AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Govindaraja Nagar Election Results: ಗೋವಿಂದರಾಜ ನಗರ ಅಸೆಂಬ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯ ಕೃಷ್ಣ ಗೆ ಭಾರೀ ಗೆಲುವು

Govindaraja Nagar Assembly Election Result 2023 Live Counting Updates: ಗೋವಿಂದರಾಜ ನಗರ ಅಸೆಂಬ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯ ಕೃಷ್ಣ ಗೆ ಭಾರೀ ಗೆಲುವು ಸಿಕ್ಕಿದೆ.

Govindaraja Nagar Election Results: ಗೋವಿಂದರಾಜ ನಗರ ಅಸೆಂಬ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯ ಕೃಷ್ಣ ಗೆ ಭಾರೀ ಗೆಲುವು
ಗೋವಿಂದರಾಜ ನಗರ ಅಸೆಂಬ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯ ಕೃಷ್ಣ ಗೆ ಭಾರೀ ಗೆಲುವು
ಸಾಧು ಶ್ರೀನಾಥ್​
|

Updated on:May 13, 2023 | 5:57 PM

Share

Govindaraja Nagar Assembly Election Result 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ ಫಲಿತಾಂಶ (Karnataka Assembly Elections 2023 Result)  ಪ್ರಕಟಗೊಂಡಿದೆ. ಮೇ 10 ಬುಧವಾರದಂದು ನಡೆದ ಚುನಾವಣೆಯಲ್ಲಿ ಗೋವಿಂದರಾಜನಗರ ಕ್ಷೇತ್ರದಲ್ಲಿ (Govindaraja Nagar Assembly Constituency) ಶೇ. 49.59ರಷ್ಟು ಮತದಾನವಾಗಿತ್ತು. ಗೋವಿಂದರಾಜ ನಗರ ಅಸೆಂಬ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯ ಕೃಷ್ಣ ಗೆ ಭಾರೀ ಗೆಲುವು ಸಿಕ್ಕಿದೆ. ಒಕ್ಕಲಿಗರು, ಕುರುಬರು, ಹಿಂದುಳಿದ ವರ್ಗಗಳ ಇತರ ಸಮುದಾಯಗಳು, ಪರಿಶಿಷ್ಟರು ಮತ್ತು ಮುಸ್ಲಿಂ ಮತಗಳು ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ. ಒಕ್ಕಲಿಗರ ಪ್ರಾಬಲ್ಯ ಇರುವ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ 2,81,098 ಮತದಾರರಿದ್ದು, 1,45,574 ಪುರುಷ ಮತದಾರರು, 1,35,483 ಮಹಿಳಾ ಮತದಾರರು, 41 ತೃತೀಯ ಲಿಂಗಿಗಳಿದ್ದಾರೆ. 56 ಸಾವಿರ ಒಕ್ಕಲಿಗರು, 18 ಸಾವಿರ ಲಿಂಗಾಯತರು, 13 ಸಾವಿರ ಬ್ರಾಹ್ಮಣ, 58 ಸಾವಿರ ಒಬಿಸಿ, 46 ಸಾವಿರ ಎಸ್ಸಿಎಸ್ಟಿ, 24 ಸಾವಿರ ಮುಸ್ಲಿಂ, 15 ಸಾವಿರ ಇತರ ಸಮುದಾಯದ ಮತದಾರರಿದ್ದಾರೆ. ಒಕ್ಕಲಿಗ ಪ್ರಾಬಲ್ಯವಿದ್ದರೂ ಒಬಿಸಿ ಮತದಾರರು, ಎಸ್ಸಿ, ಎಸ್ಟಿ ಸಮುದಾಯದ ಮತದಾರರುನಿರ್ಣಾಯಕ ಪಾತ್ರ ವಹಿಸಲಿದ್ದಾರೆ.

ಹಳೆಯ ಬಿನ್ನಿಪೇಟೆ ಕ್ಷೇತ್ರದ ಭಾಗವಾಗಿದ್ದ ಗೋವಿಂದರಾಜನಗರದಲ್ಲಿ ಅಭಿವೃದ್ಧಿ ಮತ್ತು ಜಾತಿ ಎರಡೂ ಚುನಾವಣಾ ರಾಜಕಾರಣದಲ್ಲಿ ನಿರ್ಣಾಯಕ ಎನಿಸಿವೆ. ಕಾಂಗ್ರೆಸ್​ನ ಭದ್ರಕೋಟೆಯಾಗಿದ್ದ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ 2008, 2009, 2013ರಲ್ಲಿ ಸತತವಾಗಿ ಕೈ ವಶದಲ್ಲಿತ್ತು. ಆದರೆ, 2018ರಲ್ಲಿ ಮೊದಲ ಬಾರಿ ಇಲ್ಲಿ ಕಮಲ ಅರಳಿದೆ.

