Jobs: 2013ರಿಂದ ಈಚೆಗೆ ಶೇ 29ರಷ್ಟು ಉದ್ಯೋಗ ಹೆಚ್ಚಳವಾಗಿದೆ ಎನ್ನುತ್ತಿದೆ ಈ ಸಮೀಕ್ಷೆ
2013ರಿಂದ ಈಚೆಗೆ ಉದ್ಯೋಗದಲ್ಲಿ ಶೇ 29ರಷ್ಟು ಹೆಚ್ಚಳ ಆಗಿದೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ. ಇಲ್ಲಿದೆ ಆ ಬಗ್ಗೆ ಮಾಹಿತಿ.
ಅಖಿಲ ಭಾರತ ತ್ರೈಮಾಸಿಕ ಸಂಸ್ಥೆಗಳ ಆಧಾರಿತವಾದ ಸಮೀಕ್ಷೆಯೊಂದರ ವರದಿಯನ್ನು ಸೋಮವಾರ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಹೇಳಿರುವಂತೆ, 2013- 14ರ ಮೂಲ ವರ್ಷ (Base Year) ಲೆಕ್ಕಕ್ಕೆ ತೆಗೆದುಕೊಂಡರೆ ಒಟ್ಟಾರೆ ಉದ್ಯೋಗ ಪ್ರಮಾಣವು ಶೇ 29ರಷ್ಟು ಜಾಸ್ತಿ ಆಗಿದೆ. ಆದರೆ ಸಂಸ್ಥೆಗಳ ಸಮೀಕ್ಷೆ ಪ್ರಕಾರ, 2021ರ ಏಪ್ರಿಲ್ನಿಂದ ಜೂನ್ ತ್ರೈಮಾಸಿಕದಲ್ಲಿ ಕೊರೊನಾಗೆ ಸಂಬಂಧಿಸಿದಂತೆ ಶೇ 27ರಷ್ಟು ಸಂಸ್ಥೆಗಳು ಉದ್ಯೋಗದಿಂದ ತೆಗೆದಿವೆ ಎಂದು ವರದಿ ಆಗಿದೆ. ಕಾರ್ಮಿಕ ಹಾಗೂ ಉದ್ಯೋಗ ಸಚಿವ ಭೂಪೇಂದರ್ ಯಾದವ್ ಅವರು ಈ ವರದಿಯನ್ನು ಬಿಡುಗಡೆ ಮಾಡಿದ್ದು, ಈ ಸಮೀಕ್ಷೆಯಲ್ಲಿ ಹತ್ತಕ್ಕೂ ಹೆಚ್ಚು ಉದ್ಯೋಗಿಗಳನ್ನು ನೇಮಿಸಿಕೊಂಡಿರುವ 10,593 ಸಂಸ್ಥೆಗಳನ್ನು ಅಧ್ಯಯನ ಮಾಡಲಾಗಿದೆ. ಅಂಥ ಸಂಸ್ಥೆಗಳ ಒಟ್ಟಾರೆ ಶೇ 85ರಷ್ಟು ಆಗುವ ಪ್ರಮಾಣದ 9 ವಲಯಗಳಿಗೆ ಈ ಸಮೀಕ್ಷೆ ವ್ಯಾಪಿಸಿತ್ತು. ಒಟ್ಟಾರೆಯಾಗಿ 2013-14ರ ಆರನೇ ಆರ್ಥಿಕ ಜನಗಣತಿ ವೇಳೆ ಇದ್ದ 2.37 ಕೋಟಿಗೆ ಹೋಲಿಸಿದಲ್ಲಿ ಮೊದಲ ತ್ರೈಮಾಸಿಕದಲ್ಲಿ 3.08 ಕೋಟಿ ಇದ್ದಾರೆ.
