AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾಗತಿಕವಾಗಿ ನಡುಗಿರುವ ಷೇರುಪೇಟೆಗಳು; ಭಾರತದಲ್ಲೂ ಸೆನ್ಸೆಕ್ಸ್, ನಿಫ್ಟಿ ಕುಸಿತ; ಈ ಅಲುಗಾಟಕ್ಕೆ ಏನು ಕಾರಣ?

Reasons for downfall of stock markets on September 2nd: ಇಂದು ಬುಧವಾರ ಸೆನ್ಸೆಕ್ಸ್, ನಿಫ್ಟಿ ಸೇರಿದಂತೆ ಭಾರತದ ಹೆಚ್ಚಿನ ಸೂಚ್ಯಂಕಗಳು ಕೆಂಪುಬಣ್ಣಕ್ಕೆ ತಿರುಗಿವೆ. ಜಾಗತಿಕವಾಗಿಯೂ ಪ್ರಮುಖ ದೇಶಗಳ ಷೇರುಪೇಟೆಗಳು ಹಿನ್ನಡೆ ಕಂಡಿವೆ. ಬ್ಯಾಂಕುಗಳು, ಇಂಧನ ಉತ್ಪಾದಕರು ಮೊದಲಾದ ಸಂಸ್ಥೆಗಳ ಷೇರುಗಳು ಪಾಸಿಟಿವ್ ಇವೆ. ಈ ಹಿನ್ನಡೆಗೆ ಏನು ಕಾರಣ?

ಜಾಗತಿಕವಾಗಿ ನಡುಗಿರುವ ಷೇರುಪೇಟೆಗಳು; ಭಾರತದಲ್ಲೂ ಸೆನ್ಸೆಕ್ಸ್, ನಿಫ್ಟಿ ಕುಸಿತ; ಈ ಅಲುಗಾಟಕ್ಕೆ ಏನು ಕಾರಣ?
ಷೇರು ಮಾರುಕಟ್ಟೆImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 02, 2026 | 10:58 AM

Share

ನವದೆಹಲಿ, ಸೆಪ್ಟೆಂಬರ್ 2: ಭಾರತದ ಷೇರು ಮಾರುಕಟ್ಟೆ (Stock Market) ಇವತ್ತು ಕೆಂಪು ಬಣ್ಣದಲ್ಲಿ ಮೀಯುತ್ತಿದೆ. ಬಿಎಸ್​ಇ, ಎನ್​ಎಸ್​ಇಯ ಸೆನ್ಸೆಕ್ಸ್, ನಿಫ್ಟಿ ಸೇರಿದಂತೆ ಹೆಚ್ಚಿನ ಸೂಚ್ಯಂಕಗಳು ನಷ್ಟ ಕಂಡಿವೆ. ನಿಫ್ಟಿ50 ಸೂಚ್ಯಂಕ ಸುಮಾರು 200 ಅಂಕಗಳ ನಷ್ಟ ಮಾಡಿಕೊಂಡು, 24,000 ಮಟ್ಟಕ್ಕಿಂತ ಕೆಳಗೆ ಕುಸಿದಿದೆ. ಸೆನ್ಸೆಕ್ಸ್ ಸುಮಾರು 500-600 ಅಂಕಗಳಷ್ಟು ಕುಸಿತ ಕಂಡಿದೆ. ಪಿಎಸ್​ಇ, ಎನರ್ಜಿ, ತೈಲ ಇತ್ಯಾದಿಗಳ ಕೆಲವೇ ಸೂಚ್ಯಂಕಗಳು ಮಾತ್ರ ಪಾಸಿಟಿವ್ ಆಗಿವೆ. ಉಳಿದಂತೆ ಮಾರುಕಟ್ಟೆ ನಲುಗಿದೆ.

ಜಾಗತಿಕವಾಗಿ ಹೆಚ್ಚಿನ ಷೇರು ಬಜಾರುಗಳು ಬುಧವಾರ ಹಿನ್ನಡೆ ಕಂಡಿವೆ. ಅಮೆರಿಕ, ಯೂರೋಪ್, ಜಪಾನ್, ಸಿಂಗಾಪುರ್, ಕೊರಿಯಾ ಇತ್ಯಾದಿ ಮಾರುಕಟ್ಟೆಗಳೂ ಕೂಡ ಇವತ್ತು ಕುಸಿತ ಕಂಡಿವೆ.

