿದ್ದ ಈ ಷೇರುಗಳನ್ನು ಎಂ.ಸೆಲ್ವರಾಜ್, ಅಲೆಕ್ಸಿಯಾ ಸೆಲ್ವರಾಜ್ ಮತ್ತು ಉತ್ಕರ್ಷ ತೋಡಂಕರ್ ಅವರಿಗೆ ಮನೆ ಖರೀದಿ ಮಾಡುವುದಕ್ಕಾಗಿ ಉಡುಗೊರೆಯಾಗಿ ನೀಡಿದ್ದಾರೆ ಎಂದು ಬ್ಯಾಂಕ್​ನಿಂದ ಸ್ಟಾಕ್​ ಎಕ್ಸ್​ಚೇಂಜ್​ಗಳಿಗೆ ಮಾಹಿತಿ ನೀಡಲಾಗಿದೆ. ಅಂದ ಹಾಗೆ, ಶುಕ್ರವಾರದ ದಿನದ ಕೊನೆಗೆ ಐಡಿಎಫ್​ಸಿ ಫಸ್ಟ್ ಬ್ಯಾಂಕ್ ಷೇರಿನ ಬೆಲೆ ಒಂದಕ್ಕೆ 54.15 ಇತ್ತು. ಅಂದರೆ 4.5 ಲಕ್ಷ ಷೇರಿನ ಬೆಲೆ 2.43 ಕೋಟಿ ರೂಪಾಯಿ ಆಯಿತು.

ಕಂಪೆನಿ ಕಾಯ್ದೆ ಅಥವಾ ಸೆಬಿ ನಿಯಮಾವಳಿ ಪ್ರಕಾರ, ಈ ಷೇರುಗಳನ್ನು ಪಡೆದವರು ವೈದ್ಯನಾಥನ್​ಗೆ ಹೇಗೂ ಸಂಬಂಧಪಟ್ಟವರಲ್ಲ. ಈ ಮೇಲ್ಕಂಡ ವಹಿವಾಟಿನಲ್ಲಿ ಯಾವುದೇ ಹಣಕಾಸು ಒಳಗೊಂಡಿಲ್ಲ ಎಂದು ಕಂಪೆನಿಯಿಂದ ಎಕ್ಸ್​ಚೇಂಜ್​ಗೆ ನೋಟಿಸ್​ ಮೂಲಕ ತಿಳಿಸಲಾಗಿದೆ. ಅಂದಹಾಗೆ ಮಾರ್ಚ್ ಕೊನೆ ಹೊತ್ತಿಗೆ ವೈದ್ಯನಾಥನ್​ ಅವರ ಬಳಿ ಇದ್ದ ಐಡಿಎಫ್​ಸಿ ಷೇರುಗಳು ಎಷ್ಟು ಗೊತ್ತಾ? 2,48,60,000 ಅಥವಾ 2.49 ಕೋಟಿ ಷೇರುಗಳು. ಐಇಎಫ್​ಸಿ ಫಸ್ಟ್ ಬ್ಯಾಂಕ್​ನಲ್ಲಿ ಶೇ 0.44ರಷ್ಟು ಪಾಲು ಇವರ ಬಳಿ ಇತ್ತು.

ಮೊದಲೇ ಹೇಳಿದ ಹಾಗೆ ವೈದ್ಯನಾಥನ್ ಷೇರನ್ನು ನೀಡುತ್ತಿರುವುದು ಇದು ಮೊದಲ ಸಲ ಏನಲ್ಲ. 2020ರ ಅಕ್ಟೋಬರ್​ನಲ್ಲಿ 30 ಲಕ್ಷ ಮೌಲ್ಯದ 1 ಲಕ್ಷ ಷೇರನ್ನು ತಮಗೆ ಗಣಿತ ಮೇಷ್ಟ್ರಾಗಿದ್ದ ಗುರುದಿಯಾಲ್ ಸೈನಿ ಅವರಿಗೆ ನೀಡಿದ್ದರು. ಅದಕ್ಕೆ ಕಾರಣ ಏನು ಗೊತ್ತಾ? ಬಿರ್ಲಾ ಇನ್​ಸ್ಟಿಟ್ಯೂಟ್ ಆಫ್​ ಟೆಕ್ನಾಲಜಿ (ಮೆಸ್ರಾ) ಪ್ರವೇಶ ಸಿಕ್ಕಿದ್ದ ವೈದ್ಯನಾಥನ್​ಗೆ ಸಂದರ್ಶನದಲ್ಲಿ ಭಾಗವಹಿಸಲು ಅಲ್ಲಿಗೆ ಹೋಗಬೇಕಿತ್ತು. ಆದರೆ ಆ ಕೌನ್ಸೆಲಿಂಗ್ ನಿಯಮಾವಳಿಗಳನ್ನು ಪೂರೈಸುವುದಕ್ಕೆ ಹಣವೇ ಇರಲಿಲ್ಲ. ಅಂಥ ಸಂದರ್ಭದಲ್ಲಿ ಸಂದರ್ಶನಕ್ಕೆ ಹೋಗಲು ಸೈನಿ 500 ರೂಪಾಯಿ ನೀಡಿದ್ದರಂತೆ.

2018ರ ನವೆಂಬರ್​ನಲ್ಲಿ ವೈದ್ಯನಾಥನ್ ಕ್ಯಾಪಿಟಲ್ ಫಸ್ಟ್ ಲಿಮಿಟೆಡ್ ಅಧ್ಯಕ್ಷರಾಗಿದ್ದಾಗ 20 ಕೋಟಿ ಮೌಲ್ಯದ 4.3 ಲಕ್ಷ ಷೇರುಗಳನ್ನು ಇಬ್ಬರು ಚಾಲಕಕರು, ಮೂವರು ಮನೆಕೆಲಸದವರು, ಕೆಲವು ಸಹೋದ್ಯೋಗಿಗಳು ಮತ್ತು ಕುಟುಂಬ ಸದಸ್ಯರಿಗೆ ನೀಡಿದ್ದರು. ಇದು ಐಡಿಎಫ್​ಸಿ ಬ್ಯಾಂಕ್​ ಜತೆ ಕ್ಯಾಪಿಟಲ್ ಫಸ್ಟ್ ವಿಲೀನ ಆಗುವ ಮುಂಚಿನ ಸಂಗತಿ.

ಇದನ್ನೂ ಓದಿ: ಮನೆ ಕೆಲಸದಾಕೆಗೆ ಹೊಸ ಮನೆಯೊಂದನ್ನು ಉಡುಗೊರೆಯಾಗಿ ನೀಡಿದ ನಟಿ ರೊಮಾನಾ

(IDFC First bank CEO V Vaidyanathan gifted 1.5 lakh each shares, total worth of Rs 2.43 crore to 3 people to buy house)

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