AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

PM Kisan: ಪಿಎಂ ಕಿಸಾನ್ 14ನೇ ಕಂತು ಯಾವಾಗ? ಹೊಸ ರೈತರು ನೊಂದಾಯಿಸುವುದು ಹೇಗೆ? ಎಲ್ಲಾ ವಿವರ ಇಲ್ಲಿದೆ

PM Kisan Samman Nidhi 14th Installment: ಲಕ್ಷಾಂತರ ರೈತರ ಕೆವೈಸಿ ಅಪ್​ಡೇಟ್ ಸರಿಯಾಗಿ ಆಗದೇ ಇದ್ದರಿಂದ 13ನೇ ಕಂತು ಪಡೆದವರ ಸಂಖ್ಯೆ ಇಳಿಮುಖವಾಗಿತ್ತು. ಪಟ್ಟಿಯಿಂದ ಕೈಬಿಟ್ಟು ಹೋದರ ರೈತರು ಮತ್ತು ಯೋಜನೆಗೆ ಇನ್ನೂ ನೊಂದಾಯಿಸಿಕೊಳ್ಳದೇ ಇರುವ ರೈತರು ಹೊಸದಾಗಿ ಮತ್ತೊಮ್ಮೆ ಯೋಜನೆಗೆ ರಿಜಿಸ್ಟರ್ ಅಗಬಹುದು.

PM Kisan: ಪಿಎಂ ಕಿಸಾನ್ 14ನೇ ಕಂತು ಯಾವಾಗ? ಹೊಸ ರೈತರು ನೊಂದಾಯಿಸುವುದು ಹೇಗೆ? ಎಲ್ಲಾ ವಿವರ ಇಲ್ಲಿದೆ
ಪಿಎಂ ಕಿಸಾನ್ ಯೋಜನೆ
TV9 Web
| Edited By: |

Updated on:Oct 08, 2026 | 1:05 PM

Share

ಮುಖ್ಯಾಂಶಗಳು

  • 2023 ಫೆಬ್ರುವರಿ 27ರಂದು ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ ಹಣ ಬಿಡುಗಡೆ ಆಗಿತ್ತು. ಈಗ 14ನೇ ಕಂತಿಗೆ ಕಾಯುವ ಸಮಯ
  • 2019ರಲ್ಲಿ ಆರಂಭವಾದ ಪಿಎಂ ಕಿಸಾನ್ ಯೋಜನೆಯಲ್ಲಿ ಅರ್ಹ ರೈತರಿಗೆ ಕೇಂದ್ರ ಸರ್ಕಾರ ವರ್ಷಕ್ಕೆ 3 ಸಮಾನ ಕಂತುಗಳಲ್ಲಿ ಒಟ್ಟು 6,000 ರೂ ನೀಡುತ್ತದೆ. ಕರ್ನಾಟಕದ ರೈತರಿಗೆ 2 ಹೆಚ್ಚುವರಿ ಕಂತು ಸಿಗುತ್ತದೆ.
  • ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್​ಸೈಟ್​ಗೆ ಹೋದರೆ ಅಲ್ಲಿ ಹೊಸ ರೈತರು ನೊಂದಣಿ ಮಾಡಿಸಿಕೊಳ್ಳಬಹುದು.

