AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಲಕ್ಕೆ ಶೂರಿಟಿ ನೀಡುವುದರಿಂದ ಏನು ಸಮಸ್ಯೆ? ಸಾಲ ತೀರಿದರೆ ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚುತ್ತಾ?

ಬ್ಯಾಂಕುಗಳು ಕೆಲ ಸಾಲಗಳಿಗೆ ಮೂರನೇ ವ್ಯಕ್ತಿಯಿಂದ ಶೂರಿಟಿ ಪಡೆಯುವುದುಂಟು. ಸಾಲಗಾರ ಸಾಲ ತೀರಿಸಲಿಲ್ಲವೆಂದ ಪಕ್ಷದಲ್ಲಿ ಅದರ ಹೊಣೆಯನ್ನು ಶೂರಿಟಿ ಹಾಕಿದವರು ಹೊರಬೇಕಾಗುತ್ತದೆ. ಹೀಗಾಗಿ, ಸಾಲ ತೀರದಿದ್ದರೆ ಶೂರಿಟಿ ಹಾಕಿದವರಿಗೆ ನೋಟೀಸ್ ಹೋಗುತ್ತದೆ. ಕ್ರೆಡಿಟ್ ಸ್ಕೋರ್ ಕೂಡ ಕಡಿಮೆ ಆಗಬಹುದು. ಹೀಗಾಗಿ, ಸಾಲಕ್ಕೆ ಗ್ಯಾರಂಟರ್ ಆಗುವ ಅಥವಾ ಶೂರಿಟ ಹಾಕುವ ಮುನ್ನ ಎಚ್ಚರ.

ಸಾಲಕ್ಕೆ ಶೂರಿಟಿ ನೀಡುವುದರಿಂದ ಏನು ಸಮಸ್ಯೆ? ಸಾಲ ತೀರಿದರೆ ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚುತ್ತಾ?
ಬ್ಯಾಂಕುImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Sep 03, 2026 | 6:37 PM

Share

ಸ್ನೇಹಿತರು ಅಥವಾ ಸಂಬಂಧಿಕರ ಕೋರಿಕೆಯ ಮೇರೆಗೆ ಬ್ಯಾಂಕ್ ಸಾಲಕ್ಕೆ ‘ಗ್ಯಾರಂಟರ್’ (ಶ್ಯೂರಿಟಿ) ಸಹಿ ಹಾಕುವುದು ಭಾರತೀಯರಲ್ಲಿ ಸಹಜ. ಆದರೆ, ಮೂಲ ಸಾಲಗಾರ ಸಾಲದ ಕಂತುಗಳನ್ನು (EMI) ಸರಿಯಾಗಿ ತೀರಿಸದಿದ್ದರೆ, ಅದು ನಿಮ್ಮ ಸಿಬಿಲ್ ಅಥವಾ ಕ್ರೆಡಿಟ್ ಸ್ಕೋರ್ (Credit Score) ಅನ್ನು ಸಂಪೂರ್ಣವಾಗಿ ಧ್ವಂಸಗೊಳಿಸಬಹುದು ಎಂಬ ಎಚ್ಚರಿಕೆಯನ್ನು ಹಣಕಾಸು ತಜ್ಞರು ನೀಡುತ್ತಾರೆ. ಆರ್​ಬಿಐ ಮತ್ತು ಕ್ರೆಡಿಟ್ ಬ್ಯೂರೋಗಳ ನಿಯಮಗಳ ಪ್ರಕಾರ, ಸಾಲಕ್ಕೆ ಗ್ಯಾರಂಟಿ ನೀಡುವುದೆಂದರೆ ಸಾಲಗಾರನಷ್ಟೇ ಜವಾಬ್ದಾರಿಯನ್ನು ನೀವು ವಹಿಸಿಕೊಂಡಂತೆ ಅರ್ಥ. ಒಂದು ವೇಳೆ, ನೀವು ಶೂರಿಟಿ ಕೊಟ್ಟ ಸಾಲ ತೀರಿದಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚುತ್ತಾ?

