AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

EPF vs VPF: ವಾಲಂಟ್ರಿ ಪಿಎಫ್ ಎಂದರೇನು? ಇಪಿಎಫ್​ಗೂ ವಿಪಿಎಫ್​ಗೂ ಏನು ವ್ಯತ್ಯಾಸ? ಇದರ ಅನುಕೂಲಗಳೇನು? ವಿವರ ತಿಳಿದಿರಿ

ಸರ್ಕಾರದಿಂದ ಜಾರಿಗೆ ತರಲಾಗಿರುವ ಎಂಪ್ಲಾಯಿ ಪ್ರಾವಿಡೆಂಟ್ ಫಂಡ್ (EPF- Employee Provident Fund), ಅಥವಾ ಪಿಎಫ್ ಬಗ್ಗೆ ಗೊತ್ತಿಲ್ಲದವರು ವಿರಳ. ಉದ್ಯೋಗಿಯ ಸಂಬಳದಲ್ಲಿ ನಿರ್ದಿಷ್ಟ ಮೊತ್ತವನ್ನು ಪಿಎಫ್ ಖಾತೆಗೆ ರವಾನಿಸಲಾಗುತ್ತದೆ. ಈಗಿನ ನಿಯಮದ ಪ್ರಕಾರವಾಗಿ ಉದ್ಯೋಗಿಯ ಸಂಬಳದ ಶೇ. 12ರಷ್ಟು ಹಣ ಪಿಎಫ್ ಅಕೌಂಟ್​ಗೆ ಹೋಗುತ್ತದೆ. ಉದ್ಯೋಗಿ ಕೆಲಸ ಮಾಡುವ ಸಂಸ್ಥೆಯಿಂದ ಇಷ್ಟೇ ಮೊತ್ತದ ಹಣ ಪಿಎಫ್ ಖಾತೆ ಹಾಗೂ ಇಪಿಎಸ್ (Employee Pension Scheme) ಖಾತೆಗೆ ಹಂಚಿಕೆ ಆಗುತ್ತದೆ.

EPF vs VPF: ವಾಲಂಟ್ರಿ ಪಿಎಫ್ ಎಂದರೇನು? ಇಪಿಎಫ್​ಗೂ ವಿಪಿಎಫ್​ಗೂ ಏನು ವ್ಯತ್ಯಾಸ? ಇದರ ಅನುಕೂಲಗಳೇನು? ವಿವರ ತಿಳಿದಿರಿ
ಇಪಿಎಫ್​ಒ
ಸುಗ್ಗನಹಳ್ಳಿ ವಿಜಯಸಾರಥಿ
| Edited By: |

Updated on:Oct 07, 2026 | 8:00 PM

Share

ಮುಖ್ಯಾಂಶಗಳು

  • ಎಂಪ್ಲಾಯೀ ಪ್ರಾವಿಡೆಂಟ್ ಫಂಡ್ (ಇಪಿಎಫ್) ಯೋಜನೆಯ ಹೆಚ್ಚುವರಿ ಸೌಲಭ್ಯ ವ್ಯವಸ್ಥೆಯಾಗಿ ವಿಪಿಎಫ್ ಅನ್ನು ಜಾರಿಗೆ ತರಲಾಗಿದೆ.
  • ಉದ್ಯೋಗಿಯ ಸಂಬಳದಿಂದ ಇಪಿಎಫ್​ಗೆ ಶೇ. 12ರಷ್ಟು ಹಣ ಹೋಗುತ್ತದೆ. ವಿಪಿಎಫ್ ಖಾತೆಗೆ ಉದ್ಯೋಗಿ ಇಚ್ಛಿಸಿದರೆ ಹೆಚ್ಚುವರಿ ಹಣ ರವಾನಿಸಬಹುದು.
  • ವಾಲಂಟ್ರಿ ಪ್ರಾವಿಡೆಂಟ್ ಫಂಡ್ ಹಣವು ತೆರಿಗೆ ಲಾಭಕ್ಕೆ ಬಳಸಬಹುದು. ಇಪಿಎಫ್ ಮತ್ತು ವಿಪಿಎಫ್ ಎರಡೂ ಸೇರಿ ವರ್ಷಕ್ಕೆ 2.5 ಲಕ್ಷ ರೂ ಅದರೆ ತೆರಿಗೆ ಉಳಿತಾಯ ಸಾಧ್ಯ.

