AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

SSLC ತೃತೀಯ ಭಾಷೆಗೆ ಅಂಕದ ಬದಲಾಗಿ ಗ್ರೇಡ್​​ ಪ್ರಶ್ನಿಸಿ PIL: ಅರ್ಜಿದಾರರಿಗೆ ಬಿಗ್​​ ಶಾಕ್​​ ಕೊಟ್ಟ ಹೈಕೋರ್ಟ್​

ಎಸ್ಸೆಸ್ಸೆಲ್ಸಿ ತೃತೀಯ ಭಾಷಾ ಪರೀಕ್ಷೆಗೆ ಅಂಕಗಳ ಬದಲಿಗೆ ಗ್ರೇಡ್ ನೀಡುವ ಸರ್ಕಾರದ ನಿರ್ಧಾರ ಪ್ರಶ್ನಿಸಿದ್ದ ಪಿಐಎಲ್ ಅನ್ನು ಹೈಕೋರ್ಟ್ ವಜಾಗೊಳಿಸಿದೆ. ಅರ್ಜಿದಾರರು ಅಧಿಕೃತ ದಾಖಲೆಗಳ ಬದಲು ಪತ್ರಿಕಾ ವರದಿಗಳನ್ನು ಅವಲಂಬಿಸಿದ್ದಕ್ಕಾಗಿ ಅವರಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಪರೀಕ್ಷೆಗಳು ನಡೆಯುತ್ತಿರುವಾಗಲೇ ಸರ್ಕಾರ ದಿಢೀರ್ ಆಗಿ ಘೋಷಿಸಿರುವುದು ಲಕ್ಷಾಂತರ ವಿದ್ಯಾರ್ಥಿಗಳಲ್ಲಿ ಅತಂತ್ರ ಸ್ಥಿತಿ ನಿರ್ಮಿಸಿದೆ. ಈ ನಿರ್ಧಾರ ಸಂವಿಧಾನದ 14 ಮತ್ತು 21ನೇ ವಿಧಿಯಡಿ ನೀಡಲಾದ ಸಮಾನತೆ ಮತ್ತು ಶಿಕ್ಷಣದ ಹಕ್ಕಿಗೆ ಚ್ಯುತಿ ತರುತ್ತದೆ ಎಂದು ಅರ್ಜಿದಾರರು ಆರೋಪಿಸಿದ್ದರು.

SSLC ತೃತೀಯ ಭಾಷೆಗೆ ಅಂಕದ ಬದಲಾಗಿ ಗ್ರೇಡ್​​ ಪ್ರಶ್ನಿಸಿ PIL: ಅರ್ಜಿದಾರರಿಗೆ ಬಿಗ್​​ ಶಾಕ್​​ ಕೊಟ್ಟ ಹೈಕೋರ್ಟ್​
ಕರ್ನಾಟಕ ಹೈಕೋರ್ಟ್​ Image Credit source: dinamalar.com
Ramesha M
| Edited By: |

Updated on: Apr 10, 2026 | 12:34 PM

Share

ಬೆಂಗಳೂರು, ಏಪ್ರಿಲ್​​ 10: ಎಸ್​​ಎಸ್​​ಎಲ್​​ಸಿ ತೃತೀಯ ಭಾಷೆ ಪರೀಕ್ಷೆಗೆ ಅಂಕಗಳ ಬದಲು ಗ್ರೇಡ್​​ ನೀಡುವ ನಿರ್ಧಾರ ಭಾರಿ ಪರ-ವಿರೋಧ ಚರ್ಚೆಗೆ ಕಾರಣವಾಗಿತ್ತು. ಈ ನಡುವೆ ರಾಜ್ಯ ಸರ್ಕಾರದ ನಿರ್ಧಾರ ಪ್ರಶ್ನಿಸಿ ಹೈಕೋರ್ಟ್​​ಗೆ ಹೆಚ್.ಎನ್. ಚಂದನಾ ಮತ್ತು ಎಸ್.ವೆಂಕಟೇಶ್ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದರು. ಪರೀಕ್ಷೆಯ ಕೊನೆಯ ಹಂತದಲ್ಲಿ ಸರ್ಕಾರದ ತೆಗೆದುಕೊಂಡಿರುವ ಈ ನಿರ್ಧಾರ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಆರೋಪಿಸಲಾಗಿತ್ತು. ಆದರೆ ಅರ್ಜಿದಾರರಿಗೆ ಹೈಕೋರ್ಟ್​​ ಈಗ ಬಿಗ್​​ ಶಾಕ್​​ ಕೊಟ್ಟಿದೆ.

ಅರ್ಜಿದಾರರಿಗೆ 1 ಲಕ್ಷ ದಂಡ!