ನವದೆಹಲಿ: ಇದೇ ಫೆಬ್ರುವರಿ ಕೊನೆಯಲ್ಲಿ ಕೇಂದ್ರ ಸರ್ಕಾರ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (Pradhan Mantri Kisan Samman Nidhi Yojana) ತನ್ನ 13ನೇ ಕಂತಿನ ಹಣವನ್ನು ಫಲಾನುಭವಿ ರೈತರ ಖಾತೆಗಳಿಗೆ ಬಿಡುಗಡೆ ಮಾಡಿತ್ತು. ಇದೀಗ 14ನೇ ಕಂತಿನ ಹಣ ಬಿಡುಗಡೆಗೆ ರೈತರು ಕಾಯುತ್ತಿದ್ದಾರೆ. ಸರ್ಕಾರ 14ನೇ ಕಂತಿನ ಹಣ (PM Kisan Scheme 14th Installment) ಯಾವಾ ಬಿಡುಗಡೆ ಆಗುತ್ತದೆ ಎಂದು ಹೇಳಿಲ್ಲವಾದರೂ ಏಪ್ರಿಲ್​ನಿಂದ ಜುಲೈವರೆಗೆ ಯಾವಾಗ ಬೇಕಾದರೂ ಹಣ ಬಿಡುಗಡೆ ಆಗುವ ಸಾಧ್ಯತೆ ಇದೆ. ಸಣ್ಣ ರೈತರಿಗೆ ಬೇಸಾಯಕ್ಕೆ ಸಹಾಯಕವಾಗಲೆಂದು ಕೇಂದ್ರ ಸರ್ಕಾರ 2019 ಫೆಬ್ರುವರಿಯಲ್ಲಿ ಪಿಎಂ ಕಿಸಾನ್ ಸಮ್ಮಾನಿ ನಿಧಿ ಯೋಜನೆಯನ್ನು ಜಾರಿಗೆ ತಂದಿತ್ತು. ಪ್ರತೀ ವರ್ಷ ತಲಾ 2 ಸಾವಿರ ರೂಗಳ 3 ಸಮಾನ ಕಂತುಗಳು ಸೇರಿ ವರ್ಷಕ್ಕೆ 6,000 ರೂ ಹಣವನ್ನು ಅರ್ಹ ರೈತರ ಖಾತೆಗಳಿಗೆ ನೇರವಾಗಿ ಹಾಕುವುದು ಈ ಯೋಜನೆಯ ಉದ್ದೇಶ. ಈಗ ಈ ಯೋಜನೆ ಬಹುತೇಕ ಎಲ್ಲಾ ರೈತರಿಗೂ ವಿಸ್ತರಣೆ ಆಗಿದೆ. ಈವರೆಗೂ 2,000 ರೂಗಳ ಒಟ್ಟು 13 ಕಂತುಗಳನ್ನು ಕೇಂದ್ರ ಬಿಡುಗಡೆ ಮಾಡಿದೆ. 2023 ಫೆಬ್ರುವರಿ 27ರಂದು ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಯಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ 13ನೇ ಕಂತಿನ ಹಣ ಬಿಡುಗಡೆ ಆಗಿದೆ ಎಂದು ಘೋಷಿಸಿದ್ದರು.

ಹೊಸದಾಗಿ ಯೋಜನೆಗೆ ನೊಂದಾಯಿಸಿಕೊಳ್ಳುವ ಅವಕಾಶ:

