AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಲಯನ್ಸ್ ಫೌಂಡೇಶನ್ ಸ್ಕಾಲರ್‌ಶಿಪ್: 5,000 ವಿದ್ಯಾರ್ಥಿಗಳಿಗೆ 2 ಲಕ್ಷ ರೂ. ವರೆಗೆ ವಿದ್ಯಾರ್ಥಿವೇತನ!

ರಿಲಯನ್ಸ್ ಫೌಂಡೇಶನ್ 2026-27ರ UG ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಿದೆ. ಪ್ರತಿಭಾವಂತ ಹಾಗೂ ಬಡ ವಿದ್ಯಾರ್ಥಿಗಳಿಗೆ 2 ಲಕ್ಷದವರೆಗೆ ಉನ್ನತ ಶಿಕ್ಷಣ ನೆರವು ನೀಡುತ್ತದೆ. 12ನೇ ತರಗತಿಯಲ್ಲಿ ಶೇ.60 ಅಂಕ, ವಾರ್ಷಿಕ ಆದಾಯ ರೂ. 2.5 ಲಕ್ಷಕ್ಕಿಂತ ಕಡಿಮೆ ಇರುವ ಕುಟುಂಬಗಳ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. 'ಮೆರಿಟ್-ಕಮ್-ಮೀನ್ಸ್' ಆಧಾರದ ಮೇಲೆ ಆಯ್ಕೆ. ಅಕ್ಟೋಬರ್ 5 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.

ರಿಲಯನ್ಸ್ ಫೌಂಡೇಶನ್ ಸ್ಕಾಲರ್‌ಶಿಪ್: 5,000 ವಿದ್ಯಾರ್ಥಿಗಳಿಗೆ 2 ಲಕ್ಷ ರೂ. ವರೆಗೆ ವಿದ್ಯಾರ್ಥಿವೇತನ!
ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿವೇತನ
ಅಕ್ಷತಾ ವರ್ಕಾಡಿ
|

Updated on: Sep 18, 2026 | 3:28 PM

Share

ಬಡ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಉತ್ತೇಜಿಸಲು ರಿಲಯನ್ಸ್ ಫೌಂಡೇಶನ್ (Reliance Foundation) 2026-27ನೇ ಶೈಕ್ಷಣಿಕ ಸಾಲಿನ ‘ಯುಜಿ (UG) ವಿದ್ಯಾರ್ಥಿವೇತನ’ಕ್ಕೆ ಅರ್ಜಿಗಳನ್ನು ಆಹ್ವಾನಿಸಿದೆ. ದೇಶಾದ್ಯಂತ ಒಟ್ಟು 5,000 ವಿದ್ಯಾರ್ಥಿಗಳನ್ನು ಈ ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತರು ನಿಗದಿತ ದಿನಾಂಕದೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಅರ್ಹತಾ ಮಾನದಂಡಗಳು:

  • ಕೋರ್ಸ್: 2026-27ನೇ ಶೈಕ್ಷಣಿಕ ವರ್ಷದಲ್ಲಿ ಯಾವುದೇ ವಿಭಾಗದಲ್ಲಿ (Degree Streams) ನಿಯಮಿತ ಹಾಗೂ ಪೂರ್ಣಾವಧಿ (Regular Full-time) ಪದವಿಯ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರಬೇಕು.
  • ಶೈಕ್ಷಣಿಕ ಅಂಕಗಳು: 12ನೇ ತರಗತಿ ಅಥವಾ ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ಕನಿಷ್ಠ ಶೇಕಡಾ 60 ರಷ್ಟು ಅಂಕಗಳನ್ನು ಗಳಿಸಿರಬೇಕು.
  • ಆದಾಯ ಮಿತಿ: ವಿದ್ಯಾರ್ಥಿಯ ಕುಟುಂಬದ ವಾರ್ಷಿಕ  ಆದಾಯ ರೂ. 2.5 ಲಕ್ಷಕ್ಕಿಂತ ಕಡಿಮೆ ಇರುವ ಕುಟುಂಬಗಳ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.