ಸಾಲಕ್ಕೆ ಗ್ಯಾರಂಟರ್ ಆಗುವುದರಿಂದ ಎದುರಾಗುವ ಪ್ರಮುಖ ಅಪಾಯಗಳು

  • ಕ್ರೆಡಿಟ್ ಸ್ಕೋರ್ ಕುಸಿತ: ಮೂಲ ಸಾಲಗಾರ ಇಎಂಐ ಪಾವತಿಸಲು ವಿಫಲವಾದರೆ ಅಥವಾ ವಿಳಂಬ ಮಾಡಿದರೆ, ಸಾಲಗಾರನ ಸಿಬಿಲ್ ಸ್ಕೋರ್ ಜತೆಗೆ ಗ್ಯಾರಂಟರ್ ಆಗಿರುವ ನಿಮ್ಮ ಸಿಬಿಲ್ ಸ್ಕೋರ್ ಕೂಡ ತಕ್ಷಣವೇ ಕುಸಿಯುತ್ತದೆ.
  • ಭವಿಷ್ಯದ ಸಾಲದ ಮೇಲೆ ಪ್ರಭಾವ: ಬ್ಯಾಂಕ್‌ಗಳು ನಿಮ್ಮನ್ನು ಸಾಲದ ಬಾಧ್ಯಸ್ಥರಲ್ಲಿ ಒಬ್ಬರೆಂದು ಪರಿಗಣಿಸುತ್ತವೆ. ಆದ್ದರಿಂದ ನೀವು ಸ್ವಂತಕ್ಕಾಗಿ (ಮನೆ, ಕಾರು ಅಥವಾ ವೈಯಕ್ತಿಕ ಸಾಲ) ಸಾಲಕ್ಕೆ ಅರ್ಜಿ ಸಲ್ಲಿಸಿದಾಗ, ನೀವು ಶೂರಿಟಿ ಹಾಕಿರುವ ಸಾಲವೂ ಗಣನೆಗೆ ಬರುತ್ತದೆ. ಒಟ್ಟು ಎಷ್ಟು ಮೊತ್ತದ ಸಾಲ ಬಾಕಿ ಇದೆ ಎಂದು ಲೆಕ್ಕ ಹಾಕಿ, ನಿಮ್ಮ ಸಾಲದ ಸಾಮರ್ಥ್ಯದಲ್ಲೇ (Borrowing Capacity) ಅಂದಾಜಿಸಲಾಗುತ್ತದೆ.
  • ಸಾಲ ಮರುಪಾವತಿಯ ಕಾನೂನು ಬಾಧ್ಯತೆ: ಬ್ಯಾಂಕು ಸಾಲ ವಾಪಸ್ ಆದಾಗ ಮೊದಲು ಸಾಲಗಾರನ ಹಿಂದೆಬೀಳುತ್ತದೆ. ಆದರೆ, ಆ ಸಾಲಗಾರ ಸಂಪೂರ್ಣ ಸುಸ್ತಿದಾರನಾದರೆ (Default), ಅಂದರೆ ಸಾಲ ವಾಪಸ್ ಮಾಡದೇ ಹೋದಾಗ, ಬ್ಯಾಂಕ್‌ಗಳು ಬಾಕಿ ಹಣವನ್ನು ವಸೂಲಿ ಮಾಡಲು ಗ್ಯಾರಂಟರ‍್ಗೆ ನೋಟಿಸ್ ಕಳುಹಿಸುತ್ತವೆ. ನಿಮ್ಮ ಆಸ್ತಿ ಅಥವಾ ಬ್ಯಾಂಕ್ ಖಾತೆಯಿಂದ ಹಣ ವಸೂಲಿ ಮಾಡುವ ಸಂಪೂರ್ಣ ಕಾನೂನು ಹಕ್ಕನ್ನು ಹೊಂದಿರುತ್ತವೆ.

ಶೂರಿಟಿ ಸಾಲ ತೀರಿದರೆ ನಿಮಗೇನು ಪ್ರಯೋಜನ?

