ಮಲೆನಾಡಲ್ಲಿ ನೀರಿಗಾಗಿ ದಾಯಾದಿಗಳ ಕಿರಿಕ್: ಕತ್ತಲಲ್ಲಿ ಅಣ್ಣನನ್ನೇ ಕೊಚ್ಚಿ ಕೊಂದ ತಮ್ಮ!

ಶಿವಮೊಗ್ಗ: ಪದೇ ಪದೆ ಆ ಅಣ್ಣ ತಮ್ಮನ ಕುಟುಂಬದ ನಡುವೆ ಜಮೀನಿನ ವಿಚಾರಕ್ಕೆ ಕಿರಿಕ್ ಆಗುತ್ತಿತ್ತು. ಗ್ರಾಮಸ್ಥರು ಕೂಡ ಸಮಾಧಾನ ಮಾಡುತ್ತಿದ್ರು. ಆದ್ರೆ ಮೊನ್ನೆ ತೋಟದಲ್ಲೇ ಆ ಜಗಳ ಅತಿರೇಕಕ್ಕೆ ಹೋಗಿತ್ತು. ನೋಡ ನೋಡುತ್ತಿದ್ದಂತೆ ರಕ್ತದೋಕುಳಿಯೇ ಹರಿದಿತ್ತು. ಹಚ್ಚ ಹಸಿರಿನ ತೋಟದಲ್ಲಿ ನೆತ್ತರು ಹರಿದಿದ್ರೆ, ನಿಂತಿಲ್ಲೇ ನಿಂತಿರುವ ಬೈಕ್‌. ರಕ್ಕ ಸಿಕ್ಕ ಬಟ್ಟೆ ರಾಶಿಯಲ್ಲಿ ಒರ್ವ ಹೆಣೆವಾಗಿ ಮಲಗಿದ್ರೆ, ಗುದ್ದಾಟದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿರುವ ಕುಟುಂಬಸ್ಥರು. ಹೆಣದ ಮುಂದೆ ಕುಂಟುಂಬಸ್ಥರು ಕಣ್ಣೀರ ಕೊಡಿ ಹರಿಯುತ್ತಿದ್ರೆ, ಪರಿಶೀಲಿಸುತ್ತಿರುವ ಖಾಕಿ […]

ಮಲೆನಾಡಲ್ಲಿ ನೀರಿಗಾಗಿ ದಾಯಾದಿಗಳ ಕಿರಿಕ್: ಕತ್ತಲಲ್ಲಿ ಅಣ್ಣನನ್ನೇ ಕೊಚ್ಚಿ ಕೊಂದ ತಮ್ಮ!
Follow us
ಸಾಧು ಶ್ರೀನಾಥ್​
|

Updated on: Mar 07, 2020 | 8:22 AM

ಶಿವಮೊಗ್ಗ: ಪದೇ ಪದೆ ಆ ಅಣ್ಣ ತಮ್ಮನ ಕುಟುಂಬದ ನಡುವೆ ಜಮೀನಿನ ವಿಚಾರಕ್ಕೆ ಕಿರಿಕ್ ಆಗುತ್ತಿತ್ತು. ಗ್ರಾಮಸ್ಥರು ಕೂಡ ಸಮಾಧಾನ ಮಾಡುತ್ತಿದ್ರು. ಆದ್ರೆ ಮೊನ್ನೆ ತೋಟದಲ್ಲೇ ಆ ಜಗಳ ಅತಿರೇಕಕ್ಕೆ ಹೋಗಿತ್ತು. ನೋಡ ನೋಡುತ್ತಿದ್ದಂತೆ ರಕ್ತದೋಕುಳಿಯೇ ಹರಿದಿತ್ತು.

ಹಚ್ಚ ಹಸಿರಿನ ತೋಟದಲ್ಲಿ ನೆತ್ತರು ಹರಿದಿದ್ರೆ, ನಿಂತಿಲ್ಲೇ ನಿಂತಿರುವ ಬೈಕ್‌. ರಕ್ಕ ಸಿಕ್ಕ ಬಟ್ಟೆ ರಾಶಿಯಲ್ಲಿ ಒರ್ವ ಹೆಣೆವಾಗಿ ಮಲಗಿದ್ರೆ, ಗುದ್ದಾಟದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿರುವ ಕುಟುಂಬಸ್ಥರು. ಹೆಣದ ಮುಂದೆ ಕುಂಟುಂಬಸ್ಥರು ಕಣ್ಣೀರ ಕೊಡಿ ಹರಿಯುತ್ತಿದ್ರೆ, ಪರಿಶೀಲಿಸುತ್ತಿರುವ ಖಾಕಿ ಪಡೆ.