ಕರ್ನಾಟಕದ ರೈತರಿಗೆ ಡಬಲ್ ಖುಷಿ ಇದೆ. ಕೇಂದ್ರದಿಂದ ವರ್ಷಕ್ಕೆ 6 ಸಾವಿರ ರೂ ಜೊತೆಗೆ ರಾಜ್ಯ ಸರ್ಕಾರದಿಂದಲೂ ವರ್ಷಕ್ಕೆ 4 ಸಾವಿರ ರೂ ಸಿಗುತ್ತದೆ. ಅಂದರೆ ವರ್ಷಕ್ಕೆ ಒಟ್ಟು 10 ಸಾವಿರ ರೂ ಹಣವನ್ನು ಕರ್ನಾಟಕದ ರೈತರು ಪಡೆಯುತ್ತಾರೆ. ಪಿಎಂ ಕಿಸಾನ್ ಯೋಜನೆಯಲ್ಲಿ ದೇಶಾದ್ಯಂತ ಒಟ್ಟು 8 ಕೋಟಿಯಷ್ಟು ರೈತರು ನೊಂದಾಯಿತರಾಗಿದ್ದಾರೆ. 13ನೇ ಕಂತಿನ ಹಣ ಬಿಡುಗಡೆಗೆ ಮುನ್ನ ಯೋಜನೆಯ ಫಲಾನುಭವಿ ರೈತರಿಗೆ ಕೆವೈಸಿಯನ್ನು ಮತ್ತೊಮ್ಮೆ ಅಪ್​ಡೇಟ್ ಮಾಡುವಂತೆ ಕೇಳಲಾಗಿತ್ತು. ಲಕ್ಷಾಂತರ ರೈತರ ಕೆವೈಸಿ ಅಪ್​ಡೇಟ್ ಸರಿಯಾಗಿ ಆಗದೇ ಇದ್ದರಿಂದ 13ನೇ ಕಂತು ಪಡೆದವರ ಸಂಖ್ಯೆ ಇಳಿಮುಖವಾಗಿತ್ತು. ಪಟ್ಟಿಯಿಂದ ಕೈಬಿಟ್ಟು ಹೋದರ ರೈತರು ಮತ್ತು ಯೋಜನೆಗೆ ಇನ್ನೂ ನೊಂದಾಯಿಸಿಕೊಳ್ಳದೇ ಇರುವ ರೈತರು ಹೊಸದಾಗಿ ಮತ್ತೊಮ್ಮೆ ಯೋಜನೆಗೆ ರಿಜಿಸ್ಟರ್ ಅಗಬಹುದು.

ಪಿಎಂ ಕಿಸಾನ್ ಯೋಜನೆಯ 14ನೇ ಕಂತಿನ ಹಣ ಪಡೆಯಲು ರೈತರು ನೊಂದಾಯಿಸುವ ವಿಧಾನ ಇದು

  • ಪಿಎಂ ಕಿಸಾನ್ ಅಧಿಕೃತ ವೆಬ್​ಸೈಟ್ pmkisan.gov.in ಭೇಟಿ ನೀಡಿ.
  • ವೆಬ್​ಸೈಟ್​ನ ಮಧ್ಯಭಾಗದಲ್ಲಿ ಫಾರ್ಮ್ಸ್ ಕಾರ್ನರ್ ಅಡಿಯಲ್ಲಿ ಹಲವು ಸೆಕ್ಷನ್​ಗಳನ್ನು ನೀವು ಕಾಣಬಹುದು.
  • ಅದರಲ್ಲಿ ನ್ಯೂ ಫಾರ್ಮರ್ ರಿಜಿಸ್ಟ್ರೇಶನ್ ಅನ್ನು ಕ್ಲಿಕ್ ಮಾಡಿ
  • ನೊಂದಾಯಿಸಬೇಕೆಂದಿರುವ ರೈತರ ಆಧಾರ್ ನಂಬರ್, ಹಾಗೂ ಆಧಾರ್ ಜೊತೆ ಜೋಡಿತವಾದ ಮೊಬೈಲ್ ನಂಬರ್ ಅನ್ನು ಅಲ್ಲಿ ನಮೂದಿಸಬೇಕು. ಬಳಿಕ ಯಾವ ರಾಜ್ಯ ಎಂದು ಆಯ್ಕೆ ಮಾಡಿ ಕ್ಯಾಪ್ಚಾ ಕೋಡ್ ಟೈಪಿಸಿ, ಒಟಿಪಿ ಪಡೆಯಬೇಕು.
  • ಇದಾದ ಬಳಿಕ ಪಿಎಂ ಕಿಸಾನ್ ಅರ್ಜಿ ಕಾಣುತ್ತದೆ. ಅದನ್ನು ಭರ್ತಿ ಮಾಡಿ ಕೊನೆಯಲ್ಲಿ ಸೇವ್ ಕೊಡಬೇಕು. ಆ ಅರ್ಜಿಯನ್ನು ನೀವು ಪ್ರಿಂಟ್ ಪಡೆಯಬಹುದು.