ಇದನ್ನೂ ಓದಿ: ಹೊಸ ಕಾರು ಕೊಳ್ಳುವವರಿಗೆ ಬೆಲೆ ಏರಿಕೆ ಶಾಕ್: ಹುಂಡೈ, ಟಾಟಾ ದರ ಹೆಚ್ಚಳ

ಮಾರುಕಟ್ಟೆ ಕುಸಿತಕ್ಕೆ 5 ಪ್ರಮುಖ ಕಾರಣಗಳು

  • ಕಚ್ಚಾ ತೈಲ ದರ ಹೆಚ್ಚಳ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ (Crude Oil) ಬೆಲೆ ದಿಢೀರ್ ಏರಿಕೆಯಾಗಿದೆ. ಭಾರತವು ತನ್ನ ತೈಲ ಅಗತ್ಯಕ್ಕಾಗಿ ಆಮದನ್ನೇ ಹೆಚ್ಚು ನೆಚ್ಚಿಕೊಂಡಿರುವುದರಿಂದ, ತೈಲ ಬೆಲೆ ಏರಿಕೆಯು ಹಣದುಬ್ಬರ ಮತ್ತು ಆರ್ಥಿಕ ಹೊರೆಯನ್ನು ಹೆಚ್ಚಿಸುವ ಭೀತಿ ಮೂಡಿಸಿದೆ.
  • ಭೌಗೋಳಿಕ-ರಾಜಕೀಯ ಉದ್ವಿಗ್ನತೆ: ಪಶ್ಚಿಮ ಏಷ್ಯಾದಲ್ಲಿ (ವಿಶೇಷವಾಗಿ ಮಧ್ಯಪ್ರಾಚ್ಯದಲ್ಲಿ) ಹೆಚ್ಚುತ್ತಿರುವ ಮಿಲಿಟರಿ ಸಂಘರ್ಷ ಮತ್ತು ಅಸ್ಥಿರತೆಯು (Geopolitical Tensions) ಜಾಗತಿಕ ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಸಿದೆ.
  • ವಿದೇಶಿ ಹೂಡಿಕೆದಾರರ ಮಾರಾಟ: ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FIIs) ಭಾರತೀಯ ಷೇರು ಮಾರುಕಟ್ಟೆಯಿಂದ ತಮ್ಮ ಹಣವನ್ನು ಹಿಂಪಡೆಯುತ್ತಿದ್ದು (ಷೇರುಗಳನ್ನು ಮಾರಾಟ ಮಾಡುತ್ತಿದ್ದು), ಮಾರುಕಟ್ಟೆಯ ಮೇಲೆ ತೀವ್ರ ಒತ್ತಡ ಬಿದ್ದಿದೆ.
  • ರೂಪಾಯಿ ಮೌಲ್ಯ ಕುಸಿತ: ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿಯ ಮೌಲ್ಯ ಕುಸಿಯುತ್ತಿರುವುದು ಆಮದು ವೆಚ್ಚವನ್ನು ಹೆಚ್ಚಿಸಿ ಷೇರು ಮಾರುಕಟ್ಟೆಯ ಸೆಂಟ್ಮೆಂಟ್ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ.
  • ದುರ್ಬಲ ಜಾಗತಿಕ ಸೂಚ್ಯಂಕಗಳು: ಅಮೆರಿಕ ಮತ್ತು ಏಷ್ಯಾದ ಪ್ರಮುಖ ಷೇರು ಮಾರುಕಟ್ಟೆಗಳಲ್ಲಿ ಕಂಡುಬಂದ ನಕಾರಾತ್ಮಕ ವಹಿವಾಟು ಭಾರತೀಯ ಮಾರುಕಟ್ಟೆಯ ಮೇಲೆಯೂ ದುಷ್ಪರಿಣಾಮ ಬೀರಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಗನ್, ಪಿಸ್ತೂಲ್ ಹೊಂದಿರುವವರಿಗೆ ಖಡಕ್ ಸಂದೇಶ ನೀಡಿದ ಸಿಎಂ ಡಿಕೆ ಶಿವಕುಮಾರ್
