AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೂರದೃಷ್ಟಿ ಮತ್ತು ಆರ್ಥಿಕ ಶಿಸ್ತಿನಿಂದಲೇ ರಿಲಯನ್ಸ್ ಸಂಸ್ಥೆ ಬೃಹತ್ ಯಶಸ್ಸು ಸಾಧಿಸಿದೆ: ಇಶಾ ಅಂಬಾನಿ

ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ದೀರ್ಘಕಾಲೀನ ದೂರದೃಷ್ಟಿ ಮತ್ತು ಕಟ್ಟುನಿಟ್ಟಾದ ಆರ್ಥಿಕ ಶಿಸ್ತನ್ನು ಅಳವಡಿಸಿಕೊಳ್ಳುವ ಮೂಲಕ ತನ್ನ ವ್ಯವಹಾರಗಳನ್ನು ಯಶಸ್ವಿಯಾಗಿ ವಿಸ್ತರಿಸಿದೆ ಎಂದು ರಿಲಯನ್ಸ್ ರಿಟೇಲ್ ಮುಖ್ಯಸ್ಥೆ ಇಶಾ ಅಂಬಾನಿ ತಿಳಿಸಿದ್ದಾರೆ. ಅಲ್ಪಾವಧಿ ಲಾಭದ ಬದಲು ದೀರ್ಘಾವಧಿ ಗುರಿಯೊಂದಿಗೆ ಹೂಡಿಕೆ ಮಾಡುವುದು ರಿಲಯನ್ಸ್​ನ ಕಾರ್ಯಶೈಲಿ ಎಂದು ಅವರು ಹೇಳಿದ್ದಾರೆ.

ದೂರದೃಷ್ಟಿ ಮತ್ತು ಆರ್ಥಿಕ ಶಿಸ್ತಿನಿಂದಲೇ ರಿಲಯನ್ಸ್ ಸಂಸ್ಥೆ ಬೃಹತ್ ಯಶಸ್ಸು ಸಾಧಿಸಿದೆ: ಇಶಾ ಅಂಬಾನಿ
ಇಶಾ ಅಂಬಾನಿImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 15, 2026 | 7:58 PM

Share

ಮುಂಬೈ, ಅಕ್ಟೋಬರ್ 15: ರಿಲಯನ್ಸ್ ಇಂಡಸ್ಟ್ರೀಸ್ ಜಾಗತಿಕ ಮಟ್ಟದಲ್ಲಿ ಸಾಧಿಸಿರುವ ಬೆರಗುಗೊಳಿಸುವ ಯಶಸ್ಸಿನ ಹಿಂದೆ ದೀರ್ಘಕಾಲೀನ ದೂರದೃಷ್ಟಿ ಹಾಗೂ ಬಲವಾದ ಆರ್ಥಿಕ ಶಿಸ್ತು ಪ್ರಮುಖ ಪಾತ್ರವಹಿಸಿವೆ ಎಂದು ರಿಲಯನ್ಸ್ ರಿಟೇಲ್ ನಿರ್ದೇಶಕಿ ಇಶಾ ಅಂಬಾನಿ (Isha Ambani) ಅಭಿಪ್ರಾಯಪಟ್ಟಿದ್ದಾರೆ. ಜಿಯೋ ಪ್ಲಾಟ್​ಫಾರ್ಮ್ಸ್​ನ ಐಪಿಒ ಕುರಿತ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮುಕೇಶ್ ಅಂಬಾನಿ ಅವರ ಪುತ್ರಿಯೂ ಆದ ಇಶಾ ಅಂಬಾನಿ, ಅವರು ತಮ್ಮ ಸಂಸ್ಥೆಯ ಆದ್ಯತೆಗಳು, ಸ್ವಭಾವಗಳ ಕುರಿತ ಮಾಹಿತಿ ನೀಡಿದರು.

ಕೇವಲ ಅಲ್ಪಾವಧಿಯ ಲಾಭಕ್ಕಿಂತ ದೀರ್ಘಕಾಲೀನ ಗುರಿಗಳೊಂದಿಗೆ ಬಂಡವಾಳ ಹೂಡಿಕೆ ಮಾಡುವುದು ಮತ್ತು ವ್ಯವಹಾರವನ್ನು ಮುನ್ನಡೆಸುವುದೇ ರಿಲಯನ್ಸ್‌ನ ಸಾಂಪ್ರದಾಯಿಕ ಕಾರ್ಯಶೈಲಿಯಾಗಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್​ನ ನಾನ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಕೂಡ ಆಗಿರುವ ಇಶಾ ಅಂಬಾನಿ ತಿಳಿಸಿದರು.

