ರೈಲ್ವೆ ನಿಲ್ದಾಣಗಳಲ್ಲಿ ಜನೌಷಧಿ ಕೇಂದ್ರ ಸ್ಥಾಪಿಸಲು ನಿರ್ಧಾರ; ನೀವೂ ಮಳಿಗೆ ಪಡೆಯಬಹುದು

Pradhan Mantri Jan Bhartiya Janaushadhi Kendra: ಕರ್ನಾಟಕದ 4 ಕಡೆ ಸೇರಿದಂತೆ ದೇಶಾದ್ಯಂತ ಆಯ್ದ 50 ರೈಲ್ವೆ ನಿಲ್ದಾಣಗಳಲ್ಲಿ ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಲು ಇಲಾಖೆ ಯೋಜಿಸಿದೆ. ಈ ಮಳಿಗೆಗಳ ಸ್ಥಳಗಳನ್ನು ಹರಾಜು ಮೂಲಕ ವಿತರಿಸಲಾಗುತ್ತಿದೆ.

ರೈಲ್ವೆ ನಿಲ್ದಾಣಗಳಲ್ಲಿ ಜನೌಷಧಿ ಕೇಂದ್ರ ಸ್ಥಾಪಿಸಲು ನಿರ್ಧಾರ; ನೀವೂ ಮಳಿಗೆ ಪಡೆಯಬಹುದು
ಜನೌಷಧಿ ಕೇಂದ್ರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 17, 2023 | 11:10 AM

ನವದೆಹಲಿ, ಆಗಸ್ಟ್ 17: ಭಾರತೀಯ ರೈಲ್ವೆಯ ಸೌಕರ್ಯ ವ್ಯವಸ್ಥೆ (Rail Infrastructure) ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹ ಪರಿವರ್ತನೆ ಕಾಣುತ್ತಿದೆ. ಪ್ರಯಾಣಿಕರ ಸುರಕ್ಷತೆಗೆ ಇಲಾಖೆ ಬಹಳಷ್ಟು ಕ್ರಮಗಳನ್ನು ಕೈಗೊಂಡಿದೆ. ಸಾಕಷ್ಟು ಸೌಲಭ್ಯಗಳನ್ನು ಒದಗಿಸುತ್ತಿದೆ. ಇದೀಗ ರೈಲ್ವೆ ನಿಲ್ದಾಣಗಳಲ್ಲಿ ಔಷಧ ಪೂರೈಕೆಯನ್ನೂ ಮಾಡಲು ಸರ್ಕಾರ ನಿರ್ಧರಿಸಿದೆ. ಪ್ರಾಯೋಗಿಕ ಹಂತವಾಗಿ, ಆಯ್ದ ರೈಲ್ವೆ ನಿಲ್ದಾಣಗಳಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು (Pradhan Mantri Jan Bhartiya Janaushadhi Kendra) ತೆರೆಯಲಾಗುತ್ತದೆ. ಇದರಿಂದ ರೈಲ್ವೆ ಪ್ರಯಾಣಿಕರಿಗೆ ಅಗತ್ಯ ಔಷಧಗಳು ರೈಲ್ವೆ ನಿಲ್ದಾಣದಲ್ಲೇ ದೊರೆಯುವಂತಾಗುತ್ತದೆ.

