AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊನೆಯ ಕ್ವಾರ್ಟರ್​ನಲ್ಲಿ ಜಿಡಿಪಿ ಶೇ. 7.8 ಏರಿಕೆ; ಇಡೀ ವರ್ಷದಲ್ಲಾದ ಆರ್ಥಿಕ ಬೆಳವಣಿಗೆ ಶೇ. 7.7

India GDP grows 7.7pc in 2025-26 fy: 2025-26ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಒಟ್ಟಾರೆ ಶೇ. 7.7ರಷ್ಟು ಹಿಗ್ಗಿದೆ. ಸರ್ಕಾರ ಬಿಡುಗಡೆ ಮಾಡಿದ ದತ್ತಾಂಶದಲ್ಲಿ ಈ ಮಾಹಿತಿ ದಾಖಲಾಗಿದೆ. ಹಾಗೆಯೇ, ಹಣಕಾಸು ವರ್ಷದ ಮೊದಲ ಮೂರು ಕ್ವಾರ್ಟರ್​ಗಳಲ್ಲಿ ಕಂಡ ಉತ್ತಮ ಬೆಳವಣಿಗೆ ಕೊನೆಯ ಕ್ವಾರ್ಟರ್​ನಲ್ಲೂ ಮುಂದುವರಿದಿದೆ. ಸರ್ವಿಸ್ ಸೆಕ್ಟರ್ ಅತ್ಯುತ್ತಮ ಸಾಧನೆ ತೋರಿದೆ.

ಕೊನೆಯ ಕ್ವಾರ್ಟರ್​ನಲ್ಲಿ ಜಿಡಿಪಿ ಶೇ. 7.8 ಏರಿಕೆ; ಇಡೀ ವರ್ಷದಲ್ಲಾದ ಆರ್ಥಿಕ ಬೆಳವಣಿಗೆ ಶೇ. 7.7
ಜಿಡಿಪಿImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 05, 2026 | 4:51 PM

Share

ನವದೆಹಲಿ, ಜೂನ್ 5: ಕಳೆದ ಬಾರಿಯ ಹಣಕಾಸು ವರ್ಷದಲ್ಲಿ (2025-26) ಭಾರತದ ಆರ್ಥಿಕತೆ ಶೇ. 7.7ರಷ್ಟು ಹೆಚ್ಚಳ ಕಂಡಿದೆ. ಇದು ಸರ್ಕಾರ ಶುಕ್ರವಾರ (ಜೂನ್ 5) ಬಿಡುಗಡೆ ಮಾಡಿದ ಅಧಿಕೃತ ದತ್ತಾಂಶದಿಂದ ತಿಳಿದುಬಂದಿದೆ. 2024-25ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ (India GDP) ಶೇ. 7.1ರಷ್ಟು ಹಿಗ್ಗಿತ್ತು. 2025-26ರಲ್ಲಿ ಅದನ್ನೂ ಮೀರಿಸಿದ ಬೆಳವಣಿಗೆ ಸಾಧಿಸಿದೆ.

2025-26ರ ಹಣಕಾಸು ವರ್ಷದ ಕೊನೆಯ ಕ್ವಾರ್ಟರ್​ನಲ್ಲಿ ಜಿಡಿಪಿ ಶೇ. 7.8ರ ವಾರ್ಷಿಕ ದರದಲ್ಲಿ ಬೆಳವಣಿಗೆ ಹೊಂದಿದೆ ಎಂದು ದತ್ತಾಂಶದಲ್ಲಿ ತಿಳಿಸಲಾಗಿದೆ. ಮೊದಲ ಮೂರು ಕ್ವಾರ್ಟರ್​ಗಳಲ್ಲಿ ಕ್ರಮವಾಗಿ ಶೇ. 7.8, ಶೇ. 8.2 ಮತ್ತು ಶೇ. 7.8ರಷ್ಟು ಬೆಳವಣಿಗೆ ದಾಖಲಾಗಿತ್ತು.

