AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

5ಜಿ ನೆಟ್ವರ್ಕ್ ಅಳವಡಿಕೆ; ಜಿಯೋ ವೇಗಕ್ಕೆ ಇಲ್ಲ ಸಾಟಿ: ಆಕಾಶ್ ಅಂಬಾನಿ

ರಿಲಯನ್ಸ್ ಜಿಯೋ ಇನ್ಫೋಕಾಮ್ ಅಧ್ಯಕ್ಷ ಆಕಾಶ್ ಅಂಬಾನಿ ಪ್ರಕಾರ, ಮುಂದಿನ ಐದು ವರ್ಷದಲ್ಲಿ 31.4 ಕೋಟಿ ಹೊಸ ಮೊಬೈಲ್ ಬಳಕೆದಾರರು ಸೇರ್ಪಡೆಯಾಗಲಿದ್ದಾರೆ. ದೇಶದಲ್ಲಿ ಬ್ರಾಡ್​ಬ್ಯಾಂಡ್ ವಿಸ್ತರಣೆ ಸಣ್ಣ ನಗರಗಳಲ್ಲಿ ಹೆಚ್ಚಾಗಲಿದೆ ಎಂದೂ ಅವರು ಹೇಳಿದ್ದಾರೆ. ಜಿಯೋ ಪ್ಲಾಟ್​ಫಾರ್ಮ್ಸ್ ಐಪಿಒ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

5ಜಿ ನೆಟ್ವರ್ಕ್ ಅಳವಡಿಕೆ; ಜಿಯೋ ವೇಗಕ್ಕೆ ಇಲ್ಲ ಸಾಟಿ: ಆಕಾಶ್ ಅಂಬಾನಿ
ಆಕಾಶ್ ಅಂಬಾನಿImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 15, 2026 | 8:27 PM

Share

ಮುಂಬೈ, ಅಕ್ಟೋಬರ್ 15: ರಿಲಯನ್ಸ್ ಜಿಯೋ ಇನ್ಫೋಕಾಮ್ ಅಧ್ಯಕ್ಷ ಆಕಾಶ್ ಅಂಬಾನಿ (Akash Ambani) ಅವರು ಜಿಯೋದ ಇತ್ತೀಚಿನ ಬೆಳವಣಿಗೆ ಹಾಗೂ ಗ್ರಾಹಕರ ವಿಸ್ತರಣೆಯ ಕುರಿತು ಪ್ರಮುಖ ಅಂಕಿಅಂಶಗಳನ್ನು ಹಂಚಿಕೊಂಡಿದ್ದಾರೆ. ಜಿಯೋ ನೆಟ್‌ವರ್ಕ್ ಅಡಿಯಲ್ಲಿ ಬೃಹತ್ ಪ್ರಮಾಣದಲ್ಲಿ ಹೊಸ ಮೊಬಿಲಿಟಿ ಬಳಕೆದಾರರು ಸೇರ್ಪಡೆಗೊಳ್ಳುತ್ತಿದ್ದಾರೆ. ಮುಂದಿನ ಐದು ವರ್ಷದಲ್ಲಿ ಬಳಕೆದಾರರ ಸಂಖ್ಯೆ 31.4 ಕೋಟಿಗೂ ಸೇರ್ಪಡೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜಿಯೋ ಪ್ಲಾಟ್​ಫಾರ್ಮ್ಸ್ ಐಪಿಒ ಸಂಬಂಧಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಆಕಾಶ್ ಅಂಬಾನಿ, ಭಾರತದಾದ್ಯಂತ ಡಿಜಿಟಲ್ ಸಂಪರ್ಕವು ಮಹಾನಗರಗಳಷ್ಟೇ ಅಲ್ಲದೆ, ಮೂಲೆಮೂಲೆಗಳಿಗೂ ತಲುಪುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ದೂರದೃಷ್ಟಿ ಮತ್ತು ಆರ್ಥಿಕ ಶಿಸ್ತಿನಿಂದಲೇ ರಿಲಯನ್ಸ್ ಸಂಸ್ಥೆ ಬೃಹತ್ ಯಶಸ್ಸು ಸಾಧಿಸಿದೆ: ಇಶಾ ಅಂಬಾನಿ