ವಸತಿ ಸಚಿವ ವಿ. ಸೋಮಣ್ಣ ಮತ್ತು ರಾಜ್ಯದ ಅತ್ಯಂತ ಸಿರಿವಂತ ರಾಜಕಾರಣಿಗಳಲ್ಲಿ ಒಬ್ಬರಾದ ಮಾಜಿ ಶಾಸಕ ಪ್ರಿಯಕೃಷ್ಣ ಮಧ್ಯದ ಸಾಂಪ್ರದಾಯಿಕ ಜಿದ್ದಾಜಿದ್ದಿಯ ಕಣವಾಗಿದ್ದ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ರಾಜಕೀಯ ತಂತ್ರಗಾರಿಕೆಯಿಂದಾಗಿ ಈ ಬಾರಿ ಕೊನೆಯ ಕ್ಷಣದಲ್ಲಿ ಚಿತ್ರಣ ಬದಲಾಗಿದೆ. ಸೋಮಣ್ಣ ‘ನಾಮಬಲ’ದ ನೆರವಿನಲ್ಲಿ ಪ್ರಿಯಕೃಷ್ಣ ಅವರನ್ನು ಎದುರಿಸುವ ಕಸರತ್ತು ನಡೆಸುತ್ತಿದೆ.

ಪ್ರಿಯಕೃಷ್ಣ– ಉಮೇಶ್‌ ಶೆಟ್ಟಿ ನಡುವೆ ನೇರ ಹಣಾಹಣಿ ಇದೆ. ಜೆಡಿಎಸ್‌ನ ಆರ್‌. ಪ್ರಕಾಶ್ ಇಬ್ಬರ ಮಧ್ಯದ ಪೈಪೋಟಿಯಲ್ಲಿ ಮತ ಕಸಿಯಲು ಪ್ರಯತ್ನಿಸುತ್ತಿದ್ದಾರೆ. ಆಮ್‌ ಆದ್ಮಿ ಪಕ್ಷದ ಅಂಜನಾ ಗೌಡ, ಕರ್ನಾಟಕ ರಾಷ್ಟ್ರ ಸಮಿತಿಯ ಬಿ.ಆರ್‌. ಶಶಿಕುಮಾರ್‌ ಸೇರಿದಂತೆ ಒಟ್ಟು 14 ಮಂದಿ ಕಣದಲ್ಲಿದ್ದಾರೆ.

ಎರಡು ಅವಧಿಗೆ ಬಿಬಿಎಂಪಿ ಸದಸ್ಯನಾಗಿ ತಾನು ಮಾಡಿದ್ದ ಕೆಲಸಗಳು ಹಾಗೂ ಐದು ವರ್ಷಗಳ ಅವಧಿಯಲ್ಲಿ ಸೋಮಣ್ಣ ನೇತೃತ್ವದಲ್ಲಿ ನಡೆದ ಅಭಿವೃದ್ಧಿ ಕೆಲಸಗಳೇ ತಮ್ಮನ್ನು ಗೆಲುವಿನ ದಡ ಮುಟ್ಟಿಸುತ್ತವೆ ಎಂಬುದು ಉಮೇಶ್‌ ಶೆಟ್ಟಿ ನಂಬಿಕೆ. ‘ಸೋಮಣ್ಣ ನಾಮಬಲವೇ ನನಗೆ ಶ್ರೀರಕ್ಷೆ’ ಎಂದು ಅವರು ಹೇಳುತ್ತಾರೆ. ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಸೋಮಣ್ಣ ಒಮ್ಮೆ ಮಾತ್ರ ಇಲ್ಲಿ ಪ್ರಚಾರಕ್ಕೆ ಬಂದಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ಒಕ್ಕಲಿಗರ ಮತಗಳನ್ನು ಕಸಿದರೆ ಗೆಲುವು ಸಾಧ್ಯವಾಗಬಹುದು ಎಂಬ ಲೆಕ್ಕಾಚಾರವೂ ಬಿಜೆಪಿಯಲ್ಲಿದೆ.

