ಟಿವಿ9 ಕನ್ನಡ ಲೈಫ್‌ಸ್ಟೈಲ್, ಆಟೊ, ಫರ್ನಿಚರ್ ಎಕ್ಸ್‌ಪೋ 2026; ಅ. 30ರಿಂದ 3 ದಿನ ಬೆಂಗಳೂರಿನಲ್ಲಿ ಗ್ರಾಹಕರಿಗೆ ಸುಗ್ಗಿ
ಬೆಂಗಳೂರಿನ ಅರಮನೆ ಮೈದಾನದ ರಾಯಲ್ ತ್ರಿಪುರ ವಾಸಿನಿಯಲ್ಲಿ 2026ರ ಅಕ್ಟೋಬರ್ 30ರಿಂದ ನವೆಂಬರ್ 1 ರವರೆಗೆ 'ಟಿವಿ9 ಕನ್ನಡ ಲೈಫ್‌ಸ್ಟೈಲ್, ಆಟೋಮೊಬೈಲ್ & ಫರ್ನಿಚರ್ ಎಕ್ಸ್‌ಪೋ 2026' ನಡೆಯಲಿದೆ. ಟ್ರೆಂಡಿಂಗ್ನಲ್ಲಿರುವ ಪೀಠೋಪಕರಣಗಳು, ವಾಹನಗಳು, ಗೃಹೋಪಯೋಗಿ ಉಪಕರಣಗಳು ಒಂದೇ ಪ್ಲಾಟ್ಫಾರ್ಮ್ನಲ್ಲಿ ಕಾಣಸಿಗಲಿವೆ. ಉಚಿತ ಪ್ರವೇಶ ಮತ್ತು ಪಾರ್ಕಿಂಗ್ ಹೊಂದಿರುವ ಈ ಮೆಗಾ ಎಕ್ಸ್‌ಪೋದ ಸಂಪೂರ್ಣ ಮಾಹಿತಿ ಇಲ್ಲಿದೆ.

ಮುಖ್ಯಾಂಶಗಳು
- 2026ರ ಅಕ್ಟೋಬರ್ 30ರಿಂದ ನವೆಂಬರ್ 1ರವರೆಗೆ ಟಿವಿ9 ಕನ್ನಡ ವತಿಯಿಂದ ಎಕ್ಸ್‌ಪೋ ನಡೆಯುತ್ತಿದೆ.
- ಟ್ರೆಂಡಿಂಗ್ನಲ್ಲಿರುವ ಲೈಫ್‌ಸ್ಟೈಲ್, ಪೀಠೋಕರಣಗಳು, ವಾಹನಗಳ ಪ್ರದರ್ಶನವು ಈ ಮೇಳದಲ್ಲಿ ಇರಲಿದೆ.
- ಬೆಂಗಳೂರಿನ ಅರಮನೆ ಮೈದಾನದ ರಾಯಲ್ ತ್ರಿಪುರವಾಸಿನಿಯಲ್ಲಿ 3 ದಿನ ಬೆಳಗ್ಗೆ 10ರಿಂದ ರಾತ್ರಿ 8ರವರೆಗೆ ಕಾರ್ಯಕ್ರಮ ಇರುತ್ತದೆ.
ಬೆಂಗಳೂರು, ಅಕ್ಟೋಬರ್ 18: ಲೈಫ್‌ಸ್ಟೈಲ್, ನಾವೀನ್ಯತೆ, ತಂತ್ರಜ್ಞಾನ ಮತ್ತು ಐಷಾರಾಮಿ ಅನುಭವದ ಅದ್ಭುತ ಸಂಗಮಕ್ಕೆ ಸಜ್ಜಾಗುತ್ತಿರುವ ‘ಟಿವಿ9 ಕನ್ನಡ ಲೈಫ್‌ಸ್ಟೈಲ್, ಆಟೋಮೊಬೈಲ್ & ಫರ್ನಿಚರ್ ಎಕ್ಸ್‌ಪೋ 2026’ ಅಕ್ಟೋಬರ್ 30ರಿಂದ ನವೆಂಬರ್ 1, 2026ರವರೆಗೆ ಅದ್ಧೂರಿಯಾಗಿ ನಡೆಯಲಿದೆ. ಮೂರು ದಿನಗಳ ಈ ಬೃಹತ್ ಪ್ರದರ್ಶನವು ಬೆಂಗಳೂರಿನ ಅರಮನೆ ಮೈದಾನದ ರಾಯಲ್ ತ್ರಿಪುರ ವಾಸಿನಿ ಆವರಣದಲ್ಲಿ ಆಯೋಜಿಸಲಾಗಿದೆ.