ನೀರಿಗಾಗಿ ತೋಟದಲ್ಲೇ ಹರಿಯಿತು ನೆತ್ತರು..! ಯೆಸ್‌, ಶಿವಮೊಗ್ಗ ತಾಲೂಕಿನ ಭದ್ರಾಪುರದ ಗ್ರಾಮ ನಿಜಕ್ಕೂ ಬೆಚ್ಚಿ ಬಿದ್ದಿತ್ತು. ಏನ್ ಆಯ್ತು ಅನ್ನುವಷ್ಟರಲ್ಲಿ ಗ್ರಾಮದಲ್ಲಿ ರಕ್ತ ನೀರಿನಂತೆ ಹರಿದಿತ್ತು. ಅಂದಹಾಗೇ ಈ ಗ್ರಾಮದ ಕರಿಯಪ್ಪ ಮತ್ತು ಬಡ್ಡಿ ಪರಮೇಶ ದೊಡ್ಡಪ್ಪ ಚಿಕ್ಕಪ್ಪನ ಮಕ್ಕಳು. ಸಂಬಂಧದಲ್ಲಿ ಕರಿಯಪ್ಪ ಬಡ್ಡಿ ಪರಮೇಶ್ವರನಿಗೆ ಅಣ್ಣ ಆಗಬೇಕು. ದಯಾದಿಗಳಾಗಿದ್ದರು, ಎರಡು ಕುಟುಂಬಗಳ ನಡುವೆ ಆಗಾಗ ಕ್ಷುಲ್ಲಕ ಕಾರಣಕ್ಕೆ ಗಲಾಟೆಗಳು ನಡೆಯುತ್ತಿತ್ತು. ಕಳೆದ 10 ವರ್ಷಗಳಿಂದ ಹಲವಾರು ಬಾರಿ ಗ್ರಾಮದ ಪ್ರಮುಖರೇ ರಾಜಿ ಪಂಚಾಯತಿ ಮಾಡಿ, ಬುದ್ಧಿವಾದ ಹೇಳಿ ಕಳುಹಿಸಿದ್ದರು. ಅದರೆ ಮೊನ್ನೆ ರಾತ್ರಿ ಕರಿಯಪ್ಪನನ್ನು ಪರಮೇಶ್ವರ ಕೊಚ್ಚಿ ಕೊಲೆ ಮಾಡಿದ್ದಾನೆ.

ಹಲವು ಬಾರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು: ಇನ್ನು ಕರಿಯಪ್ಪನ ಜಮೀನಿಗೆ ನೀರು ಬರುವುದಕ್ಕೆ ಪರಮೇಶ ಅಡ್ಡಿ ಪಡಿಸುತ್ತಿದ್ದನಂತೆ. ಹೀಗಾಗಿ ಕರಿಯಪ್ಪ ಮತ್ತು ಬಡ್ಡಿ ಪರಮೇಶ್ವರನ ಕುಟುಂಬಗಳ ನಡುವೆ ಮುಸುಕಿನ ಗುದ್ದಾಟಗಳು ನಡೆಯುತ್ತಿದ್ದವು. ಹಲವಾರು ಬಾರಿ ಪೊಲೀಸ್ ಠಾಣೆ ಮೆಟ್ಟಿಲು ಸಹ ಏರಿದ್ದರು. ಗ್ರಾಮಸ್ಥರ ಮಧ್ಯಸ್ಥಿಕೆಯಲ್ಲಿ ರಾಜಿ ಪಂಚಾಯತಿ ಮಾಡಿಕೊಂಡು, ಸುಮ್ಮನಿದ್ದರು.

ಅದರೆ ಮೊನ್ನೆ ಮತ್ತೆ ಕರಿಯಪ್ಪನ ಮಗ ನಾಗರಾಜ ಗದ್ದೆಗೆ ನೀರು ಹಾಯಿಸಲು ಹೋದ ಸಮಯದಲ್ಲಿ ಬಡ್ಡಿ ಪರಮೇಶ್ವರ ಅದಕ್ಕೆ ಅಡ್ಡಿ ಪಡಿಸಿದ್ದನಂತೆ. ನಂತ್ರ ಅಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಬಡ್ಡಿ ಪರಮೇಶ್ವರ ಮತ್ತು ಅತನ ಸಹೋದರರು ಸೇರಿ ಹಲ್ಲೆ ನಡೆಸಿದ್ದಾರೆ. ವಿಷಯ ತಿಳಿದ ಕರಿಯಪ್ಪ ಅಲ್ಲಿಗೆ ಹೋದ ಸಮಯದಲ್ಲಿ ಕಬ್ಬಿಣದ ರಾಡು, ದೊಣ್ಣೆಗಳಿಂದ ಕರಿಯಪ್ಪನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಕರಿಯಪ್ಪ ಜೀವ ಬಿಟ್ಟಿದ್ದಾನೆ.

ಘಟನೆ ಬಳಿಕ ಆರೋಪಿಗಳು ಪರಾರಿ: ಇನ್ನು ಬಡ್ಡಿ ಪರಮೇಶ್ವರ್, ಜಗದೀಶ್, ರಮೇಶ್ , ಮಂಜಪ್ಪ ಸೇರಿದಂತೆ ಒಟ್ಟು 10 ಜನ ಕರಿಯಪ್ಪನ ಕುಟುಂಬದವರ ಮೇಲೆ ಮಚ್ಚು ರಾಡುಗಳಿಂದ ಹಲ್ಲೆ ನಡೆಸಿದ್ದಾರೆ. ಈ ಘಟನೆಯಲ್ಲಿ ಕರಿಯಪ್ಪನ ಕುಟುಂಬ 5 ಜನರಿಗೆ ಗಾಯವಾಗಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಬಳಿಕ ಪರಮೇಶ, ಜಗದೀಶ್, ರಮೇಶ್ ಮಂಜಪ್ಪ ಸೇರಿದಂತೆ 10 ಜನರು ಪರಾರಿಯಾಗಿದ್ದಾರೆ. ದಾಯಾದಿಗಳ ಗಲಾಟೆ ಕೊನೆಗೂ ಒಂದು ಜೀವವನ್ನು ಬಲಿ ಪಡೆದಿದೆ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