ಸಾಲ ತೀರಿದಾಗ ಸಾಲಗಾರನ ಕ್ರೆಡಿಟ್ ಸ್​ಕೋರ್ ಉತ್ತಮಗೊಳ್ಳುತ್ತದೆ. ಅಂತೆಯೇ, ನೀವು ಶೂರಿಟಿ ಹಾಕಿರುವ ಅಥವಾ ಗ್ಯಾರಂಟರ್ ಆಗಿರುವ ಸಾಲವು ಸಂಪೂರ್ಣ ಮರುಪಾವತಿಯಾದರೆ ನಿಮ್ಮ ಕ್ರೆಡಿಟ್ ಸ್ಕೋರ್​ಗೆ ಪುಷ್ಟಿ ಸಿಗುತ್ತಾ ಎನ್ನುವ ಪ್ರಶ್ನೆ ಬರಬಹುದು. ಆದರೆ, ಶೂರಿಟಿ ಹಾಕಿದವರಿಗೆ ಕ್ರೆಡಿಟ್ ಸ್ಕೋರ್ ಹೆಚ್ಚುವುದಿಲ್ಲ ಎಂಬುದು ಗಮನದಲ್ಲಿರಲಿ.

ಇದನ್ನೂ ಓದಿ: ಇನ್ಮುಂದೆ ವಾಟ್ಸ್‌ಆ್ಯಪ್‌ನಲ್ಲೇ ಕರೆಂಟ್, ಗ್ಯಾಸ್, ವಾಟರ್ ಬಿಲ್ ಪಾವತಿ: ಹೊಸ ಫೀಚರ್ ಪರಿಚಯಿಸಿದ ಮೆಟಾ

ಸಾಲದ ಗ್ಯಾರಂಟಿ ನಿಲ್ಲುವ ಮುನ್ನ ವಹಿಸಬೇಕಾದ ಮುನ್ನೆಚ್ಚರಿಕೆಗಳು

  • ಸಾಲಗಾರನ ಆರ್ಥಿಕ ಸ್ಥಿತಿ ತಿಳಿಯಿರಿ: ಸಾಲ ಪಡೆಯುತ್ತಿರುವ ವ್ಯಕ್ತಿಯ ಆದಾಯ ಮತ್ತು ಮರುಪಾವತಿ ಸಾಮರ್ಥ್ಯವನ್ನು ಕೂಲಂಕಷವಾಗಿ ಪರಿಶೀಲಿಸಿ.
  • ನಿಯಮಿತವಾಗಿ ಮೇಲ್ವಿಚಾರಣೆ ಮಾಡಿ: ಸಾಲಗಾರನು ಸಮಯಕ್ಕೆ ಸರಿಯಾಗಿ ಇಎಂಐ ಪಾವತಿಸುತ್ತಿದ್ದಾನೆಯೇ ಎಂಬುದನ್ನು ನಿಯಮಿತವಾಗಿ ಪರಿಶೀಲಿಸಿ.
  • ಸಾಲ ಮರುಪಾವತಿ ವಿಮೆ: ಸಾಲಗಾರನಿಗೆ ಸಾಲ ಮರುಪಾವತಿ ವಿಮೆ (Loan Insurance) ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಸಾಲಗಾರನಿಗೆ ತೊಂದರೆಯಾದಲ್ಲಿ ವಿಮಾ ಕಂಪನಿಯೇ ಬಾಕಿ ಚುಕ್ತ ಮಾಡುತ್ತದೆ.
  • ಸುಲಭವಾಗಿ ಸಹಿ ಹಾಕಬೇಡಿ: ಕೇವಲ ಪ್ರೀತಿ ಅಥವಾ ಮುಲಾಜಿಗೆ ಒಳಗಾಗಿ ಯಾವುದೇ ಜಂಟಿ ಸಾಲ ಅಥವಾ ಗ್ಯಾರಂಟಿ ಪತ್ರಗಳಿಗೆ ಸಹಿ ಹಾಕಬೇಡಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:36 pm, Thu, 3 September 26

