AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hukkeri Election Result: ಹುಕ್ಕೇರಿ ವಿಧಾನಸಭಾ ಕ್ಷೇತ್ರ ಎಲೆಕ್ಷನ್ 2023 ರಿಸಲ್ಟ್: ಗೆದ್ದು ಬೀಗಿದ ಬಿಜೆಪಿಯ ನಿಖಿಲ್ ಕತ್ತಿ

Hukkeri Assembly Election Results 2023 Live Counting Updates: ಹುಕ್ಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಜೆಡಿಎಸ್ ಅಭ್ಯರ್ಥಿ ಬಸವರಾಜಗೌಡ ಪಾಟೀಲ್, ಕಾಂಗ್ರೆಸ್ ಪಕ್ಷದಿಂದ ಎ.ಬಿ.ಪಾಟೀಲ್ ಮತ್ತು ಬಿಜೆಪಿಯ ಅಭ್ಯರ್ಥಿಯಾಗಿ ಉಮೇಶ್ ಕತ್ತಿ ಪುತ್ರ ನಿಖಿಲ್ ಕತ್ತಿ ಕಣದಲ್ಲಿದ್ದಾರೆ.

Hukkeri Election Result: ಹುಕ್ಕೇರಿ ವಿಧಾನಸಭಾ ಕ್ಷೇತ್ರ ಎಲೆಕ್ಷನ್ 2023 ರಿಸಲ್ಟ್: ಗೆದ್ದು ಬೀಗಿದ ಬಿಜೆಪಿಯ ನಿಖಿಲ್ ಕತ್ತಿ
ನಿಖಿಲ್ ಕತ್ತಿ
ರಶ್ಮಿ ಕಲ್ಲಕಟ್ಟ
|

Updated on:May 13, 2023 | 6:40 PM

Share

Hukkeri Assembly Election Results 2023: ಬೆಳಗಾವಿ ಜಿಲ್ಲೆಯ ಪ್ರಮುಖ ತಾಲೂಕುಗಳಲ್ಲಿ ಒಂದಾಗಿರುವ ಹುಕ್ಕೇರಿ (Hukkeri Assembly Constituency)ಯಲ್ಲಿ ಬಿಜೆಪಿಯ ನಿಖಿಲ್ ಕತ್ತಿ ಗೆದ್ದಿದ್ದಾರೆ.. ಶಿವಸೇನೆ ಮತ್ತು ಎಂಇಎಸ್‌ನ ದಾಂಧಲೆಗಳನ್ನು ಇಲ್ಲಿ ಜಾಸ್ತಿ ಎಂದೇ ಹೇಳಬಹುದು. ಆರಂಭದ ಮೊದಲ ಚುನಾವಣೆಯಲ್ಲಿ ಹುಕ್ಕೇರಿ ಎಸ್‌ಸಿ ಮೀಸಲು ಕ್ಷೇತ್ರವಾಗಿತ್ತು. ತನ್ನ ಎರಡನೇ ಚುನಾವಣೆಯಿಂದ ಇದು ಸಾಮಾನ್ಯ ಮೀಸಲು ಕ್ಷೇತ್ರವಾಗಿದೆ. ಇದುವರೆಗೂ 15 ಚುನಾವಣೆಗಳು ಮತ್ತು ಒಂದು ಉಪಚುನಾವಣೆಯನ್ನು ಕಂಡಿರುವ ಹುಕ್ಕೇರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ 6 ಬಾರಿ ಗೆಲುವು ಸಾಧಿಸಿದೆ. ಬಿಜೆಪಿ ಮೂರು ಬಾರಿ ಗೆದ್ದಿದೆ. ಅದೇ ವೇಳೆ, ಜನತಾ ಪಕ್ಷ, ಜನತಾ ದಳ ತಲಾ ಎರಡು ಬಾರಿ, ಜೆಡಿಎಸ್‌ ಮತ್ತು ಜೆಡಿಯು ತಲಾ ಒಂದು ಬಾರಿ ಗೆದ್ದಿದೆ.

2008ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಉಮೇಶ್ ಕತ್ತಿ 63,328 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ ಅಭ್ಯರ್ಥಿ ಅಪ್ಪಯ್ಯಗೌಡ ಬಸಗೌಡ ಪಾಟೀಲ ಎರಡನೇ ಸ್ಥಾನಗಳಿಸಿದ್ದರು.2013ರ ಚುನಾವಣೆಯ ಸಮಯದಲ್ಲಿ ಉಮೇಶ್ ಕತ್ತಿ ಬಿಜೆಪಿ ಸೇರಿ ಅಲ್ಲಿಯೂ ಗೆದ್ದರು. 2018ರಲ್ಲಿ ಬಿಜೆಪಿಯಿಂದಲೇ ಮತ್ತೊಮ್ಮೆ ಸ್ಪರ್ಧಿಸಿದ ಉಮೇಶ್ ಕತ್ತಿ, 83,588 ಮತಗಳನ್ನು ಪಡೆದು ಹ್ಯಾಟ್ರಿಕ್‌ ಗೆಲುವು ಸಾಧಿಸಿದರು. ಉಮೇಶ್‌ ಕತ್ತಿ ಅವರು 2022ರಲ್ಲಿ ಮೃತಪಟ್ಟರು. ಅವರ ಸಾವಿನಿಂದ ಕ್ಷೇತ್ರ ತೆರವಾಗಿದ್ದು, ಉಪಚುನಾವಣೆ ನಡೆಯದ ಕಾರಣ ಪ್ರತಿನಿಧಿ ಇಲ್ಲದೇ ಕ್ಷೇತ್ರವು ಖಾಲಿ ಉಳಿದಿತ್ತು.

ಈ ಬಾರಿ ಜೆಡಿಎಸ್ ಅಭ್ಯರ್ಥಿ ಬಸವರಾಜಗೌಡ ಪಾಟೀಲ್, ಕಾಂಗ್ರೆಸ್ ಪಕ್ಷದಿಂದ ಎ.ಬಿ.ಪಾಟೀಲ್ ಮತ್ತು ಬಿಜೆಪಿಯ ಅಭ್ಯರ್ಥಿಯಾಗಿ ಉಮೇಶ್ ಕತ್ತಿ ಪುತ್ರ ನಿಖಿಲ್ ಕತ್ತಿ ಕಣದಲ್ಲಿದ್ದಾರೆ. ಉಮೇಶ್ ಕತ್ತಿ ಸಹೋದರ ಕೂಡ ಇದೇ ಕ್ಷೇತ್ರದ ಟಿಕೆಟ್ ಅಕಾಂಕ್ಷಿಯಾಗಿದ್ದರು. ಅವರಿಗೆ ಬಿಜೆಪಿ ಚಿಕ್ಕೋಡಿಯಲ್ಲಿ ಟಿಕೆಟ್ ನೀಡಿದೆ.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ

Published On - 1:48 am, Sat, 13 May 23