ರಾಜ್ಯ ಸರ್ಕಾರದ ನಿರ್ಧಾರ ಪ್ರಶ್ನಿಸಿ ಪಿಐಎಲ್​ ಸಲ್ಲಿಕೆ ಮಾಡಿರುವವರು, ಸರ್ಕಾರದ ಆದೇಶದ ವಿವರ ಒದಗಿಸದೇ ಕೇವಲ ಪತ್ರಿಕೆ ವರದಿ ಆಧರಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಹಿನ್ನೆಲೆ ಅರ್ಜಿದಾರರಾದ ಹೆಚ್.ಎನ್.ಚಂದನಾ ಮತ್ತು ಎಸ್.ವೆಂಕಟೇಶ್​​ಗೆ 1 ಲಕ್ಷ ರೂಪಾಯಿ ದಂಡ ವಿಧಿಸಿರುವ ಹೈಕೋರ್ಟ್​​, ಪಿಐಎಲ್ ವಜಾಗೊಳಿಸಿ ಆದೇಶಿಸಿದೆ. ಆ ಮೂಲಕ ಅರ್ಜಿದಾರರಿಗೆ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದೆ.

ಇದನ್ನೂ ಓದಿ: SSLC ತೃತೀಯ ಭಾಷೆಗೆ ಗ್ರೇಡ್​​ ವಿವಾದ; ರಾಜ್ಯಪಾಲರ ನಿಲುವಿಗೆ ಕರವೇ ಕೆಂಡ

SSLC ತೃತೀಯ ಭಾಷೆಗಳ ಪರೀಕ್ಷೆಗೆ ಅಂಕಗಳ ಬದಲು ಗ್ರೇಡ್​ ನೀಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಕನ್ನಡಪರ ಸಂಘಟನೆಗಳು ಸ್ವಾಗತಿಸಿದ್ದವಾದರೂ, ಬಿಜೆಪಿಯ ಕೆಲವು ನಾಯಕರು ಸೇರಿ ಹಲವರಿಂದ ವಿರೋಧ ವ್ಯಕ್ತವಾಗಿತ್ತು. ಈ ವಿಚಾರವಾಗಿ ಸ್ವತಃ ಮಧ್ಯಪ್ರವೇಶ ಮಾಡಿದ್ದ ರಾಜ್ಯಪಾಲರು, ಸರ್ಕಾರದ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಮುಖ್ಯ ಕಾರ್ಯದರ್ಶಿ ಶಾಲನೀಶ್​​ಗೆ ಪತ್ರ ಕೂಡ ಬರೆದಿದ್ದರು. ಗವರ್ನರ್​​ ಈ ನಡೆ ವಿರುದ್ಧ ಸಿಡಿದೆದ್ದಿದ್ದ ಕರವೇ, ಈ ಹಸ್ತಕ್ಷೇಪ ಒಕ್ಕೂಟ ವ್ಯವಸ್ಥೆಯನ್ನು ಅಣಕಿಸುವಂತಿದೆ. ನಿಮ್ಮ ಅಧಿಕಪ್ರಸಂಗವನ್ನು ಕರ್ನಾಟಕದ ಜನತೆ ಒಪ್ಪಿಕೊಳ್ಳುವುದಿಲ್ಲ. ರಾಜ್ಯಪಾಲರು ಸರ್ಕಾರದ ಪದನಿಮಿತ್ತ ಮುಖ್ಯಸ್ಥರು ಎಂಬುದನ್ನು ನೀವು ಮರೆತಿದ್ದೀರಿ. ನೀವು ನಮ್ಮಿಂದ ನೇರವಾಗಿ ಆಯ್ಕೆಯಾದ ಜನಪ್ರತಿನಿಧಿಯಲ್ಲ. ಒಂದು ಸರ್ಕಾರ ಬಹುಮತದೊಂದಿಗೆ ಸದೃಢವಾಗಿ ಕಾರ್ಯ ನಿರ್ವಹಿಸುತ್ತಿರುವಾಗ ಈ ರೀತಿ ಮಾಡೋದು ತಪ್ಪು. ದೈನಂದಿನ ಆಡಳಿತದಲ್ಲಿ ಮೂಗು ತೂರಿಸಲು ನಿಮಗೆ ಯಾವುದೇ ನೈತಿಕ ಅಧಿಕಾರವಿಲ್ಲ, ಸಾಂವಿಧಾನಿಕ ಹೊಣೆಗಾರಿಕೆಯಿಲ್ಲ. ಅದು ನಿಮ್ಮ ವ್ಯಾಪ್ತಿಯ ಕೆಲಸವೂ ಅಲ್ಲ ಎಂದು ವಾಗ್ದಾಳಿ ನಡೆಸಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
Ramesha M
Ramesha M
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಗುರು ಸಂಚಾರದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಶುಭ ಯೋಗ ಶುರು
ಗುರು ಸಂಚಾರದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಶುಭ ಯೋಗ ಶುರು