ವರ್ಷಕ್ಕೆ ಶೇ. 30ಕ್ಕಿಂತಲೂ ಹೆಚ್ಚು ಬೆಳವಣಿಗೆ ತೋರಿಸಿರುವ ಮ್ಯುಚುವಲ್ ಫಂಡ್​ಗಳು; ಇಷ್ಟು ವೇಗದಲ್ಲಿ ನಿಮ್ಮ ಸಂಪತ್ತು ಎಷ್ಟು ಹೆಚ್ಚುತ್ತೆ ಲೆಕ್ಕಹಾಕಿ

|

Updated on: Aug 17, 2023 | 12:04 PM

Profitable Mutual Funds: ಭಾರತದ ಎನ್​ಎಸ್​ಇ ಮತ್ತು ಬಿಎಸ್​ಇನ ಮಿಡ್​ಕ್ಯಾಪ್ ಇಂಡೆಕ್ಸ್​ಗಳು ವರ್ಷಕ್ಕೆ ಶೇ. 30ಕ್ಕಿಂತಲೂ ಹೆಚ್ಚು ವೇಗದಲ್ಲಿ ಕಳೆದ 3 ವರ್ಷದಲ್ಲಿ ಬೆಳೆದಿವೆ. ಇವುಗಳನ್ನು ಟ್ರ್ಯಾಕ್ ಮಾಡುವ 12 ಮ್ಯುಚುವಲ್ ಫಂಡ್​ಗಳು ಅಷ್ಟೇ ಲಾಭ ಮಾಡಿವೆ.

ವರ್ಷಕ್ಕೆ ಶೇ. 30ಕ್ಕಿಂತಲೂ ಹೆಚ್ಚು ಬೆಳವಣಿಗೆ ತೋರಿಸಿರುವ ಮ್ಯುಚುವಲ್ ಫಂಡ್​ಗಳು; ಇಷ್ಟು ವೇಗದಲ್ಲಿ ನಿಮ್ಮ ಸಂಪತ್ತು ಎಷ್ಟು ಹೆಚ್ಚುತ್ತೆ ಲೆಕ್ಕಹಾಕಿ
ಷೇರುಮಾರುಕಟ್ಟೆ
Follow us on

ಇತ್ತೀಚಿನ ವರ್ಷಗಳಲ್ಲಿ ಷೇರುಮಾರುಕಟ್ಟೆ (Share Market) ಗಣನೀಯವಾಗಿ ಬೆಳೆದಿದೆ. ಸೆನ್ಸೆಕ್ಸ್30, ನಿಫ್ಟಿ50 ಸೇರಿದಂತೆ ವಿವಿಧ ಸೂಚ್ಯಂಕಗಳು ಗಮನಾರ್ಹ ವೇಗದಲ್ಲಿ ವೃದ್ಧಿಸಿವೆ. ಇವುಗಳೊಂದಿಗೆ ಜೋಡಿತವಾದ ಮ್ಯೂಚುವಲ್ ಫಂಡ್​ಗಳೂ ಹೂಡಿಕೆದಾರರಿಗೆ ಲಾಭ ತಂದಿವೆ. ಮಿಡ್ ಕ್ಯಾಪ್ ಮ್ಯುಚುವಲ್ ಫಂಡ್​ಗಳು ಸಾಕಷ್ಟು ಲಾಭ ತಂದಿವೆ. ಕಳೆದ 3 ವರ್ಷದಲ್ಲಿ ಶೇ. 30ಕ್ಕಿಂತಲೂ ಹೆಚ್ಚು ದರದಲ್ಲಿ (Annualised Returns) ಲಾಭ ಮಾಡಿರುವ 12 ಮ್ಯೂಚುವಲ್ ಫಂಡ್​ಗಳಿವೆ. ಮಿಡ್ ಕ್ಯಾಪ್​ನ ಬೆಂಚ್​ಮಾರ್ಕ್ ಸೂಚ್ಯಂಕಗಳೇ (Benchmark Indices) ಶೇ. 30ಕ್ಕಿಂತಲೂ ಹೆಚ್ಚು ವೇಗದಲ್ಲಿ ವೃದ್ಧಿಸಿವೆ. ಮಿಡ್ ಕ್ಯಾಪ್ ಎಂದರೆ ಮಧ್ಯ ಪ್ರಮಾಣದ ಷೇರುಸಂಪತ್ತು ಹೊಂದಿರುವ ಕಂಪನಿಗಳು.

