ಅಕ್ರಮ ರೀಫಿಲ್ಲಿಂಗ್: ನಾಲ್ವರು ಆರೋಪಿಗಳು ಸಿಸಿಬಿ ಬಲೆಗೆ
ಬೆಂಗಳೂರು: ಆರ್.ಟಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಚಾಮುಂಡಿ ನಗರದಲ್ಲಿ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಮಹಮ್ಮದ್ ಮಜಾಸ್, ಸಯ್ಯದ್ ರಪೀಕ್, ಅರಾಫತ್ ಬೇಗ್, ಕಿಶೋರ್ ಬಂಧಿತ ಆರೋಪಿಗಳು. ಗೃಹ ಬಳಕೆಯ ಸಿಲಿಂಡರ್ಗಳನ್ನು ವಾಣಿಜ್ಯ ಬಳಕೆಗಾಗಿ ರೀಫಿಲ್ಲಿಂಗ್ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ದಾಳಿ ನಡೆಸಿ 2.50 ಲಕ್ಷ ಮೌಲ್ಯದ 222 ಸಿಲಿಂಡರ್ಗಳನ್ನು ವಶಕ್ಕೆ ಪಡೆದಿದ್ದಾರೆ. 12 ಕೆಜಿ ತೂಕದ 140 […]
ಬೆಂಗಳೂರು: ಆರ್.ಟಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಚಾಮುಂಡಿ ನಗರದಲ್ಲಿ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಮಹಮ್ಮದ್ ಮಜಾಸ್, ಸಯ್ಯದ್ ರಪೀಕ್, ಅರಾಫತ್ ಬೇಗ್, ಕಿಶೋರ್ ಬಂಧಿತ ಆರೋಪಿಗಳು.
ಗೃಹ ಬಳಕೆಯ ಸಿಲಿಂಡರ್ಗಳನ್ನು ವಾಣಿಜ್ಯ ಬಳಕೆಗಾಗಿ ರೀಫಿಲ್ಲಿಂಗ್ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ದಾಳಿ ನಡೆಸಿ 2.50 ಲಕ್ಷ ಮೌಲ್ಯದ 222 ಸಿಲಿಂಡರ್ಗಳನ್ನು ವಶಕ್ಕೆ ಪಡೆದಿದ್ದಾರೆ. 12 ಕೆಜಿ ತೂಕದ 140 ಸಿಲಿಂಡರ್ ಮತ್ತು 4ಕೆಜೆ ತೂಕದ 82 ಸಿಲಿಂಡರ್ಗಳನ್ನು ಜಪ್ತಿ ಮಾಡಿದ್ದಾರೆ. ಇದೇ ವೇಳೆ ಆಟೋ, ತೂಕದ ಯಂತ್ರಗಳು, ರೀಫಿಲ್ಲಿಂಗ್ ಗನ್ಸ್, 1 ಮೋಟರ್ ಸಹ ಸೀಜ್ ಮಾಡಿದ್ದಾರೆ. ಈ ಸಂಬಂಧ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 12:14 pm, Wed, 22 January 20