AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಗತ್ತು ವಿನಾಶದ ಅಂಚಿನಲ್ಲಿದ್ಯಾ? ಆಂಥ್ರೋಪಿಕ್ನ ಮೃಣಾಂಕ್ ಶರ್ಮಾ ರಾಜೀನಾಮೆ ಪತ್ರದಲ್ಲಿ ಹೇಳಿದ್ದರ ಅರ್ಥವೇನು?

World in Peril, says Anthropic AI safety team chief Mrinank Sharma in his resignation letter: ಆಂಥ್ರೋಪಿಕ್ ಕಂಪನಿಯ ಎಐ ಸೇಫ್ಟಿ ಟೀಮ್​ನ ಮುಖ್ಯಸ್ಥ ಮೃಣಾಂಕ್ ಶರ್ಮಾ ರಾಜೀನಾಮೆ ನೀಡಿದ್ದಾರೆ. ಎಕ್ಸ್​ನಲ್ಲಿ ಎರಡು ಪುಟಗಳ ಪತ್ರವನ್ನು ಹಾಕಿರುವ ಅವರು ರಾಜೀನಾಮೆಗೆ ಏನು ಕಾರಣ ಎಂಬುದನ್ನು ತಿಳಿಸಿದ್ದಾರೆ. ಪರಸ್ಪರ ಸಂಬಂಧಿತವಾತಿರುವ ವಿವಿಧ ಬಿಕ್ಕಟ್ಟುಗಳು ಈ ಜಗತ್ತನ್ನು ವಿನಾಶದ ಅಂಚಿನಲ್ಲಿರಿಸಿವೆ ಎಂದು ಅವರು ಹೇಳಿದ್ದಾರೆ.

ಜಗತ್ತು ವಿನಾಶದ ಅಂಚಿನಲ್ಲಿದ್ಯಾ? ಆಂಥ್ರೋಪಿಕ್ನ ಮೃಣಾಂಕ್ ಶರ್ಮಾ ರಾಜೀನಾಮೆ ಪತ್ರದಲ್ಲಿ ಹೇಳಿದ್ದರ ಅರ್ಥವೇನು?
ಆಂಥ್ರೋಪಿಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 10, 2026 | 4:10 PM

Share

ಸ್ಯಾನ್ ಫ್ರಾನ್ಸಿಸ್ಕೋ, ಫೆಬ್ರುವರಿ 10: ಆಂಥ್ರೋಪಿಕ್​ನ ಸೇಫ್​ಗಾರ್ಡ್ಸ್ ರಿಸರ್ಚ್ ತಂಡದ ಮುಖ್ಯಸ್ಥರಾಗಿದ್ದ ಮೃಣಾಂಕ್ ಶರ್ಮಾ (Mrinank Sharma) ರಾಜೀನಾಮೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಈ ಜಗತ್ತು ವಿನಾಶದ ಅಂಚಿನಲ್ಲಿದೆ (The World in peril) ಎಂದು ಹೇಳಿಕೊಂಡು ಟ್ವೀಟ್ ಮಾಡಿದ್ದಾರೆ. ಆದರೆ ರಾಜೀನಾಮೆಗೆ ನಿರ್ದಿಷ್ಟ ಕಾರಣ ನೀಡದೇ ನಿಗೂಢವಾಗಿರುವ ಅವರ ಟ್ವೀಟ್ ಸಾಕಷ್ಟು ಕುತೂಹಲ ಕೆರಳಿಸುವಂತಿದೆ. ತಮ್ಮ ಟ್ವೀಟ್​ನಲ್ಲಿ ಅವರು ತಾವು ರಾಜೀನಾಮೆ ನೀಡಲು ಕಾರಣವೇನೆಂದು ವಿವರಿಸಿ ಬರೆದಿರುವ ಪತ್ರವೊಂದನ್ನು ಲಗತ್ತಿಸಿದ್ದಾರೆ.