ಕಳೆದ 3 ವರ್ಷದಲ್ಲಿ ಶೇ. 30ಕ್ಕಿಂತಲೂ ಹೆಚ್ಚು ಲಾಭ ತಂದಿರುವ ಮಿಡ್​ಕ್ಯಾಪ್ ಮ್ಯುಚುವಲ್ ಫಂಡ್​ಗಳು

ಎಡೆಲ್​ವೇಸ್ ಮಿಡ್ ಕ್ಯಾಪ್ ಫಂಡ್: ಇದರ ಡೈರೆಕ್ಟ್ ಪ್ಲಾನ್ ವರ್ಷಕ್ಕೆ ಶೇ. 32.33ರ ದರದಲ್ಲಿ ಬೆಳೆದಿದೆ. ರೆಗ್ಯುಲರ್ ಪ್ಲಾನ್​ನಿಂದಲೇ ಶೇ. 30.37ರ ದರದಲ್ಲಿ ಸಂಪತ್ತುವೃದ್ಧಿಸಿದೆ.

ಎಚ್​ಡಿಎಫ್​ಸಿ ಮಿಡ್ ಕ್ಯಾಪ್ ಆಪೋರ್ಚೂನಿಟೀಸ್ ಫಂಡ್: ಇದರ ಡೈರೆಕ್ಟ್ ಪ್ಲಾನ್ ಶೇ. 34.52; ರೆಗ್ಯುಲ್ ಪ್ಲಾನ್ ಶೇ. 33.59ರಷ್ಟು ಬೆಳೆದಿದೆ.

ಕೋಟಕ್ ಎಮರ್ಜಿಂಗ್ ಈಕ್ವಿಟಿ ಫಂಡ್: ಇದರ ಡೈರೆಕ್ಟ್ ಪ್ಲಾನ್ ಶೇ. 32.57ರ ವಾರ್ಷಿಕ ದರದಲ್ಲಿ ಹೂಡಿಕೆಯನ್ನು ಬೆಳೆಸಿದೆ. ಇನ್ನು ರೆಗ್ಯುಲರ್ ಪ್ಲಾನ್​ನಲ್ಲಿ ಶೇ. 30.95ರಷ್ಟು ರಿಟರ್ನ್ ಬಂದಿದೆ.

ಮಹೀಂದ್ರ ಮನುಲೈಫ್ ಮಿಡ್ ಕ್ಯಾಪ್ ಫಂಡ್: ಇದರ ಡೈರೆಕ್ಟ್ ಪ್ಲಾನ್ ಶೇ. 32.28, ರೆಗ್ಯುಲರ್ ಪ್ಲಾನ್ ಶೇ. 30.11ರಷ್ಟು ರಿಟರ್ನ್ ಕೊಟ್ಟಿದೆ.

ಮಿರೇ ಅಸೆಟ್ ಮಿಡ್​ಕ್ಯಾಪ್ ಫಂಡ್: ಇದರ ಡೈರೆಕ್ಟ್ ಪ್ಲಾನ್ ಶೇ. 33.02, ರೆಗ್ಯುಲರ್ ಪ್ಲಾನ್ ಶೇ. 31.26ರಷ್ಟು ಆದಾಯ ತಂದಿದೆ.

ಇದನ್ನೂ ಓದಿ: ಮುಂದಿನ ನಾಲ್ಕೇ ವರ್ಷದಲ್ಲಿ ಭಾರತ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಲಿದೆಯಾ? ಆರ್ಥಿಕ ತಜ್ಞರ ಅನಿಸಿಕೆ ಇದು

