ಕೋಲಾರ: ವಾಲಿಬಾಲ್ ಆಡುವಾಗ ಎರಡು ಗುಂಪುಗಳ ನಡುವೆ ಮಾರಾಮಾರಿಯಾಗಿ ಮೂವರಿಗೆ ಚಾಕು ಇರಿದ ಘಟನೆ ಕೋಲಾರ ತಾಲೂಕಿನ ಕೆ.ಬಿ.ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. ವಾಲಿಬಾಲ್ ಕೋರ್ಟ್ ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ಘರ್ಷಣೆ ಉಂಟಾಗಿ ಅದು ತಾರಕ್ಕಕ್ಕೇರಿದೆ. ಈ ವೇಳೆ ವಿನೋದ್, ಮಂಜುನಾಥ್, ಮುನಿಯಪ್ಪ, ರಾಜಣ್ಣ, ಮುತ್ತು ಎಂಬುವವರು ಕಾರದ ಪುಡಿ ಎರಚಿ ಚಾಕು ಇರಿದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮಂಜುನಾಥ್ (38), ಅಮರೇಶ್ (28), ಮಣಿ (24) ಚಾಕು ಇರಿತಕ್ಕೊಳಗಾದವರು. ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ […]
ಕೋಲಾರ:ವಾಲಿಬಾಲ್ ಆಡುವಾಗ ಎರಡು ಗುಂಪುಗಳ ನಡುವೆ ಮಾರಾಮಾರಿಯಾಗಿ ಮೂವರಿಗೆ ಚಾಕು ಇರಿದ ಘಟನೆ ಕೋಲಾರ ತಾಲೂಕಿನ ಕೆ.ಬಿ.ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ವಾಲಿಬಾಲ್ ಕೋರ್ಟ್ ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ಘರ್ಷಣೆ ಉಂಟಾಗಿ ಅದು ತಾರಕ್ಕಕ್ಕೇರಿದೆ. ಈ ವೇಳೆ ವಿನೋದ್, ಮಂಜುನಾಥ್, ಮುನಿಯಪ್ಪ, ರಾಜಣ್ಣ, ಮುತ್ತು ಎಂಬುವವರು ಕಾರದ ಪುಡಿ ಎರಚಿ ಚಾಕು ಇರಿದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಮಂಜುನಾಥ್ (38), ಅಮರೇಶ್ (28), ಮಣಿ (24) ಚಾಕು ಇರಿತಕ್ಕೊಳಗಾದವರು. ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ವೇಮಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.