ಮೃಣಾಂಕ್ ಶರ್ಮಾ ಅವರು ಅಂಥ್ರೋಪಿಕ್​ನಲ್ಲಿ ಸೇಫ್​ಗಾರ್ಡ್ಸ್ ರಿಸರ್ಚ್ ತಂಡದ ಮುಖ್ಯಸ್ಥರಾಗಿದ್ದರು. ‘ಜಗತ್ತು ವಿನಾಶದ ಅಂಚಿನಲ್ಲಿದೆ’ ಎಂದಿರುವ ಅವರ ಮಾತಿನ ಇಂಗಿತ ನಿಜಕ್ಕೂ ನಿಗೂಢತೆಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಬೆಂಗಳೂರು ಮೂಲದ ಸರ್ವಮ್​ನಿಂದ ಎಐ ಸಂಚಲನ; ಈ ಕಂಪನಿ ಹಿಂದಿನ ಇಬ್ಬರು ವ್ಯಕ್ತಿಗಳು ಯಾರು?

‘ಜಗತ್ತು ವಿನಾಶದಂಚಿನಲ್ಲಿದೆ. ಎಐ, ಅಥವಾ ಬಯೋವೆಪನ್​ಗಗಳಿಂದಷ್ಟೇ ಅಲ್ಲ, ಪರಸ್ಪರ ಜೋಡಿತವಾದ ವಿವಿಧ ಬಿಕ್ಕಟ್ಟುಗಳಿಂದ ಈ ಜಗತ್ತು ಅಪಾಯದಲ್ಲಿದೆ. ಈ ಜಗತ್ತಿನ ಮೇಲೆ ಪರಿಣಾಮ ಬೀರಬಲ್ಲ ನಮ್ಮ ಸಾಮರ್ಥ್ಯಕ್ಕೆ ತಕ್ಕುದಾದಷ್ಟು ವಿವೇಕ ನಮ್ಮಲ್ಲಿ ಬೆಳೆಯುವ ಅವಶ್ಯಕತೆ ಇದೆ..’ ಎಂದು ಮೃಣಾಂಕ್ ಶರ್ಮಾ ಹೇಳಿದ್ದಾರೆ.

ಅಂದರೆ, ಮನುಷ್ಯನ ಶಕ್ತಿಯು ಆತನ ಜವಾಬ್ದಾರಿಗಳನ್ನು ಮೀರಿ ಬೆಳೆಯುತ್ತಿದೆ. ಕೋತಿ ಕೈಯಲ್ಲಿ ಮಾಣಿಕ್ಯ ಸಿಕ್ಕಂತಾಗಿದೆ ಎಂಬರ್ಥದಲ್ಲಿ ಆಂಥ್ರೋಪಿಕ್​ನ ಈ ಉನ್ನತ ಅಧಿಕಾರಿ ಹೇಳಿರುವುದು ನಿಜಕ್ಕೂ ಎಐನ ಮುಂದಿನ ದಾರಿಯ ಬಗ್ಗೆ ಯಾರಿಗಾದರೂ ಕಳವಳ ಮೂಡಬಹುದು.

ಮೃಣಾಂಕ್ ಅವರ ಟ್ವೀಟ್

ಎಐ ಸುರಕ್ಷತೆ ವಿಚಾರದ ಬಗ್ಗೆ ತಮ್ಮ ಕಂಪನಿ ಹೆಚ್ಚಿನ ಆದ್ಯತೆ ಕೊಡುತ್ತಿಲ್ಲ ಎಂಬುದು ಮೃಣಾಂಕ್ ಬೇಸರ. ‘ಮೌಲ್ಯಗಳ ಆಧಾರದ ಮೇಲೆ ಕ್ರಿಯೆಗಳು ನಡೆಯುವುದು ಈಗ ಬಹಳ ಕಷ್ಟವೆಂಬುದು ಬಾರಿ ಬಾರಿ ತೋರುತ್ತಿದೆ. ಯಾವುದು ಬಹಳ ಮುಖ್ಯವಾಗಿದೆಯೋ ಅದನ್ನು ನಿರ್ಲಕ್ಷಿಸಲು ಈ ಸಂಸ್ಥೆಯಲ್ಲಿ ಮತ್ತು ನನ್ನಲ್ಲಿ ನಿರಂತರ ಒತ್ತಡ ಬರುವುದನ್ನು ಕಂಡಿದ್ದೇನೆ’ ಎಂದು ಆಂಥ್ರೋಪಿಕ್​ನ ಸೇಫ್​ಗಾರ್ಡ್ಸ್ ರಿಸರ್ಚ್ ಟೀಮ್​ನ ಮುಖ್ಯಸ್ಥ ಹೇಳಿದ್ಧಾರೆ.