ಸರ್ಕಾರದಿಂದ ಜಾರಿಗೆ ತರಲಾಗಿರುವ ಎಂಪ್ಲಾಯಿ ಪ್ರಾವಿಡೆಂಟ್ ಫಂಡ್ (EPF- Employee Provident Fund), ಅಥವಾ ಪಿಎಫ್ ಬಗ್ಗೆ ಗೊತ್ತಿಲ್ಲದವರು ವಿರಳ. ಉದ್ಯೋಗಿಯ ಸಂಬಳದಲ್ಲಿ ನಿರ್ದಿಷ್ಟ ಮೊತ್ತವನ್ನು ಪಿಎಫ್ ಖಾತೆಗೆ ರವಾನಿಸಲಾಗುತ್ತದೆ. ಈಗಿನ ನಿಯಮದ ಪ್ರಕಾರವಾಗಿ ಉದ್ಯೋಗಿಯ ಸಂಬಳದ ಶೇ. 12ರಷ್ಟು ಹಣ ಪಿಎಫ್ ಅಕೌಂಟ್​ಗೆ ಹೋಗುತ್ತದೆ. ಉದ್ಯೋಗಿ ಕೆಲಸ ಮಾಡುವ ಸಂಸ್ಥೆಯಿಂದ ಇಷ್ಟೇ ಮೊತ್ತದ ಹಣ ಪಿಎಫ್ ಖಾತೆ ಹಾಗೂ ಇಪಿಎಸ್ (Employee Pension Scheme) ಖಾತೆಗೆ ಹಂಚಿಕೆ ಆಗುತ್ತದೆ. ಗುತ್ತಿಗೆ ಆಧಾರಿತ ನೌಕರಿಯಲ್ಲಿರುವವರು ಮತ್ತು ಅಸಂಘಟಿತ ವಲಯದಲ್ಲಿರುವ ಕಾರ್ಮಿಕರನ್ನು ಹೊರತಪಡಿಸಿ ಬಹುತೇಕ ಎಲ್ಲಾ ಉದ್ಯೋಗಿಗಳೂ ಪಿಎಫ್ ಯೋಜನೆಗೆ ಜೋಡಿತವಾಗಿದ್ದಾರೆ. ಈಗ ಪಿಎಫ್ ಖಾತೆಗೆ ಉದ್ಯೋಗಿಗಳು ತಮ್ಮ ಸಂಬಳದ ಶೇ. 12ಕ್ಕಿಂತ ಹೆಚ್ಚು ಭಾಗದ ಹಣವನ್ನು ರವಾನಿಸುವ ಅವಕಾಶ ಹೊಂದಿದ್ದಾರೆ. ಅದುವೇ ವಿಪಿಎಫ್, ಅಥವಾ ವಾಲಂಟರಿ ಪ್ರಾವಿಡೆಂಟ್ ಫಂಡ್. ಇದು ಉದ್ಯೋಗಿಯ ಇಚ್ಛೆಯನುಸಾರ ಪಿಎಫ್ ಖಾತೆಗೆ ಅವರ ಸಂಬಳದಿಂದ ಹಣವನ್ನು ತುಂಬಿಸುವ ವ್ಯವಸ್ಥೆ.

ಪಿಎಫ್ ಹಣ ಎಷ್ಟು ಎಂಬ ಲೆಕ್ಕಾಚಾರ ಹೇಗೆ?

ಉದ್ಯೋಗಿಯ ಮೂಲ ವೇತನ (Basic Salary) ಹಾಗೂ ತುಟ್ಟಿಭತ್ಯೆ (DA- Dearness Allowance) ಮೊತ್ತದ ಶೇ. 12ರಷ್ಟು ಹಣವನ್ನು ಸಂಬಳದಿಂದ ಕಡಿತಗೊಳಿಸಿ ಪಿಎಫ್ ಖಾತೆಗೆ ಹಾಕಲಾಗುತ್ತದೆ. ಒಬ್ಬ ಉದ್ಯೋಗಿಯ ಪೂರ್ಣ ಸಂಬಳ 50,000 ರೂ ಇದ್ದು, ಬೇಸಿಕ್ ಸ್ಯಾಲರಿ 20,000 ಇದ್ದರೆ, ಆಗ ಶೇ. 12ರ ಮೊತ್ತ ಎಂದರೆ 2,400 ರೂ ಆಗುತ್ತದೆ. ಉದ್ಯೋಗಿಯ ಸಂಬಳವಾದ 50,000ರೂ ಮೊತ್ತದಲ್ಲಿ ಪಿಎಫ್ ಹಣವಾದ 2,400 ರೂ ಅನ್ನು ಕಡಿತ ಮಾಡಲಾಗುತ್ತದೆ.

ಈಗ ಉದ್ಯೋಗಿಯು ವಿಪಿಎಫ್ ಆಯ್ಕೆಯಲ್ಲಿ ಪಿಎಫ್ ಮೊತ್ತವನ್ನು ಇನ್ನಷ್ಟು ಏರಿಕೆ ಮಾಡಬಹುದು. ಆದರೆ, ಸಂಸ್ಥೆಯ ಕೊಡುಗೆಯಾದ 2,400 ರೂ ಮೊತ್ತದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ವಿಪಿಎಫ್​ನಲ್ಲಿ ಎಷ್ಟು ಮೊತ್ತವನ್ನು ಸೇರಿಸುವ ಅವಕಾಶ ಇರುತ್ತದೆ?

