SBI Loan EMI: ಸಾಲದ ಕನಿಷ್ಠ ಬಡ್ಡಿ ದರ ಹೆಚ್ಚಿಸಿದ ಎಸ್​ಬಿಐ; ಹೆಚ್ಚಲಿದೆ ಇಎಂಐ ಮೊತ್ತ

ಎಂಸಿಎಲ್​ಆರ್ ಅಥವಾ ಕನಿಷ್ಠ ಬಡ್ಡಿ ದರದಲ್ಲಿ ಬದಲಾವಣೆ ಆದರೆ ಸಾಲದ ಮೇಲೂ ಅದು ಪರಿಣಾಮ ಬೀರುತ್ತದೆ. ಬಡ್ಡಿ ದರ ಹೆಚ್ಚಾದರೆ ಸಾಲದ ಇಎಂಐ ಮೊತ್ತವೂ ಹೆಚ್ಚಾಗುತ್ತದೆ.

SBI Loan EMI: ಸಾಲದ ಕನಿಷ್ಠ ಬಡ್ಡಿ ದರ ಹೆಚ್ಚಿಸಿದ ಎಸ್​ಬಿಐ; ಹೆಚ್ಚಲಿದೆ ಇಎಂಐ ಮೊತ್ತ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on: Nov 15, 2022 | 1:06 PM

ನವದೆಹಲಿ: ಸಾಲದ ಮೇಲಿನ ಕನಿಷ್ಠ ಬಡ್ಡಿ ದರ ಅಥವಾ ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್ (MCLR) ಅನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಶೇಕಡಾ 10ರಿಂದ 15ರಷ್ಟು ಹೆಚ್ಚಿಸಿದೆ. ಪರಿಷ್ಕೃತ ದರ ಇಂದಿನಿಂದಲೇ (ನವೆಂಬರ್ 15) ಜಾರಿಗೆ ಬರಲಿದ್ದು, ಎಂಸಿಎಲ್​ಆರ್ ಜತೆ ಲಿಂಕ್ ಆಗಿರುವ ಸಾಲದ ಇಎಂಐ ಮೊತ್ತ ಹೆಚ್ಚಾಗಲಿದೆ. ಒಂದು ತಿಂಗಳ ಮತ್ತು ಮೂರು ತಿಂಗಳ ಎಂಸಿಎಲ್​ಆರ್ ದರವನ್ನು ಶೇಕಡಾ 7.60ರಿಂದ 7.75ಕ್ಕೆ ಹೆಚ್ಚಿಸಲಾಗಿದೆ. ಆರು ತಿಂಗಳುಗಳಿಂದ 1 ವರ್ಷದ ವರೆಗಿನ ಎಂಸಿಎಲ್​ಆರ್ ದರವನ್ನು ಶೇಕಡಾ 7.90ರಿಂದ 8.05ಕ್ಕೆ ಹೆಚ್ಚಳ ಮಾಡಲಾಗಿದೆ. ಮೂರು ವರ್ಷಗಳವರೆಗಿನ ಎಂಸಿಎಲ್​ಆರ್ ದರವನ್ನು ಶೇಕಡಾ 8.25ರಿಂದ 8.35ಕ್ಕೆ ಏರಿಕೆ ಮಾಡಲಾಗಿದೆ.

ಎಂಸಿಎಲ್​ಆರ್ ಎಂದರೇನು?

ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್ ಅಥವಾ ಎಂಸಿಎಲ್​ಆರ್ ಎಂದರೆ ಬ್ಯಾಂಕ್​ಗಳು ಗ್ರಾಹಕರಿಗೆ ನೀಡುವ ಕನಿಷ್ಠ ಬಡ್ಡಿ ದರದ ಆಫರ್. ವಿವಿಧ ರೀತಿಯ ಸಾಲಗಳ ಮೇಲಿನ ಬಡ್ಡಿದರಗಳನ್ನು ನಿರ್ಧರಿಸಲು 2016ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಇದನ್ನು ಪರಿಚಯಿಸಿತ್ತು. ಇನ್ನೂ ಸರಳವಾಗಿ, ಬ್ಯಾಂಕ್​ಗಳು ಸಾಲ ನೀಡಲು ಅನುಸರಿಸುವ ಬಡ್ಡಿಯ ಮಾನದಂಡ ಎಂಸಿಎಲ್​ಆರ್ ಎನ್ನಬಹುದು. ಈ ವಿಧಾನದಲ್ಲಿ ಸಾಲದ ಮೇಲಿನ ಬಡ್ಡಿಯ ಕನಿಷ್ಠ ದರವೊಂದನ್ನು ನಿಗದಿಪಡಿಸಿರಲಾಗುತ್ತದೆ. ಇದಕ್ಕಿಂತ ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕ್​ಗಳು ಸಾಲ ನೀಡುವುದಿಲ್ಲ.