ಆರಂಭದಲ್ಲಿ ಕರ್ನಾಟಕದ 4 ಸೇರಿ 50 ನಿಲ್ದಾಣಗಳಲ್ಲಿ ಜನೌಷಧಿ ಕೇಂದ್ರಗಳು

ರೈಲ್ವೆ ಇಲಾಖೆ ತನ್ನ ನಿಲ್ದಾಣಗಳಲ್ಲಿ ಜನೌಷಧಿ ಮಳಿಗೆ ತೆರೆಯಲು 50 ಸ್ಥಳಗಳನ್ನು ಗುರುತಿಸಿರುವುದು ತಿಳಿದುಬಂದಿದೆ. ವರದಿ ಪ್ರಕಾರ, ಇದರಲ್ಲಿ ಕರ್ನಾಟಕದ ನಾಲ್ಕು ನಿಲ್ದಾಣಗಳಿವೆ. ಬೆಂಗಳೂರಿನ ಬಯ್ಯಪ್ಪನಹಳ್ಳಿಯಲ್ಲಿರುವ ಎಸ್​ಎಂವಿಟಿ ನಿಲ್ದಾಣ (ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್), ಬಂಗಾರಪೇಟೆ, ಹುಬ್ಬಳ್ಳಿ ಜಂಕ್ಷನ್ ಮತ್ತು ಮೈಸೂರಿನ ರೈಲ್ವೆ ನಿಲ್ದಾಣಗಳಲ್ಲಿ ಜನೌಷಧಿ ಮಳಿಗೆಗಳು ಬರಲಿವೆ.

ಇದನ್ನೂ ಓದಿ: ಮುಂದಿನ ನಾಲ್ಕೇ ವರ್ಷದಲ್ಲಿ ಭಾರತ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಲಿದೆಯಾ? ಆರ್ಥಿಕ ತಜ್ಞರ ಅನಿಸಿಕೆ ಇದು

ಜನೌಷಧಿ ಕೇಂದ್ರಗಳು ಸ್ಥಾಪನೆಯಾಗಲಿರುವ 50 ರೈಲ್ವೆ ನಿಲ್ದಾಣಗಳ ಪಟ್ಟಿ

  1. ತಿರುಪತಿ
  2. ನ್ಯೂ ತೀನ್​ಸುಕಿಯಾ
  3. ಲುಮ್​ಡಿಂಗ್
  4. ರಂಗಿಯಾ
  5. ದರ್ಭಂಗಾ
  6. ಪಾಟ್ನಾ
  7. ಕಟಿಹಾರ್
  8. ಜಂಜಗೀರ್ ನಾಯ್ಲಾ
  9. ಬಾಗ್​ಬಹಾರಾ
  10. ಆನಂದ್ ವಿಹಾರ್
  11. ಅಂಕಲೇಶ್ವರ್
  12. ಮಹೇಸಾನ ಜಂಕ್ಷನ್
  13. ಸಿನಿ ಜಂಕ್ಷನ್
  14. ಶ್ರೀನಗರ್
  15. ಎಸ್​ಎಂವಿಟಿ ಬೆಂಗಳೂರು
  16. ಬಂಗಾರಪೇಟೆ
  17. ಮೈಸೂರು
  18. ಹುಬ್ಬಳ್ಳಿ ಜಂಕ್ಷನ್
  19. ಪಾಲಕ್ಕಾಡ್
  20. ಪೇಂಡ್ರಾ ರೋಡ್
  21. ರಟ್ಲಮ್
  22. ಮದನ್ ಮಹಲ್
  23. ಬಿನಾ
  24. ಲೋಕಮಾನ್ಯ ತಿಲಕ್ ಟರ್ಮಿನಸ್
  25. ಮನ್ಮಾದ್
  26. ಪಿಂಪ್ರಿ
  27. ಸೋಲಾಪುರ್
  28. ನೈನ್​ಪುರ್
  29. ನಗಭೀರ್
  30. ಮಲದ್
  31. ಖುರ್ದಾ ರೋಡ್
  32. ಫಗವಾರ
  33. ರಾಜಪುರ
  34. ಸವಾಯ್ ಮಾಧೋಪುರ್
  35. ಭಗತ್ ಕಿ ಕೋತಿ
  36. ತಿರುಚ್ಚಿರಾಪಳ್ಳಿ ಜಂಕ್ಷನ್
  37. ಈರೋಡ್
  38. ದಿಂಡಿಗಲ್ ಜಂಕ್ಷನ್
  39. ಸಿಕಂದರಾಬಾದ್
  40. ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್
  41. ವೀರಾಂಗನ ಲಕ್ಷ್ಮೀಬಾಯಿ
  42. ಲಕ್ನೋ ಜಂಕ್ಷನ್
  43. ಗೋರಖಪುರ್ ಜಂಕ್ಷನ್
  44. ಬನಾರಸ್
  45. ಆಗ್ರಾ ಕಂಟೋನ್ಮೆಂಟ್
  46. ಮಥುರಾ
  47. ಯೋಗ ನಗರಿ ರಿಷಿಕೇಶ್
  48. ಕಾಶಿಪುರ್
  49. ಮಾಲ್ಡಾ ಟೌನ್
  50. ಖರಗಪುರ್