ಇದನ್ನೂ ಓದಿ: ಜಿಯೋ ಐಪಿಒ ಭಾರತದ ಡಿಜಿಟಲ್ ಪರಿವರ್ತನೆಯ ಐತಿಹಾಸಿಕ ಕ್ಷಣ: ಉದಯ್ ಕೋಟಕ್

ಆರ್ಥಿಕ ಶಿಸ್ತು ಮತ್ತು ಮೌಲ್ಯ ಸೃಷ್ಟಿ

ಬೃಹತ್ ಯೋಜನೆಗಳನ್ನು ಕೈಗೊಳ್ಳುವಾಗಲೂ ಆರ್ಥಿಕ ನಿಯಮಗಳು ಹಾಗೂ ಜವಾಬ್ದಾರಿಯುತ ನಿರ್ವಹಣೆಗೆ (Financial Prudence) ಸಂಸ್ಥೆ ಹೆಚ್ಚಿನ ಆದ್ಯತೆ ನೀಡಿದೆ. ಜಿಯೋ ಐಪಿಒ (Jio IPO) ಹಾಗೂ ರಿಲಯನ್ಸ್‌ನ ಇತರ ಪ್ರಮುಖ ವ್ಯವಹಾರಗಳ ಪ್ರಗತಿಯು ಇದೇ ಬಲವಾದ ಬುನಾದಿಯ ಮೇಲೆ ನಿಂತಿವೆ ಎಂದು ಅವರು ಅಭಿಪ್ರಾಯಪಟ್ಟರು.

ತಮ್ಮ ಅಜ್ಜ ಹಾಗೂ ರಿಲಯನ್ಸ್ ಸಂಸ್ಥಾಪಕ ಧೀರೂಭಾಯ್ ಅಂಬಾನಿ ಅವರ ದೃಷ್ಟಿ ಕುರಿತು ಮಾತನಾಡಿದ ಇಶಾ, ‘ಅವರಿಗೆ ರಿಲಯನ್ಸ್ ಒಂದು ಕಂಪನಿ ಮಾತ್ರವೇ ಆಗಿರಲಿಲ್ಲ. ಭಾರತದ ಪ್ರಗತಿ ಮತ್ತು ಸಮೃದ್ಧತೆಯಲ್ಲಿ ಪಾಲ್ಗೊಳ್ಳಲು ಪ್ರತಿಯೊಬ್ಬ ಭಾರತೀಯನಿಗೂ ರಿಲಯನ್ಸ್ ಒಂದು ಭರವಸೆಯಾಗಬೇಕು ಎನ್ನುವ ಕನಸಿತ್ತು. ಪ್ರತಿಯೊಬ್ಬರೂ ಉತ್ತಮ ಭವಿಷ್ಯ ಸಿಗುವ ನಂಬಿಕೆ ಹೊಂದಬೇಕು ಎನ್ನುವ ಕನಸಿತ್ತು’ ಎಂದು ಹೇಳಿದರು.

ಇದನ್ನೂ ಓದಿ: ಜಿಯೋ ಪ್ಲಾಟ್​ಫಾರ್ಮ್ಸ್ 30,213 ಕೋಟಿ ರೂ ಐಪಿಒ: ಭಾರತದ ಇತಿಹಾಸದಲ್ಲೇ ಅತಿದೊಡ್ಡದು; ಶೇರುಬೆಲೆ, ದಿನಾಂಕ, ಹೂಡಿಕೆ ಇತ್ಯಾದಿ ವಿವರ

‘ಬೆಳವಣಿಗೆಯೇ ಜೀವ ಎನ್ನುವುದು ನಮ್ಮ ಚಿಂತನೆ. ಮೂರು ತಲೆಮಾರುಗಳ ನಂತರ ನಾನು, ಆಕಾಶ್ ಮತ್ತು ಅನಂತ್ ಈ ಚಿಂತನೆಗೆ ಸಂಪೂರ್ಣ ಬದ್ಧರಾಗಿದ್ದೇವೆ. ಈ ಚಿಂತನೆ ಮುಂದುವರಿಸಿಕೊಂಡು ಹೋಗುತ್ತಿರುವುದು ಮಾತ್ರವಲ್ಲ, ಇದರ ಮೇಲೆ ನಂಬಿಕೆ ಇಟ್ಟ ಕೋಟ್ಯಂತರ ಷೇರುದಾರರ ವಿಶ್ವಾಸವನ್ನೂ ಉಳಿಸಿಕೊಂಡಿದ್ದೇವೆ’ ಎಂದು ಇಶಾ ಅಂಬಾನಿ ಅಭಿಪ್ರಾಯಪಟ್ಟರು.