ರೈತ ಕೇಂದ್ರಕ್ಕೆ ಹೋಗಿ ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸಬಹುದು

ಆನ್​ಲೈನ್​ನಲ್ಲಿ ಪಿಎಂ ಕಿಸಾನ್ ಯೋಜನೆಗೆ ಹೆಸರು ನೊಂದಾಯಿಸಲು ಗೊಂದಲವೆನಿಸಿದರೆ ರೈತರು ತಮ್ಮ ಗ್ರಾಮ ಸಮೀಪದ ರೈತ ಕೇಂದ್ರಗಳಿಗೆ ಹೋಗಿ ರಿಜಿಸ್ಟರ್ ಆಗಬಹುದು. ಆಧಾರ್ ಕಾರ್ಡ್, ಜಮೀನು ಖಾತೆ ಪ್ರಿಂಟನ್ನು ತೆಗೆದುಕೊಂಡು ಹೋಗಿ ಕೊಡಬೇಕಾಗುತ್ತದೆ.

ಇಲ್ಲಿ ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸಿಕೊಳ್ಳಲು ಕೆಲ ಷರತ್ತುಗಳಿವೆ. ಅರ್ಹ ರೈತರು ಜಮೀನಿನ ಮಾಲೀಕರಾಗಿರಬೇಕು. ಅವರ ಕುಟುಂಬ ಸದಸ್ಯರಲ್ಲಿ ಯಾರೂ ತೆರಿಗೆ ಪಾವತಿದಾರರಾಗಿರಬಾರದು. ಸಂಸದರು, ಶಾಸಕರು ಇತ್ಯಾದಿ ಆಗಿರಬಾರದು. ಸರ್ಕಾರಿ ಉದ್ಯೋಗಿಗಳಾಗಿರಬಾರದು. ವೈದ್ಯ, ವಕೀಲ, ಎಂಜಿನಿಯರ್ ಇತ್ಯಾದಿ ವೃತ್ತಿಪರರಾಗಿರಬಾರದು. ಈ ಬಗ್ಗೆ ಪಿಎಂ ಕಿಸಾನ್ ವೆಬ್​ಸೈಟ್​ಗೆ ಹೋದರೆ ಇನ್ನಷ್ಟು ಮಾಹಿತಿ ಪಡೆಯಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:34 pm, Mon, 10 April 23

Follow Us
TV9 Web
TV9 Web

TV9 Kannada

Read More
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ
ಚೆನ್ನೈನಲ್ಲಿ ಮೋದಿ ರೋಡ್‌ ಶೋ: 13 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ
ಚೆನ್ನೈನಲ್ಲಿ ಮೋದಿ ರೋಡ್‌ ಶೋ: 13 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ
ಬಿಗ್ ಬಾಸ್ ಕನ್ನಡ ಸೀಸನ್ 13: ವೈಲ್ಡ್ ಕಾರ್ಡ್ ಮೂಲಕ ಕಾಮನರ್ ಕುಮಾರಿ ಎಂಟ್ರಿ
ಬಿಗ್ ಬಾಸ್ ಕನ್ನಡ ಸೀಸನ್ 13: ವೈಲ್ಡ್ ಕಾರ್ಡ್ ಮೂಲಕ ಕಾಮನರ್ ಕುಮಾರಿ ಎಂಟ್ರಿ
ತುಮಕೂರು: ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿದ್ಧಗಂಗಾ ಶ್ರೀಗಳು
ತುಮಕೂರು: ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿದ್ಧಗಂಗಾ ಶ್ರೀಗಳು
ನೇಪಾಳದ ಬುಧಿ ಗಂಡಕಿ ನದಿಯಲ್ಲಿ ಹಠಾತ್ ಪ್ರವಾಹ
ನೇಪಾಳದ ಬುಧಿ ಗಂಡಕಿ ನದಿಯಲ್ಲಿ ಹಠಾತ್ ಪ್ರವಾಹ