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಎಇಇ 16 ದಿನದಿಂದ ನಾಪತ್ತೆ: ಮಗನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ತಂದೆ
ಎಇಇ 16 ದಿನದಿಂದ ನಾಪತ್ತೆ: ಮಗನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ತಂದೆ
ರಾಜ್ಯಕ್ಕೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ
ರಾಜ್ಯಕ್ಕೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ
ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್​​​ಗೆ​​ 14 ದಿನ ನ್ಯಾಯಾಂಗ ಬಂಧನ
ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್​​​ಗೆ​​ 14 ದಿನ ನ್ಯಾಯಾಂಗ ಬಂಧನ
ಸರ್ಕಾರಿ ಆಸ್ಪತ್ರೆಗಳಲ್ಲಿ ಹುಟ್ಟಿದ ಕಂದಮ್ಮಗಳಿಗೆ ಈ ವಿಶೇಷ ವಸ್ತು ಗಿಫ್ಟ್​
ಸರ್ಕಾರಿ ಆಸ್ಪತ್ರೆಗಳಲ್ಲಿ ಹುಟ್ಟಿದ ಕಂದಮ್ಮಗಳಿಗೆ ಈ ವಿಶೇಷ ವಸ್ತು ಗಿಫ್ಟ್​
ಧಾರವಾಡ ಕೃಷಿ ಮೇಳದಲ್ಲಿ ಎಲ್ಲರ ಗಮನ ಸೆಳೆದ ವಿವಿಧ ತಳಿಯ ಜಾನುವಾರು!
ಧಾರವಾಡ ಕೃಷಿ ಮೇಳದಲ್ಲಿ ಎಲ್ಲರ ಗಮನ ಸೆಳೆದ ವಿವಿಧ ತಳಿಯ ಜಾನುವಾರು!
ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಮಾರ್ಗಕ್ಕೆ ಸ್ಥಳೀಯರಿಂದಲೇ ಚಾಲನೆ!
ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಮಾರ್ಗಕ್ಕೆ ಸ್ಥಳೀಯರಿಂದಲೇ ಚಾಲನೆ!
ಚುನಾವಣಾ ಆಯೋಗದ ವಿರುದ್ಧ 84 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಾದಯಾತ್ರೆ
ಚುನಾವಣಾ ಆಯೋಗದ ವಿರುದ್ಧ 84 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಾದಯಾತ್ರೆ
‘ಬಿಗ್ ಬಾಸ್​ಗೆ ಮೂರು ಬಿಟ್ಟು ಬರ್ತಾರೆ ಅಂದುಕೊಂಡಿರಲಿಲ್ಲ’; ವೈಷ್ಣವಿ
‘ಬಿಗ್ ಬಾಸ್​ಗೆ ಮೂರು ಬಿಟ್ಟು ಬರ್ತಾರೆ ಅಂದುಕೊಂಡಿರಲಿಲ್ಲ’; ವೈಷ್ಣವಿ
ಕೆಪಿಎಸ್​ಸಿ ಅಕ್ರಮ: ಬಸವರಾಜ್ ಕನ್ನಾಳೆ ಡೈರಿಯಲ್ಲಿ ಸಿಕ್ತು ಸ್ಫೋಟಕ ಮಾಹಿತಿ
ಕೆಪಿಎಸ್​ಸಿ ಅಕ್ರಮ: ಬಸವರಾಜ್ ಕನ್ನಾಳೆ ಡೈರಿಯಲ್ಲಿ ಸಿಕ್ತು ಸ್ಫೋಟಕ ಮಾಹಿತಿ
ಬಿಜೆಪಿ ಶಾಸಕ ಮುನಿರತ್ನ ಮನೆ ಬಳಿ ಭಾರಿ ಹೈಡ್ರಾಮಾ
ಬಿಜೆಪಿ ಶಾಸಕ ಮುನಿರತ್ನ ಮನೆ ಬಳಿ ಭಾರಿ ಹೈಡ್ರಾಮಾ