AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವೆಂಬರ್ 1ರಿಂದ ಮೊಬೈಲ್ ಕರೆ ಮಾಡುವವರ ಅಧಿಕೃತ ಹೆಸರು ಪ್ರದರ್ಶಿಸಬೇಕು; ಟೆಲಿಕಾಂ ಕಂಪನಿಗಳಿಗೆ ನಿರ್ದೇಶನ

ಭಾರತದಲ್ಲಿ ಸ್ಪ್ಯಾಮ್ ಮತ್ತು ವಂಚನೆ ಕರೆಗಳನ್ನು ತಡೆಯುವ ನಿಟ್ಟಿನಲ್ಲಿ ದೂರಸಂಚಾರ ಇಲಾಖೆಯು (DoT) ಕರೆ ಮಾಡುವವರ ಅಧಿಕೃತ ಹೆಸರನ್ನು ಪ್ರದರ್ಶಿಸುವ ‘ಸಿಎನ್‌ಎಪಿ’ (CNAP) ವ್ಯವಸ್ಥೆಯನ್ನು ನವೆಂಬರ್ 1, 2026ರಿಂದ ಕಡ್ಡಾಯಗೊಳಿಸಿದೆ. ಕರೆ ಮಾಡುವವರು ನಕಲಿ ಹೆಸರನ್ನು ಇಡಲು ಆಗುವುದಿಲ್ಲ. ಕರೆ ಸ್ವೀಕರಿಸುವವರ ಮೊಬೈಲ್​ನಲ್ಲಿ ಆ ನಂಬರ್ ಸೇವ್ ಆಗಿದ್ದರೆ ಆ ಹೆಸರೇ ಬರುತ್ತದೆ. ಇಲ್ಲವಾದರೆ ಅಧಿಕೃತ ಹೆಸರು ಕಾಣಿಸುತ್ತದೆ.

ನವೆಂಬರ್ 1ರಿಂದ ಮೊಬೈಲ್ ಕರೆ ಮಾಡುವವರ ಅಧಿಕೃತ ಹೆಸರು ಪ್ರದರ್ಶಿಸಬೇಕು; ಟೆಲಿಕಾಂ ಕಂಪನಿಗಳಿಗೆ ನಿರ್ದೇಶನ
ಮೊಬೈಲ್ ಕರೆImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 15, 2026 | 9:35 PM

Share

ನವದೆಹಲಿ, ಅಕ್ಟೋಬರ್ 15: ಮೊಬೈಲ್ ಬಳಕೆದಾರರಿಗೆ ಬರುವ ಅಜ್ಞಾತ ಅಥವಾ ಸ್ಪ್ಯಾಮ್ ಕರೆಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ದೂರಸಂಚಾರ ಇಲಾಖೆಯ (DoT) ನಿರ್ದೇಶನದಂತೆ, 2026ರ ನವೆಂಬರ್ 1 ರಿಂದ ದೇಶಾದ್ಯಂತ ‘ಕಾಲಿಂಗ್ ನೇಮ್ ಪ್ರೆಸೆಂಟೇಶನ್’ (CNAP – Calling Name Presentation) ವ್ಯವಸ್ಥೆಯು ಕಡ್ಡಾಯವಾಗಿ ಜಾರಿಗೆ ಬರಲಿದೆ.

ಮೊಬೈಲ್ ಸ್ಕ್ರೀನ್ ಮೇಲೆ ಕೇವಲ ಫೋನ್ ನಂಬರ್ ಮಾತ್ರವಲ್ಲದೆ, ಆ ಕರೆ ಮಾಡುವವರ ಅಧಿಕೃತ ಹೆಸರೂ ಸಹ ನೇರವಾಗಿ ಕಾಣಿಸಿಕೊಳ್ಳಲಿದೆ. ಸಿಮ್ ಕಾರ್ಡ್ ಪಡೆಯುವಾಗ (KYC ದಾಖಲೆಗಳಲ್ಲಿ) ವ್ಯಕ್ತಿಯು ನೀಡಿರುವ ನೋಂದಾಯಿತ ಹೆಸರನ್ನು ಟೆಲಿಕಾಂ ಆಪರೇಟರ್‌ಗಳ ಡೇಟಾಬೇಸ್‌ನಿಂದ ಪಡೆದು ಇದು ಪ್ರದರ್ಶಿಸುತ್ತದೆ.