ಇದನ್ನೂ ಓದಿ: ಐಟಿ ಸೆಕ್ಟರ್​ಗೆ ಆಂಥ್ರೋಪಿಕ್ ಶಾಕ್; ಇದರ ಹಿಂದಿರುವ ಬ್ರೇನ್ ಬೆಂಗಳೂರು ಮೂಲದ ವ್ಯಕ್ತಿಯದ್ದು

ಮೃಣಾಂಕ್ ಶರ್ಮಾ ಅವರ ಆಂಥ್ರೋಪಿಕ್ ಅವಧಿ ನಿನ್ನೆಯೇ (ಫೆ. 9) ಮುಗಿದಿದೆ. ಇದೀಗ ಅವರು ಬ್ರಿಟನ್ ದೇಶಕ್ಕೆ ಮರಳಿ ಹೋಗಲಿದ್ದಾರಂತೆ. ಒಂದಷ್ಟು ದಿನ ಕಾಣದ ಕಣ್ಮರೆಯಲ್ಲಿ ಇದ್ದುಬಿಡುವುದಾಗಿ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:50 pm, Tue, 10 February 26

Follow Us
ದೇವರಾಜ ಅರಸು ಅವರ ವಿಂಟೇಜ್ ಕಾರಿನಲ್ಲಿ ಡಿಸಿಎಂ, ಸಚಿವರ ಸವಾರಿ
ದೇವರಾಜ ಅರಸು ಅವರ ವಿಂಟೇಜ್ ಕಾರಿನಲ್ಲಿ ಡಿಸಿಎಂ, ಸಚಿವರ ಸವಾರಿ
‘ಜೈಲಿನಲ್ಲಿ ಅಧಿಕಾರಿಗಳಿಂದಲೇ ವೇಶ್ಯಾವಾಟಿಕೆ’: ಮಾಜಿ ಕೈದಿ ಗಂಭೀರ ಆರೋಪ
‘ಜೈಲಿನಲ್ಲಿ ಅಧಿಕಾರಿಗಳಿಂದಲೇ ವೇಶ್ಯಾವಾಟಿಕೆ’: ಮಾಜಿ ಕೈದಿ ಗಂಭೀರ ಆರೋಪ
RSS ಶಾಖೆಯಲ್ಲಿ ಸಂಘದ ಗೀತೆ ಬಿಟ್ಟು ರಾಷ್ಟ್ರಗೀತೆ ಹಾಡಲಿ: ಹರಿಪ್ರಸಾದ್
RSS ಶಾಖೆಯಲ್ಲಿ ಸಂಘದ ಗೀತೆ ಬಿಟ್ಟು ರಾಷ್ಟ್ರಗೀತೆ ಹಾಡಲಿ: ಹರಿಪ್ರಸಾದ್
ಸಚಿವ ಮಧು ಬಂಗಾರಪ್ಪ ಕ್ಷೇತ್ರದಲ್ಲೇ ತಪ್ಪದ ಬಸ್ ಗೋಳು
ಸಚಿವ ಮಧು ಬಂಗಾರಪ್ಪ ಕ್ಷೇತ್ರದಲ್ಲೇ ತಪ್ಪದ ಬಸ್ ಗೋಳು
ಹೈದರಾಬಾದ್ ಮೆಟ್ರೋದಲ್ಲಿ 'ಟಾಕ್ಸಿಕ್' ಹವಾ; ಯಶ್ ಸಿನಿಮಾಗೆ ಭರ್ಜರಿ ಪ್ರಚಾರ
ಹೈದರಾಬಾದ್ ಮೆಟ್ರೋದಲ್ಲಿ 'ಟಾಕ್ಸಿಕ್' ಹವಾ; ಯಶ್ ಸಿನಿಮಾಗೆ ಭರ್ಜರಿ ಪ್ರಚಾರ
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