ಇದನ್ನೂ ಓದಿ
Image
ಎಸ್​ಬಿಐ ವೆಬ್​​ಸೈಟ್, ಮೊಬೈಲ್ ಆ್ಯಪ್ ಮೂಲಕ ಜೀವನ ಪ್ರಮಾಣಪತ್ರ ಸಲ್ಲಿಸುವುದು ಹೇಗೆ? ಇಲ್ಲಿದೆ ಸರಳ ವಿಧಾನ
Image
World Diabetes Day 2022: ಮಧುಮೇಹಿಗಳ ಆರೋಗ್ಯ ವಿಮೆಗಿರುವ ಷರತ್ತುಗಳು, ಪ್ರೀಮಿಯಂ ಬಗ್ಗೆ ಇಲ್ಲಿದೆ ವಿವರ
Image
ಎಚ್​ಡಿಎಫ್​ಸಿ, ಐಸಿಐಸಿಐ, ಎಸ್​ಬಿಐ, ಆ್ಯಕ್ಸಿಸ್; ಎಫ್​ಡಿಗೆ ಹೆಚ್ಚು ಬಡ್ಡಿ ನೀಡುವ ಬ್ಯಾಂಕ್ ಬಗ್ಗೆ ಇಲ್ಲಿದೆ ವಿವರ
Image
RD Account: ಆರ್​ಡಿ ಉಳಿತಾಯ ಖಾತೆ ತೆರೆಯುವ ಮುನ್ನ ಈ ವಿಷಯಗಳನ್ನು ತಿಳಿದಿರಿ

ಎಂಸಿಎಲ್​ಆರ್ ಬದಲಾದರೆ…

ಎಂಸಿಎಲ್​ಆರ್ ಅಥವಾ ಕನಿಷ್ಠ ಬಡ್ಡಿ ದರದಲ್ಲಿ ಬದಲಾವಣೆ ಆದರೆ ಸಾಲದ ಮೇಲೂ ಅದು ಪರಿಣಾಮ ಬೀರುತ್ತದೆ. ಬಡ್ಡಿ ದರ ಹೆಚ್ಚಾದರೆ ಸಾಲದ ಇಎಂಐ ಮೊತ್ತವೂ ಹೆಚ್ಚಾಗಿಯೇ ಆಗುತ್ತದೆ. ಈಗಾಗಲೇ ಕನಿಷ್ಠ ಬಡ್ಡಿ ದರದಲ್ಲಿ ಸಾಲ ಪಡೆದವರಾದರೆ ಮರುಪಾವತಿಯ ದಿನಾಂಕ ಬಂದ ಕೂಡಲೇ ಬಡ್ಡಿ ದರದ ವ್ಯತ್ಯಾಸ ಗಮನಕ್ಕೆ ಬರಲಿದೆ. ಕನಿಷ್ಠ ಬಡ್ಡಿ ದರದಲ್ಲಿ ಹೊಸ ಸಾಲ ಪಡೆಯುವವರಾದರೆ ಆರಂಭದಿಂದಲೇ ಹೆಚ್ಚಿನ ಇಎಂಐ ಪಾವತಿಸಬೇಕಾಗುತ್ತದೆ.

ಆರ್​ಬಿಐ ರೆಪೊ ದರಕ್ಕೆ ಅನುಗುಣವಾಗಿ ಬ್ಯಾಂಕ್​ಗಳು ಬಡ್ಡಿ ದರದಲ್ಲಿಯೂ ಪರಿಷ್ಕರಣೆ ಮಾಡುತ್ತವೆ. ಹೆಚ್ಚುತ್ತಿರುವ ಹಣದುಬ್ಬರ ನಿಯಂತ್ರಿಸಲು ಆರ್​ಬಿಐ ಮೇ ನಂತರ ಈವರೆಗೆ ರೆಪೊ ದರವನ್ನು 190 ಮೂಲಾಂಶದಷ್ಟು ಹೆಚ್ಚಳ ಮಾಡಿದ್ದು ಶೇಕಡಾ 5.90ಕ್ಕೆ ನಿಗದಿಪಡಿಸಿದೆ. ಇದರ ಬೆನ್ನಲ್ಲೇ ಎಸ್​ಬಿಐ ಸೇರಿದಂತೆ ಹೆಚ್ಚಿನ ಬ್ಯಾಂಕ್​ಗಳು ಬಡ್ಡಿ ದರ ಹೆಚ್ಚಳ ಮಾಡಿವೆ. ಸ್ಥಿರ ಠೇವಣಿ, ಆರ್​ಡಿ ಸೇರಿದಂತೆ ವಿವಿಧ ಠೇವಣಿಗಳ ಬಡ್ಡಿ ದರ ಹೆಚ್ಚಾಗಿದೆ. ಅದೇ ರೀತಿ ಸಾಲದ ಮೇಲಿನ ಬಡ್ಡಿ ದರವನ್ನೂ ಹೆಚ್ಚಿಸಿವೆ. ಇದೀಗ ಎಸ್​ಬಿಐ ಸಾಲದ ಮೇಲಿನ ಕನಿಷ್ಠ ಬಡ್ಡಿ ದರವನ್ನೂ ಹೆಚ್ಚಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್