ನಿಮ್ಮ ಮೊಬೈಲ್‌ನಲ್ಲಿ ಈಗಾಗಲೇ ನಂಬರ್ ಸೇವ್ ಆಗಿದ್ದರೆ, ನಿಮ್ಮ ಕಾಂಟ್ಯಾಕ್ಟ್‌ನಲ್ಲಿರುವ ಹೆಸರೇ ಕಾಣಿಸುತ್ತದೆ. ನಂಬರ್ ಸೇವ್ ಆಗಿಲ್ಲದಿದ್ದರೆ, ದೇಶಿ ಕರೆಗಳಿಗಾದರೆ ಟೆಲಿಕಾಂ ಆಪರೇಟರ್ ದಾಖಲೆಗಳಲ್ಲಿರುವ ಆ ವ್ಯಕ್ತಿಯ ಅಧಿಕೃತ ಹೆಸರು ಸ್ಕ್ರೀನ್ ಮೇಲೆ ಮೂಡುತ್ತದೆ.

ಇದನ್ನೂ ಓದಿ: ಸಣ್ಣ ವ್ಯಾಪಾರಿಗಳ ಗಮನಕ್ಕೆ; ವಾಟ್ಸಾಪ್ ಮೂಲಕ ವ್ಯವಹಾರ ವೃದ್ಧಿಸುವ ಸರಳ ಸೂತ್ರಗಳು

2ಜಿ, 3ಜಿ ನೆಟ್ವರ್ಕ್​ಗಳಲ್ಲಿ ಇದಿನ್ನೂ ಅಲಭ್ಯ

ಸದ್ಯಕ್ಕೆ ಇದು 4G ಮತ್ತು 5G ಸೇರಿದಂತೆ ಉನ್ನತ ತಲೆಮಾರಿನ ಮೊಬೈಲ್ ನೆಟ್‌ವರ್ಕ್‌ಗಳಿಗೆ ಮಾತ್ರ ಕಡ್ಡಾಯಗೊಳಿಸಲಾಗಿದೆ. 2G ಮತ್ತು 3G ನೆಟ್‌ವರ್ಕ್‌ಗಳಲ್ಲಿ ಇದರ ಅನುಷ್ಠಾನದ ಕುರಿತು ಮುಂದಿನ ದಿನಗಳಲ್ಲಿ ಪರಿಶೀಲಿಸಲಾಗುವುದು ಎಂದು ಇಲಾಖೆ ತಿಳಿಸಿದೆ.

ಅಂತಾರಾಷ್ಟ್ರೀಯ ಕರೆಗಳಿಗೆ ಅನ್ವಯವೇ?

ಅಂತಾರಾಷ್ಟ್ರೀಯ ಕರೆಗಳ ವಿಷಯದಲ್ಲಿ, ಕರೆ ಮಾಡುವವರ ನಿಜವಾದ ಹೆಸರು ಸಿಗದಿರುವ ಕಾರಣದಿಂದ ಸ್ಕ್ರೀನ್ ಮೇಲೆ “ಅಂತಾರಾಷ್ಟ್ರೀಯ ಕರೆ” (International Call) ಎಂದು ಪ್ರದರ್ಶಿಸಲಾಗುತ್ತದೆ.