ವಿದ್ಯಾರ್ಥಿವೇತನದ ಮೊತ್ತ ಮತ್ತು ಪ್ರಯೋಜನಗಳು:

ಆಯ್ಕೆಯಾದ 5,000 ವಿದ್ಯಾರ್ಥಿಗಳಿಗೆ ಅವರ ಪದವಿ ಅಧ್ಯಯನದ ಅವಧಿಯಲ್ಲಿ ಗರಿಷ್ಠ ರೂ. 2 ಲಕ್ಷದವರೆಗೆ ವಿದ್ಯಾರ್ಥಿವೇತನ ಸಹಾಯಧನ ಸಿಗಲಿದೆ. ಈ ಮೊತ್ತವನ್ನು ಕಾಲೇಜು ಶುಲ್ಕ, ಹಾಸ್ಟೆಲ್ ವೆಚ್ಚ, ಪುಸ್ತಕಗಳು ಅಥವಾ ಲ್ಯಾಪ್‌ಟಾಪ್ ಖರೀದಿಯಂತಹ ಶೈಕ್ಷಣಿಕ ಅಗತ್ಯಗಳಿಗೆ ಬಳಸಿಕೊಳ್ಳಬಹುದು.

ಇದನ್ನೂ ಓದಿ: ಕಾಲೇಜಿನಲ್ಲಿ ರಾತ್ರಿ ಕಾವಲುಗಾರನ ಕೆಲಸ ಮಾಡುತ್ತಲೇ ಓದಿ ಸತತ 3 ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಂಡ ಸಾಧಕ!

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?

ಅಭ್ಯರ್ಥಿಗಳ ಆಯ್ಕೆಯನ್ನು ಮುಖ್ಯವಾಗಿ ‘ಮೆರಿಟ್-ಕಮ್-ಮೀನ್ಸ್’ (ಪ್ರತಿಭೆ ಮತ್ತು ಆರ್ಥಿಕ ಸ್ಥಿತಿ) ಆಧಾರದ ಮೇಲೆ ನಡೆಸಲಾಗುತ್ತದೆ. ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ಆನ್‌ಲೈನ್ ಆಪ್ಟಿಟ್ಯೂಡ್ ಟೆಸ್ಟ್ (Aptitude Test) ಗೆ ಹಾಜರಾಗಬೇಕಿರುತ್ತದೆ. ಆಪ್ಟಿಟ್ಯೂಡ್ ಪರೀಕ್ಷೆಯ ಅಂಕಗಳು, 12ನೇ ತರಗತಿಯ ಸಾಧನೆ ಮತ್ತು ಅರ್ಜಿ ನಮೂನೆಯಲ್ಲಿ ನೀಡಲಾದ ವೈಯಕ್ತಿಕ ವಿವರಗಳನ್ನು ಮೌಲ್ಯಮಾಪನ ಮಾಡಿ ಅಂತಿಮ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ ಮತ್ತು ಕೊನೆಯ ದಿನಾಂಕ:

ಅರ್ಹ ಅಭ್ಯರ್ಥಿಗಳು scholarships.reliancefoundation.org ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಅಕ್ಟೋಬರ್ 5 ಕೊನೆಯ ದಿನಾಂಕವಾಗಿದೆ. ಆನ್‌ಲೈನ್ ಅರ್ಜಿಯ ಜೊತೆಗೆ ಸಾಮರ್ಥ್ಯ ಪರೀಕ್ಷೆಯನ್ನು (Aptitude Test) ಪೂರ್ಣಗೊಳಿಸಿದರೆ ಮಾತ್ರ ಅರ್ಜಿಯನ್ನು ಸಂಪೂರ್ಣವೆಂದು ಪರಿಗಣಿಸಲಾಗುತ್ತದೆ.