ಇದನ್ನೂ ಓದಿ: ಬಂಡವಾಳ ಆಕರ್ಷಿಸಲು ಬ್ಯಾಂಕುಗಳಿಗೆ ಹೆಡ್ಡಿಂಗ್ ಸಪೋರ್ಟ್​ನಿಂದ ಹಿಡಿದು ಎನ್​ಆರ್​ಐ ಹೂಡಿಕೆ ಮಿತಿ ಹೆಚ್ಚಳದವರೆಗೆ ಆರ್​ಬಿಐನಿಂದ 5 ಕ್ರಮಗಳು

ಹಣದುಬ್ಬರದ ಅಂಶವನ್ನೂ ಪರಿಗಣಿಸಿ ಲೆಕ್ಕ ಮಾಡಲಾದ ನೈಜ ಜಿಡಿಪಿ ಅಥವಾ ರಿಯಲ್ ಜಿಡಿಪಿ ಮೊತ್ತ 2025-26ರಲ್ಲಿ 323.12 ಲಕ್ಷ ಕೋಟಿ ರೂ ಇದೆ. ಹಿಂದಿನ ಹಣಕಾಸು ವರ್ಷದಲ್ಲಿ (2024-25) ರಿಯಲ್ ಜಿಡಿಪಿ ಮೊತ್ತ 299.89 ಲಕ್ಷ ಕೋಟಿ ರೂ ಇತ್ತೆನ್ನಲಾಗಿದೆ.

ಇನ್ನು, ಹಣದುಬ್ಬರದ ಪರಿಣಾಮವನ್ನು ಒಳಗೊಂಡ ಲೆಕ್ಕಾಚಾರದ ನಾಮಿನಲ್ ಜಿಡಿಪಿ ಮೊತ್ತ 2025-26ರಲ್ಲಿ 346.36 ಲಕ್ಷ ಕೋಟಿ ರೂ ಇದೆ. ಇದು ಹಿಂದಿನ ವರ್ಷದಕ್ಕೆ ಹೋಲಿಸಿದರೆ ಶೇ. 8.9ರಷ್ಟು ಹೆಚ್ಚಳ ಕಂಡಿದೆ.

ಜನವರಿಯಿಂದ ಮಾರ್ಚ್​ವರೆಗಿನ ಕ್ವಾರ್ಟರ್​ನಲ್ಲಿ ಯಾವ್ಯಾವ ಸೆಕ್ಟರ್​ಗಳ ಸಾಧನೆ ಹೇಗಿದೆ?

ಕೊನೆಯ ಕ್ವಾರ್ಟರ್​ನಲ್ಲಿ ಜಿಡಿಪಿ ಶೇ 7.8ರಷ್ಟು ಹೆಚ್ಚಿದೆ. ಇದರಲ್ಲಿ ಸರ್ವಿಸ್ ಸೆಕ್ಟರ್​ನ ಕೊಡುಗೆ ಗಣನೀಯವಾಗಿದೆ. ಇದು ಶೇ. 9.9ರ ವಾರ್ಷಿಕ ದರದಲ್ಲಿ ಹಿಗ್ಗಿದೆ. ಮ್ಯಾನುಫ್ಯಾಕ್ಚರಿಂಗ್, ಕನ್ಸ್​ಟ್ರಕ್ಷನ್, ಯುಟಿಲಿಟಿ ಇತ್ಯಾದಿ ಇರುವ ಸೆಕೆಂಡರಿ ಸೆಕ್ಟರ್ ಉತ್ತಮವಾದ ಶೇ. 7.4ರಷ್ಟು ಹಿಗ್ಗಿದೆ.

ಇದನ್ನೂ ಓದಿ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸೆಬಿ ನೊಂದಣಿ ಇಲ್ಲದೇ ಎನ್​ಆರ್​ಐಗಳಿಗೆ ಹೂಡಿಕೆ ಮಿತಿ ಹೆಚ್ಚಳ