ಇದನ್ನೂ ಓದಿ: ಸಾಲದ ಹೊರೆ ಕಡಿಮೆಯಾಗ್ಬೇಕು ಅಂದ್ರೆ ಈ ಕೆಲ್ಸಗಳನ್ನು ಮೊದ್ಲು ಮಾಡಿ

ಬ್ಯುಸಿನೆಸ್ ಕನೆಕ್ಷನ್​ಗಳನ್ನು ಹೊಂದಿರುವವರಿಗೆ ಹೆಚ್ಚಿನ ಆಯ್ಕೆ

ಬ್ಯುಸಿನೆಸ್ ಕನೆಕ್ಷನ್ ಅಥವಾ ಬಲ್ಕ್ ಕನೆಕ್ಷನ್​ಗಳನ್ನು ಹೊಂದಿರುವವರು ತಮ್ಮ ವೈಯಕ್ತಿಕ ಹೆಸರಿನ ಬದಲು ಟ್ರೇಡ್‌ಮಾರ್ಕ್ ಅಥವಾ ಜಿಎಸ್‌ಟಿ (GST) ಪೋರ್ಟಲ್‌ನಲ್ಲಿ ನೋಂದಾಯಿಸಲಾದ ತಮ್ಮ ವ್ಯಾಪಾರ ಹೆಸರನ್ನು (Trade Name) ಪ್ರದರ್ಶಿಸಲು ಅವಕಾಶವಿರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ದಸರಾ ರಜೆಗೆ ಪ್ರವಾಸಿಗರ ದಂಡು: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್
ದಸರಾ ರಜೆಗೆ ಪ್ರವಾಸಿಗರ ದಂಡು: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್
ಯಶ್​​ ಅವರ ನೋಡಲು ದೂರ-ದೂರದಿಂದ ಬಂದಿರುವ ಅಭಿಮಾನಿಗಳು
ಯಶ್​​ ಅವರ ನೋಡಲು ದೂರ-ದೂರದಿಂದ ಬಂದಿರುವ ಅಭಿಮಾನಿಗಳು
'ನಕ್ಸಲಿಸಂನ ಎಲ್ಲ ಕುರುಹನ್ನೂ ಅಳಿಸಿಹಾಕಬೇಕು'; ಅಮಿತ್ ಶಾ ಹೇಳಿಕೆ
'ನಕ್ಸಲಿಸಂನ ಎಲ್ಲ ಕುರುಹನ್ನೂ ಅಳಿಸಿಹಾಕಬೇಕು'; ಅಮಿತ್ ಶಾ ಹೇಳಿಕೆ
ಹಾರ್ಮುಜ್ ಜಲಸಂಧಿಯಲ್ಲಿ ಮುಳುಗಿದ ಹಡಗು; ಸಮುದ್ರದಲ್ಲಿ ತೇಲಾಡಿದ ಐಫೋನ್‌ಗಳು
ಹಾರ್ಮುಜ್ ಜಲಸಂಧಿಯಲ್ಲಿ ಮುಳುಗಿದ ಹಡಗು; ಸಮುದ್ರದಲ್ಲಿ ತೇಲಾಡಿದ ಐಫೋನ್‌ಗಳು
ಸ್ಟಿಂಗ್ ಆಪರೇಷನ್: ಉನ್ನತ ಮಟ್ಟದ ತನಿಖೆಗೆ ನೀಡಲು ಸರ್ಕಾರ ಹಿಂದೇಟು!
ಸ್ಟಿಂಗ್ ಆಪರೇಷನ್: ಉನ್ನತ ಮಟ್ಟದ ತನಿಖೆಗೆ ನೀಡಲು ಸರ್ಕಾರ ಹಿಂದೇಟು!
ಸೂಳೆಕೆರೆಯ ಋಣ ತೀರಿಸಲು ಮುಂದಾದ ರೈತರು
ಸೂಳೆಕೆರೆಯ ಋಣ ತೀರಿಸಲು ಮುಂದಾದ ರೈತರು
ಬರಪೀಡಿತ ಪಟ್ಟಿಗೆ 9 ತಾಲೂಕುಗಳ ಸೇರ್ಪಡೆ: ತಾಲೂಕುಗಳ ಸಂಖ್ಯೆ 226ಕ್ಕೆ ಏರಿಕೆ
ಬರಪೀಡಿತ ಪಟ್ಟಿಗೆ 9 ತಾಲೂಕುಗಳ ಸೇರ್ಪಡೆ: ತಾಲೂಕುಗಳ ಸಂಖ್ಯೆ 226ಕ್ಕೆ ಏರಿಕೆ
ಸಿಎಂ ಡಿಕೆ ಶಿವಕುಮಾರ್ ಮನೆಗೆ ಭೇಟಿ ನೀಡಿದ ಹಿರಿಯ ನಟ ದೇವರಾಜ್ ಕುಟುಂಬ
ಸಿಎಂ ಡಿಕೆ ಶಿವಕುಮಾರ್ ಮನೆಗೆ ಭೇಟಿ ನೀಡಿದ ಹಿರಿಯ ನಟ ದೇವರಾಜ್ ಕುಟುಂಬ
ಶ್ರೀರಂಗಪಟ್ಟಣ ದಸರಾ ವೈಭವಕ್ಕೆ ಚಾಲನೆ: ಚಾಮುಂಡೇಶ್ವರಿಗೆ ಪುಷ್ಪಾರ್ಚನೆ
ಶ್ರೀರಂಗಪಟ್ಟಣ ದಸರಾ ವೈಭವಕ್ಕೆ ಚಾಲನೆ: ಚಾಮುಂಡೇಶ್ವರಿಗೆ ಪುಷ್ಪಾರ್ಚನೆ
‘ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದು’: ಗಾನವಿ ಬಗ್ಗೆ ಗಗನ್ ಚಿನ್ನಪ್ಪ ಟೀಕೆ
‘ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದು’: ಗಾನವಿ ಬಗ್ಗೆ ಗಗನ್ ಚಿನ್ನಪ್ಪ ಟೀಕೆ