ಒಂದೇ ಸೂರಿನಡಿ ವಿವಿಧ ಮಳಿಗೆಗಳು
ಕುಟುಂಬಗಳು, ಮನೆ ಮಾಲೀಕರು, ಆಟೋಮೊಬೈಲ್ ಪ್ರಿಯರು ಮತ್ತು ಫ್ಯಾಷನ್ ಉತ್ಸಾಹಿಗಳನ್ನು ಗಮನದಲ್ಲಿಟ್ಟುಕೊಂಡು ಈ ಎಕ್ಸ್‌ಪೋವನ್ನು ವಿನ್ಯಾಸಗೊಳಿಸಲಾಗಿದೆ. ಆಧುನಿಕ ಗೃಹೋಪಯೋಗಿ ಉಪಕರಣಗಳು, ಪ್ರೀಮಿಯಂ ಫರ್ನಿಚರ್‌ಗಳು, ವಾಹನಗಳು, ಫ್ಯಾಷನ್ ಹಾಗೂ ಆಭರಣಗಳು ಒಂದೇ ವೇದಿಕೆಯಲ್ಲಿ ಲಭ್ಯವಿರಲಿವೆ.
ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ವಸ್ತುಗಳು
ಸ್ಮಾರ್ಟ್ ಹೋಮ್ ಪರಿಹಾರಗಳು, ಏರ್‌ಕಂಡೀಷನರ್‌ಗಳು, ರೆಫ್ರಿಜರೇಟರ್‌ಗಳು, ಅಡುಗೆಮನೆಯ ಆಧುನಿಕ ಉಪಕರಣಗಳು ಮತ್ತು ವೈಯಕ್ತಿಕ ಗ್ಯಾಜೆಟ್‌ಗಳನ್ನು ವೀಕ್ಷಿಸಲು ಮತ್ತು ಖರೀದಿಸಲು ಇದು ಉತ್ತಮ ಅವಕಾಶವಾಗಿದೆ.
ಪ್ರೀಮಿಯಂ ಫರ್ನಿಚರ್ ಮತ್ತು ಹೋಮ್ ಡೆಕೋರ್
ಮನೆಯನ್ನು ನವೀಕರಿಸಲು ಅಥವಾ ಹೊಸ ವಿನ್ಯಾಸ ನೀಡಲು ಬಯಸುವವರಿಗೆ ಆಕರ್ಷಕ ಸೋಫಾ ಸೆಟ್‌ಗಳು, ಡೈನಿಂಗ್ ಟೇಬಲ್‌ಗಳು, ಸಮಕಾಲೀನ ಒಳಾಂಗಣ ಅಲಂಕಾರಿಕ ವಸ್ತುಗಳು ಹಾಗೂ ಜಾಗಕ್ಕೆ ತಕ್ಕಂತಹ ಪ್ರಾಯೋಗಿಕ ಫರ್ನಿಚರ್ ಸಂಗ್ರಹಣೆಗಳು ಇಲ್ಲಿ ಲಭ್ಯವಿರಲಿವೆ.
ಆಟೋಮೊಬೈಲ್ ಪೆವಿಲಿಯನ್
ಟಿವಿ9 ಎಕ್ಸ್ಪೋದಲ್ಲಿ ಎಲೆಕ್ಟ್ರಿಕ್ ವಾಹನಗಳು (EVs), ಎಸ್‌ಯುವಿ (SUVs), ಬೈಕ್‌ಗಳು ಮತ್ತು ಕಾನ್ಸೆಪ್ಟ್ ಕಾರುಗಳ ಇತ್ತೀಚಿನ ಮಾದರಿಗಳನ್ನು ಆಟೋಮೊಬೈಲ್ ಪ್ರಿಯರು ಕಣ್ತುಂಬಿಕೊಳ್ಳಬಹುದು. ಲಭ್ಯತೆಗೆ ಅನುಗುಣವಾಗಿ ಲೈವ್ ಟೆಸ್ಟ್ ಡ್ರೈವ್ ಅನುಭವವನ್ನೂ ಪಡೆಯಬಹುದು.