ಜಿಯೋ ಪ್ಲಾಟ್​ಫಾರ್ಮ್ಸ್ ಐತಿಹಾಸಿಕ ಐಪಿಒ ಇದೇ ಅಕ್ಟೋಬರ್ 21ರಿಂದ 23ರವರೆಗೆ ಇದೆ. ಇದು ದೇಶದ ಅತಿದೊಡ್ಡ ಐಪಿಒ ಎನಿಸಿದೆ. 27 ಕೋಟಿ ಹೊಸ ಷೇರುಗಳು ವಿತರಣೆ ಆಗುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಹಾರ್ಮುಜ್ ಜಲಸಂಧಿಯಲ್ಲಿ ಮುಳುಗಿದ ಹಡಗು; ಸಮುದ್ರದಲ್ಲಿ ತೇಲಾಡಿದ ಐಫೋನ್‌ಗಳು
ಹಾರ್ಮುಜ್ ಜಲಸಂಧಿಯಲ್ಲಿ ಮುಳುಗಿದ ಹಡಗು; ಸಮುದ್ರದಲ್ಲಿ ತೇಲಾಡಿದ ಐಫೋನ್‌ಗಳು
ಸ್ಟಿಂಗ್ ಆಪರೇಷನ್: ಉನ್ನತ ಮಟ್ಟದ ತನಿಖೆಗೆ ನೀಡಲು ಸರ್ಕಾರ ಹಿಂದೇಟು!
ಸ್ಟಿಂಗ್ ಆಪರೇಷನ್: ಉನ್ನತ ಮಟ್ಟದ ತನಿಖೆಗೆ ನೀಡಲು ಸರ್ಕಾರ ಹಿಂದೇಟು!
ಸೂಳೆಕೆರೆಯ ಋಣ ತೀರಿಸಲು ಮುಂದಾದ ರೈತರು
ಸೂಳೆಕೆರೆಯ ಋಣ ತೀರಿಸಲು ಮುಂದಾದ ರೈತರು
ಬರಪೀಡಿತ ಪಟ್ಟಿಗೆ 9 ತಾಲೂಕುಗಳ ಸೇರ್ಪಡೆ: ತಾಲೂಕುಗಳ ಸಂಖ್ಯೆ 226ಕ್ಕೆ ಏರಿಕೆ
ಬರಪೀಡಿತ ಪಟ್ಟಿಗೆ 9 ತಾಲೂಕುಗಳ ಸೇರ್ಪಡೆ: ತಾಲೂಕುಗಳ ಸಂಖ್ಯೆ 226ಕ್ಕೆ ಏರಿಕೆ
ಸಿಎಂ ಡಿಕೆ ಶಿವಕುಮಾರ್ ಮನೆಗೆ ಭೇಟಿ ನೀಡಿದ ಹಿರಿಯ ನಟ ದೇವರಾಜ್ ಕುಟುಂಬ
ಸಿಎಂ ಡಿಕೆ ಶಿವಕುಮಾರ್ ಮನೆಗೆ ಭೇಟಿ ನೀಡಿದ ಹಿರಿಯ ನಟ ದೇವರಾಜ್ ಕುಟುಂಬ
ಶ್ರೀರಂಗಪಟ್ಟಣ ದಸರಾ ವೈಭವಕ್ಕೆ ಚಾಲನೆ: ಚಾಮುಂಡೇಶ್ವರಿಗೆ ಪುಷ್ಪಾರ್ಚನೆ
ಶ್ರೀರಂಗಪಟ್ಟಣ ದಸರಾ ವೈಭವಕ್ಕೆ ಚಾಲನೆ: ಚಾಮುಂಡೇಶ್ವರಿಗೆ ಪುಷ್ಪಾರ್ಚನೆ
‘ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದು’: ಗಾನವಿ ಬಗ್ಗೆ ಗಗನ್ ಚಿನ್ನಪ್ಪ ಟೀಕೆ
‘ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದು’: ಗಾನವಿ ಬಗ್ಗೆ ಗಗನ್ ಚಿನ್ನಪ್ಪ ಟೀಕೆ
ರಾಹುಲ್ ಗಾಂಧಿ, ಪ್ರಿಯಾಂಕಾದೂ ಸ್ಟಿಂಗ್ ವಿಡಿಯೋ ಬರಬಹುದು: ಎಚ್​​ಡಿಕೆ
ರಾಹುಲ್ ಗಾಂಧಿ, ಪ್ರಿಯಾಂಕಾದೂ ಸ್ಟಿಂಗ್ ವಿಡಿಯೋ ಬರಬಹುದು: ಎಚ್​​ಡಿಕೆ
ಲಡಾಖ್‌ಗೆ 3,350 ಕೋಟಿ ರೂ. ಯೋಜನೆಗಳ ಕೊಡುಗೆ
ಲಡಾಖ್‌ಗೆ 3,350 ಕೋಟಿ ರೂ. ಯೋಜನೆಗಳ ಕೊಡುಗೆ
ದಸರಾ, ದೀಪಾವಳಿ: ರಾಜ್ಯಾದ್ಯಂತ ಸಿಹಿ ತಿಂಡಿ ಅಂಗಡಿಗಳ ಮೇಲೆ FSSAI ದಾಳಿ
ದಸರಾ, ದೀಪಾವಳಿ: ರಾಜ್ಯಾದ್ಯಂತ ಸಿಹಿ ತಿಂಡಿ ಅಂಗಡಿಗಳ ಮೇಲೆ FSSAI ದಾಳಿ