ಇದನ್ನೂ ಓದಿ: New Passport Rules: ಪಾಸ್​ಪೋರ್ಟ್ ವೆರಿಫಿಕೇಶನ್​ಗೆ ಡಿಜಿಲಾಕರ್ ಕಡ್ಡಾಯ; ಏನಿದು ಹೊಸ ನಿಯಮ, ಇಲ್ಲಿದೆ ಡೀಟೇಲ್ಸ್

ಪಿಎಂ ಜನೌಷಧಿ ಕೇಂದ್ರಗಳ ವಿಶೇಷತೆ ಏನು?

ಜನಸಾಮಾನ್ಯರಿಗೆ ಕಡಿಮೆ ಬೆಲೆಗೆಯಲ್ಲಿ ಉತ್ತಮ ಗುಣಮಟ್ಟದ ಔಷಧಗಳನ್ನು ಒದಿಗಿಸುವ ವ್ಯವಸ್ಥೆಯೇ ಭಾರತೀಯ ಜನೌಷಧಿ ಕೇಂದ್ರಗಳದ್ದು. ಇದರಲ್ಲಿ ಜೆನೆರಿಕ್ ಮೆಡಿಸಿನ್​ಗಳು (Generic Medicine) ದೊರೆಯುತ್ತವೆ. ಜೆನೆರಿಕ್ ಔಷಧಿಗಳನ್ನು ತಯಾರಿಸುವ ಫಾರ್ಮಾ ಕಂಪನಿಗಳೊಂದಿಗೆ ಸರ್ಕಾರ ಒಪ್ಪಂದ ಮಾಡಿಕೊಂಡಿರುತ್ತದೆ. ಕಡಿಮೆ ಬೆಲೆಗೆ ಔಷಧಗಳನ್ನು ಈ ಕಂಪನಿಗಳು ತಯಾರಿಸಿ ಸರಬರಾಜು ಮಾಡುತ್ತವೆ.

ಜನೌಷಧಿ ಕೇಂದ್ರಗಳನ್ನುಕ ಫಾರ್ಮಸಿ ವಿದ್ಯಾಭ್ಯಾಸ ಮಾಡಿರುವ ಯಾರು ಬೇಕಾದರೂ ತೆರೆಯಬಹುದು. ಇದು ಸ್ವಂತ ಉದ್ಯೋಗದ ಅವಕಾಶವೀಯುತ್ತದೆ.

ರೈಲ್ವೆ ನಿಲ್ದಾಣಗಳಲ್ಲಿ ಜನೌಷಧಿ ಕೇಂದ್ರಗಳನ್ನು ತೆರೆಯಲು ಆನ್​ಲೈನ್​ನಲ್ಲಿ ಹರಾಜು ನಡೆಸಲಾಗುತ್ತದೆ. ಪರವಾನಿಗೆ ಹೊಂದಿರುವ ವ್ಯಕ್ತಿಗಳಿಗೆ ಮಳಿಗೆ ಸ್ಥಾಪಿಸಲು ರೈಲ್ವೆ ನಿಲ್ದಾಣಗಳಲ್ಲಿ ಸ್ಥಳ ಕೊಡಲಾಗುವುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್