Jio Rates: ಜಿಯೋದಿಂದ ಬೆಲೆ ನಿಯಮ ಉಲ್ಲಂಘನೆಯಾಗಿಲ್ಲ ಎಂದ ಟ್ರಾಯ್; ಜಿಯೋ ಬ್ರಾಡ್​ಬ್ಯಾಂಡ್ ದರಗಳು ಎಷ್ಟಿವೆ?

Jiofiber Prepaid Broadband Rates: ಜಿಯೋಫೈಬರ್​ನ ಬ್ರಾಡ್​ಬ್ಯಾಂಡ್ ಸೇವೆ ಜನಪ್ರಿಯವಾಗಿದ್ದು ಬಹಳ ಅಧಿಕ ಇಂಟರ್ನೆಟ್ ಸ್ಪೀಡ್​ನಲ್ಲಿ ಡಾಟಾ ಸೌಲಭ್ಯ ಒದಗಿಸಲಾಗುತ್ತಿದೆ. ಇದರ ಬೆಲೆ ವಿವರ ಇಲ್ಲಿದೆ...

Jio Rates: ಜಿಯೋದಿಂದ ಬೆಲೆ ನಿಯಮ ಉಲ್ಲಂಘನೆಯಾಗಿಲ್ಲ ಎಂದ ಟ್ರಾಯ್; ಜಿಯೋ ಬ್ರಾಡ್​ಬ್ಯಾಂಡ್ ದರಗಳು ಎಷ್ಟಿವೆ?
ರಿಲಾಯನ್ಸ್ ಜಿಯೋ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 21, 2023 | 6:54 PM

ನವದೆಹಲಿ, ಜುಲೈ 21: ರಿಲಾಯನ್ಸ್ ಜಿಯೋ ಇನ್ಫೋಕಾಮ್ ಲಿ ಸಂಸ್ಥೆಯ ದರಗಳು ಟ್ರಾಯ್​ನ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ರಾಜ್ಯಸಭೆಯಲ್ಲಿ ಇಂದು ಶುಕ್ರವಾರ (ಜುಲೈ 21) ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟ ಕೇಂದ್ರ ಸಂವಹನ ಖಾತೆ ರಾಜ್ಯ ಸಚಿವ ದೇವುಸಿನ್ಹ್ ಚೌಹಾಣ್, ಜಿಯೋ ಇನ್ಫೋಕಾಮ್​ನಿಂದ ನಿಯಮ ಉಲ್ಲಂಘನೆ ಆಗಿಲ್ಲವೆಂದು ಟ್ರಾಯ್ (TRAI) ಅಭಿಪ್ರಾಯಪಟ್ಟಿದ್ದಾಗಿ ತಿಳಿಸಿದೆ. ಇದು ಜಿಯೋಫೈಬರ್​ನ ಬ್ರಾಡ್​ಬ್ಯಾಂಡ್ (JioFiber Broadband) ಬೆಲೆಗಳ ಕುರಿತವಾಗಿ ಕೇಳಿದ ಪ್ರಶ್ನೆಯಾಗಿತ್ತು. ಜಿಯೋಫೈಬರ್ ಪ್ರೀಪೇಯ್ಡ್ ಪ್ಲಾನ್​ಗಳು ಟ್ರಾಯ್ ಹೊರಡಿಸಿದ ಬೆಲೆ ಕ್ರಮಗಳಿಗೆ ಬದ್ಧವಾಗಿಲ್ಲ ಎಂಬ ಆರೋಪ ಇದೆ.

ಜಿಯೋ ಬ್ರಾಡ್​ಬ್ಯಾಂಡ್ ಪ್ಲಾನ್​ಗಳ ವಿವರ

999 ರೂ ಪ್ಲಾನ್: ಇದು 30 ದಿನಗಳ ವ್ಯಾಲಿಡಿಟಿ ಇರುವ ಬಹಳ ಜನಪ್ರಿಯವಾಗಿರುವ ಪ್ಲಾನ್. 150 ಎಂಬಿಪಿಎಸ್ ಸ್ಪೀಡ್​ನ ಡೇಟಾ ಎಷ್ಟು ಬೇಕಾದರೂ ಬಳಸಬಹುದು. ಅಮೇಜಾನ್ ಪ್ರೈಮ್, ಡಿಸ್ನಿ ಹಾಟ್​ಸ್ಟಾರ್, ಸೋನಿ ಲಿವ್, ಜಿಯೋಸಿನಿಮಾ, ಝೀ5, ಸನ್ ನೆಕ್ಸ್​ಟ್, ಡಿಸ್ಕವರಿ ಪ್ಲಸ್ ಇತ್ಯಾದಿ ಹಲವು ಓಟಿಟಿ ಪ್ಲಾಟ್​ಫಾರ್ಮ್​ಗಳು ಉಚಿತವಾಗಿ ಲಭ್ಯ ಇರುತ್ತವೆ.

