AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಕ್ರೆಡಿಟ್ ರೇಟಿಂಗ್ ಹೆಚ್ಚಿಸಿದ ಜಪಾನೀ ಏಜೆನ್ಸಿ; ಬಿಬಿಬಿ+ ನಿಂದ ಎ- ಗೆ ಏರಿಕೆ; ದೇಶಕ್ಕೆ ಏನು ಲಾಭ?

Japanese Credit Rating Agency upgrades India's sovereign ratings: ಭಾರತದ ಸಾವರಿನ್ ಕ್ರೆಡಿಟ್ ರೇಟಿಂಗ್ ಅನ್ನು ಜಪಾನ್​ನ ಜೆಸಿಆರ್ ಏಜೆನ್ಸಿ ಒಂದು ಹಂತ ಮೇಲ್ದರ್ಜೆಗೆ ಏರಿಸಿದೆ. ಬಿಬಿಬಿ+ ಇದ್ದ ರೇಟಿಂಗ್ ಅನ್ನು ಎ-ಗೆ ಹೆಚ್ಚಿಸಲಾಗಿದೆ. ಕೆಳಮಧ್ಯಮ ಮಟ್ಟದಿಂದ ಭಾರತದ ಗ್ರೇಡಿಂಗ್ ಈಗ ಮೇಲ್ಮಧ್ಯಮ ಹಂತಕ್ಕೆ ಏರಿದಂತಾಗಿದೆ. ಇದರಿಂದ ಜಪಾನ್ ಹಾಗೂ ಇತರ ದೇಶಗಳಿಂದ ಸಾಲಗಳು ಹರಿದುಬರುವುದು ಸುಲಭವಾಗುತ್ತದೆ.

ಭಾರತದ ಕ್ರೆಡಿಟ್ ರೇಟಿಂಗ್ ಹೆಚ್ಚಿಸಿದ ಜಪಾನೀ ಏಜೆನ್ಸಿ; ಬಿಬಿಬಿ+ ನಿಂದ ಎ- ಗೆ ಏರಿಕೆ; ದೇಶಕ್ಕೆ ಏನು ಲಾಭ?
ಹಣImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 02, 2026 | 4:05 PM

Share

ನವದೆಹಲಿ, ಸೆಪ್ಟೆಂಬರ್ 2: ಜಪಾನಿನ ಕ್ರೆಡಿಟ್ ರೇಟಿಂಗ್ ಏಜೆನ್ಸಿ (JCR) ಭಾರತದ ಸಾರ್ವಭೌಮ ಕ್ರೆಡಿಟ್ ರೇಟಿಂಗ್ (Sovereign Credit Rating) ಅನ್ನು ‘BBB+’ ನಿಂದ ‘A-‘ ಗೆ ಮೇಲ್ದರ್ಜೆಗೇರಿಸಿದೆ. ಉತ್ತಮ ಆರ್ಥಿಕ ಬೆಳವಣಿಗೆ, ಪ್ರಬಲ ಹಣಕಾಸು ವ್ಯವಸ್ಥೆ ಹಾಗೂ ಸರ್ಕಾರದ ಪೂರಕ ನೀತಿಗಳು ಜೆಸಿಆರ್​ನ ಈ ಕ್ರಮಕ್ಕೆ ಕಾರಣ ಎನ್ನಲಾಗಿದೆ. ದೇಶದ ಕರೆನ್ಸಿ ಭವಿಷ್ಯವನ್ನೂ ‘ಸ್ಟೇಬಲ್’ (ಸ್ಥಿರ) ಎಂದು ಅದು ಘೋಷಿಸಿದೆ.

ಭಾರತದ ಬಲವಾದ ಆರ್ಥಿಕ ಪ್ರಗತಿ, 7% ಗೂ ಮೀರಿದ ಜಿಡಿಪಿ (GDP) ದರ ಮತ್ತು ಬಲವಾದ ಖಾಸಗಿ ಅನುಭೋಗ ಹಾಗೂ ಸಾರ್ವಜನಿಕ ಹೂಡಿಕೆಯನ್ನು ಏಜೆನ್ಸಿ ಪ್ರಮುಖವಾಗಿ ಉಲ್ಲೇಖಿಸಿದೆ.

ಬ್ಯಾಂಕಿಂಗ್ ವಲಯದ ಸುಧಾರಣೆ: ಬ್ಯಾಂಕಿಂಗ್ ವಲಯದ ಸುಧಾರಣೆ ಮತ್ತು ಅನುತ್ಪಾದಕ ಸಾಲಗಳ (NPA) ಪ್ರಮಾಣ ಮಾರ್ಚ್ ವೇಳೆಗೆ 1.8% ಕ್ಕೆ ಇಳಿಕೆಯಾಗಿರುವುದು ರೇಟಿಂಗ್ ಹೆಚ್ಚಿಸಲು ಪ್ರಮುಖ ಕಾರಣವಾಗಿದೆ.

ಇದನ್ನೂ ಓದಿ: ಜಾಗತಿಕವಾಗಿ ನಡುಗಿರುವ ಷೇರುಪೇಟೆಗಳು; ಭಾರತದಲ್ಲೂ ಸೆನ್ಸೆಕ್ಸ್, ನಿಫ್ಟಿ ಕುಸಿತ; ಈ ಅಲುಗಾಟಕ್ಕೆ ಏನು ಕಾರಣ?