ಗನ್, ಪಿಸ್ತೂಲ್ ಹೊಂದಿರುವವರಿಗೆ ಖಡಕ್ ಸಂದೇಶ ನೀಡಿದ ಸಿಎಂ ಡಿಕೆ ಶಿವಕುಮಾರ್
‘ಮುಖ್ಯಮಂತ್ರಿ’ ನಾಟಕದ 900ನೇ ಪ್ರದರ್ಶನ: ಮೈಲುಗಲ್ಲಿನ ಬಗ್ಗೆ ಚಂದ್ರು ಮಾತು
‘ಮುಖ್ಯಮಂತ್ರಿ’ ನಾಟಕದ 900ನೇ ಪ್ರದರ್ಶನ: ಮೈಲುಗಲ್ಲಿನ ಬಗ್ಗೆ ಚಂದ್ರು ಮಾತು
ವಂದೇ ಮಾತರಂ: ಸಿಎಂ ಡಿಕೆಶಿಗೆ ರಾಜ್ಯಪಾಲರು ಬರೆದ 4 ಪುಟ ಪತ್ರದ ವಿವರ ಹೀಗಿದೆ
ವಂದೇ ಮಾತರಂ: ಸಿಎಂ ಡಿಕೆಶಿಗೆ ರಾಜ್ಯಪಾಲರು ಬರೆದ 4 ಪುಟ ಪತ್ರದ ವಿವರ ಹೀಗಿದೆ
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ: ನಟ ಅನಂತ್ ನಾಗ್​ಗೆ ವಿಶೇಷ ಗೌರವ
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ: ನಟ ಅನಂತ್ ನಾಗ್​ಗೆ ವಿಶೇಷ ಗೌರವ
ಎಚ್​​​ಕೆ ಪಾಟೀಲ್ ರಾಜೀನಾಮೆ ಎಚ್ಚರಿಕೆಗೆ ಡಿಕೆಶಿ ಪ್ರತಿಕ್ರಿಯೆ ಇಲ್ಲಿದೆ
ಎಚ್​​​ಕೆ ಪಾಟೀಲ್ ರಾಜೀನಾಮೆ ಎಚ್ಚರಿಕೆಗೆ ಡಿಕೆಶಿ ಪ್ರತಿಕ್ರಿಯೆ ಇಲ್ಲಿದೆ
ಧಾರವಾಡದಲ್ಲಿ ಶಾಲಾ ಕಟ್ಟಡ ಧ್ವಂಸ: ವಿದ್ಯಾರ್ಥಿಗಳಿಗೆ ಪೆಂಡಾಲ್ ಅಡಿ ಪಾಠ
ಧಾರವಾಡದಲ್ಲಿ ಶಾಲಾ ಕಟ್ಟಡ ಧ್ವಂಸ: ವಿದ್ಯಾರ್ಥಿಗಳಿಗೆ ಪೆಂಡಾಲ್ ಅಡಿ ಪಾಠ
ಟಾಸ್ಕ್ ವೇಳೆ ಚುಚ್ಚು ಮಾತು, ಕಣ್ಣೀರು ಹಾಕಿದ ಆಸಿಯಾ
ಟಾಸ್ಕ್ ವೇಳೆ ಚುಚ್ಚು ಮಾತು, ಕಣ್ಣೀರು ಹಾಕಿದ ಆಸಿಯಾ
ಅಡಿಕೆ ಹಾಳೆಯಿಂದ ಎಥೆನಾಲ್ ಉತ್ಪಾದಿಸುವ ಸಂಶೋಧನೆ ಯಶಸ್ವಿ
ಅಡಿಕೆ ಹಾಳೆಯಿಂದ ಎಥೆನಾಲ್ ಉತ್ಪಾದಿಸುವ ಸಂಶೋಧನೆ ಯಶಸ್ವಿ
ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಗಳ ಕಾಲಿಗೆ ಗುಂಡೇಟು
ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಗಳ ಕಾಲಿಗೆ ಗುಂಡೇಟು
72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ: LIVE ಇಲ್ಲಿ ನೋಡಿ
72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ: LIVE ಇಲ್ಲಿ ನೋಡಿ