699 ರೂ ಜಿಫೈಬರ್ ಬ್ರಾಡ್​ಬ್ಯಾಂಡ್ ಪ್ಲಾನ್: ಇದು 100 ಎಂಬಿಪಿಎಸ್ ವೇಗದ ಇಂಟರ್ನೆಟ್ ಸೇವೆ ನೀಡುತ್ತದೆ. ವ್ಯಾಲಿಡಿಟಿ 30 ದಿನ ಇದೆ. ಅನ್​ಲಿಮಿಟೆಡ್ ಡಾಟಾ ಬಳಸಬಹುದು.

ಇದನ್ನೂ ಓದಿMoney Tips: ಹಣಕಾಸು ಸಂಕಷ್ಟವಾ? ಹಣ ನಿಲ್ಲುತ್ತಿಲ್ಲವಾ? ಈ ಐದು ಹಣಕಾಸು ತಂತ್ರಗಳನ್ನು ಮರೆಯದಿರಿ

300 ರೂ ಪ್ಲಾನ್: ಇದು 30 ಎಂಬಿಪಿಎಸ್ ವೇಗದ ಇಂಟರ್ನೆಟ್ ಹೊಂದಿದ್ದು ಎಷ್ಟು ಬೇಕಾದರೂ ಡೇಟಾ ಬಳಸಬಹುದು. ಈ ಪ್ಲಾನ್ ವ್ಯಾಲಿಡಿಟಿ 30 ದಿನ ಇದೆ.

1,499 ರೂ ಪ್ಲಾನ್: ಇದು 300 ಎಂಬಿಪಿಎಸ್ ಸ್ಪೀಡ್​ನ ಇಂಟರ್ನೆಟ್ ಸೇವೆ ಒದಗಿಸುತ್ತದೆ. ಹಲವು ಒಟಿಟಿ ಸಬ್​ಸ್ಕ್ರಿಪ್ಷನ್​ಗಳೂ ಉಚಿತವಾಗಿ ಲಭ್ಯ ಉಂಟು.

2,499 ರೂ ಪ್ಲಾನ್: ಇದು 500 ಎಂಬಿಪಿಎಸ್​ನಷ್ಟು ಸ್ಪೀಡ್ ಒದಗಿಸುತ್ತದೆ. ವಿವಿಧ ಒಟಿಟಿ ಪ್ಲಾಟ್​ಫಾರ್ಮ್​ಗಳಿಗೆ ಉಚಿತ ಸಬ್​ಸ್ಕ್ರಿಪ್ಷನ್ ಸಿಗುತ್ತದೆ.

ಇದನ್ನೂ ಓದಿSBI: ಎಸ್​ಬಿಐನಿಂದ ಬಿಡುಗಡೆ ಆಗಲಿವೆ ಇನ್​ಫ್ರಾ ಬಾಂಡ್​ಗಳು; 10,000 ಕೋಟಿ ರೂ ಮೊತ್ತದ ಸಾಲಕ್ಕೆ ಯೋಜನೆ

3,999 ರೂ ಪ್ಲಾನ್: ಇದು 1ಜಿಬಿಪಿಎಸ್ ಸ್ಪೀಡ್ ಕೊಡುತ್ತದೆ. ಜೊತೆಗೆ ವಿವಿಧ ಒಟಿಟಿ ಪ್ಲಾಟ್​ಫಾರ್ಮ್​ಗಳಿಗೆ ಉಚಿತ ಸಬ್​ಸ್ಕ್ರಿಪ್ಷನ್ ಸಿಗುತ್ತದೆ.

8,499 ರೂ ಪ್ಲಾನ್: ಇದು 1 ಜಿಬಿಪಿಎಸ್ ವೇಗದ ಇಂಟರ್ನೆಟ್ ಒದಗಿಸುತ್ತದೆ. 6,660 ಜಿಬಿಯಷ್ಟು ಡಾಟಾ ಲಭ್ಯ ಇರುತ್ತದೆ. ಇದರಲ್ಲೂ ಒಟಿಟಿ ಸಬ್​ಸ್ಕ್ರಿಪ್ಷನ್ಸ್ ಉಚಿತವಾಗಿರುತ್ತದೆ.

ಈ ಮೇಲಿನ ಎಲ್ಲಾ ಪ್ಲಾನ್​ಗಳ ಬೆಲೆಗೆ ಜಿಎಸ್​ಟಿ ದರ ಪ್ರತ್ಯೇಕವಾಗಿರುತ್ತದೆ. ಈ ಮೇಲಿನವೆಲ್ಲವೂ ಒಂದು ತಿಂಗಳ ವ್ಯಾಲಿಡಿಟಿ ಇರುವಂಥವು. ಮೂರು ತಿಂಗಳಿಗೆ, ಆರು ತಿಂಗಳಿಗೆ, ಒಂದು ವರ್ಷಕ್ಕೂ ಪ್ಲಾನ್​ಗಳಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