ಸಣ್ಣ ನಗರಗಳಿಂದ ಬ್ರಾಂಡ್‌ಬ್ಯಾಂಡ್‌ ಬೇಡಿಕೆ

ಕೇವಲ ದೊಡ್ಡ ನಗರಗಳಿಗೆ ಮಾತ್ರ ಸೀಮಿತವಾಗದೆ, ಜಿಯೋದ ಒಟ್ಟು ಹೊಸ ಬ್ರಾಂಡ್‌ಬ್ಯಾಂಡ್‌ ಸೇರ್ಪಡೆಗಳ ಪೈಕಿ ಶೇ. 40ರಷ್ಟು ಪಾಲು ಸಣ್ಣ ಪಟ್ಟಣಗಳು ಹಾಗೂ ಗ್ರಾಮೀಣ ಪ್ರದೇಶಗಳಿಂದ ಬಂದಿರುವುದು ವಿಶೇಷ. ಇದು ಭಾರತದಾದ್ಯಂತ ಡಿಜಿಟಲ್ ಕ್ರಾಂತಿಯ ವ್ಯಾಪ್ತಿ ಎಷ್ಟು ಆಳಕ್ಕಿದೆ ಎಂಬುದನ್ನು ತೋರಿಸುತ್ತದೆ ಎಂದು ಆಕಾಶ್ ಅಂಬಾನಿ ತಿಳಿಸಿದ್ದಾರೆ.

ಮುಂದಿನ ಐದು ವರ್ಷದಲ್ಲಿ 31 ಕೋಟಿ ಹೊಸ ಗ್ರಾಹಕರನ್ನು ಹೇಗೆ ಸಿಗಬಹುದು ಎನ್ನುವುದಕ್ಕೆ ಅವರು ಒಂದು ತಾರ್ಕಿಕ ವಿವರಣೆ ಕೊಟ್ಟಿದ್ದಾರೆ. 10 ಕೋಟಿ ಸಂಖ್ಯೆಯಷ್ಟು ಜನರು ಅಗತ್ಯ ವಯಸ್ಕ ಹಂತಕ್ಕೆ ಬರುವುದರಿಂದ ಅವರೆಲ್ಲರೂ ಮೊದಲ ಬಾರಿಗೆ ಸಿಮ್ ಕಾರ್ಡ್ ಪಡೆಯುವ ನಿರೀಕ್ಷೆ ಇದೆ. ಹಾಗೆಯೇ, 24 ಕೋಟಿ ಜನರು 2ಜಿ ನೆಟ್ವರ್ಕ್​ಗಳಲ್ಲೇ ಇದ್ದಾರೆ. ಅವರು 4ಜಿ ಅಥವಾ 5ಜಿ ಸೇವೆಗಳಿಗೆ ಬರಬಹುದು ಎಂದು ತಮ್ಮ ಲೆಕ್ಕಾಚಾರವನ್ನು ಆಕಾಶ್ ಅಂಬಾನಿ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: ಜಿಯೋ ಐಪಿಒ ಭಾರತದ ಡಿಜಿಟಲ್ ಪರಿವರ್ತನೆಯ ಐತಿಹಾಸಿಕ ಕ್ಷಣ: ಉದಯ್ ಕೋಟಕ್

