AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ಮುಂದೆ ವಾಟ್ಸ್‌ಆ್ಯಪ್‌ನಲ್ಲೇ ಕರೆಂಟ್, ಗ್ಯಾಸ್, ವಾಟರ್ ಬಿಲ್ ಪಾವತಿ: ಹೊಸ ಫೀಚರ್ ಪರಿಚಯಿಸಿದ ಮೆಟಾ

ಇತ್ತೀಚೆಗಷ್ಟೇ ಯುಪಿಐ ಪಾವತಿ ಫೀಚರ್ ಅಳವಡಿಸಿದ್ದ ವಾಟ್ಸಾಪ್ ಇದೀಗ ಯುಟಿಲಿಟಿ ಬಿಲ್ ಪಾವತಿ ಸೇವೆಯನ್ನೂ ಆರಂಭಿಸಿದೆ. ಮೆಟ್ರೋ ಟಿಕೆಟ್ ಬುಕಿಂಗ್ ಸೇವೆಯೂ ಈ ಪ್ಲಾಟ್​ಫಾರ್ಮ್​ನಲ್ಲಿ ಸಿಗಲಿದೆ. ಸದ್ಯ ಹಂತ ಹಂತವಾಗಿ ಈ ಸೇವೆ ಜಾರಿ ಬರಲಿದೆ. ಕೆಲ ತಿಂಗಳಲ್ಲಿ ಪ್ರತಿ ವಾಟ್ಸಾಪ್ ಬಳಕೆದಾರರಿಗೂ ಲಭ್ಯ ಇರಬಹುದು.

ಇನ್ಮುಂದೆ ವಾಟ್ಸ್‌ಆ್ಯಪ್‌ನಲ್ಲೇ ಕರೆಂಟ್, ಗ್ಯಾಸ್, ವಾಟರ್ ಬಿಲ್ ಪಾವತಿ: ಹೊಸ ಫೀಚರ್ ಪರಿಚಯಿಸಿದ ಮೆಟಾ
ವಾಟ್ಸ್‌ಆ್ಯಪ್Image Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 03, 2026 | 1:45 PM

Share

ನವದೆಹಲಿ, ಸೆಪ್ಟೆಂಬರ್ 3: ಮೆಸೇಜಿಂಗ್ ಆ್ಯಪ್ ಆಗಿರುವ ವಾಟ್ಸ್‌ಆ್ಯಪ್ (WhatsApp) ತನ್ನ ಬಳಕೆದಾರರಿಗೆ ಮತ್ತೊಂದು ಬಿಗ್ ಅಪ್‌ಡೇಟ್ ನೀಡಿದೆ. ಇನ್ಮುಂದೆ ಬಳಕೆದಾರರು ವಿದ್ಯುತ್, ಅಡುಗೆ ಅನಿಲ, ನೀರು, ಕ್ರೆಡಿಟ್ ಕಾರ್ಡ್ ಮತ್ತು ಫಾಸ್ಟ್ಯಾಗ್ ಬಿಲ್‌ಗಳನ್ನು ನೇರವಾಗಿ ವಾಟ್ಸ್‌ಆ್ಯಪ್ ಆ್ಯಪ್ ಮೂಲಕವೇ ಪಾವತಿಸಬಹುದಾಗಿದೆ. ಭಾರತದಾದ್ಯಂತ ಡಿಜಿಟಲ್ ಪಾವತಿಯನ್ನು ಮತ್ತಷ್ಟು ಸುಲಭಗೊಳಿಸಲು ಮೆಟಾ ಸಂಸ್ಥೆಯು ‘ಭಾರತ್ ಕನೆಕ್ಟ್’ (BBPS) ನೆಟ್‌ವರ್ಕ್ ಸಹಯೋಗದೊಂದಿಗೆ ಈ ಸೌಲಭ್ಯವನ್ನು ಹಂತ-ಹಂತವಾಗಿ ಪರಿಚಯಿಸುತ್ತಿದೆ.