ಇವುಗಳ ಜೊತೆಗೆ ಮೋತಿಲಾಲ್ ಓಸ್ವಾಲ್ ಮಿಡ್​ಕ್ಯಾಪ್ ಫಂಡ್, ನಿಪ್ಪಾನ್ ಇಂಡಿಯಾ ಗ್ರೋತ್ ಫಂಡ್, ಪಿಜಿಐಎಂ ಇಂಡಿಯಾ ಮಿಡ್​ಕ್ಯಾಪ್ ಆಪೋರ್ಚುನಿಟೀಸ್ ಫಂಡ್, ಕ್ವಾಂಟ್ ಮಿಡ್ ಕ್ಯಾಪ್ ಫಂಡ್, ಎಸ್​ಬಿಐ ಮ್ಯಾಗ್ನಂ ಮಿಡ್​ಕ್ಯಾಪ್ ಫಂಡ್, ಟಾಟಾ ಮಿಡ್​​ಕ್ಯಾಪ್ ಗ್ರೋತ್ ಫಂಡ್, ಯೂನಿಯನ್ ಮಿಡ್​ಕ್ಯಾಪ್ ಫಂಡ್​ಗಳು ತಮ್ಮ ಡೈರೆಕ್ಟ್ ಪ್ಲಾನ್​ಗಳಲ್ಲಿ ಶೇ. 30ಕ್ಕಿಂತಲೂ ಹೆಚ್ಚಿನ ವಾರ್ಷಿಕ ಲಾಭ ತಂದಿವೆ.

ಬೆಂಚ್​ಮಾರ್ಕ್ ಸೂಚ್ಯಂಕಗಳು

ಈ ಮೇಲೆ ಹೆಸರಿಸಿದ 12 ಮ್ಯೂಚುವಲ್ ಫಂಡ್​ಗಳಲ್ಲಿ ಯೂನಿಯನ್ ಮಿಡ್​ಕ್ಯಾಪ್ ಫಂಡ್ ಮಾತ್ರವೇ ಬಿಎಸ್​ಇ150 ಮಿಡ್​ಕ್ಯಾಪ್ ಟೋಟಲ್ ರಿಟರ್ನ್ ಇಂಡೆಕ್ಸ್ ಅನ್ನು ಟ್ರ್ಯಾಕ್ ಮಾಡುತ್ತದೆ. ಈ ಸೂಚ್ಯಂಕ 3 ವರ್ಷದಲ್ಲಿ ಶೇ. 32.31ರ ವಾರ್ಷಿಕ ದರದಲ್ಲಿ ಬೆಳೆದಿದೆ. ಇನ್ನುಳಿದ 11 ಮ್ಯುಚುವಲ್ ಫಂಡ್​ಗಳು ನಿಫ್ಟಿ ಮಿಡ್​ಕ್ಯಾಪ್ 150 ಟೋಟಲ್ ರಿಟರ್ನ್ ಇಂಡೆಕ್ಸ್ ಅನ್ನು ಟ್ರ್ಯಾಕ್ ಮಾಡುತ್ತವೆ. ಈ ಸೂಚ್ಯಂಕ ಕಳೆದ 3 ವರ್ಷದಲ್ಲಿ ಶೇ. 32.80ರ ವಾರ್ಷಿಕ ದರದಲ್ಲಿ ಬೆಳೆದಿರುವುದು ಗಮನಾರ್ಹ.

ಇದನ್ನೂ ಓದಿ: 20 ವರ್ಷದಲ್ಲಿ 10 ಕೋಟಿ ರೂ ಸಂಗ್ರಹಿಸಲು ಎಷ್ಟು ಹಣ ಉಳಿಸಿ, ಹೂಡಿಕೆ ಮಾಡಬೇಕು? ಇಲ್ಲಿದೆ ವಿವರ

3 ವರ್ಷದಲ್ಲಿ ಎಷ್ಟು ಸಂಪತ್ತುವೃದ್ಧಿ?

ಮಿಡ್​ಕ್ಯಾಪ್ ಇಂಡೆಕ್ಸ್ ಟ್ರ್ಯಾಕ್ ಮಾಡುವ ಈ ಮೇಲಿನ ಯಾವುದಾದರೂ ಮ್ಯೂಚುವಲ್ ಫಂಡ್ ಮೇಲೆ ಕಳೆದ 3 ವರ್ಷಗಳಿಂದ ತಿಂಗಳಿಗೆ 10,000 ರೂನಂತೆ ಹೂಡಿಕೆ ಮಾಡುತ್ತಾ ಬಂದಿದ್ದರೆ ಇವತ್ತು ನಿಮ್ಮ ಹಣ 5ರಿಂದ 6 ಲಕ್ಷ ರುಪಾಯಿ ಆಗಿರುತ್ತಿತ್ತು. ಅಷ್ಟು ಭರ್ಜರಿಯಾಗಿ ಈ ಫಂಡ್​ಗಳು ಲಾಭ ತಂದಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