ಡಿಜಿಟಲ್ ಮೂಲಸೌಕರ್ಯ ಮತ್ತು ಜಿಎಸ್‌ಟಿ: ಡಿಜಿಟಲ್ ಪಬ್ಲಿಕ್ ಇನ್ಫ್ರಾಸ್ಟ್ರಕ್ಚರ್ (DPI) ಮತ್ತು ಜಿಎಸ್‌ಟಿ (GST) ಅನುಷ್ಠಾನದಿಂದಾಗಿ ದೇಶದ ಆರ್ಥಿಕ ಅಡಿಪಾಯ ಮತ್ತಷ್ಟು ಗಟ್ಟಿಯಾಗಿದೆ. ವಿತ್ತೀಯ ಕೊರತೆ (Fiscal Deficit) ಜಿಡಿಪಿಯ 4.4% ಕ್ಕೆ ತಗ್ಗಿದ್ದು, ಸರ್ಕಾರದ ಬಂಡವಾಳ ವೆಚ್ಚದ ಯೋಜನೆಗಳು ಆರ್ಥಿಕತೆಗೆ ಬಲ ನೀಡಿವೆ ಎಂದು ಜಿಸಿಆರ್ ತಿಳಿಸಿದೆ.

ಜೆಸಿಆರ್ ನೀಡುವ ಗ್ರೇಡಿಂಗ್ ಶ್ರೇಣಿ ಹೀಗಿದೆ

  • ಅತ್ಯುನ್ನತ: ಎಎಎ
  • ಉನ್ನತ: ಎಎ+ / ಎಎ / ಎಎ-
  • ಮೇಲ್ಮಧ್ಯಮ: ಎ+ / ಎ / ಎ-
  • ಕೆಳಮಧ್ಯಮ: ಬಿಬಿಬಿ+ / ಬಿಬಿಬಿ / ಬಿಬಿಬಿ-
  • ಜಂಕ್: ಬಿಬಿ+ / ಬಿ / ಸಿಸಿಸಿ / ಸಿಡಿ / ಡಿ

ಜರ್ಮನಿ, ಸಿಂಗಾಪುರ, ಆಸ್ಟ್ರೇಲಿಯಾ, ಕೆನಡಾ ದೇಶಗಳಿಗೆ ಅತ್ಯುನ್ನತ ಗ್ರೇಡ್ ನೀಡಲಾಗಿದೆ. ಭಾರತದ್ದು ಮೇಲ್ಮಧ್ಯಮ ದರ್ಜೆ. ಚೀನಾದ್ದೂ ಇದೇ ಗುಂಪಿಗೆ ಸೇರುತ್ತದಾದರೂ ಅದಕ್ಕೆ ಸಿಕ್ಕಿರುವುದು ಎ+ ಗ್ರೇಡ್. ಇನ್ನು, ಪಾಕಿಸ್ತಾನ ಸೇರಿದಂತೆ ಹಲವು ದೇಶಗಳಿಗೆ ಕೊನೆಯದಾದ ಜಂಕ್ ಗ್ರೇಡ್ ಕೊಡಲಾಗಿದೆ.

ಇದನ್ನೂ ಓದಿ: I4C ಎಚ್ಚರಿಕೆ: ನಕಲಿ ಆಂಡ್ರಾಯ್ಡ್ ಆ್ಯಪ್​ಗಳಿಂದ ವಂಚನೆ ಹೇಗೆ? ಮೊಬೈಲ್​ನಿಂದ ಹೊರತೆಗೆಯುವುದು ಹೇಗೆ?

ಭಾರತದ ಕ್ರೆಡಿಟ್ ರೇಟಿಂಗ್ ಹೆಚ್ಚಿಸಿದ್ದರಿಂದ ಏನು ಅನುಕೂಲ?

ಭಾರತದ ರೇಟಿಂಗ್ ಅನ್ನು ಬಿಬಿಬಿ+ ನಿಂದ ಎ- ಗೆ ಏರಿಸಲಾಗಿದೆ. ಈ ಏಜೆನ್ಸಿಗಳು ನೀಡುವ ಗ್ರೇಡಿಂಗ್​ಗಳು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಗೆ ಮಾನಕವಾಗಿರುತ್ತವೆ. ಬ್ಯಾಂಕುಗಳು ಗ್ರಾಹಕರಿಗೆ ಸಾಲ ನೀಡುವಾಗ ಕ್ರೆಡಿಟ್ ರೇಟಿಂಗ್ ಗಮನಿಸುವಂತೆ. ರೇಟಿಂಗ್ ಉತ್ತಮವಾಗಿದ್ದಾಗ ಸರ್ಕಾರಕ್ಕೆ ಹಾಗೂ ದೇಶದ ಸಂಸ್ಥೆಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುತ್ತದೆ.

ಜಪಾನ್​ನ ಏಜೆನ್ಸಿ ಇಲ್ಲಿ ಗ್ರೇಡಿಂಗ್ ಹೆಚ್ಚಿಸಿರುವುದು, ಜಪಾನ್​ನಿಂದ ಎಫ್​ಡಿಐಗಳು ಭಾರತಕ್ಕೆ ಹರಿದುಬರಲು ಎಡೆ ಮಾಡಿಕೊಡುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More