ಫ್ಯಾಷನ್ ಮತ್ತು ಆಭರಣಗಳು
ಸಮಕಾಲೀನ ಟ್ರೆಂಡ್‌ಗಳು, ಡಿಸೈನರ್ ಕಲೆಕ್ಷನ್‌ಗಳು, ಸ್ಟೈಲಿಶ್ ಆಕ್ಸೆಸರೀಸ್ ಹಾಗೂ ಕರಕುಶಲ ಆಭರಣಗಳು ಶಾಪಿಂಗ್ ಪ್ರಿಯರನ್ನು ಸೆಳೆಯಲಿವೆ.
ಉತ್ಪನ್ನಗಳಾಚೆ ವಿನೂತನ ಅನುಭವ ಕೊಡುವ ಎಕ್ಸ್‌ಪೋ
ಟಿವಿ9 ಎಕ್ಸ್‌ಪೋ ಕೇವಲ ವಿವಿಧ ವಸ್ತುಗಳ ಪ್ರದರ್ಶನಕ್ಕೆ ಸೀಮಿತವಾಗಿರುವುದಿಲ್ಲ. ಎಲ್ಲಾ ವಯಸ್ಸಿನವರಿಗೆ ವಿಶೇಷ ಅನುಭವ ನೀಡುವ ಪ್ಲಾಟ್ಫಾರ್ಮ್ ಎನಿಸಲಿದೆ. ಲೈವ್ ಡೆಮೋಗಳು, ಇಂಟರಾಕ್ಟಿವ್ ಚಟುವಟಿಕೆಗಳು ಗ್ರಾಹಕರಿಗೆ ಉತ್ಕೃಷ್ಟ ಅನುಭ ನೀಡುತ್ತವೆ. ಹೊಸ ಹಾಗೂ ಅತ್ಯುತ್ತಮ ಬ್ರ್ಯಾಂಡ್ಗಳು, ಅಗತ್ಯವೆನಿಸುವ ಉತ್ಪನ್ನಗಳು ಗ್ರಾಹಕರನ್ನು ಸೆಳೆಯಲಿವೆ.
ಟಿವಿ9 ಕನ್ನಡ ಲೈಫ್‌ಸ್ಟೈಲ್, ಆಟೊಮೊಬೈಲ್, ಫರ್ನಿಚರ್ ಎಕ್ಸ್‌ಪೋ ಕಾರ್ಯಕ್ರಮದ ವಿವರಗಳು
- ದಿನಾಂಕ: 2026ರ ಅಕ್ಟೋಬರ್ 30, 31 ಮತ್ತು ನವೆಂಬರ್ 1
- ಸ್ಥಳ: ರಾಯಲ್ ತ್ರಿಪುರ ವಾಸಿನಿ, ಅರಮನೆ ಮೈದಾನ, ಬೆಂಗಳೂರು
- ಸಮಯ: ಬೆಳಿಗ್ಗೆ 10:00 ರಿಂದ ರಾತ್ರಿ 8:00 ರವರೆಗೆ
(ಪ್ರವೇಶ ಮತ್ತು ಪಾರ್ಕಿಂಗ್ ಸಂಪೂರ್ಣವಾಗಿ ಉಚಿತವಾಗಿದೆ.)
ನೀವು ಹೊಸ ಕಾರು ಖರೀದಿಸಲು ಯೋಚಿಸುತ್ತಿರಲಿ, ಮನೆಯನ್ನು ಹೊಸ ಲುಕ್‌ನಲ್ಲಿ ಅಲಂಕರಿಸಲು ಬಯಸುತ್ತಿರಲಿ ಅಥವಾ ಹೊಸ ತಂತ್ರಜ್ಞಾನಗಳನ್ನು ಅರಿಯಲು ಉತ್ಸುಕರಾಗಿರಲಿ — ಈ ವೀಕೆಂಡ್‌ನಲ್ಲಿ ತಪ್ಪದೇ ಭೇಟಿ ನೀಡಲೇಬೇಕಾದ ಅತಿ ದೊಡ್ಡ ತಾಣ ಈ ಎಕ್ಸ್‌ಪೋ ಆಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