ಶಿಕ್ಷಣಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಲೂಟಿ ಹಣದಲ್ಲಿ ಗೆಳತಿಗ ಲಕ್ಷಾಂತರ ರೂ. ಚಿನ್ನಾಭರಣ ಕೊಡಿಸಿದ್ದ ಜ್ಞಾನೇಂದ್ರ!
ಲೂಟಿ ಹಣದಲ್ಲಿ ಗೆಳತಿಗ ಲಕ್ಷಾಂತರ ರೂ. ಚಿನ್ನಾಭರಣ ಕೊಡಿಸಿದ್ದ ಜ್ಞಾನೇಂದ್ರ!
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್​ವೇ ಫ್ಲೈಓವರ್‌‌ನಿಂದ ಕೆಳಗೆ ಬಿದ್ದ ಕಾರು
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್​ವೇ ಫ್ಲೈಓವರ್‌‌ನಿಂದ ಕೆಳಗೆ ಬಿದ್ದ ಕಾರು
ಪ್ರತಿ ಲೀಟರ್‌ ಹಾಲಿನ ದರ ₹8 ಹೆಚ್ಚಳಕ್ಕೆ ಹಾಲು ಒಕ್ಕೂಟಗಳ ಆಗ್ರಹ
ಪ್ರತಿ ಲೀಟರ್‌ ಹಾಲಿನ ದರ ₹8 ಹೆಚ್ಚಳಕ್ಕೆ ಹಾಲು ಒಕ್ಕೂಟಗಳ ಆಗ್ರಹ
ಕದ್ರಿ ಮಂಜುನಾಥ ದೇವಸ್ಥಾನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಭೇಟಿ
ಕದ್ರಿ ಮಂಜುನಾಥ ದೇವಸ್ಥಾನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಭೇಟಿ
ಟಿ ನರಸೀಪುರದಲ್ಲಿ ಬಿಗಿ ಭದ್ರತೆ: 600ಕ್ಕೂ ಹೆಚ್ಚು ಪೊಲೀಸರ ನಿಯೋಜನೆ
ಟಿ ನರಸೀಪುರದಲ್ಲಿ ಬಿಗಿ ಭದ್ರತೆ: 600ಕ್ಕೂ ಹೆಚ್ಚು ಪೊಲೀಸರ ನಿಯೋಜನೆ
ಗಗ್ಗರ ಮನರಂಜನೆ ವಸ್ತುವಲ್ಲ, ಚಪ್ಪಲಿ ಹಾಕಿ ವೀಕ್ಷಣೆ ಸಲ್ಲ: ಬಿಜೆಪಿ ಕಿಡಿ
ಗಗ್ಗರ ಮನರಂಜನೆ ವಸ್ತುವಲ್ಲ, ಚಪ್ಪಲಿ ಹಾಕಿ ವೀಕ್ಷಣೆ ಸಲ್ಲ: ಬಿಜೆಪಿ ಕಿಡಿ
ಶಿಷ್ಟಾಚಾರ ಉಲ್ಲಂಘನೆ: ಬೀದರ್ ಡಿಹೆಚ್ಒ, ಬಸವಕಲ್ಯಾಣ ಟಿಹೆಚ್ಒ ಅಮಾನತು
ಶಿಷ್ಟಾಚಾರ ಉಲ್ಲಂಘನೆ: ಬೀದರ್ ಡಿಹೆಚ್ಒ, ಬಸವಕಲ್ಯಾಣ ಟಿಹೆಚ್ಒ ಅಮಾನತು
ಹುಲಿ ವೇಷದ ತಾಸೆಯ ಪೆಟ್ಟಿಗೆ ಬಸನಗೌಡ ಪಾಟೀಲ್ ಭರ್ಜರಿ ಸ್ಟೆಪ್ಸ್
ಹುಲಿ ವೇಷದ ತಾಸೆಯ ಪೆಟ್ಟಿಗೆ ಬಸನಗೌಡ ಪಾಟೀಲ್ ಭರ್ಜರಿ ಸ್ಟೆಪ್ಸ್
ಮತ್ತೆ ಶಾಸ್ತ್ರಿ ಕಿರಿಕ್; ಆಸಿಯಾ ತಾಳ್ಮೆ ಕಟ್ಟೆ ಒಡೆದೇಹೋಯ್ತು
ಮತ್ತೆ ಶಾಸ್ತ್ರಿ ಕಿರಿಕ್; ಆಸಿಯಾ ತಾಳ್ಮೆ ಕಟ್ಟೆ ಒಡೆದೇಹೋಯ್ತು
ಕೋಲಾರ ಜಿಲ್ಲಾ ಆಸ್ಪತ್ರೆಗೆ ಮಳೆ ನೀರು ನುಗ್ಗಿ ಅವಾಂತರ
ಕೋಲಾರ ಜಿಲ್ಲಾ ಆಸ್ಪತ್ರೆಗೆ ಮಳೆ ನೀರು ನುಗ್ಗಿ ಅವಾಂತರ