ವ್ಯಾಪಾರ ಮತ್ತು ವಾಸ್ತವ್ಯ ಹಾಗೂ ರೆಸ್ಟೋರೆಂಟ್ಗಳು ಈ ಎರಡು ವಲಯಗಳನ್ನು ಹೊರತುಪಡಿಸಿ ಎಲ್ಲವೂ ಈ ಅವಧಿಯಲ್ಲಿ ಏರಿಕೆಯನ್ನು ದಾಖಲಿಸಿವೆ. ವರದಿಯಲ್ಲಿ ಇರುವಂತೆ, ಐಟಿ/ಬಿಪಿಒ ವಲಯದಲ್ಲಿ ಅದ್ಭುತವಾದ ಬೆಳವಣಿಗೆ (ಶೇ 152) ದಾಖಲಾಗಿದೆ. ಆ ನಂತರದ ಸ್ಥಾನದಲ್ಲಿ ಆರೋಗ್ಯ (ಶೇ 77), ಸಾರಿಗೆ (ಶೇ 68), ಹಣಕಾಸು ಸೇವೆಗಳು (ಶೇ 48), ನಿರ್ಮಾಣ (ಶೇ 42), ಶಿಕ್ಷಣ (ಶೇ 39) ಹಾಗೂ ಉತ್ಪಾದನೆ (ಶೇ 22) ಬೆಳವಣಿಗೆ ಆಗಿದೆ. ಸಂಸ್ಥೆಗಳ ಪೈಕಿ ಉತ್ಪಾದನೆಯಲ್ಲಿ ತೊಡಗಿಕೊಂಡಿರುವುದರ ಪಾಲು ಶೇ 41ರಷ್ಟಿದ್ದರೆ, ಆ ನಂತರ ಶಿಕ್ಷಣ (ಶೇ 22) ಹಾಗೂ ಆರೋಗ್ಯ (ಶೇ 22) ಇದೆ. ಇನ್ನು ವ್ಯಾಪಾರದಲ್ಲಿ (ಶೇ 25) ಹಾಗೂ ವಾಸ್ತವ್ಯ ಮತ್ತು ರೆಸ್ಟೋರೆಂಟ್ (ಶೇ 13) ಇಳಿಕೆ ಆಗಿದೆ. ಇದಕ್ಕೆ ಕೊರೊನಾ ಬಿಕ್ಕಟ್ಟು ಕಾರಣ ಎಂದು ಸಚಿವರು ಹೇಳಿದ್ದಾರೆ.
ಮಹಿಳಾ ಕಾರ್ಮಿಕರ ಇಳಿಕೆ ಮಹಿಳಾ ಕಾರ್ಮಿಕರ ಸಂಖ್ಯೆಯಲ್ಲೂ ಇಳಿಕೆ ಆಗಿದೆ. ಆರನೇ ಆರ್ಥಿಕ ಸಮೀಕ್ಷೆಯಲ್ಲಿ ಶೇ 31ರಷ್ಟು ಇದ್ದದ್ದು ಮೊದಲ ತ್ರೈಮಾಸಿಕ ಸಮೀಕ್ಷೆಯಲ್ಲಿ ಶೇ 29ಕ್ಕೆ ಇಳಿಕೆ ಆಗಿದೆ. ಈ ಸಮೀಕ್ಷೆಯ ಪ್ರಾಮುಖ್ಯದ ಬಗ್ಗೆ ಸಚಿವ ಯಾದವ್ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಗಮನ ಎಲ್ಲ ಪುರಾವೆ ಆಧಾರಿತವಾದ ನೀತಿ ನಿರೂಪಣೆ ಹಾಗೂ ಅಂಕಿ- ಸಂಖ್ಯೆ ಆಧಾರಿತ ಅನುಷ್ಠಾನದಲ್ಲಿ ಇರುವಂಥದ್ದು ಎಂದು ಹೇಳಿದ್ದಾರೆ. ಈ ಸಮೀಕ್ಷೆ ಮತ್ತು ಇತರರು ಅಸಂಘಟಿತ ವಲಯವು ಕಾರ್ಮಿಕ ಸಮೀಕ್ಷೆಯಿಂದ ಮಾಡಲಾಗುತ್ತದೆ, ಇದರಿಂದ ನೀತಿ ನಿರೂಪಣೆಗೆ ಸಹಾಯ ಆಗುತ್ತದೆ. ಮುಂದುವರಿದು ಮಾತನಾಡಿದ ಯಾದವ್, ಕೊವಿಡ್-19 ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಶೇ 27ರಷ್ಟು ಸಂಸ್ಥೆಗಳಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಾಗಿದೆ. ಇನ್ನು ಅಂಥ ಸನ್ನಿವೇಶದಲ್ಲೂ ಬೆಳ್ಳಿಗೆರೆ ಏನೆಂದರೆ ಲಾಕ್ಡೌನ್ ಅವಧಿಯಲ್ಲಿ (ಮಾರ್ಚ್ 25ರಿಂದ ಜೂನ್ 30, 20ರ ಮಧ್ಯೆ) ಶೇ 81ರಷ್ಟು ಮಂದಿಗೆ ಪೂರ್ತಿ ವೇತನ ಸಿಕ್ಕಿದೆ.