ವಾಲಂಟ್ರಿ ಪ್ರಾವಿಡೆಂಟ್ ಫಂಡ್, ಅಥವಾ ವಿಪಿಎಫ್ ನಿಧಿಗೆ ನೀವು ನಿಮ್ಮ ಮೂಲ ವೇತನ ಮತ್ತು ತುಟ್ಟಿಭತ್ಯೆಯ ಮೊತ್ತಕ್ಕೆ ಸಮನಾದ ಹಣವನ್ನು ತುಂಬುವ ಅವಕಾಶ ಇರುತ್ತದೆ. ಅಂದರೆ ಅದು ಗರಿಷ್ಠ ಮೊತ್ತ. ನೀವು 500 ರೂನಿಂದ ನಿಮ್ಮ ಕೊಡುಗೆಯನ್ನು ನಿರ್ಧರಿಸಬಹುದು.

ತೆರಿಗೆ ಲಾಭ ಮತ್ತು ಉಳಿತಾಯ ಲಾಭಕ್ಕೆ ಉತ್ತಮ ಯೋಜನೆ ವಿಪಿಎಫ್

ವಾಲಂಟ್ರಿ ಪಿಎಫ್ ಯೋಜನೆಗೆ ತೆರಿಗೆ ವಿನಾಯಿತಿ ಸೌಲಭ್ಯ ಇದೆ. ನಿಮ್ಮ ಆದಾಯ ತೆರಿಗೆಯನ್ನು ಉಳಿಸಲು ವಿಪಿಎಫ್ ಅನ್ನು ಸದ್ಬಳಕೆ ಮಾಡಿಕೊಳ್ಳಬಹುದು. ಅಲ್ಲದೇ ವಿಪಿಎಫ್ ಅನ್ನು ಯಾವಾಗ ಬೇಕಾದರೂ ಹಿಂಪಡೆಯುವ ಅವಕಾಶವೂ ಇರುತ್ತದೆ.

ಆಧಾರ್ ಕಾರ್ಡ್​ಗೆ ನಿಮ್ಮ ವಿಪಿಎಫ್ ಖಾತೆ ಲಿಂಕ್ ಆಗಿರುವುದರಿಂದ ನೀವು ಕೆಲಸ ಬದಲಿಸಿದರೂ ಇಪಿಎಫ್ ಜೊತೆಗೆ ವಿಪಿಎಫ್ ಖಾತೆಯನ್ನೂ ಸುಲಭವಾಗಿ ವರ್ಗಾಯಿಸಬಹುದು.

ತೆರಿಗೆ ಉಳಿತಾಯದ ಲೆಕ್ಕ ಹಾಕಿ ವಿಪಿಎಫ್ ಮೊತ್ತ ನಿರ್ಧರಿಸಿ

ಈಗ 2.5 ಲಕ್ಷ ರೂವರೆಗೂ ಟ್ಯಾಕ್ಸ್ ಡಿಡಕ್ಷನ್ ಸೌಲಭ್ಯ ಇದೆ. ನಿಮ್ಮ ಇಪಿಎಫ್ ಖಾತೆಗೆ ನಿಮ್ಮ ಸಂಬಳದಲ್ಲಿ ವರ್ಷಕ್ಕೆ 48,000 ರೂ ಹೋಗುತ್ತದೆ ಎಂದಿಟ್ಟುಕೊಂಡರೆ 2 ಲಕ್ಷದಷ್ಟು ಹಣವನ್ನು ವಿಪಿಎಫ್​ಗೆ ತುಂಬಿಸಬಹುದಾ ಎಂದು ಯೋಚಿಸಬಹುದು. ನಿಮ್ಮ ಮೂಲವೇತನ 30,000 ರೂ ಇದ್ದರೆ ತಿಂಗಳಿಗೆ ನೀವು 30,000 ರೂ ಅನ್ನು ವಿಪಿಎಫ್ ಖಾತೆಗೆ ತುಂಬಿಸಬಹುದು. ವರ್ಷಕ್ಕೆ 3.6 ಲಕ್ಷದಷ್ಟು ಹಣವನ್ನು ವಿಪಿಎಫ್​ಗೆ ಹಾಕಬಹುದು. ಆದರೆ, ನಿಮ್ಮ ತೆರಿಗೆ ಕಡಿತದ ಗರಿಷ್ಠ ಮಿತಿ 2.5 ಲಕ್ಷ ರೂ ಇರುವುದರಿಂದ ನೀವು 2 ಲಕ್ಷದಷ್ಟು ಹಣವನ್ನು ವಿಪಿಎಫ್ ಖಾತೆಗೆ ಹಾಕಬೇಕು. ಅಂದರೆ ತಿಂಗಳಿಗೆ ಸುಮಾರು 16,700 ರೂನಷ್ಟು ಹಣವನ್ನು ವಿಪಿಎಫ್ ಖಾತೆಗೆ ಸೇರಿಸಬಹುದು. ಇದರಿಂದ ಒಟ್ಟು 2.5 ಲಕ್ಷ ರೂ ಮೊತ್ತಕ್ಕೆ ತೆರಿಗೆ ಬೀಳುವುದು ಕಡಿಮೆ ಆಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:00 pm, Mon, 24 April 23