5ಜಿ ನೆಟ್ವರ್ಕ್ ಅಳವಡಿಕೆ: ಜಿಯೋ ವೇಗಕ್ಕೆ ಇಲ್ಲ ಸಾಟಿ

ರಿಲಯನ್ಸ್ ಜಿಯೋ ಭಾರತದಲ್ಲಿ 5ಜಿ ನೆಟ್ವರ್ಕ್ ಅನ್ನು ಅದ್ವಿತೀಯ ವೇಗದಲ್ಲಿ ಅಳವಡಿಸಿದೆ. ಕೇವಲ 19 ತಿಂಗಳಲ್ಲಿ ಶೇ. 99ರಷ್ಟು ಜನಸಂಖ್ಯೆಯನ್ನು ವ್ಯಾಪಿಸಿದೆ. ಇಷ್ಟು ವೇಗವಾಗಿ ಇಷ್ಟು ವ್ಯಾಪಕವಾಗಿ ಮೂಲಸೌಕರ್ಯ ಅಳವಡಿಕೆಯನ್ನು ಬೇರೆಯವರು ಸಾಧಿಸುವುದು ಕಷ್ಟ. ಕೇವಲ ಮೂರು ವರ್ಷಗಳ ಹಿಂದೆ 5ಜಿ ಸೇವೆ ಅಳವಡಿಕೆ ಆರಂಭಿಸಿದ ಜಿಯೋ ಇವತ್ತು ಚೀನಾದಿಂದ ಆಚೆ ವಿಶ್ವದಲ್ಲೇ ಅತಿಹೆಚ್ಚು 5ಜಿ ಬಳಕೆದಾರರ ಬಳಗ ಹೊಂದಿದೆ ಎಂದು ಆಕಾಶ್ ಅಂಬಾನಿ ವಿವರಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
'ನಕ್ಸಲಿಸಂನ ಎಲ್ಲ ಕುರುಹನ್ನೂ ಅಳಿಸಿಹಾಕಬೇಕು'; ಅಮಿತ್ ಶಾ ಹೇಳಿಕೆ
'ನಕ್ಸಲಿಸಂನ ಎಲ್ಲ ಕುರುಹನ್ನೂ ಅಳಿಸಿಹಾಕಬೇಕು'; ಅಮಿತ್ ಶಾ ಹೇಳಿಕೆ
ಹಾರ್ಮುಜ್ ಜಲಸಂಧಿಯಲ್ಲಿ ಮುಳುಗಿದ ಹಡಗು; ಸಮುದ್ರದಲ್ಲಿ ತೇಲಾಡಿದ ಐಫೋನ್‌ಗಳು
ಹಾರ್ಮುಜ್ ಜಲಸಂಧಿಯಲ್ಲಿ ಮುಳುಗಿದ ಹಡಗು; ಸಮುದ್ರದಲ್ಲಿ ತೇಲಾಡಿದ ಐಫೋನ್‌ಗಳು
ಸ್ಟಿಂಗ್ ಆಪರೇಷನ್: ಉನ್ನತ ಮಟ್ಟದ ತನಿಖೆಗೆ ನೀಡಲು ಸರ್ಕಾರ ಹಿಂದೇಟು!
ಸ್ಟಿಂಗ್ ಆಪರೇಷನ್: ಉನ್ನತ ಮಟ್ಟದ ತನಿಖೆಗೆ ನೀಡಲು ಸರ್ಕಾರ ಹಿಂದೇಟು!
ಸೂಳೆಕೆರೆಯ ಋಣ ತೀರಿಸಲು ಮುಂದಾದ ರೈತರು
ಸೂಳೆಕೆರೆಯ ಋಣ ತೀರಿಸಲು ಮುಂದಾದ ರೈತರು
ಬರಪೀಡಿತ ಪಟ್ಟಿಗೆ 9 ತಾಲೂಕುಗಳ ಸೇರ್ಪಡೆ: ತಾಲೂಕುಗಳ ಸಂಖ್ಯೆ 226ಕ್ಕೆ ಏರಿಕೆ
ಬರಪೀಡಿತ ಪಟ್ಟಿಗೆ 9 ತಾಲೂಕುಗಳ ಸೇರ್ಪಡೆ: ತಾಲೂಕುಗಳ ಸಂಖ್ಯೆ 226ಕ್ಕೆ ಏರಿಕೆ
ಸಿಎಂ ಡಿಕೆ ಶಿವಕುಮಾರ್ ಮನೆಗೆ ಭೇಟಿ ನೀಡಿದ ಹಿರಿಯ ನಟ ದೇವರಾಜ್ ಕುಟುಂಬ
ಸಿಎಂ ಡಿಕೆ ಶಿವಕುಮಾರ್ ಮನೆಗೆ ಭೇಟಿ ನೀಡಿದ ಹಿರಿಯ ನಟ ದೇವರಾಜ್ ಕುಟುಂಬ
ಶ್ರೀರಂಗಪಟ್ಟಣ ದಸರಾ ವೈಭವಕ್ಕೆ ಚಾಲನೆ: ಚಾಮುಂಡೇಶ್ವರಿಗೆ ಪುಷ್ಪಾರ್ಚನೆ
ಶ್ರೀರಂಗಪಟ್ಟಣ ದಸರಾ ವೈಭವಕ್ಕೆ ಚಾಲನೆ: ಚಾಮುಂಡೇಶ್ವರಿಗೆ ಪುಷ್ಪಾರ್ಚನೆ
‘ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದು’: ಗಾನವಿ ಬಗ್ಗೆ ಗಗನ್ ಚಿನ್ನಪ್ಪ ಟೀಕೆ
‘ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದು’: ಗಾನವಿ ಬಗ್ಗೆ ಗಗನ್ ಚಿನ್ನಪ್ಪ ಟೀಕೆ
ರಾಹುಲ್ ಗಾಂಧಿ, ಪ್ರಿಯಾಂಕಾದೂ ಸ್ಟಿಂಗ್ ವಿಡಿಯೋ ಬರಬಹುದು: ಎಚ್​​ಡಿಕೆ
ರಾಹುಲ್ ಗಾಂಧಿ, ಪ್ರಿಯಾಂಕಾದೂ ಸ್ಟಿಂಗ್ ವಿಡಿಯೋ ಬರಬಹುದು: ಎಚ್​​ಡಿಕೆ
ಲಡಾಖ್‌ಗೆ 3,350 ಕೋಟಿ ರೂ. ಯೋಜನೆಗಳ ಕೊಡುಗೆ
ಲಡಾಖ್‌ಗೆ 3,350 ಕೋಟಿ ರೂ. ಯೋಜನೆಗಳ ಕೊಡುಗೆ