ವಾಟ್ಸಾಪ್​ನ ಹೊಸ ಫೀಚರ್‌ನ ಮುಖ್ಯಾಂಶಗಳು

  • 22,000ಕ್ಕೂ ಹೆಚ್ಚು ಬಿಲ್ಲರ್ಸ್: ಬಳಕೆದಾರರು 30ಕ್ಕೂ ಹೆಚ್ಚು ವಿಭಾಗಗಳಲ್ಲಿ ಸುಮಾರು 22,722 ಕ್ಕೂ ಹೆಚ್ಚು ನೋಂದಾಯಿತ ಬಿಲ್ಲಿಂಗ್ ಸಂಸ್ಥೆಗಳ ಬಿಲ್‌ಗಳನ್ನು ನೇರವಾಗಿ ಪಾವತಿಸಬಹುದು.
  • ಒಂದೇ ಆ್ಯಪ್‌ನಲ್ಲಿ ನಿರ್ವಹಣೆ: ಫೋನ್ ರೀಚಾರ್ಜ್, ಮೆಟ್ರೋ ಟಿಕೆಟ್ ಬುಕಿಂಗ್ ಜತೆಗೆ ಈಗ ಮನೆ, ಕಚೇರಿ ಹಾಗೂ ಕುಟುಂಬದ ವಿವಿಧ ಬಿಲ್‌ಗಳನ್ನು ಒಂದೇ ಕಡೆ ನಿರ್ವಹಿಸುವ ಅವಕಾಶ ಸಿಗಲಿದೆ.
  • ವಿವಿಧ ಪಾವತಿ ಆಯ್ಕೆಗಳು: ಯುಪಿಐ (UPI), ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ ಪಾವತಿ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ: ಎಐ ಆರ್ಥಿಕತೆ ನಿರ್ಮಿಸಲು ಭಾರತದ ವೇಗ ಹೆಚ್ಚಬೇಕು: ಎನ್‌ವಿಡಿಯಾ ಸಿಇಒ ಜೆನ್ಸೆನ್ ಹುವಾಂಗ್

ಬಿಲ್ ಪಾವತಿ ಮಾಡುವುದು ಹೇಗೆ?

  • ನಿಮ್ಮ ಮೊಬೈಲ್‌ನಲ್ಲಿ ವಾಟ್ಸ್‌ಆ್ಯಪ್ ಓಪನ್ ಮಾಡಿ.
  • ಮೇಲ್ಭಾಗದಲ್ಲಿ ಕಾಣಿಸುವ ‘₹’ ಐಕಾನ್ ಮೇಲೆ ಟ್ಯಾಪ್ ಮಾಡಿ.
  • ಬಿಲ್ ಪಾವತಿ (Bill Payments) ಆಯ್ಕೆ ಮಾಡಿ, ನಿಮ್ಮ ಬಿಲ್ ವಿಭಾಗ (ಉದಾಹರಣೆಗೆ: Electricity/Gas) ಮತ್ತು ಸಂಸ್ಥೆಯನ್ನು (Biller) ಆಯ್ಕೆಮಾಡಿ.
  • ನಿಮ್ಮ ಗ್ರಾಹಕ ಸಂಖ್ಯೆ (Consumer Account Number) ನಮೂದಿಸಿ, ಬಿಲ್ ಮೊತ್ತ ಪರಿಶೀಲಿಸಿ ಪಾವತಿ ಪೂರ್ಣಗೊಳಿಸಿ.

ಸದ್ಯ ಇದು ಒಮ್ಮೆಗೇ ಎಲ್ಲರ ವಾಟ್ಸಾಪ್​ನಲ್ಲೂ ಕಾಣಿಸದಿರಬಹುದು. ಹಂತ ಹಂತವಾಗಿ ಇದು ಜಾರಿಯಾಗುತ್ತದೆ. ಮುಂಬರುವ ದಿನಗಳಲ್ಲಿ ಆಂಡ್ರಾಯ್ಡ್ (Android) ಮತ್ತು ಐಒಎಸ್ (iOS) ಬಳಕೆದಾರರೆಲ್ಲರಿಗೂ ಈ ಫೀಚರ್ ಲಭ್ಯವಾಗಲಿದೆ ಎಂದು ಮೆಟಾ ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ: ಪತ್ನಿಯ ಮೊದಲ ಭೇಟಿ, ಹ್ಯಾರಿಸ್​ನ ಊಟ, ಇಲ್ಲು ಹಬ್ಬ, ಫ್ಲಾಪಿ ಡಿಸ್ಕ್… ಐಐಟಿ ಖರಗ್​ಪುರ್​ನ ದಿನಗಳನ್ನು ಮೆಲುಕಿಸಿದ ಗೂಗಲ್ ಬಾಸ್

ಯುಪಿಐ, ಬಿಲ್ ಪಾವತಿ, ಟಿಕೆಟ್ ಬುಕಿಂಗ್ ಎಲ್ಲವೂ ಒಂದೇ ಪ್ಲಾಟ್​ಫಾರ್ಮ್​ನಲ್ಲಿ ಲಭ್ಯ ಇರುವುದು ಭಾರತಕ್ಕೆ ಹೊಸದಲ್ಲ. ಪೇಟಿಎಂ, ಫೋನ್​ಪೇ ಪ್ಲಾಟ್​ಫಾರ್ಮ್​ಗಳು ಕೂಡ ಇಂಥ ಬಹುಸೇವೆಗಳನ್ನು ಒದಗಿಸುತ್ತವೆ. ಗೂಗಲ್ ಪೇ ಹಾಗೂ ಇತರ ಯುಪಿಐ ಆ್ಯಪ್​ಗಳಲ್ಲೂ ಈ ಸೇವೆಗಳು ಲಭ್ಯ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us