ನೀತಿ ನಿರೂಪಕರಿಗೆ ಅನುಕೂಲ ಈ ಹಿಂದೆ, ವಾಸ್ತವದ ಡೇಟಾ ಇರುವುದರಿಂದ ನೀತಿ ನಿರೂಪಕರಿಗೆ ಸಹಾಯ ಆಗುತ್ತದೆ ಮತ್ತು ಈ ಸಮೀಕ್ಷೆಯಿಂದ ಸರ್ಕಾರದ ಇತರ ಇಲಾಖೆಗಳು ಮತ್ತು ಸಚಿವಾಲಯಗಳಿಗೆ ಸಹಾಯ ಆಗುತ್ತದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಕಾರ್ಯದರ್ಶಿ ಸುನೀಲ್ ಬರ್ಥ್ವಾಲ್ ಹೇಳಿದ್ದಾರೆ. ಇದರ ಜತೆಗೆ ಸಾರ್ವಜನಿಕರಿಗೂ ಅನುಕೂಲ ಆಗಲಿದೆ. ಯಾವುದನ್ನು ಕಲಿಯುವ ಕಡೆಗೆ ಹೆಚ್ಚಿನ ಗಮನ ನೀಡಬೇಕು ಎಂಬ ಚಿತ್ರಣವನ್ನು ಇದು ನೀಡುತ್ತದೆ. ಕೊವಿಡ್-19 ಸಂಬಂಧಿತ ಕಲ್ಯಾಣ ಯೋಜನೆಗಳನ್ನು ತರುವಾಗ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನಾದಂತೆ ಸರ್ಕಾರದ ಯೋಜನೆಗಳಿಗೆ ಸಿಕ್ಕಿದ್ದು ಇಪಿಎಫ್ಒ ಮತ್ತು ಇಎಸ್ಐಸಿ ಅಥವಾ ಆಡಳಿತಾತ್ಮಕ ಡೇಟಾ ಮಾತ್ರ ಎಂದು ಅವರು ಹೇಳಿದ್ದಾರೆ.
ಅಸಂಘಟಿತ ವಲಯಗಳಿಗೆ ಕೂಡ ಶೀಘ್ರದಲ್ಲೇ ಕ್ಷೇತ್ರ ಸಮೀಕ್ಷೆ ನಡೆಯಲಿದೆ ಎಂದು ಸುನೀಲ್ ಹೇಳಿದ್ದಾರೆ. ಕಾರ್ಮಿಕ ದಳ, ತಜ್ಞರ ಸಮೂಹವನ್ನು ಒಳಗೊಂಡ ಅಖಿಲ ಭಾರತ ಸಮೀಕ್ಷೆಯು ಪ್ರೊ. ಎಸ್.ಪಿ. ಮುಖರ್ಜಿ ನೇತೃತ್ವದಲ್ಲಿ ನಡೆಯಿತು. ಇದರ ಜತೆಗೆ ವಲಸಿಗ ಕಾರ್ಮಿಕರು ಮತ್ತು ಮನೆಗೆಲಸದವರ ಸಮೀಕ್ಷೆ ಕೂಡ ನಡೆಸಲಾಗಿದೆ. ಶೀಘ್ರದಲ್ಲೇ ರಾಷ್ಟ್ರೀಯ ಉದ್ಯೋಗ ನೀತಿ ರೂಪಿಸಲು ಹಾಗೂ ಮಹತ್ವದ ನೀತಿ ನಿರೂಪಣೆಗೆ ಈ ಸಮೀಕ್ಷೆಯಿಂದ ಸಹಾಯ ಆಗಲಿದೆ ಎಂದು ಸಚಿವಾಲಯದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಉದ್ಯೋಗ ಸೃಷ್ಟಿಗೆ ಪ್ರವಾಸೋದ್ಯಮ ಅಗತ್ಯ: ವಿಶ್ವ ಪ್ರವಾಸೋದ್ಯಮ ದಿನದಂದು ಹಲವು ಸಚಿವರ ಪ್ರತಿಕ್ರಿಯೆ
Salaried Class: ವೇತನದಾರರ ಉದ್ಯೋಗ ನಷ್ಟದ ಚೇತರಿಕೆಯಲ್ಲಿ ತೀವ್ರ ಸ್ವರೂಪದ ನಿಧಾನ
(Jobs Increased By 29 Percent Since 2013 According To Survey)