AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಿಂಗಳಿಗೆ 50,000 ರಿಂದ 2 ಲಕ್ಷ ರೂ. ಸ್ಟೈಫಂಡ್; ಬೆಂಗಳೂರು NLSIU ಸಂಶೋಧನಾ ಫೆಲೋಶಿಪ್‌ಗೆ ಅರ್ಜಿ ಆಹ್ವಾನ, ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಬೆಂಗಳೂರಿನ NLSIU 2027ರ ಬ್ಯಾಚ್‌ಗೆ ಸಂಶೋಧನಾ ಫೆಲೋಶಿಪ್‌ಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ. ಕಾನೂನು, ಸಮಾಜ ವಿಜ್ಞಾನ, ಸಾರ್ವಜನಿಕ ನೀತಿ ಕ್ಷೇತ್ರಗಳಲ್ಲಿ ಗ್ರಾಜುಯೇಟ್, ಪೋಸ್ಟ್‌ಡಾಕ್ಟರಲ್, ವಿಶ್ವವಿದ್ಯಾಲಯ ಫೆಲೋಶಿಪ್‌ಗಳು ಲಭ್ಯ. ಆಯ್ಕೆಯಾದವರಿಗೆ ಮಾಸಿಕ 50,000 ದಿಂದ 2,00,000 ಲಕ್ಷ ರೂ. ಸ್ಟೈಫಂಡ್ ದೊರೆಯಲಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 30 ಕೊನೆಯ ದಿನಾಂಕ. ಆಸಕ್ತರು ವೆಬ್‌ಸೈಟ್‌ಗೆ ಭೇಟಿ ನೀಡಿ.

ತಿಂಗಳಿಗೆ 50,000 ರಿಂದ 2 ಲಕ್ಷ ರೂ.  ಸ್ಟೈಫಂಡ್; ಬೆಂಗಳೂರು NLSIU ಸಂಶೋಧನಾ ಫೆಲೋಶಿಪ್‌ಗೆ ಅರ್ಜಿ ಆಹ್ವಾನ, ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
NLSIU ಫೆಲೋಶಿಪ್Image Credit source: nls.ac.in
ಅಕ್ಷತಾ ವರ್ಕಾಡಿ
|

Updated on:Sep 29, 2026 | 3:09 PM

Share

ಬೆಂಗಳೂರಿನ ಪ್ರಸಿದ್ಧ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ (NLSIU) 2027ರ ಜನವರಿಯಿಂದ ಪ್ರಾರಂಭವಾಗುವ ಬ್ಯಾಚ್‌ಗಾಗಿ ವಿವಿಧ ಸಂಶೋಧನಾ ಫೆಲೋಶಿಪ್‌ಗಳಿಗೆ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಕಾನೂನು, ಸಮಾಜ ವಿಜ್ಞಾನ ಮತ್ತು ಸಾರ್ವಜನಿಕ ನೀತಿ ಕ್ಷೇತ್ರಗಳಲ್ಲಿ ಉನ್ನತ ಸಂಶೋಧನೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಅವಕಾಶ ಕಲ್ಪಿಸಲಾಗಿದ್ದು, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 50,000 ರೂ. ನಿಂದ 2,00,000 ರೂ. ವರೆಗೆ ಆಕರ್ಷಕ ಸ್ಟೈಫಂಡ್ ದೊರೆಯಲಿದೆ.

ಲಭ್ಯವಿರುವ 3 ಪ್ರಮುಖ ಫೆಲೋಶಿಪ್‌ಗಳು ಮತ್ತು ಅರ್ಹತೆಗಳು:

NLSIU ಒಟ್ಟು ಮೂರು ವಿಭಾಗಗಳಲ್ಲಿ ಸಂಶೋಧನಾ ಫೆಲೋಶಿಪ್‌ಗಳನ್ನು ಘೋಷಿಸಿದ್ದು, ಅವುಗಳ ಅರ್ಹತೆ ಮತ್ತು ಸೀಟುಗಳ ವಿವರ ಕೆಳಗಿನಂತಿದೆ:

  • ಗ್ರಾಜುಯೇಟ್ ರಿಸರ್ಚ್ ಫೆಲೋಶಿಪ್ (10 ಹುದ್ದೆಗಳು): ಕಾನೂನಿನಲ್ಲಿ ಪದವಿ (LL.B) ಅಥವಾ ಸಮಾಜ ವಿಜ್ಞಾನ, ಸಾರ್ವಜನಿಕ ನೀತಿ ಹಾಗೂ ಸಂಬಂಧಿತ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ (Post Graduation) ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
  • ಪೋಸ್ಟ್‌ಡಾಕ್ಟರಲ್ ಫೆಲೋಶಿಪ್ (05 ಹುದ್ದೆಗಳು): ಕಳೆದ 3 ವರ್ಷಗಳಲ್ಲಿ ಕಾನೂನು, ಸಮಾಜ ವಿಜ್ಞಾನ ಅಥವಾ ಸಾರ್ವಜನಿಕ ನೀತಿಯಲ್ಲಿ ಪಿಎಚ್‌ಡಿ (Ph.D) ಪೂರ್ಣಗೊಳಿಸಿರಬೇಕು. ಅಲ್ಲದೆ, ಬೇರೆ ಯಾವುದೇ ವಿಶ್ವವಿದ್ಯಾಲಯದಲ್ಲಿ ಪೋಸ್ಟ್‌ಡಾಕ್ಟರಲ್ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರಬಾರದು.
  • ವಿಶ್ವವಿದ್ಯಾಲಯ ಸಂಶೋಧನಾ ಫೆಲೋಶಿಪ್ (05 ಹುದ್ದೆಗಳು): ಸಂಬಂಧಿತ ವಿಷಯದಲ್ಲಿ ಪಿಎಚ್‌ಡಿ ಜೊತೆಗೆ ಕನಿಷ್ಠ 10 ವರ್ಷಗಳ ಬೋಧನೆ ಅಥವಾ ವೃತ್ತಿಪರ ಅನುಭವ ಹೊಂದಿರಬೇಕು. ಉತ್ತಮ ಸಂಶೋಧನಾ ಪ್ರಕಟಣೆಗಳ (Publications) ದಾಖಲೆ ಹೊಂದಿರುವುದು ಕಡ್ಡಾಯ.

ಇದನ್ನೂ ಓದಿ: ಸತತ 3 ಬಾರಿ ಸೋಲು…4ನೇ ಪ್ರಯತ್ನದಲ್ಲಿ IAS ಕನಸು ನನಸು ಮಾಡಿಕೊಂಡ ನೇಹಾ ಬ್ಯಾಡ್ವಾಲ್: ಯಶಸ್ಸಿನ ಸೀಕ್ರೆಟ್ ಇಲ್ಲಿದೆ!

ಮಾಸಿಕ ಸ್ಟೈಫಂಡ್ ವಿವರಗಳು:

ಆಯ್ಕೆಯಾದ ಅಭ್ಯರ್ಥಿಗಳ ಶೈಕ್ಷಣಿಕ ಹಿನ್ನೆಲೆ, ಅನುಭವ ಮತ್ತು ಆಯ್ಕೆಯಾದ ವಿಭಾಗದ ಆಧಾರದ ಮೇಲೆ ಪ್ರತ್ಯೇಕ ಮಾಸಿಕ ಧನಸಹಾಯವನ್ನು ನೀಡಲಾಗುತ್ತದೆ. ಗ್ರಾಜುಯೇಟ್ ರಿಸರ್ಚ್ ಫೆಲೋಶಿಪ್ ಪಡೆದವರಿಗೆ ತಿಂಗಳಿಗೆ 50,000 ರೂ., ಪೋಸ್ಟ್‌ಡಾಕ್ಟರಲ್ ಫೆಲೋಶಿಪ್ ಅಭ್ಯರ್ಥಿಗಳಿಗೆ ತಿಂಗಳಿಗೆ 1,20,000 ರೂ. ಹಾಗೂ ವಿಶ್ವವಿದ್ಯಾಲಯ ಸಂಶೋಧನಾ ಫೆಲೋಶಿಪ್ ಪಡೆಯುವವರಿಗೆ ತಿಂಗಳಿಗೆ 2,00,000 ರೂ. ಸ್ಟೈಫಂಡ್ ನೀಡಲಾಗುತ್ತದೆ. ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳು ಫೆಲೋಶಿಪ್ ಅವಧಿಯಲ್ಲಿ ಬೆಂಗಳೂರಿನ NLSIU ಕ್ಯಾಂಪಸ್‌ನಲ್ಲಿಯೇ ವಾಸಿಸುವುದು ಕಡ್ಡಾಯವಾಗಿರುತ್ತದೆ.

ಅರ್ಜಿ ಸಲ್ಲಿಕೆ ವಿಧಾನ ಮತ್ತು ಕೊನೆಯ ದಿನಾಂಕ:

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಎನ್‌ಎಲ್‌ಎಸ್‌ಐಯುವಿನ (NLSIU) ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಅಲ್ಲಿ ಲಭ್ಯವಿರುವ ಗೂಗಲ್ ಫಾರ್ಮ್ (Google Form) ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಅಕ್ಟೋಬರ್ 30, 2026ರ ಸಂಜೆ 05:00 ಗಂಟೆ ಕೊನೆಯ ದಿನಾಂಕವಾಗಿದೆ. ಸಂಶೋಧನೆಯಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ನಿಗದಿತ ಸಮಯದೊಳಗೆ ಅರ್ಜಿ ಸಲ್ಲಿಸಿ ಈ ಅವಕಾಶವನ್ನು ಪಡೆದುಕೊಳ್ಳಬಹುದು.

ಶಿಕ್ಷಣಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:09 pm, Tue, 29 September 26

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More