ವೈಯಕ್ತಿಕ ಸೆಕ್ಟರ್​ಗಳ ಪೈಕಿ ಟ್ರೇಡ್, ಹೋಟೆಲ್, ಟ್ರಾನ್ಸ್​ಪೋರ್ಟ್, ಕಮ್ಯೂನಿಕೇಶನ್, ಬ್ರಾಡ್ಕ್ಯಾಸ್ಟಿಂಗ್ ಸಂಬಂಧಿತ ಸೇವೆಗಳು ಕೊನೆಯ ಕ್ವಾರ್ಟರ್​ನಲ್ಲಿ ಅದ್ವಿತೀಯವೆನಿಸುವ ಶೇ. 12.5ರಷ್ಟು ಬೆಳವಣಿಗೆ ಕಂಡಿವೆ. ರಿಯಲ್ ಎಸ್ಟೇಟ್, ಐಟಿ ಸರ್ವಿಸ್, ವೃತ್ತಿಪರ ಸೇವೆ, ಹಣಕಾಸು ಸೇವೆಗಳು ಶೇ. 10.4ರಷ್ಟು ಹೆಚ್ಚಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಇತಿಹಾಸ ಸೃಷ್ಟಿಸೋ ಕೆಲಸ ಮಾಡ್ತೀವಿ ಎಂದ ಸಿಎಂ ಡಿಕೆ ಶಿವಕುಮಾರ್
ಇತಿಹಾಸ ಸೃಷ್ಟಿಸೋ ಕೆಲಸ ಮಾಡ್ತೀವಿ ಎಂದ ಸಿಎಂ ಡಿಕೆ ಶಿವಕುಮಾರ್
ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ!
ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ!
ಬೆಳಗಾವಿ ಮೂಲದ ಶಾಸಕನಿಂದ ಅಡ್ಡಮತದಾನ ಶಂಕೆ, ಬಿಜೆಪಿಯಲ್ಲಿ ಸಂಚಲನ
ಬೆಳಗಾವಿ ಮೂಲದ ಶಾಸಕನಿಂದ ಅಡ್ಡಮತದಾನ ಶಂಕೆ, ಬಿಜೆಪಿಯಲ್ಲಿ ಸಂಚಲನ
ಬಿಜೆಪಿ ನಾಯಕರ ಮಧ್ಯೆಯೇ ಜೋರಾದ ವಾಗ್ಯುದ್ಧ!
ಬಿಜೆಪಿ ನಾಯಕರ ಮಧ್ಯೆಯೇ ಜೋರಾದ ವಾಗ್ಯುದ್ಧ!
ಕೆಂಪೇಗೌಡ ಜಯಂತಿ ನಡೆಯಲು ಬಿಡದೇ ಪ್ರದೀಪ್ ಈಶ್ವರ್ ವಿರುದ್ಧ ಆಕ್ರೋಶ
ಕೆಂಪೇಗೌಡ ಜಯಂತಿ ನಡೆಯಲು ಬಿಡದೇ ಪ್ರದೀಪ್ ಈಶ್ವರ್ ವಿರುದ್ಧ ಆಕ್ರೋಶ
ಲಿಂಗನಮಕ್ಕಿ ಡ್ಯಾಂನಲ್ಲಿ ತೀವ್ರ ನೀರಿನ ಕೊರತೆ: ವಿದ್ಯುತ್ ಉತ್ಪಾದನೆ ಸ್ಥಗಿತ
ಲಿಂಗನಮಕ್ಕಿ ಡ್ಯಾಂನಲ್ಲಿ ತೀವ್ರ ನೀರಿನ ಕೊರತೆ: ವಿದ್ಯುತ್ ಉತ್ಪಾದನೆ ಸ್ಥಗಿತ
ಪ್ರತಿ ವರ್ಷ ಒಂದೊಂದು ಕ್ಷೇತ್ರದಲ್ಲಿ ಕೆಂಪೇಗೌಡ ಜಯಂತಿ ಆಚರಣೆ: ಸಿಎಂ
ಪ್ರತಿ ವರ್ಷ ಒಂದೊಂದು ಕ್ಷೇತ್ರದಲ್ಲಿ ಕೆಂಪೇಗೌಡ ಜಯಂತಿ ಆಚರಣೆ: ಸಿಎಂ
ಅಡ್ಡ ಮತದಾನ ಬಗ್ಗೆ ವಿಜಯೇಂದ್ರಗೆ ವವರದಿ ಸಲ್ಲಿಸಿ ಸಿ.ಟಿ ರವಿ ಹೇಳಿದ್ದೇನು?
ಅಡ್ಡ ಮತದಾನ ಬಗ್ಗೆ ವಿಜಯೇಂದ್ರಗೆ ವವರದಿ ಸಲ್ಲಿಸಿ ಸಿ.ಟಿ ರವಿ ಹೇಳಿದ್ದೇನು?
ಮಡಿಕೇರಿ: ಎಂಟು ತಿಂಗಳ ಮಗುವಿನ ಗಂಟಲಲ್ಲಿತ್ತು ಎಲ್​ಇಡಿ ಬಲ್ಬ್!
ಮಡಿಕೇರಿ: ಎಂಟು ತಿಂಗಳ ಮಗುವಿನ ಗಂಟಲಲ್ಲಿತ್ತು ಎಲ್​ಇಡಿ ಬಲ್ಬ್!
ರಾಯಚೂರು ಜಿಲ್ಲೆಯಲ್ಲಿ 318 ಶೂನ್ಯ ಶಿಕ್ಷಕ ಸರ್ಕಾರಿ ಶಾಲೆಗಳು!
ರಾಯಚೂರು ಜಿಲ್ಲೆಯಲ್ಲಿ 318 ಶೂನ್ಯ ಶಿಕ್ಷಕ ಸರ್ಕಾರಿ ಶಾಲೆಗಳು!