ಗೌಣವಾದ ಸಮಸ್ಯೆಗಳು: ಡಾ.ರಾಜ್ ಕುಮಾರ್ ಹೆಸರು ವಾರ್ಡ್​ಗೆ ಇಡಲಾಗಿದ್ದು, ಐತಿಹಾಸಿಕ ಮಾರುತಿ ಮಂದಿರ ಇದೆ, ಮೆಟ್ರೋ ಮಾರ್ಗವಿದೆ. ಉತ್ತಮ ವಸತಿ ಪ್ರದೇಶಗಳು ಇವೆ. ಆದರೂ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪ್ರತಿ ಬಾರಿಯೂ ಕಾಣಿಸಿಕೊಳ್ಳುತ್ತಿದೆ. ಕ್ಷೇತ್ರದ ಹಲವು ಭಾಗಗಳಾದ ಕಾವೇರಿಪುರ, ಗಂಗೊಂಡನಹಳ್ಳಿ ಸೇರಿ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಇದೆ. ಕಸ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲದಿರುವುದೂ ಸಮಸ್ಯೆಯಾಗಿದೆ. ಮಾಗಡಿ ರಸ್ತೆ ಹೌಸಿಂಗ್ ಬೋರ್ಡ್ ಸಮೀಪದಲ್ಲಿ ನಡೆಯುತ್ತಿರುವ ಗ್ರೇಡ್ ಸಪರೇಟರ್ ಕಾಮಗಾರಿ ವಿಳಂಬವಾಗುತ್ತಿರುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗಿ ಕ್ಷೇತ್ರದಲ್ಲಿ ಸಮಸ್ಯೆಯಾಗುತ್ತಿದೆ. ಪಾರ್ಕಿಂಗ್ ಸಮಸ್ಯೆಯೂ ಕ್ಷೇತ್ರದಲ್ಲಿದೆ. ಆದರೆ ಅಬ್ಬರದ ಪ್ರಚಾರ, ಭರಾಟೆಯ ಮತಬೇಟೆಯಲ್ಲಿ ಈಸಮಸ್ಯೆಗಳು ಕಾಣೆಯಾಗಿವೆ. ಚುನಾವಣೆ ಬರುತ್ತಿದ್ದಂತೆ ರಸ್ತೆಗಳಿಗೆಲ್ಲ ಟಾರು ಬಿದ್ದಿದೆ. ನೀರು ಪೂರೈಕೆಯಲ್ಲಿನ ವ್ಯತ್ಯಯ ಸರಿಯಾಗಿದೆ. ಹೀಗಾಗಿ ಕ್ಯಾಂಪೇನ್ ನಡುವೆ ಕ್ಷೇತ್ರದ ಸಮಸ್ಯೆಗಳು ಕಾಣದಂತಾಗಿವೆ.

ಮೋದಿ ರೋಡ್ ಶೋ: ಟಿಕೆಟ್ ಘೋಷಣೆವರೆಗೂ ಕ್ಷೇತ್ರದಲ್ಲೇ ಬೀಡುಬಿಟ್ಟು ದಿನನಿತ್ಯ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಇತ್ಯಾದಿಗಳಲ್ಲಿ ಬಿಡುವಿಲ್ಲದೆ ತೊಡಗಿಕೊಂಡು ಕ್ಷೇತ್ರವನ್ನು ಸಂಪೂರ್ಣವಾಗಿ ಸಜ್ಜು ಮಾಡಿಕೊಂಡಿದ್ದ ಸೋಮಣ್ಣ ಅಂತಿಮವಾಗಿ ಆಪ್ತನಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ. ಅಖಾಡಕ್ಕೆ ಸಿದ್ಧವಾಗಿದ್ದ ಕ್ಷೇತ್ರದಲ್ಲಿ ಉಮೇದುವಾರಿಕೆ ಸಲ್ಲಿಸಿರುವ ಉಮೇಶ್ ಶೆಟ್ಟಿಗೆ ಈಗ ಮೋದಿ ಪ್ರಚಾರದ ಬಲ ಸಿಗಲಿದೆ. ಗೋವಿಂದರಾಜನಗರ ಕ್ಷೇತ್ರದಲ್ಲಿ ಉಮೆಶ್ ಶೆಟ್ಟಿ ಪರ ಪ್ರಧಾನಿ ಮೋದಿ ಭರ್ಜರಿ ರೋಡ್ ಶೋ ನಡೆಸಿದ್ದಾರೆ.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ

Published On - 3:12 am, Sat, 13 May 23

ಸಂಧಾನದ ಮಾತು ನಡೆಯುವ ಬಗ್ಗೆ ನಿನ್ನೆ ವಿಜಯೇಂದ್ರ ಸುಳಿವು ನೀಡಿದ್ದರು
ಸಂಧಾನದ ಮಾತು ನಡೆಯುವ ಬಗ್ಗೆ ನಿನ್ನೆ ವಿಜಯೇಂದ್ರ ಸುಳಿವು ನೀಡಿದ್ದರು
ನಾನು ಮಂಗಳೂರು ಹುಡುಗಿ: ಹೆಮ್ಮೆಯಿಂದ ಹೇಳಿದ ಜೆನಿಲಿಯಾ ಡಿಸೋಜಾ
ನಾನು ಮಂಗಳೂರು ಹುಡುಗಿ: ಹೆಮ್ಮೆಯಿಂದ ಹೇಳಿದ ಜೆನಿಲಿಯಾ ಡಿಸೋಜಾ
ಸಿಗಂದೂರು ತೂಗು ಸೇತುವೆ ಮೇಲೆ ಸಂಚರಿಸುವುದೇ ಏನೋ ಒಂಥರಾ ಸಂತೋಷ, ಉಲ್ಲಾಸ
ಸಿಗಂದೂರು ತೂಗು ಸೇತುವೆ ಮೇಲೆ ಸಂಚರಿಸುವುದೇ ಏನೋ ಒಂಥರಾ ಸಂತೋಷ, ಉಲ್ಲಾಸ
ಸಾರಿಗೆ ನೌಕರರಿಗೆ 38 ತಿಂಗಳುಗಳ ಹಿಂಬಾಕಿ ಸರ್ಕಾರ ಕೊಡಬೇಕಿದೆ: ಸುಬ್ಬಾರಾವ್
ಸಾರಿಗೆ ನೌಕರರಿಗೆ 38 ತಿಂಗಳುಗಳ ಹಿಂಬಾಕಿ ಸರ್ಕಾರ ಕೊಡಬೇಕಿದೆ: ಸುಬ್ಬಾರಾವ್
ನಿಗಮಗಳಿಗೆ ಸದಸ್ಯರ ನೇಮಕಾತಿ ಶೀಘ್ರದಲ್ಲಿ ನಡೆಯಲಿದೆ: ಪರಮೇಶ್ವರ್
ನಿಗಮಗಳಿಗೆ ಸದಸ್ಯರ ನೇಮಕಾತಿ ಶೀಘ್ರದಲ್ಲಿ ನಡೆಯಲಿದೆ: ಪರಮೇಶ್ವರ್
ಚಾಮುಂಡಿ ತಾಯಿ ಆಶೀರ್ವಾದ ಪಡೆದ ದೊಡ್ಮನೆ ಹುಡುಗ್ರು
ಚಾಮುಂಡಿ ತಾಯಿ ಆಶೀರ್ವಾದ ಪಡೆದ ದೊಡ್ಮನೆ ಹುಡುಗ್ರು
ನಾನು ನೀಡಿದ ಚೆಕ್​ಗಳು ಬೌನ್ಸ್ ಆಗುವ ಚಾನ್ಸೇ ಇಲ್ಲ ಎಂದ ಕೆಜಿಎಫ್ ಬಾಬು
ನಾನು ನೀಡಿದ ಚೆಕ್​ಗಳು ಬೌನ್ಸ್ ಆಗುವ ಚಾನ್ಸೇ ಇಲ್ಲ ಎಂದ ಕೆಜಿಎಫ್ ಬಾಬು
ಬಾಲಸೋರ್​​ನಲ್ಲಿ ಬೃಹತ್ ಪ್ರತಿಭಟನೆ; ಪೊಲೀಸರಿಂದ ಜಲಫಿರಂಗಿ ಪ್ರಯೋಗ
ಬಾಲಸೋರ್​​ನಲ್ಲಿ ಬೃಹತ್ ಪ್ರತಿಭಟನೆ; ಪೊಲೀಸರಿಂದ ಜಲಫಿರಂಗಿ ಪ್ರಯೋಗ
ಮುಂಬೈನಲ್ಲಿ ಟೆಸ್ಲಾ ಕಾರು ಚಲಾಯಿಸಿದ ಡಿಸಿಎಂ ಏಕನಾಥ್ ಶಿಂಧೆ
ಮುಂಬೈನಲ್ಲಿ ಟೆಸ್ಲಾ ಕಾರು ಚಲಾಯಿಸಿದ ಡಿಸಿಎಂ ಏಕನಾಥ್ ಶಿಂಧೆ
ಏರೋಸ್ಪೇಸ್ ಯೋಜನೆ ಬಗ್ಗೆ ಸಿಎಂ ಹೇಳಿಕೆ ಗೊಂದಲಮಯ: ವಿಜಯೇಂದ್ರ
ಏರೋಸ್ಪೇಸ್ ಯೋಜನೆ ಬಗ್ಗೆ ಸಿಎಂ ಹೇಳಿಕೆ ಗೊಂದಲಮಯ: ವಿಜಯೇಂದ್ರ