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ
ಗಜೇಂದ್ರಗಡ: ಹೈಟೆಕ್ ಅಗ್ನಿಶಾಮಕ ಠಾಣೆ ಇದ್ದರೂ ಸಿಬ್ಬಂದಿ ಇಲ್ಲದೆ ವ್ಯರ್ಥ!
ಗಜೇಂದ್ರಗಡ: ಹೈಟೆಕ್ ಅಗ್ನಿಶಾಮಕ ಠಾಣೆ ಇದ್ದರೂ ಸಿಬ್ಬಂದಿ ಇಲ್ಲದೆ ವ್ಯರ್ಥ!
ಇಂಡಿಯಾ- ವೆಸ್ಟ್ ಇಂಡೀಸ್ ಪಂದ್ಯಕ್ಕೆ  ಡಿಸಿಎಂಗೆ ವೆಂಕಟೇಶ್ ಪ್ರಸಾದ್ ಆಹ್ವಾನ
ಇಂಡಿಯಾ- ವೆಸ್ಟ್ ಇಂಡೀಸ್ ಪಂದ್ಯಕ್ಕೆ  ಡಿಸಿಎಂಗೆ ವೆಂಕಟೇಶ್ ಪ್ರಸಾದ್ ಆಹ್ವಾನ
ಸರ್ಕಾರ ನಿಮ್ಮೊಂದಿಗಿದೆ ಪ್ರತಿಭಟನೆ ಕೈಬಿಡಿ ಎಂದು ರೈತರಿಗೆ ಜೋಶಿ ಮನವಿ!
ಸರ್ಕಾರ ನಿಮ್ಮೊಂದಿಗಿದೆ ಪ್ರತಿಭಟನೆ ಕೈಬಿಡಿ ಎಂದು ರೈತರಿಗೆ ಜೋಶಿ ಮನವಿ!
ಹೈಕಮಾಂಡ್ ತಲುಪಿದ ಸ್ಟಿಂಗ್ ವಿಚಾರ: ಕ್ಯಾಬಿನೆಟ್ ಪ್ರಸ್ತಾಪಕ್ಕೆ ಗರಂ
ಹೈಕಮಾಂಡ್ ತಲುಪಿದ ಸ್ಟಿಂಗ್ ವಿಚಾರ: ಕ್ಯಾಬಿನೆಟ್ ಪ್ರಸ್ತಾಪಕ್ಕೆ ಗರಂ
ಹುನಗುಂದದಲ್ಲಿ ರೈತರ ಪ್ರತಿಭಟನೆ: ರಾಯಚೂರು-ಸೊಲ್ಲಾಪುರ ಹೆದ್ದಾರಿ ಬಂದ್
ಹುನಗುಂದದಲ್ಲಿ ರೈತರ ಪ್ರತಿಭಟನೆ: ರಾಯಚೂರು-ಸೊಲ್ಲಾಪುರ ಹೆದ್ದಾರಿ ಬಂದ್
ರಾಹುಲ್ ಗಾಂಧಿ ನಿವಾಸದಲ್ಲಿ ವಿಪಕ್ಷ ನಾಯಕರ ಹೈ-ಟೀ
ರಾಹುಲ್ ಗಾಂಧಿ ನಿವಾಸದಲ್ಲಿ ವಿಪಕ್ಷ ನಾಯಕರ ಹೈ-ಟೀ
ಕ್ಯಾಪ್ಟನ್ ಟೀಕಿಸಿದ ತಂಡವನ್ನೇ ಆಯ್ಕೆ ಮಾಡಿಕೊಂಡ ಕುಮಾರಿ
ಕ್ಯಾಪ್ಟನ್ ಟೀಕಿಸಿದ ತಂಡವನ್ನೇ ಆಯ್ಕೆ ಮಾಡಿಕೊಂಡ ಕುಮಾರಿ
ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದಲ್ಲಿ ಹಳಿಗೆ ಜಿಗಿದ ವ್ಯಕ್ತಿ
ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದಲ್ಲಿ ಹಳಿಗೆ ಜಿಗಿದ ವ್ಯಕ್ತಿ